ರಾಷ್ಟ್ರಪತಿಗಳ ಕಾರ್ಯಾಲಯ

​​​​​​​ಭಾರತದ ರಾಷ್ಟ್ರಪತಿಯವರು ಡಿಜಿಟಲ್ ಇಂಡಿಯಾ ಪ್ರಶಸ್ತಿ 2022ರನ್ನು ಪ್ರದಾನ ಮಾಡಿದರು


​​​​​​​ಸಾಮಾಜಿಕ ನ್ಯಾಯವು ಡಿಜಿಟಲ್ ಆವಿಷ್ಕಾರಗಳ ಪ್ರಧಾನ ಉದ್ದೇಶವಾಗಿರಬೇಕು: ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

Posted On: 07 JAN 2023 2:19PM by PIB Bengaluru

ಡಿಜಿಟಲ್ ಇಂಡಿಯಾ ಪ್ರಶಸ್ತಿಗಳ ಏಳನೇ ಆವೃತ್ತಿಯನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 7, 2023) ನವದೆಹಲಿಯಲ್ಲಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, " ಡಿಜಿಟಲ್ ಇಂಡಿಯಾದ ದೃಷ್ಟಿಕೋನವನ್ನು ಸಾಧಿಸಲು ಸರ್ಕಾರಿ ಘಟಕಗಳನ್ನು ಮಾತ್ರವಲ್ಲದೆ ಸ್ಟಾರ್ಟ್‌ಅಪ್‌ಗಳನ್ನು ಡಿಜಿಟಲ್ ಇಂಡಿಯಾ ಪ್ರಶಸ್ತಿ 2022 ಯು ಗುರುತಿಸಿ, ಪ್ರೇರೇಪಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ" ಎಂದು ಹೇಳಿದರು.   2022ರ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ರಾಷ್ಟ್ರಪತಿಯವರು, “ಈ ಪ್ರಶಸ್ತಿಗಳು, ಡಿಜಿಟಲ್ ಆಡಳಿತದ ಪರಿಣಾಮಕಾರಿ ಬಳಕೆಯಿಂದ ಜನರ ಸಾಮರ್ಥ್ಯವನ್ನು ಹೊರಹಾಕುವ ಡಿಜಿಟಲ್ ಸಶಕ್ತ ಸಮಾಜವಾಗಿ ಭಾರತವನ್ನು ಪರಿವರ್ತಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ವ್ಯಾಪಾರ ಮಾಡಲು ಸುಲಭವಾಗುವಂತೆ ಹಾಗೂ ಜನರಿಗೆ ಅನುಕೂಲವಾಗುವಂತೆ ಡೇಟಾ ಹಂಚಿಕೆ ವೇದಿಕೆಗಳು ಮಾಡುತ್ತಿರುವ ವೈವಿಧ್ಯಮಯ ಆವಿಷ್ಕಾರಗಳನ್ನು ನೋಡುವುದು ಹರ್ಷದಾಯಕವಾಗಿದೆ" ಎಂದು ಹೇಳಿದರು. 

 "ಡಿಜಿಟಲ್ ಆವಿಷ್ಕಾರಗಳ ಪ್ರಧಾನ ಉದ್ದೇಶ ಸಾಮಾಜಿಕ ನ್ಯಾಯವಾಗಿರಬೇಕು" ಎಂದು ರಾಷ್ಟ್ರಪತಿಯವರು ಹೇಳಿದರು.  "ತಂತ್ರಜ್ಞಾನದ ಬಳಕೆಯ ಮೂಲಕ ಡಿಜಿಟಲ್ ವಿಭಜನೆಯನ್ನು ಗಣನೀಯವಾಗಿ ಕಡಿಮೆಗೊಳಿಸಿದಾಗ ಮಾತ್ರ ಭಾರತವು ಜ್ಞಾನದ ಆರ್ಥಿಕತೆಯಾಗಿ ಅಭಿವೃದ್ಧಿ ಹೊಂದುತ್ತದೆ.  ಡಿಜಿಟಲ್ ಅಂತ್ಯೋದಯದತ್ತ ನಮ್ಮ ಪಯಣದಲ್ಲಿ ಸಮಾಜದ ದುರ್ಬಲ ಮತ್ತು ಅಂಚಿನಲ್ಲಿರುವ ವರ್ಗಗಳ ಸೇರ್ಪಡೆ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಬಲಪಡಿಸಲು ಭಾರತವು ಸರಿಯಾದ ಉದಾಹರಣೆಯಾಗಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 

"ಭಾರತದ ಡಿಜಿಟಲ್ ರೂಪಾಂತರದ ಕಥೆಯು ನಾವೀನ್ಯತೆ, ಅನುಷ್ಠಾನ ಮತ್ತು ಸೇರ್ಪಡೆಯ ಕಥೆಯಾಗಿದೆ. ಜಗತ್ತನ್ನು ಹೆಚ್ಚು ಹೆಚ್ಚು ಸುಲಭವಾಗಿ ಲಭ್ಯವಾಗುವ ಮತ್ತು ಅಡೆತಡೆಗಳಿಲ್ಲದ ಸ್ಥಳವನ್ನಾಗಿ ಮಾಡಲು ಹಾಗೂ ನವೀನ ಪರಿಹಾರಗಳನ್ನು ಹುಡುಕಲು ಸಹಯೋಗದ ವೇದಿಕೆಗಳನ್ನು ರಚಿಸುವ ಅಗತ್ಯವಿದೆ" ಎಂದು ಅವರು ಹೇಳಿದರು.

“ ಭಾರತೀಯ ಪ್ರತಿಭೆಗಳ ಮೌಲ್ಯವನ್ನು ಜಗತ್ತಿಗೆ ಅರಿಯುವಲ್ಲಿ ಭಾರತೀಯ ಐ.ಟಿ. ಕಂಪನಿಗಳು ಗಮನಾರ್ಹವಾದ ಕೆಲಸವನ್ನು ಮಾಡಿವೆ. ನಾವು ಚಾಲ್ತಿಯಲ್ಲಿರುವ ನೀತಿಗಳನ್ನು ಬಳಸಿಕೊಳ್ಳಬೇಕು ಮತ್ತು ನವೀನ ಭಾರತದ ತಯಾರಿಕೆ (ಮೇಡ್-ಇನ್-ಇಂಡಿಯಾ) ತಂತ್ರಜ್ಞಾನಗಳನ್ನು ನಿರ್ಮಿಸುವ ಮೂಲಕ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಉತ್ಪನ್ನಗಳಿಗೆ ದೇಶವನ್ನು ಜಾಗತಿಕ ಶಕ್ತಿ ಕೇಂದ್ರವಾಗಿ ಇರಿಸಲು ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸಬೇಕು.” ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು

“ಡೇಟಾವು(ದತ್ತಾಂಶ/ಮಾಹಿತಿ) ಹೊಸ ಜ್ಞಾನ, ಒಳನೋಟಗಳು ಮತ್ತು ಹೀಗೆ ಪರಿಹಾರಗಳನ್ನು ಸೃಷ್ಟಿಸುವ ಮೂಲಾಧಾರವಾಗಿದೆ;  ಮತ್ತು ಅಪ್ಲಿಕೇಶನ್‌ನ ಸಂಪೂರ್ಣ ಹೊಸ ಕ್ಷೇತ್ರಗಳಿಗೆ ಕಾರಣವಾಗುತ್ತದೆ.  ಯುವ ತಂತ್ರಜ್ಞಾನ ಉತ್ಸಾಹಿಗಳು ಸ್ಥಳೀಯ ಡಿಜಿಟಲ್ ಪರಿಹಾರಗಳನ್ನು ನಿರ್ಮಿಸಲು ಅದನ್ನು ಬಳಸಿಕೊಳ್ಳುವಂತೆ ನಾವು ಸರ್ಕಾರಿ ಡೇಟಾವನ್ನು ಪ್ರಜಾಪ್ರಭುತ್ವಗೊಳಿಸುವುದರ ಮೇಲೆ ಕೇಂದ್ರೀಕರಿಸಬೇಕು.”

“ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸಲು ಸರ್ಕಾರಿ ಘಟಕಗಳು ತಳಮಟ್ಟದಲ್ಲಿ ಮತ್ತು ಸ್ಟಾರ್ಟ್‌ಅಪ್‌ಗಳ ಸಹಯೋಗದೊಂದಿಗೆ ಕೈಗೊಂಡ ನವೀನ ಉಪಕ್ರಮಗಳು ಉತ್ತಮ ಹೆಜ್ಜೆಗಳಾಗಿವೆ.  ನ್ಯಾಯಾಂಗ, ಭೂ ನೋಂದಣಿ, ರಸಗೊಬ್ಬರ ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಎಲ್ಲ ನಾಗರಿಕರಿಗೆ ಜೀವನ ಸೌಕರ್ಯವನ್ನು ಸುಧಾರಿಸಲು ನವೀನ ಪರಿಹಾರಗಳನ್ನು ನೀಡಲು ನಾವು ನಮ್ಮನ್ನು ಸವಾಲಾಗಿ ಸ್ವೀಕರಿಸಿ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು” ಎಂದು ರಾಷ್ಟ್ರಪತಿಯವರು ಹೇಳಿದರು.

ರಾಷ್ಟ್ರಪತಿಯವರ ಭಾಷಣಕ್ಕಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

*****



(Release ID: 1889411) Visitor Counter : 218