ಸಂಸ್ಕೃತಿ ಸಚಿವಾಲಯ

ಸಂಸ್ಕೃತಿ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯದ ಜಂಟಿ ಆಯೋಜನೆಯಲ್ಲಿ ಸಂಗೀತ ಮತ್ತು ನಾಟ್ಯ ಪರಂಪರೆಯ ಮೇಲೆ ‘ಧಾರಾ’ ಆಯೋಜನೆ 

Posted On: 07 JAN 2023 4:23PM by PIB Bengaluru

ಮುಖ್ಯಾಂಶಗಳು:

* ನಮ್ಮ ದೇಶದ ಪ್ರದರ್ಶನ ಕಲೆಯ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಜನಪ್ರಿಯಗೊಳಿಸಲು ಮತ್ತು ಈ ಪರಿಸರ ವ್ಯವಸ್ಥೆಯು ಎದುರಿಸುತ್ತಿರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು 'ವಿಷನ್ ಡಾಕ್ಯುಮೆಂಟ್ 2047' ನ್ನು ರಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. 

ಕೇಂದ್ರ ಸಂಸ್ಕೃತಿ ಮತ್ತು ಶಿಕ್ಷಣ ಸಚಿವಾಲಯಗಳು, 2023ರ ಜನವರಿ 5 ಮತ್ತು 6ನೇ ತಾರೀಖಿನಂದು ತಮಿಳುನಾಡಿನ ತಂಜಾವೂರಿನಲ್ಲಿರುವ ಶಾಸ್ತ್ರ-SASTRA (ವಿಶ್ವವಿದ್ಯಾಲಯ ಎಂದು ಪರಿಗಣಿಸಿರುವ)ದಲ್ಲಿ ಸಂಗೀತ ಮತ್ತು ನಾಟ್ಯ ಪರಂಪರೆಯ ಕುರಿತು 'ಧಾರಾ'ವನ್ನು ಬೃಹಟ್, ಪ್ರಾಚ್ಯಂ ಮತ್ತು ಸಂಗಮ್ ಸಹಯೋಗದೊಂದಿಗೆ ಆಯೋಜಿಸಿದ್ದವು.

ಧಾರಾ ಎಂಬುದು ಕೇಂದ್ರ ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಅನೇಕ ಕ್ಷೇತ್ರಗಳನ್ನು ಜಾಗೃತಿಗೊಳಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸಲು ಇರುವ ಸಮ್ಮೇಳನಗಳ ಸರಣಿಯಾಗಿದೆ.

ದೇಶದ ಪ್ರದರ್ಶನ ಕಲೆಯ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಜನಪ್ರಿಯಗೊಳಿಸಲು ಮತ್ತು ಈ ಪರಿಸರ ವ್ಯವಸ್ಥೆಯು ಎದುರಿಸುತ್ತಿರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು 'ವಿಷನ್ ಡಾಕ್ಯುಮೆಂಟ್ 2047'ನ್ನು ರಚಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. 

ಮುಖ್ಯ ಅತಿಥಿ ಡಾ ಪದ್ಮಾ ಸುಬ್ರಹ್ಮಣ್ಯಂ ( ನೃತ್ಯೋದಯ ಅಧ್ಯಕ್ಷರು), ಪ್ರೊ.ಗಂಟಿ ಎಸ್ ಮೂರ್ತಿ ( ಐಕೆಎಸ್ ವಿಭಾಗದ ರಾಷ್ಟ್ರೀಯ ಸಮನ್ವಯಾಧಿಕಾರಿ), ಡಾ.ಆರ್.ಚಂದ್ರಮೌಳಿ ( ಶಾಸ್ತ್ರ ವಿಶ್ವವಿದ್ಯಾಲಯ ರಿಜಿಸ್ಟ್ರಾರ್), ಶ್ರೀ ಶ್ರೀನಿವಾಸನ್ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಧಾರಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಂಸ್ಕೃತಿ ಸಚಿವಾಲಯದ ಶ್ರೀ ಶ್ರೀನಿವಾಸನ್ ಅಯ್ಯರ್ ಮತ್ತು ಪ್ರೊ. ಅನುರಾಧಾ ಚೌಧರಿ(ಐಕೆಎಸ್ ವಿಭಾಗದ ಸಮನ್ವಯಾಧಿಕಾರಿ) ಧನ್ಯವಾದ ಅರ್ಪಿಸಿದರು. 

ಪ್ರಧಾನ ಭಾಷಣ ಮಾಡಿದ ಡಾ ಪದ್ಮಾ ಸುಬ್ರಹ್ಮಣ್ಯಂ ಅವರು, ಭಾರತದ ಶ್ರೀಮಂತ ಅಮೂರ್ತ ಪರಂಪರೆಯ ವೈಭವ, ನಮ್ಮ ಪ್ರದರ್ಶನ ಕಲೆಗಳ ಬಗ್ಗೆ ನಾವು ಎದುರಿಸುತ್ತಿರುವ ಕಾಳಜಿ ಮತ್ತು ಮುಂದಿನ ಮಾರ್ಗಸೂಚಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಭಾರತೀಯ ಕಲೆಗಳು ನಮ್ಮಲ್ಲಿರುವ ದೈವಿಕ ಅಂತರ್ಗತವನ್ನು ಅರಿತುಕೊಳ್ಳುವ ಮಾರ್ಗವಾಗಿದೆ ಎಂದು ಅವರು ಒತ್ತಿ ಹೇಳಿದರು. ನಮ್ಮ ಕಲಾ ಪ್ರಕಾರಗಳನ್ನು ಗೌರವಿಸುವ ಕಲಾವಿದರಾಗಿ ಸಂಸ್ಕೃತಿಯ ಬಗ್ಗೆ ರಾಷ್ಟ್ರದ ಯುವಕರು ಹೇಗೆ ಹೆಮ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಮಾತನಾಡಿದರು.

ಮುಂದಿನ ಎರಡು ದಿನಗಳ ಸತತ ಚರ್ಚಾ ವಿಷಯ ತಂಡಗಳು  ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ಮತ್ತು ನೃತ್ಯದಲ್ಲಿ (ಗಾಯನ ಮತ್ತು ವಾದ್ಯ) ಪರಂಪರಗಳನ್ನು ಪ್ರತಿನಿಧಿಸುವ ಪ್ರಖ್ಯಾತ ಆಚರಣೆಗಾರರು, ಬೋಧಕರು, ಸಂಶೋಧಕರು, ನಾವೀನ್ಯಕಾರರು ಮತ್ತು ಶಿಕ್ಷಣತಜ್ಞರನ್ನು ಒಳಗೊಂಡಿದ್ದವು. 

ಶ್ರೀ ಕಣ್ಣನ್ ಬಾಲಕೃಷ್ಣನ್ ಮತ್ತು ತಂಡದ ನೇತೃತ್ವದ ಜುಗಲ್ಬಂದಿ, ಶ್ರೀಮತಿ ತಾರಾ ಕಿಣಿ ನೇತೃತ್ವದ ಸುನಾದ್ ಮತ್ತು ಸಂಗೀತ ಪರಂಪರೆಯ ತಂಡ, ಶ್ರೀ ತೊಕ್ಚೋಮ್ ಟೋಲೆನ್ ಮೇಟಿ ಅವರಿಂದ ನಾಟ್ಯ ಪರಂಪರೆಯನ್ನು ಪ್ರತಿನಿಧಿಸುವ ಮಣಿಪುರಿ ನೃತ್ಯ ಪ್ರಸ್ತುತಿ ಮತ್ತು ಡಾ ರೇವತಿ ಸಕಲಕರ ನೇತೃತ್ವದಲ್ಲಿ ಪರಂಪರಾ ಸಂಗೀತ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ವೀಕ್ಷಿಸಿದರು. 

ಕೊನೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಮ್ಮೇಳನದ ಭಾಷಣಕಾರರು ಮುಂಬರುವ ವರ್ಷಗಳಲ್ಲಿ ಕೆಲಸ ಮಾಡಲು ಮತ್ತು ಭಾರತದ ಹಳೆಯ ಪ್ರದರ್ಶನ ಕಲೆಗಳಿಗೆ ಉಜ್ವಲ ಭವಿಷ್ಯದ ನಾಂದಿಯಾಗಲು ಬಹು ಕ್ರಿಯಾಶೀಲ ಅಂಶಗಳ ಬಗ್ಗೆ ಮಾತನಾಡಿದರು. ಇವುಗಳನ್ನು ಔಪಚಾರಿಕ ಶ್ವೇತಪತ್ರವಾಗಿ ಪ್ರಸ್ತುತಪಡಿಸಲಾಗುತ್ತದೆ, ಅದಕ್ಕೆ 'ಧಾರಾ- ಸಂಗೀತ ಮತ್ತು ನಾಟ್ಯ ಪರಂಪರೆಗಾಗಿ ವಿಷನ್ 2047' ಎಂಬ ಶೀರ್ಷಿಕೆಯನ್ನು ಇಡಲಾಗಿದೆ.

*****



(Release ID: 1889445) Visitor Counter : 125