ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ದೇವನಹಳ್ಳಿಯಲ್ಲಿ ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆ (ಸಿಡಿಟಿಐ) ಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ವಸತಿ ಮತ್ತು ಆಡಳಿತ ಸಂಕೀರ್ಣಗಳನ್ನು ಉದ್ಘಾಟಿಸಿದರು.


ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಭದ್ರತಾ ಪಡೆ ಸಿಬ್ಬಂದಿಯನ್ನು ವಿಶೇಷವಾಗಿ ಗಡಿ ಕಾವಲು ಪಡೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲು, ಅವರ ವಸತಿ ತೃಪ್ತಿ ಅನುಪಾತವನ್ನು ಹೆಚ್ಚಿಸಲು ಮತ್ತು ಸಿಬ್ಬಂದಿ ಮತ್ತು ಅವರ ಕುಟುಂಬಗಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಪ್ರಯತ್ನಗಳನ್ನು ಮಾಡಿದೆ.

ಐಟಿಬಿಪಿ ಯೋಧರ ಸಮರ್ಪಣೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಮತ್ತು ಐಟಿಬಿಪಿ ಯೋಧರು ಗಡಿಯಲ್ಲಿರುವವರೆಗೂ ಭಾರತದ ಗಡಿಗಳು ಸುರಕ್ಷಿತವಾಗಿರುತ್ತವೆ ಎಂಬ ವಿಶ್ವಾಸವಿರಿಸಿದ್ದೇವೆ.

ಜನರು ಐಟಿಬಿಪಿ ಯೋಧರ ಧೈರ್ಯ ಮತ್ತು ಸಾಹಸಕ್ಕಾಗಿ ಅವರಿಗೆ 'ಹಿಮವೀರ್' ಎಂಬ ಹೆಸರನ್ನು ನೀಡಿದ್ದಾರೆ.

ನಿರಂತರ ಸಾಮಾಜಿಕ ಬದಲಾವಣೆಗಳಿಗೆ ಹೊಂದಿಕೊಳ್ಳಲು ಪೊಲೀಸರಿಗೆ ಸಂಶೋಧನೆ ಅತ್ಯಗತ್ಯ, ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪಡೆಗಳಿಗೆ ಈ ಸಂಶೋಧನೆ ನಡೆಸಲು ಬಿಪಿಆರ್‌ & ಡಿ ಕಾರಣವಾಗಿದೆ.

ಪೊಲೀಸರಲ್ಲಿ ವ್ಯವಸ್ಥಿತವಾದ ಮತ್ತು ಕಾರ್ಯವಿಧಾನದ ಸುಧಾರಣೆಗಳು ನಿರಂತರ ಪ್ರಕ್ರಿಯೆಯಾಗಿರಬೇಕು, ಇದಕ್ಕಾಗಿ ಸಂಸ್ಥೆಗಳ ನಡುವೆ ಸೆಮಿನಾರ್‌ಗಳು ಮತ್ತು ಉತ್ತಮ ಅಭ್ಯಾಸಗಳು ಹಾಗೂ ಸವಾಲುಗಳ ವಿನಿಮಯದ ಸಹಯೋಗವು ಎಲ್ಲಾ ಪೊಲೀಸ್ ಪಡೆಗಳನ್ನು ಅತ್ಯುತ್ತಮವಾಗಿಸಲು ಅವಶ್ಯಕವಾಗಿದೆ.

ಮಾದಕ ದ್ರವ್ಯ, ನಕಲಿ ನೋಟು, ಹವಾಲಾ ದಂಧೆ, ಉದ್ರಿಕ್ತತೆಯನ್ನು ಹರಡುವ ಸಂಘಟನೆಗಳು, ಭಯೋತ್ಪಾದನೆ, ಗಡಿ ರಾಜ್ಯಗಳಲ್ಲಿ ನುಸುಳುವಿಕೆ, ಕರಾವಳಿ ರಾಜ್ಯಗಳಲ್ಲಿ ಸಮುದ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಂತಹ ಪ್ರಮುಖ ಸವಾಲುಗಳನ್ನು ಪೊಲೀಸರು ಎದುರಿಸುತ್ತಿದ್ದಾರೆ. ̤ ಸಂವಾದ, ವಿಚಾರ ಸಂಕಿರಣಗಳು ಮತ್ತು ಸಹಕಾರದ ಮೂಲಕ ಪೊಲೀಸ್‌ ಪಡೆಗಳ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮೂಲಕ ಬಿಪಿಆರ್ & ಡಿ ಪ್ರಮುಖ ಪಾತ್ರ ವಹಿಸುತ್ತಿದೆ.

ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿನ ಸವಾಲುಗಳ ಮೇಲೆ ದೇಶವು ಗಮನಹರಿಸಬೇಕು. ಮುಂದಿನ ದಿನಗಳಲ್ಲಿ ನಗರ ಪೋಲೀಸಿಂಗ್ ಹೆಚ್ಚು ಸವಾಲಾಗಿರುವುದರಿಂದ ಫಲಿತಾಂಶಗಳನ್ನು ತರುವ ಸಂಶೋಧನೆ ಮತ್ತು ಅಭ್ಯಾಸದ ಮೂಲಕ ನಮ್ಮ ಕಾರ್ಯತಂತ್ರವನ್ನು ಬದಲಾಯಿಸುವ ಅಗತ್ಯವಿದೆ.

ಭಾರತದ ಅಭಿವೃದ್ಧಿಗೆ ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೊಂದುವುದು ಬಹಳ ಮುಖ್ಯವಾಗಿದೆ, ಕಳೆದ 3 ವರ್ಷಗಳಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಬಿಪಿಆರ್ & ಡಿ ಮೂಲಕ ಸಂಶೋಧನೆಯನ್ನು ಸುಧಾರಿಸಲು ಹಲವಾರು ಬದಲಾವಣೆಗಳನ್ನು ಮಾಡಿದೆ, ಅದರ ಫಲಿತಾಂಶಗಳು ಈಗ ಗೋಚರಿಸುತ್ತಿವೆ.

ಸಿಡಿಟಿಐನ ಈ ಕೇಂದ್ರವು ನೆರೆಯ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ದಮನ್-ದಿಯು ಕೇಂದ್ರಾಡಳಿತ ಪ್ರದೇಶದ ಫೋರೆನ್ಸಿಕ್ ಅಗತ್ಯಗಳನ್ನು ಪೂರೈಸುತ್ತದೆ.

Posted On: 31 DEC 2022 6:30PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ದೇವನಹಳ್ಳಿಯಲ್ಲಿ ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆ (ಸಿಡಿಟಿಐ) ಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ವಸತಿ ಮತ್ತು ಆಡಳಿತ ಸಂಕೀರ್ಣಗಳನ್ನು ಉದ್ಘಾಟಿಸಿದರು. ಶ್ರೀ ಅಮಿತ್ ಶಾ ಅವರು ಉದ್ಘಾಟಿಸಿದ ಐಟಿಬಿಪಿಯ ವಸತಿ ಸಂಕೀರ್ಣಗಳಲ್ಲಿ ವಸತಿ ಕಟ್ಟಡಗಳು, ಜಂಟಿ ಕಟ್ಟಡ, 120 ಯೋಧರಿಗೆ ಬ್ಯಾರಕ್‌ಗಳು, ಸಿಬ್ಬಂದಿ ಅಧಿಕಾರಿಗಳ ಮೆಸ್ ಮತ್ತು ಅಧಿಕಾರಿಗಳ ಮೆಸ್ ಸೇರಿವೆ. ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image0018BS0.jpg

ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಸಿಡಿಟಿಐನ ಶಂಕುಸ್ಥಾಪನೆಯೊಂದಿಗೆ, ಪೊಲೀಸ್ ಪಡೆಗಳಿಗೆ ಹೆಚ್ಚು ಸೌಲಭ್ಯಗಳು ಲಭ್ಯವಾಗುವಂತೆ ಮಾಡಲು ಕೊಂಡಿಯೊಂದನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಬಿಪಿಆರ್ & ಡಿ ಯ ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆಗೆ ಸೂಕ್ತ ಭೂಮಿಯನ್ನು ಒದಗಿಸಿದ್ದಕ್ಕಾಗಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಶ್ರೀ ಶಾ ಧನ್ಯವಾದ ತಿಳಿಸಿದರು.

https://static.pib.gov.in/WriteReadData/userfiles/image/image002QC7E.jpg

ಬಿಪಿಆರ್ & ಡಿ ದೇಶದ ಪೊಲೀಸ್ ಸಂಸ್ಥೆಗಳನ್ನು ಬಲಪಡಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು, ಆದರೆ ಹಿಂದೆ ಅದರ ಕೆಲಸಕ್ಕೆ ಸೂಕ್ತ ಪ್ರಾಮುಖ್ಯತೆಯನ್ನು ನೀಡಲಾಗುತ್ತಿರಲಿಲ್ಲ. ಕಾಲ ಬದಲಾದಂತೆ ಸಮಾಜದ ಚಿಂತನೆ, ರೂಪುರೇಷೆ, ಗುರಿ, ಮಾರ್ಗ ಬದಲಾಗಿದ್ದು, ಪೊಲೀಸರು ಅದಕ್ಕೆ ತಕ್ಕಂತೆ ಬದಲಾಗದಿದ್ದಲ್ಲಿ ಕ್ರಮೇಣ ಅಪ್ರಸ್ತುತರಾಗಬಹುದು ಎಂದರು. ಸಮಾಜದಲ್ಲಿನ ನಿರಂತರ ಬದಲಾವಣೆಗಳಿಗೆ ಪೊಲೀಸರು ಹೊಂದಿಕೊಳ್ಳಲು ಸಂಶೋಧನೆ ಅತ್ಯಗತ್ಯವಾಗಿದೆ. ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪಡೆಗಳಿಗೆ ಈ ಸಂಶೋಧನೆಯನ್ನು ನಡೆಸಲು ಬಿಪಿಆರ್ & ಡಿ ಕಾರಣವಾಗಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image003PQ47.jpg

ಪೊಲೀಸರಲ್ಲಿ ವ್ಯವಸ್ಥಿತ ಮತ್ತು ಕಾರ್ಯವಿಧಾನದ ಸುಧಾರಣೆಗಳು ನಿರಂತರ ಪ್ರಕ್ರಿಯೆಯಾಗಬೇಕು. ಇದಕ್ಕಾಗಿ ಸಂಸ್ಥೆಗಳ ನಡುವೆ ಸೆಮಿನಾರ್‌ಗಳು ಮತ್ತು ಉತ್ತಮ ಅಭ್ಯಾಸಗಳು ಹಾಗೂ ಸವಾಲುಗಳ ವಿನಿಮಯವು ಪೊಲೀಸ್ ಪಡೆಗಳನ್ನು ಅತ್ಯುತ್ತಮವಾಗಿಸಲು ಅಗತ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು, ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿರುವುದರಿಂದ ಮತ್ತು ಸಾಂಸ್ಕೃತಿಕ ವೈವಿಧ್ಯಗಳ ಭಾರತದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ವ್ಯತ್ಯಾಸಗಳಿವೆ ಮತ್ತು ವಿಭಿನ್ನ ಸವಾಲುಗಳು ಎದುರಾಗುವುದರಿಂದ ಈ ಪ್ರಕ್ರಿಯೆಯು ಬಹಳ ಮುಖ್ಯವಾಗಿದೆ ಎಂದು ಶ್ರೀ ಶಾ ಹೇಳಿದರು. ಪೊಲೀಸ್‌ ಪಡೆಯನ್ನು ರಾಜ್ಯದ ವಿಷಯವಾಗಿ ಸೂಕ್ತವಾಗಿ ವರ್ಗೀಕರಿಸಲಾಗಿದೆ, ಆದರೆ ಕಾಲಕ್ರಮೇಣ, ಮಾದಕ ದ್ರವ್ಯ, ನಕಲಿ ನೋಟು, ಹವಾಲಾ ವ್ಯವಹಾರ, ಉದ್ರಿಕ್ತತೆಯನ್ನು ಹರಡುವ ಸಂಘಟನೆಗಳು, ಭಯೋತ್ಪಾದನೆ, ಗಡಿ ರಾಜ್ಯಗಳಲ್ಲಿ ನುಸುಳುವಿಕೆ, ಕರಾವಳಿ ರಾಜ್ಯಗಳಲ್ಲಿ ಸಮುದ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಂತಹ ಕಠಿಣ ಸವಾಲುಗಳನ್ನು ಸಹ ದೇಶಾದ್ಯಂತ ಪೊಲೀಸ್ ಪಡೆಗಳು ಎದುರಿಸುತ್ತಿವೆ ಮತ್ತು ಅವುಗಳನ್ನು ನಿಗ್ರಹಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪಡೆಗಳ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಬಿಪಿಆರ್ & ಡಿ ಮೂಲಕ ಸಂವಾದ, ಸೆಮಿನಾರ್‌ಗಳು ಮತ್ತು ಸಹಕಾರ ಅತ್ಯಗತ್ಯವಾಗಿದ್ದ್ದು ಇದು ನಿರಂತರ ಪ್ರಕ್ರಿಯೆಯಾಗಿದೆ, ಆದರೆ ಈಗ ವೇಗವನ್ನು ಹೆಚ್ಚಿಸುವ ಸಮಯ ಬಂದಿದೆ, ಅದನ್ನು ಮಾಡದಿದ್ದರೆ, ಕಾನೂನು ಮತ್ತು ಸುವ್ಯವಸ್ಥೆಯ ಸವಾಲುಗಳನ್ನು ಎದುರಿಸಲು ನಾವು ರಾಷ್ಟ್ರವನ್ನು ಸಜ್ಜುಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image0046S2O.jpg

ದೇಶವು ಮಹಾನಗರಗಳಲ್ಲಿನ ಸವಾಲುಗಳ ಬಗ್ಗೆಯೂ ಗಮನಹರಿಸಬೇಕು ಮತ್ತು ಮುಂದಿನ ದಿನಗಳಲ್ಲಿ ನಗರ ಪೋಲೀಸಿಂಗ್ ಹೆಚ್ಚು ಸವಾಲಿನದ್ದಾಗಿರುವುದರಿಂದ ಫಲಿತಾಂಶಗಳನ್ನು ನೀಡುವ ಸಂಶೋಧನೆ ಮತ್ತು ಅಭ್ಯಾಸದ ಮೂಲಕ ನಮ್ಮ ಕಾರ್ಯತಂತ್ರವನ್ನು ಬದಲಾಯಿಸುವ ಅವಶ್ಯಕತೆಯಿದೆ ಎಂದು ಶ್ರೀ ಶಾ ಹೇಳಿದರು. ಸಿಎಪಿಎಫ್‌ಗಳು ಹಾಗೂ ನೆರೆಯ ರಾಜ್ಯಗಳ ಪೊಲೀಸರಿಗೆ 1956 ರಿಂದ ಈ ಎಲ್ಲಾ ಉದ್ದೇಶಗಳನ್ನು ಪೂರೈಸಲು ಸಿಡಿಟಿಐ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು. ಕೋಲ್ಕತ್ತಾ, ಹೈದರಾಬಾದ್, ಗಾಜಿಯಾಬಾದ್ ಮತ್ತು ರಾಜಸ್ಥಾನದಲ್ಲಿ ನಿರ್ಮಿಸಲಾದ ಕೇಂದ್ರಗಳು ಅಪಾರ ಕೊಡುಗೆಗಳನ್ನು ನೀಡಿವೆ. ಈಗ ಭಾರತ ಸರ್ಕಾರವು ಬಿಪಿಆರ್‌ & ಡಿ ಯ ಸಮನ್ವಯ ಮತ್ತು ಬೆಂಬಲದ ಮೂಲಕ ಈ ಎಲ್ಲಾ ಕೇಂದ್ರಗಳ ನಡುವೆ ಸಮಾನತೆಯನ್ನು ತರಲು ಕೆಲಸ ಮಾಡುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ನೆರೆಯ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ದಮನ್-ದಿಯು ಕೇಂದ್ರಾಡಳಿತ ಪ್ರದೇಶಗಳ ಫೋರೆನ್ಸಿಕ್ ಅಗತ್ಯಗಳನ್ನು ಸಿಡಿಟಿಐ ಪೂರೈಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೊಂದುವುದು ಬಹಳ ಮುಖ್ಯವಾಗಿದೆ. ಕಳೆದ 3 ವರ್ಷಗಳಲ್ಲಿ ಬಿಪಿಆರ್ & ಡಿ ಆಶ್ರಯದಲ್ಲಿ, ಸಂಶೋಧನೆಯನ್ನು ಸುಧಾರಿಸಲು ಸರ್ಕಾರವು ಹಲವಾರು ಬದಲಾವಣೆಗಳನ್ನು ಮಾಡಿದೆ, ಅದರ ಫಲಿತಾಂಶಗಳು ಸಹ ಈಗ ಗೋಚರಿಸುತ್ತಿವೆ ಎಂದು ಅವರು ಹೇಳಿದರು. ಬಿಪಿಆರ್ & ಡಿ ತನ್ನ ಚಾರ್ಟರ್ ಅಡಿಯಲ್ಲಿ, ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದಿಂದ ಸೇರಿಸಲಾದ ಹೊಸ ಪ್ರದೇಶಗಳಲ್ಲಿ ವರ್ಟಿಕಲ್‌ಗಳನ್ನು ರಚಿಸಲು ಪ್ರಾರಂಭಿಸಿದೆ ಮತ್ತು ಮೋಡಸ್ ಒಪೆರಾಂಡಿ ಬ್ಯೂರೋ ಸಹ ಬಿಪಿಆರ್ & ಡಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image005I7KK.jpg

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಭದ್ರತಾ ಪಡೆಗಳ ಸಿಬ್ಬಂದಿಯನ್ನು ವಿಶೇಷವಾಗಿ ಗಡಿ ಕಾವಲು ಪಡೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲು, ಅವರ ವಸತಿ ತೃಪ್ತಿ ಅನುಪಾತವನ್ನು ಹೆಚ್ಚಿಸಲು ಮತ್ತು ಸಿಬ್ಬಂದಿ ಮತ್ತು ಅವರ ಕುಟುಂಬಗಳ ಅವಶ್ಯಕತೆಗಳನ್ನು ಪೂರೈಸಲು ಪ್ರಯತ್ನಗಳನ್ನು ಮಾಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಪ್ರಯತ್ನಗಳ ಮುಂದುವರಿಕೆಯಾಗಿ, ಇಂದು ಸಿಡಿಟಿಐಗೆ ಅಡಿಪಾಯವನ್ನು ಹಾಕಲಾಗುತ್ತಿದೆ ಮತ್ತು ಐಟಿಬಿಪಿಯ ವಿವಿಧ ವಸತಿ ಕಟ್ಟಡಗಳನ್ನು ಉದ್ಘಾಟಿಸಲಾಗುತ್ತಿದೆ ಎಂದು ಅವರು ಹೇಳಿದರು, ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ, ಸಿಎಪಿಎಫ್ ಯೋಧರು ಬ್ಯಾರಕ್‌ಗಳಲ್ಲಿ ಉಳಿದುಕೊಂಡು ಗಡಿ ಕಾಯುವ ಅನುಕೂಲಕ್ಕಾಗಿ ನಿವಾಸಗಳು ಮತ್ತು ಆಡಳಿತಾತ್ಮಕ ಬ್ಲಾಕ್‌ಗಳ ನಿರ್ಮಾಣಕ್ಕಾಗಿ ಸಾಕಷ್ಟು ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ ಮತ್ತು ಈ ಕೆಲಸ ನಿರಂತರವಾಗಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

ಎಲ್ಲಾ ಸಿಎಪಿಎಫ್ ಗಳಲ್ಲಿ ಐಟಿಬಿಪಿ ಅತ್ಯಂತ ಕಷ್ಟಕರವಾದ ಪ್ರದೇಶದಲ್ಲಿ ಕೆಲಸ ಮಾಡುತ್ತದೆ ಎಂದು ಶ್ರೀ ಶಾ ಹೇಳಿದರು. ಮೈನ್‌ 42 ಡಿಗ್ರಿ ತಾಪಮಾನದಲ್ಲಿ ದೇಶದ ಗಡಿಗಳನ್ನು ರಕ್ಷಿಸುವ ಅವರ ಸ್ಥೈರ್ಯ ಮತ್ತು ಮಹಾನ್ ದೇಶಭಕ್ತಿಯನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಐಟಿಬಿಪಿ ಸಿಬ್ಬಂದಿ ಗಡಿಯಲ್ಲಿ ಗಸ್ತು ತಿರುಗುವಾಗ, ಭಾರತದ ಒಂದು ಇಂಚು ಭೂಮಿಯನ್ನು ಅತಿಕ್ರಮಿಸಲು ಯಾರೂ ಧೈರ್ಯ ಮಾಡುವುದಿಲ್ಲ ಎಂಬುದು ದೇಶಕ್ಕೆ ಖಚಿತವಾಗಿದೆ ಎಂದು ಅವರು ಹೇಳಿದರು. ಪ್ರಾರಂಭದಿಂದಲೂ ಐಟಿಬಿಪಿ ಕಠಿಣ ಭೌಗೋಳಿಕ ಪರಿಸ್ಥಿತಿಗಳು, ಕಠಿಣ ಪರಿಸರ ಪರಿಸ್ಥಿತಿಗಳು ಮತ್ತು ಕಷ್ಟಕರವಾದ ಭೂಪ್ರದೇಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಡಪಂಥೀಯ ಉಗ್ರವಾದದ ವಿರುದ್ಧ ಹೋರಾಡುವಲ್ಲಿ ಐಟಿಬಿಪಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಆದ್ದರಿಂದಲೇ ಅರುಣಾಚಲ ಪ್ರದೇಶ, ಕಾಶ್ಮೀರ, ಲಡಾಖ್ ಜನರು ಐಟಿಬಿಪಿ ಜವಾನರನ್ನು ‘ಹಿಮವೀರ್’ಎಂದು ಕರೆಯುತ್ತಾರೆ, ಜನರು ನೀಡಿದ ಬಿರುದು ಯಾವುದೇ ಪ್ರಶಸ್ತಿಗಿಂತ ದೊಡ್ಡದು ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image0068KQI.jpg

ಬಿಪಿಆರ್&ಡಿ ಮೂಲಕ, ನಾವು ಸಮಸ್ಯೆಗಳ ಗುರುತಿಸುವಿಕೆ, ಸಂಶೋಧನಾ ಸಲಹೆಗಳ ವಿಶ್ಲೇಷಣೆ, ವಿಶ್ಲೇಷಣೆಯ ಆಧಾರದ ಮೇಲೆ ನೀತಿ ಬದಲಾವಣೆ, ನೀತಿಯ ಅನುಷ್ಠಾನ ಮತ್ತು ಸಂಪೂರ್ಣ ಪರಿಶೀಲನೆಯ ಸರಣಿಯನ್ನು ಕೊನೆಗೊಳಿಸುವ ದಿಕ್ಕಿನಲ್ಲಿ ಮುನ್ನಡೆಯುತ್ತಿದ್ದೇವೆ. ನಾವು ಇದರಿಂದ ದೊಡ್ಡ ಲಾಭವನ್ನು ಪಡೆಯಲಿದ್ದೇವೆ ಮತ್ತು ಸಿಡಿಟಿಐ ಈ ಉದ್ದೇಶವನ್ನು ಈಡೇರಿಸುವಲ್ಲಿ ಕೆಲಸ ಮಾಡುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಿಎಪಿಎಫ್‌ಗಳಿಗಾಗಿ ಇ-ಆವಾಸ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ, ಇದರಿಂದಾಗಿ ವಸತಿ ತೃಪ್ತಿ ಅನುಪಾತವು ಸುಮಾರು 9 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ಕಳೆದ ಎಂಟು ವರ್ಷಗಳಲ್ಲಿ 31,000 ಮನೆಗಳನ್ನು ನಿರ್ಮಿಸಲಾಗಿದೆ, 17,000 ಕ್ಕೂ ಹೆಚ್ಚು ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದು ಅವರು ಹೇಳಿದರು. ಮುಂಬರುವ ಬಜೆಟ್‌ನಲ್ಲಿ 15,000 ಕ್ಕೂ ಹೆಚ್ಚು ಮನೆಗಳ ನಿರ್ಮಾಣವನ್ನು ಅನುಮೋದಿಸಲಾಗುವುದು, ಇದರಿಂದಾಗಿ ವಸತಿ ತೃಪ್ತಿ ಅನುಪಾತವು 60 ಪ್ರತಿಶತವನ್ನು ಮೀರುತ್ತದೆ, ಇದು ಅತ್ಯಂತ ತೃಪ್ತಿಯ ವಿಷಯವಾಗಿದೆ ಎಂದು ಅವರು ಹೇಳಿದರು.

ಯೋಧರು ಮತ್ತು ಅವರ ಕುಟುಂಬಗಳಿಗೆ ಒದಗಿಸಲಾದ ಆರೋಗ್ಯ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲು ಆಯುಷ್ಮಾನ್ ಸಿಎಪಿಎಫ್ ಯೋಜನೆಯಡಿ ಸುಮಾರು 35 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಈಗ, ಕಾರ್ಡ್ ಅನ್ನು ಸ್ವೈಪ್ ಮಾಡುವ ಮೂಲಕ, ಯಾವುದೇ ಅನುಮೋದನೆ ಅಥವಾ ದಾಖಲೆಗಾಗಿ ಕಾಯದೆ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಆಸ್ಪತ್ರೆಗಳ ಸೇರ್ಪಡೆಯೊಂದಿಗೆ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಸಿಎಪಿಎಫ್ ಸಿಬ್ಬಂದಿ ಮತ್ತು ಅವರ ಕುಟುಂಬಗಳು 20 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರೋಗ್ಯ ಸೇವೆಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

ಗಡಿಯಲ್ಲಿ ಗಸ್ತು ತಿರುಗುವ ಯೋಧರು ಕನಿಷ್ಠ 100 ದಿನಗಳ ಕಾಲ ತಮ್ಮ ಕುಟುಂಬಗಳೊಂದಿಗೆ ಪ್ರಧಾನ ಕಚೇರಿಯ ಸ್ಥಳದಲ್ಲಿ ಉಳಿಯಲು ಅವಕಾಶವನ್ನು ಪಡೆಯಲು ಡ್ಯೂಟಿ ರೋಸ್ಟರ್ ಅನ್ನು ಸಹ ಸಿದ್ಧಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಸಿಎಪಿಎಫ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ ಮತ್ತು ಕಾಳಜಿ ವಹಿಸಿದೆ ಎಂದು ಅವರು ಹೇಳಿದರು.

*****

 (Release ID: 1887799) Visitor Counter : 188