ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಿರಿಯ ಪತ್ರಕರ್ತೆ ಮಾಧುರಿಬೆನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಕಟಣಾ ದಿನಾಂಕ: 06 JAN 2023 5:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿರಿಯ ಪತ್ರಕರ್ತೆ ಮಾಧುರಿಬೆನ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರದಾನಿಗಳು ಗುಜರಾತಿಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಮಾಧುರಿಬೆನ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

 ಪ್ರಧಾನಿಗಳು ಗುಜರಾತಿಯಲ್ಲಿ ಟ್ವೀಟ್ ಮಾಡಿದ್ದು ಹೀಗೆ: 

"ಚಿತ್ರಲೇಖಾ" ಕುಟುಂಬದ ಮಾಧುರಿಬೆನ್ ನಿಧನದಿಂದ ದುಃಖವಾಗಿದೆ.  ಅವರ ನಿಧನ ಓದುಗರ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ಆತ್ಮಕ್ಕೆ ಸದ್ಗತಿ, ಚಿರಶಾಂತಿ ಸಿಗಲೆಂದು ಪ್ರಾರ್ಥನೆಗಳನ್ನು ಸಲ್ಲಿಸುತ್ತೇನೆ. ಮತ್ತು ಅವರ ಅಗಲಿಕೆಯಿಂದ ಮಾಧುರಿಬೆನ್ ಅವರ ಕುಟುಂಬಕ್ಕೆ ಹಾಗೂ ಅವರ ಅಪಾರ ಓದುಗ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲೆಂದು ಹಾರೈಸುತ್ತೇನೆ..ಸಂತಾಪಗಳು...ಓಂ ಶಾಂತಿ!!”

*****


(ಪ್ರಕಟಣೆ ಐ.ಡಿ.: 1889205) ವಿಸಿಟರ್ ಕೌಂಟರ್ : 187