ಕಲ್ಲಿದ್ದಲು ಸಚಿವಾಲಯ

ಕೇಂದ್ರ ಕಲ್ಲಿದ್ದಲು ಸಚಿವಾಲಯ ಹೆಚ್ಚುವರಿ 19 ಫಸ್ಟ್ ಮೈಲ್ ಕನೆಕ್ಟಿವಿಟಿ (ಎಫ್‌.ಎಂ.ಸಿ.) ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ


2026-27ನೇ ಹಣಕಾಸು ವರ್ಷದಲ್ಲಿ ಅನುಷ್ಠಾನಗೊಳಿಸಬೇಕಾದ ಯೋಜನೆಗಳು

Posted On: 02 JAN 2023 2:55PM by PIB Bengaluru

ಕೇಂದ್ರ ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಮತ್ತು 330 ಮಿಲಿಯನ್ ಟನ್ (ಎಂಟಿ) ಸಾಮರ್ಥ್ಯದ ಎಸ್‌.ಸಿ.ಸಿ.ಎಲ್‌.ಗಾಗಿ ಹೆಚ್ಚುವರಿ 19 ಫಸ್ಟ್ ಮೈಲ್ ಕನೆಕ್ಟಿವಿಟಿ (ಎಫ್‌ಎಂಸಿ) ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಮತ್ತು ಈ ಯೋಜನೆಗಳನ್ನು ಹಣಕಾಸುವರ್ಷ 20226-27 ರೊಳಗೆ ಕಾರ್ಯಗತಗೊಳಿಸಲಿದೆ.

ಕೇಂದ್ರ ಕಲ್ಲಿದ್ದಲು ಸಚಿವಾಲಯವು ಈಗಾಗಲೇ ರೂ.18000 ಕೋಟಿಗಳ ಹೂಡಿಕೆಯೊಂದಿಗೆ 526 ಎಂಟಿಪಿಎ ಸಾಮರ್ಥ್ಯದ 55 ಎಫ್‌ಎಂಸಿ ಯೋಜನೆಗಳನ್ನು (44 - ಸಿಐಲ್, 5- ಎಸ್‌.ಸಿ.ಸಿ.ಎಲ್‌. & 3 – ಎನ್.ಎಲ್.ಸಿ.ಐ.ಎಲ್.) ಕೈಗೊಂಡಿದೆ. ಇದರಲ್ಲಿ 95.5 ಎಂಟಿಪಿಎ ಸಾಮರ್ಥ್ಯದ ಎಂಟು ಯೋಜನೆಗಳನ್ನು (6- ಸಿಐಲ್ & 2- ಎಸ್‌.ಸಿ.ಸಿ.ಎಲ್‌.) ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ ಮತ್ತು ಉಳಿದವು ಹಣಕಾಸುವರ್ಷ 2025 ರ ವೇಳೆಗೆ ಕಾರ್ಯಾರಂಭ ಮಾಡಲಿವೆ.

ಭವಿಷ್ಯದಲ್ಲಿ ದಕ್ಷ ಮತ್ತು ಪರಿಸರ ಸ್ನೇಹಿ ಕಲ್ಲಿದ್ದಲು ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಕಲ್ಲಿದ್ದಲು ಗಣಿಗಳ ಬಳಿ ರೈಲ್ವೆ ಸೈಡಿಂಗ್‌ಗಳ ಮೂಲಕ ಮತ್ತು ಕಲ್ಲಿದ್ದಲು ಕ್ಷೇತ್ರಗಳಲ್ಲಿ ರೈಲು ಜಾಲವನ್ನು ಬಲಪಡಿಸುವ ಮೂಲಕ ಫಸ್ಟ್ ಮೈಲ್ ಸಂಪರ್ಕವನ್ನು ಒಳಗೊಂಡಂತೆ ರಾಷ್ಟ್ರೀಯ ಕಲ್ಲಿದ್ದಲು ಲಾಜಿಸ್ಟಿಕ್ ಯೋಜನೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಕಲ್ಲಿದ್ದಲು ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ. ಕಲ್ಲಿದ್ದಲು ಸಚಿವಾಲಯವು ಹಣಕಾಸು ವರ್ಷ 2025 ರ ವೇಳೆಗೆ 1.31 ಬಿಲಿಯನ್ ಟನ್ ಕಲ್ಲಿದ್ದಲು ಮತ್ತು ಹಣಕಾಸು ವರ್ಷ 2030 ರಲ್ಲಿ 1.5ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ, ವೆಚ್ಚದ ಕಡಿತ, ವೇಗದ ನಿರ್ವಹಣೆ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ಕಲ್ಲಿದ್ದಲು ಸಾಗಣೆಯ ವಿಧಾನವನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಗಣಿಗಳಲ್ಲಿ ಕಲ್ಲಿದ್ದಲಿನ ರಸ್ತೆ ಸಾರಿಗೆಯ ಸಮಗ್ರ ಸಾಗಾಟ ವಿಧಾನವನ್ನು ಅಭಿವೃದ್ಧಿಪಡಿಸಲು ಸಚಿವಾಲಯವು ಕಾರ್ಯತಂತ್ರವನ್ನು ರೂಪಿಸಿದೆ ಮತ್ತು ಎಫ್.ಎಂ.ಸಿ ಯೋಜನೆಗಳ ಅಡಿಯಲ್ಲಿ ಯಾಂತ್ರಿಕೃತ ಕಲ್ಲಿದ್ದಲು ಸಾಗಣೆ ಮತ್ತು ಲೋಡಿಂಗ್ ವ್ಯವಸ್ಥೆಯನ್ನು ನವೀಕರಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ಕಲ್ಲಿದ್ದಲು ಹ್ಯಾಂಡ್ಲಿಂಗ್ ಪ್ಲಾಂಟ್‌ಗಳು (ಸಿ.ಹೆಚ್.ಪಿ. ಗಳು) ಮತ್ತು ರಾಪಿಡ್ ಲೋಡಿಂಗ್ ಸಿಸ್ಟಮ್‌ಗಳೊಂದಿಗೆ ಎಸ್.ಐ.ಎಲ್.ಒ.ಗಳು ಪುಡಿಮಾಡುವಿಕೆ, ಕಲ್ಲಿದ್ದಲಿನ ಗಾತ್ರದಲ್ಲಿ ತುಂಡರಿಸುವಿಕೆ ಮತ್ತು ವೇಗದ ಕಂಪ್ಯೂಟರ್ ನೆರವಿನ ಲೋಡಿಂಗ್‌ನಂತಹ ಪ್ರಯೋಜನಗಳನ್ನು ಹೊಂದಿರುತ್ತದೆ.

2020-21ರಲ್ಲಿ ನಾಗ್ಪುರದ ರಾಷ್ಟ್ರೀಯ ಪರಿಸರ ಸಂಶೋಧನಾ ಸಂಸ್ಥೆ (ಎನ್.ಇ.ಇ.ಆರ್.ಐ) ಮೂಲಕ ಅಧ್ಯಯನವನ್ನು ಕೈಗೊಳ್ಳಲಾಯಿತು. ಎನ್.ಇ.ಇ.ಆರ್.ಐ ವರದಿಯು ವಾರ್ಷಿಕ ಇಂಗಾಲದ ಹೊರಸೂಸುವಿಕೆ ಉಳಿತಾಯ, ಟ್ರಕ್ ಚಲನೆಯ ಸಾಂದ್ರತೆಯ ಕಡಿತ ಮತ್ತು ವರ್ಷಕ್ಕೆ ರೂ.2100 ಕೋಟಿ ಗಳ ಡೀಸೆಲ್ ಉಳಿತಾಯವನ್ನು ಸಾಧಿಸಿದೆ.

*****



(Release ID: 1888068) Visitor Counter : 122