ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಯುನಿವರ್ಸಲ್ ಹೆಲ್ತ್ ಕವರೇಜಿನೆಡೆಗಿನ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ದಾಟಿದ ಭಾರತ - 1,50,000 ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಕಾರ್ಯಾರಂಭ.


ಪ್ರಾಥಮಿಕ ಆರೋಗ್ಯ ಸೇವೆ ಪಡೆದ 134 ಕೋಟಿಗೂ ಹೆಚ್ಚು ಫಲಾನುಭವಿಗಳು.

ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗೆ ಒಳಗಾದ 86.90 ಕೋಟಿಗೂ ಹೆಚ್ಚು ಜನರು.

ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ  (ಎ.ಬಿ.-ಹೆಚ್. ಡಬ್ಲ್ಯೂ.ಸಿ.) 8.5 ಕೋಟಿಗೂ ಹೆಚ್ಚು ಟೆಲಿಸಮಾಲೋಚನೆಗಳು ಮತ್ತು 1.60 ಕೋಟಿಗೂ ಹೆಚ್ಚು ನಡೆಸಲಾದ ಸ್ವಾಸ್ಥ್ಯ ಅಧಿವೇಶನಗಳು

ಒದಗಿಸಲಾದ ರೋಗನಿರ್ಣಯ ಸೇವೆಗಳು ಮತ್ತು ಅಗತ್ಯ ಔಷಧಿಗಳ ವಿಸ್ತರಣೆ

Posted On: 30 DEC 2022 1:05PM by PIB Bengaluru

ದೇಶದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದನ್ನು ಪ್ರದರ್ಶಿಸುವ ಮಹತ್ವದ ಸಾಧನೆಯಲ್ಲಿ, ಭಾರತವು ಗಮನಾರ್ಹ ಹೆಗ್ಗುರುತನ್ನು ಮೀರಿದೆ - ಡಿಸೆಂಬರ್ 31 ರೊಳಗೆ 1,50,000 ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು (ಎ.ಬಿ.-ಎಚ್. ಡಬ್ಲ್ಯೂ.ಸಿ.ಗಳು) ಕಾರ್ಯಾಚರಣೆಗೊಳಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಿಗದಿತ ಗಡುವಿನೊಳಗೆ ಈ ಸಾಧನೆಯನ್ನು ಸಾಧಿಸುವಲ್ಲಿ ರಾಷ್ಟ್ರದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ದೇಶಾದ್ಯಂತದ ನಾಗರಿಕರು ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು, ಈ ಕೇಂದ್ರಗಳು ಸೇವೆ ಸಲ್ಲಿಸುತ್ತವೆ ಎಂದು ಶ್ಲಾಘಿಸಿದರು. 

<ಟ್ವೀಟ್ ಅನ್ನು ಹೊಂದಿಸಲಾಗಿದೆ>

Image

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಈ ಸಾಧನೆಗಾಗಿ ರಾಷ್ಟ್ರವನ್ನು ಅಭಿನಂದಿಸಿದರು. ಭಾರತವು ತಾನು ನಿರ್ಧರಿಸಿದ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ವಾಸ್ತವಕ್ಕೆ ಭಾಷಾಂತರಿಸಿ, "ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರಗಳ ಸಂಗ್ರಹಿತ ಮತ್ತು ಸಹಯೋಗದ ಪ್ರಯತ್ನಗಳು ಭಾರತವನ್ನು ಭರವಸೆಯ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣಾ ಸೇವೆಗಳಿಗೆ ಜಾಗತಿಕ ಮಾದರಿಯನ್ನಾಗಿ ಮಾಡಿವೆ" ಎಂದು ತಿಳಿಸಿದರು.

<ಟ್ವೀಟ್ ಅನ್ನು ಹೊಂದಿಸಲಾಗಿದೆ>

 


"ಅಂತ್ಯೋದಯ"ದ ತತ್ವಗಳನ್ನು ಆಧರಿಸಿ, ಯಾರನ್ನೂ ಹಿಂದೆ ಬಿಡದೆ, 1,50,000 ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು (ಎ.ಬಿ.-ಎಚ್. ಡಬ್ಲ್ಯೂ.ಸಿ.ಗಳು) ಸಾರ್ವತ್ರಿಕವಾಗಿ ಉಚಿತವಾಗಿ, ಜನನದಿಂದ ಮರಣದವರೆಗೆ ಎಲ್ಲಾ ವಯೋಮಾನದವರಿಗೆ ಆರೈಕೆಯ ನಿರಂತರ ವಿಧಾನದ ಮೂಲಕ ಪೂರೈಸಲಾಗುವ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣಾ ಸೇವೆಗಳ ವಿತರಣೆಯನ್ನು ಪರಿವರ್ತಿಸುತ್ತಿವೆ. ವಿವಿಧ ಉಪಕ್ರಮಗಳ ಮೂಲಕ ರಾಷ್ಟ್ರದ ಅತ್ಯಂತ ಆಂತರಿಕ ಪ್ರದೇಶಗಳಿಗೆ ಆರೋಗ್ಯ ಸೇವೆಗಳನ್ನು ತಲುಪುವುದನ್ನು ಖಾತ್ರಿಪಡಿಸುವ ಮೂಲಕ, ಎ.ಬಿ.-ಎಚ್.ಡಬ್ಲ್ಯೂ.ಸಿ.ಗಳು ಇ-ಸಂಜೀವಿನಿ ಮೂಲಕ 8.5ಕ್ಕೂ ಹೆಚ್ಚಿನ ಟೆಲಿ ಕನ್ಸಲ್ಟೇಶನ್ ಗಳನ್ನು ನಡೆಸಿವೆ. ಇದರಲ್ಲಿ ಪ್ರತಿದಿನ ಸುಮಾರು 4 ಲಕ್ಷ ಟೆಲಿ ಕನ್ಸಲ್ಟೇಷನ್ ಗಳು ನಡೆಯುತ್ತವೆ.

ದೇಶಾದ್ಯಂತ 134 ಕೋಟಿಗೂ ಹೆಚ್ಚು ಜನರು ಎ.ಬಿ.-ಎಚ್.ಡಬ್ಲ್ಯೂ.ಸಿ.ಗಳಿಂದ ಪ್ರಯೋಜನ ಪಡೆದಿದ್ದಾರೆ. 86.90 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಸಾಂಕ್ರಾಮಿಕವಲ್ಲದ ರೋಗಗಳಿಗಾಗಿ ಒಟ್ಟಾರೆಯಾಗಿ ಪರೀಕ್ಷಿಸಲಾಗಿದೆ, ಇದರಲ್ಲಿ 29.95 ಕೋಟಿ ಫಲಾನುಭವಿಗಳನ್ನು ಅಧಿಕ ರಕ್ತದೊತ್ತಡ, 25.56 ಕೋಟಿ ಫಲಾನುಭವಿಗಳನ್ನು ಮಧುಮೇಹ, 17.44 ಕೋಟಿ ಫಲಾನುಭವಿಗಳನ್ನು ಬಾಯಿಯ ಕ್ಯಾನ್ಸರ್, 8.27 ಕೋಟಿ ಫಲಾನುಭವಿಗಳನ್ನು ಸ್ತನ ಕ್ಯಾನ್ಸರ್ ಮತ್ತು 5.66 ಕೋಟಿ ಫಲಾನುಭವಿಗಳನ್ನು ಗರ್ಭಕಂಠದ ಕ್ಯಾನ್ಸರ್ ರೋಗಗಳಿಗಾಗಿ ಒಟ್ಟಾರೆಯಾಗಿ ಪರೀಕ್ಷಿಸಲಾಗಿದೆ.

ಎ.ಬಿ.-ಎಚ್.ಡಬ್ಲ್ಯೂ.ಸಿ.ಗಳ ವಿಸ್ತರಣೆಯ ಹಿನ್ನೆಲೆಯಲ್ಲಿ, ಅಗತ್ಯ ಔಷಧಿಗಳ ಸಂಖ್ಯೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು - ಆರೋಗ್ಯ ಸ್ವಾಸ್ಥ್ಯ ಕೇಂದ್ರಗಳಲ್ಲಿ (ಪಿ.ಎಚ್.ಸಿ.-ಎಚ್.ಡಬ್ಲ್ಯೂ.ಸಿ.) 172 ಮತ್ತು ಉಪ ಆರೋಗ್ಯ ಕೇಂದ್ರಗಳು - ಆರೋಗ್ಯ ಸ್ವಾಸ್ಥ್ಯ ಕೇಂದ್ರಗಳಲ್ಲಿ (ಎಸ್.ಎಚ್.ಸಿ.-ಎಚ್. ಡಬ್ಲ್ಯೂ.ಸಿ) 105ಕ್ಕೆ ಏರಿವೆ. ಅಗತ್ಯ ರೋಗನಿರ್ಣಯಗಳು ಪಿ.ಎಚ್.ಸಿ.-ಎಚ್.ಡಬ್ಲ್ಯೂ.ಸಿ.ನಲ್ಲಿ 63 ಹಾಗೂ ಎಸ್.ಎಚ್.ಸಿ.-ಎಚ್. ಡಬ್ಲ್ಯೂ.ಸಿ.ಯಲ್ಲಿ 14ಕ್ಕೆ ವಿಸ್ತರಿಸಿವೆ. ಎ.ಬಿ.-ಎಚ್.ಡಬ್ಲ್ಯೂ.ಸಿ.ಗಳು ಯೋಗ, ಜುಂಬಾ, ಸೈಕ್ಲೋಥಾನ್ ಗಳು, ವಾಕಥಾನ್ ಗಳ ಬಗ್ಗೆ ಯೋಗಕ್ಷೇಮದ ಸೆಷನ್ ಗಳನ್ನು ಸಹ ನಡೆಸುತ್ತಿವೆ. ಅವು ಸಮುದಾಯದ ಯೋಗಕ್ಷೇಮಕ್ಕಾಗಿ ತಮ್ಮ ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಆಹಾರ, ದೈಹಿಕ ಚಟುವಟಿಕೆ, ಸಕಾರಾತ್ಮಕ ಪಾಲನೆ, ತಂಬಾಕು, ಮದ್ಯಪಾನ ತ್ಯಜಿಸುವಿಕೆ ಸೇರಿದಂತೆ ಇತರ ಅಂಶಗಳ ಬಗ್ಗೆ ಮಾರ್ಗಸೂಚಿಗಳನ್ನು ಒದಗಿಸುತ್ತವೆ.

ಇದುವರೆಗೆ, ಈ ಕೇಂದ್ರಗಳಲ್ಲಿ 1.60 ಕೋಟಿಗೂ ಹೆಚ್ಚು ಯೋಗಕ್ಷೇಮ ಅಧಿವೇಶನಗಳನ್ನು ನಡೆಸಲಾಗಿದೆ.

A group of people standing outside a buildingDescription automatically generated with medium confidence

ಇದಲ್ಲದೆ, ಎ.ಬಿ.-ಎಚ್.ಡಬ್ಲ್ಯೂ.ಸಿ.ಗಳು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ-ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (ಯು.ಪಿ.ಎಚ್.ಸಿ.-ಎಚ್.ಸಿ)ಯ ಅಡಿಯಲ್ಲಿ ನಗರ ವಲಯದಲ್ಲಿ 2-3 ಕೇಂದ್ರಗಳನ್ನು ಕಾರ್ಯಾಚರಣೆಗೊಳಿಸಿವೆ. ಇವು 15,000ದಿಂದ 20,000 ಜನಸಂಖ್ಯೆಯನ್ನು ಒಳಗೊಂಡ ಹೊರರೋಗಿಗಳ ಆರೈಕೆಯನ್ನು ಮಾಡಿದ್ದಾರೆ. 

*****



(Release ID: 1887542) Visitor Counter : 139