ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಭುವನೇಶ್ವರದಲ್ಲಿ ಮಿಷನ್ ಒಲಿಂಪಿಕ್ ಸೆಲ್ ಸದಸ್ಯರ ಸಭೆ ನಡೆಸಲಿದೆ. ಭಾರತ ಮತ್ತು ವೇಲ್ಸ್ ಹಾಕಿ ವಿಶ್ವಕಪ್ ಪಂದ್ಯಕ್ಕೂ ಸದಸ್ಯರು ಹಾಜರಾಗಲಿದ್ದಾರೆ

Posted On: 06 JAN 2023 7:22PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ (ಎಂವೈಎಎಸ್) 2023ರ ಜನವರಿ 20 ರಂದು ಒಡಿಶಾದ ಭುವನೇಶ್ವರದಲ್ಲಿ ಮಿಷನ್ ಒಲಿಂಪಿಕ್ ಸೆಲ್ (ಎಂಒಸಿ) ಸಭೆಯನ್ನು ಆಯೋಜಿಸಲಿದೆ. ಟಾಪ್ಸ್ ಕ್ರೀಡಾಪಟುಗಳ ಆಯ್ಕೆ, ಅವರ ಕಾರ್ಯಕ್ಷಮತೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕಾಗಿ ಮತ್ತು ಎಂವೈಎಎಸ್ ನಿಂದ ಆರ್ಥಿಕ ಬೆಂಬಲಕ್ಕಾಗಿ ಪ್ರಮುಖ ಕ್ರೀಡಾಪಟುಗಳ ಪ್ರಸ್ತಾಪಗಳನ್ನು ಅನುಮೋದಿಸಲು ಎಂಒಸಿ ಪ್ರತಿ ತಿಂಗಳು ಸಭೆ ಸೇರುತ್ತದೆ.

ಮಾಜಿ ಅಥ್ಲೀಟ್ ಗಳಾದ ಅಂಜು ಬಾಬಿ ಜಾರ್ಜ್, ಅಂಜಲಿ ಭಾಗವತ್, ವಿರೇನ್ ರಾಸ್ಕಿನ್ಹಾ, ಯೋಗೇಶ್ವರ್ ದತ್, ತೃಪ್ತಿ ಮುರ್ಗುಂಡೆ, ಮೊನಾಲಿಸಾ ಬರುವಾ ಸೇರಿದಂತೆ ಇತರ ಸದಸ್ಯರು ಸಹ ತಮ್ಮ ಭೇಟಿಯ ನೇಪಥ್ಯದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ಜನವರಿ 19 ರಂದು ನಡೆಯಲಿರುವ ತನ್ನ ಅಂತಿಮ ಗುಂಪು ಹಂತದ ಪಂದ್ಯಕ್ಕಾಗಿ ಭಾರತವು ವೇಲ್ಸ್ ವಿರುದ್ಧ ಆಡುವುದನ್ನು ಸದಸ್ಯರು ವೀಕ್ಷಿಸುವ ನಿರೀಕ್ಷೆಯಿದೆ.

ಭುವನೇಶ್ವರದಲ್ಲಿ ನಡೆಯುತ್ತಿರುವ ಸಭೆಯ ಬಗ್ಗೆ ಮಾತನಾಡಿದ ಅಂಜು ಬಾಬಿ ಜಾರ್ಜ್, "ಭುವನೇಶ್ವರದಲ್ಲಿ ಎಂಒಸಿಗೆ ಹಾಜರಾಗಲು ನಾನು ಎದುರು ನೋಡುತ್ತಿದ್ದೇನೆ. ಎಂಒಸಿ ಸದಸ್ಯರಾಗಿ ನಾವು ಕ್ರೀಡಾಪಟುಗಳ ತರಬೇತಿ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಅನುಮೋದಿಸುತ್ತೇವೆ. ಆದಾಗ್ಯೂ, ಎಂಒಸಿ ಸದಸ್ಯರಾಗಿ ನಾವೆಲ್ಲರೂ ಮೈದಾನದಲ್ಲಿ ಆಟಗಾರರನ್ನು ವೀಕ್ಷಿಸುತ್ತಿರುವುದು ಇದೇ ಮೊದಲು. ಇದು ಅವರ ಪ್ರದರ್ಶನವನ್ನು ನೇರವಾಗಿ ಅಳೆಯಲು ಮತ್ತು ಅವರ ಪ್ರಯಾಣದ ಭಾಗವಾಗಲು ನಮಗೆ ಅವಕಾಶವನ್ನು ನೀಡುತ್ತದೆ," ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ, ಭಾರತದಾದ್ಯಂತದ ಎಂಒಸಿ ಸದಸ್ಯರು, ಟಾಪ್ಸ್ ಸಂಬಂಧಿತ ಕಾರ್ಯಸೂಚಿಗಳನ್ನು ಚರ್ಚಿಸಲು ಪ್ರತಿ ತಿಂಗಳು ದೆಹಲಿಗೆ ಪ್ರಯಾಣಿಸುತ್ತಾರೆ. ಕೋವಿಡ್-19 ಸಾಂಕ್ರಾಮಿಕದ ಉತ್ತುಂಗದ ಸಮಯದಲ್ಲಿ, ವಿಳಂಬದಿಂದಾಗಿ ಕ್ರೀಡಾಪಟುಗಳಿಗೆ ತೊಂದರೆಯಾಗದಂತೆ ಸಭೆಗಳನ್ನು ವರ್ಚುವಲ್ ವೇದಿಕೆಗೆ ಸ್ಥಳಾಂತರಿಸಲಾಯಿತು. ಲಾಕ್ ಡೌನ್ ನಂತರ, ಸಭೆಗಳನ್ನು ಆನ್ ಲೈನ್ ಮತ್ತು ಅಪ್ ಲೈನ್ ಎರಡೂ ವಿಧಾನಗಳಲ್ಲಿ ನಡೆಸಲಾಗುತ್ತದೆ, ಅಲ್ಲಿ ತಿಂಗಳಲ್ಲಿ ಒಂದು ಸಭೆಯನ್ನು ವರ್ಚುವಲ್ ಆಗಿ ನಡೆಸಲಾಗುತ್ತದೆ, ಆದರೆ ಎರಡನೇ ಸಭೆಯನ್ನು ಭೌತಿಕ ಸಭೆಯಾಗಿ ನಡೆಸಲಾಗುತ್ತದೆ.

*****



(Release ID: 1889400) Visitor Counter : 117


Read this release in: English , Urdu , Hindi , Odia