ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ವರ್ಷಾಂತ್ಯದ ಪರಾಮರ್ಶೆ - 2022 - ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ)

Posted On: 29 DEC 2022 9:07AM by PIB Bengaluru

2022 - ಸುಶಾಸನದ ಒಂದು ವರ್ಷ- ಸರ್ಕಾರ ಮತ್ತು ನಾಗರಿಕರ ಒಗ್ಗೂಡುವಿಕೆ

2022ರ ಡಿಸೆಂಬರ್ 19ರಿಂದ ಡಿಸೆಂಬರ್ 25ರವರೆ ನಡೆದ (ಉತ್ತಮ ಆಡಳಿತ ಸಪ್ತಾಹ) ಸುಶಾಸನ್ ಸಪ್ತಾಹ್ 2022ರಲ್ಲಿ "ಹಳ್ಳಿಯೆಡೆಗೆ ಆಡಳಿತ" ("ಪ್ರಶಾಸನ್ ಗಾಂವ್ ಕಿ ಓರ್") ಅಭಿಯಾನದಲ್ಲಿ 54 ಲಕ್ಷ ಸಾರ್ವಜನಿಕ ಕುಂದುಕೊರತೆಗಳು ಮತ್ತು 315 ಲಕ್ಷ ಸೇವಾ ವಿತರಣಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ

ಸ್ವಚ್ಚತೆಯನ್ನು ಸಾಂಸ್ಥೀಕರಣಗೊಳಿಸಲು ಮತ್ತು ಉಳಿಕೆಯನ್ನು ಕಡಿಮೆ ಮಾಡಲು 'ವಿಶೇಷ ಅಭಿಯಾನ 2.0' ರ ಅದ್ಭುತ ಯಶಸ್ಸು - ದೇಶಾದ್ಯಂತ ಭಾರತ ಸರ್ಕಾರದ 1 ಲಕ್ಷಕ್ಕೂ ಹೆಚ್ಚು ಕಚೇರಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದವು

ಕುಂದುಕೊರತೆ ನಿವಾರಣಾ ವ್ಯವಸ್ಥೆಯು 10 ಹಂತಗಳ ಮೂಲಕ ಹೆಚ್ಚಿನ ಪ್ರವೇಶ ಮತ್ತು ಸ್ಪಂದನೆಯನ್ನು ಕಂಡಿತು


ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಾಗಿ ಸುಧಾರಣಾ ಪ್ರಕ್ರಿಯೆ:
    ನಿರ್ವಹಣಾ ಪದರುಗಳ ಸಂಖ್ಯೆಯಲ್ಲಿ ಇಳಿಕೆ, ನಿಯೋಜನೆ, ಡೆಸ್ಕ್ ಆಫೀಸರ್ ವ್ಯವಸ್ಥೆ ಮತ್ತು ಡಿಜಿಟಲೀಕರಣವನ್ನು ಕೇಂದ್ರೀಕರಿಸಿ ಕೇಂದ್ರ ಸಚಿವಾಲಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳ ಮರು-ಎಂಜಿನಿಯರಿಂಗ್

    ಕೇಂದ್ರ ಸಚಿವಾಲಯದ ಕಛೇರಿ ಕಾರ್ಯವಿಧಾನದ ಪರಿಷ್ಕೃತ ಕೈಪಿಡಿ - 2022 ಬಿಡುಗಡೆ, ಕೇಂದ್ರ ಸಚಿವಾಲಯದ ಕಛೇರಿ ಕಾರ್ಯವಿಧಾನದ ಪರಿಷ್ಕೃತ ಕೈಪಿಡಿ - 2022ರ ಹಿಂದಿ ಆವೃತ್ತಿಯನ್ನು ಸಹ ಮೊದಲ ಬಾರಿಗೆ ಹೊರತರಲಾಗಿದೆ.

    ಡಿಜಿಟಲ್ ಸೆಕ್ರೆಟರಿಯೇಟ್ - 63 ಸಚಿವಾಲಯಗಳು ಇ-ಆಫೀಸ್ ಆವೃತ್ತಿ 7.0ಕ್ಕೆ ವರ್ಗಾವಣೆಯಾದವು, ಕಳೆದ ಒಂದು ವರ್ಷದಲ್ಲಿ ಡಿಜಿಟಲ್ ಸ್ವೀಕೃತಿಗಳಲ್ಲಿ ಶೇಕಡಾ 53 ಹೆಚ್ಚಳ, ಶೇಕಡಾ 80ಕ್ಕೂ ಹೆಚ್ಚು ಫೈಲ್ ಗಳು ಈಗ ಎಲೆಕ್ಟ್ರಾನಿಕ್ ಮೋಡ್ ನಲ್ಲಿ ಲಭ್ಯ.

    ಪ್ರಾಮಾಣಿಕ ಆಡಳಿತ (ಬೆಂಚ್ ಮಾರ್ಕಿಂಗ್ ಗವರ್ನೆನ್ಸ್) - ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕದ (ಡಿಜಿಜಿಐ) ಬಿಡುಗಡೆ; ರಾಷ್ಟ್ರೀಯ ಇ-ಆಡಳಿತ ಸೇವೆಯ ವಿತರಣಾ ಮೌಲ್ಯಮಾಪನ - 2021ರ (ಎನ್.ಇ. ಎಸ್. ಡಿ. ಎ.) ಬಿಡುಗಡೆ.

    ಅರ್ಹತಾವರ್ಗವನ್ನು ಗುರುತಿಸುವಿಕೆ - ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ 2019, 2020 ಮತ್ತು 2021ರ ಪ್ರಧಾನ ಮಂತ್ರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

    2021 ಮತ್ತು 2022ನೇ ಸಾಲಿನ ಡಿಜಿಟಲ್ ಆಡಳಿತಕ್ಕಾಗಿ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಉತ್ತಮ ಆಡಳಿತವು ಆ ರಾಷ್ಟ್ರದ ಪ್ರಗತಿಗೆ ಪ್ರಮುಖವಾಗಿದೆ.  " ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ"ವನ್ನು ಸಾಧಿಸಲು ಆಡಳಿತವನ್ನು ಹೆಚ್ಚು ಪಾರದರ್ಶಕ, ದಕ್ಷ ಮತ್ತು ನಾಗರಿಕ ಸ್ನೇಹಿಯಾಗಿಸಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

1. ಉತ್ತಮ ಆಡಳಿತ ಸಪ್ತಾಹ - 2022:

2022ರ ಡಿಸೆಂಬರ್ 19 ರಿಂದ ಡಿಸೆಂಬರ್ 25ರವರೆಗೆ ನಡೆದ ಉತ್ತಮ ಆಡಳಿತ ಸಪ್ತಾಹದ ಅಂಗವಾಗಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ್ತು ಜನರಿಗೆ ಅವರ ಮನೆ ಬಾಗಿಲಿಗೆ ಸೇವೆಗಳನ್ನು ತಲುಪಿಸುವ ಗುರಿಯನ್ನು ಹೊಂದಿರುವ "ಹಳ್ಳಿಯೆಡೆಗೆ ಆಡಳಿತ" ("ಪ್ರಶಾಶನ್ ಗಾಂವ್ ಕಿ ಓರ್") ಕುರಿತು ಒಂದು ವಾರದ ರಾಷ್ಟ್ರವ್ಯಾಪಿ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಒಂದು ವಾರದ ಅಭಿಯಾನದಲ್ಲಿ ಸುಮಾರು 54 ಲಕ್ಷ ಸಾರ್ವಜನಿಕ ಕುಂದುಕೊರತೆಗಳು ಮತ್ತು 315 ಲಕ್ಷ ಸೇವಾ ವಿತರಣಾ ಅರ್ಜಿಗಳನ್ನು ವಿಲೇವಾರಿ ಮಾಡಿ, ಆಡಳಿತದಲ್ಲಿ 982 ಆವಿಷ್ಕಾರಗಳನ್ನು ದಾಖಲಿಸಲಾಗಿದೆ.

2. ಬಾಕಿ ಉಳಿದಿರುವ ವಿಷಯಗಳ ವಿಲೇವಾರಿಗಾಗಿ ವಿಶೇಷ ಅಭಿಯಾನ (ಎಸ್.ಸಿ.ಡಿ.ಪಿ.ಎಂ.):

• 2022ರ ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ ದೇಶಾದ್ಯಂತ ಕೇಂದ್ರ ಸರ್ಕಾರದ ಅಧೀನದಲ್ಲಿರುವ 1 ಲಕ್ಷಕ್ಕೂ ಹೆಚ್ಚು ಕಛೇರಿಗಳಲ್ಲಿ ಮತ್ತು ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ಪೋಸ್ಟ್ ಗಳಲ್ಲಿ ಸ್ವಚ್ಛತಾ ಮತ್ತು ಸರ್ಕಾರಿ ಕಚೇರಿಗಳಲ್ಲಿ ಬಾಕಿ ಉಳಿದ ವಿಷಯಗಳನ್ನು ಕಡಿಮೆ ಮಾಡುವ ಬಗ್ಗೆ ವಿಶೇಷ ಅಭಿಯಾನ 2.0 ಅನ್ನು ಯಶಸ್ವಿಯಾಗಿ ನಡೆಸಲಾಯಿತು.
• ಈ ಅಭಿಯಾನವು 89.85 ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸಿ, ಕಛೇರಿ ಗುಜರಿಯನ್ನು ವಿಲೇವಾರಿ ಮಾಡುವ ಮೂಲಕ 370.73 ಕೋಟಿ ರೂ.ಗಳ ಆದಾಯವನ್ನು ಗಳಿಸಿತು. ಸುಮಾರು 4.39 ಲಕ್ಷ ಸಾರ್ವಜನಿಕ ಕುಂದುಕೊರತೆಗಳನ್ನು ವಿಲೇವಾರಿ ಮಾಡಲಾಯಿತು ಮತ್ತು ತಮ್ಮ ಧಾರಣಾ ವೇಳೆಯನ್ನು ಪೂರ್ಣಗೊಳಿಸಿದ ಸುಮಾರು 29.40 ಲಕ್ಷ ಕಡತಗಳನ್ನು ಈ ಅಭಿಯಾನದ ಸಮಯದಲ್ಲಿ ಸಂಪೂರ್ಣವಾಗಿ ಕಾಳಜಿ ವಹಿಸಿ ಮುಗಿಸಲಾಯಿತು. ಈ ಅಭಿಯಾನದ ಸಮಯದಲ್ಲಿ ಹಲವಾರು ಸಚಿವಾಲಯಗಳು ತಮ್ಮ ಗುರಿಯ ಶೇಕಡಾ 100 ವಿಲೇವಾರಿಯನ್ನು ಸಾಧಿಸಲು ಸಾಧ್ಯವಾಯಿತು.
• ವಿಶೇಷ ಅಭಿಯಾನ 2.0ರ ಗಾತ್ರವು 2021ರ ವಿಶೇಷ ಅಭಿಯಾನಕ್ಕಿಂತ 16 ಪಟ್ಟು ದೊಡ್ಡದಾಗಿದ್ದು,  ಈ ಅಭಿಯಾನವು ಸಾಮಾಜಿಕ ಮಾಧ್ಯಮದಲ್ಲಿ 4 ಬಿಲಿಯನ್ ಛಾಪು ಮತ್ತು 9 ಲಕ್ಷ ಸೇರ್ಪಡೆಗಳನ್ನು ಆಕರ್ಷಿಸಿತು.

3. ನಾಗರಿಕರ ಧ್ವನಿಯನ್ನು ಸಶಕ್ತಗೊಳಿಸುವುದು - ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸುವುದು:

• 2022ರಲ್ಲಿ, 17.50 ಲಕ್ಷ ಕುಂದುಕೊರತೆಗಳನ್ನು ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯ ಅಡಿಯಲ್ಲಿ ಸ್ವೀಕರಿಸಲಾಗಿದೆ, ಅದರಲ್ಲಿ ಶೇಕಡಾ 96.94ನ್ನು ವಿಲೇವಾರಿ ಮಾಡಲಾಗಿದೆ. 2022ರಲ್ಲಿ ಕೇಂದ್ರ ಸಚಿವಾಲಯಗಳು / ಇಲಾಖೆಗಳ ಸರಾಸರಿ ವಿಲೇವಾರಿಯ ಸಮಯ 27 ದಿನಗಳು.
• ಎಲ್ಲಾ 90 ಕೇಂದ್ರ ಸಚಿವಾಲಯಗಳು/ಇಲಾಖೆಗಳನ್ನು ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ಮತ್ತು ಮೇಲ್ವಿಚಾರಣಾ ವ್ಯವಸ್ಥೆ  7.0 ರಲ್ಲಿ ಆನ್-ಬೋರ್ಡ್ ಮಾಡಲಾಗಿದೆ, ಇದು ಸ್ವಯಂ-ಮುಂದೂಡಿಕೆ, ವೇಗದ ಪರಿವರ್ತನೆ ಮತ್ತು ಕುಂದುಕೊರತೆಗಳ ದಕ್ಷ ಪರಿಹಾರಕ್ಕೆ ಅನುವು ಮಾಡಿಕೊಡುತ್ತದೆ.
• ನಾಗರಿಕರಿಂದ ನೇರವಾಗಿ ಪ್ರತಿಕ್ರಿಯೆಯನ್ನು (ಫೀಡ್ ಬ್ಯಾಕ್) ಸಂಗ್ರಹಿಸಲು ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯಲ್ಲಿ (ಸಿ.ಪಿ.ಜಿ.ಆರ್.ಎ.ಎಂ.ಎಸ್.) ಫೀಡ್ ಬ್ಯಾಕ್ ಕಾಲ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ.
• ಕೃತಕ ಬುದ್ಧಿಮತ್ತೆ /ಯಂತ್ರ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಂಡು ಇಂಟೆಲಿಜೆಂಟ್ ಕುಂದುಕೊರತೆ ನಿರ್ವಹಣಾ ಡ್ಯಾಶ್ ಬೋರ್ಡ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ವ್ಯೂಹಾತ್ಮಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ನೀತಿ ಸುಧಾರಣೆಗಳನ್ನು ಸಕ್ರಿಯಗೊಳಿಸುವ ವಿಶ್ಲೇಷಣಾತ್ಮಕ ಒಳನೋಟವನ್ನು ರಚಿಸಲು ದತ್ತಾಂಶ ಕಾರ್ಯತಂತ್ರ ಘಟಕವನ್ನು ಸ್ಥಾಪಿಸಲಾಗಿದೆ.

4. ಸಚಿವಾಲಯದ ಸುಧಾರಣೆಗಳು:

• ನಿರ್ವಹಣಾ ಪದರುಗಳ ಸಂಖ್ಯೆಯಲ್ಲಿ ಇಳಿಕೆ, ಕಡಿಮೆ ಸೂತ್ರೀಕರಣಗಳು, ಡೆಸ್ಕ್ ಆಫೀಸರ್ ವ್ಯವಸ್ಥೆ ಮತ್ತು ಡಿಜಿಟಲೀಕರಣವನ್ನು ಒಳಗೊಂಡ ಪ್ರಕ್ರಿಯೆಯು ಕೇಂದ್ರ ಸಚಿವಾಲಯಗಳಲ್ಲಿ ಗಮನಾರ್ಹ ಸುಧಾರಣೆಯನ್ನು ಮಾಡಿವೆ. 42 ಸಚಿವಾಲಯಗಳು ಸಂಪೂರ್ಣವಾಗಿ ನಿರ್ವಹಣಾ ಪದರುಗಳ ಸಂಖ್ಯೆಯಲ್ಲಿ ಇಳಿಕೆಯನ್ನು ಸಾಧಿಸಿವೆ ಮತ್ತು 22 ಸಚಿವಾಲಯಗಳು ಸಲ್ಲಿಕೆಯ ಮಾರ್ಗವನ್ನು ಭಾಗಶಃ ಇಳಿಕೆಗೊಳಿಸಿವೆ.
• ಕೇಂದ್ರ ಸಚಿವಾಲಯಗಳ ಕಾರ್ಯನಿರ್ವಹಣೆಯ ಬೆನ್ನೆಲುಬಾಗಿರುವ ಕೇಂದ್ರ ಸಚಿವಾಲಯದ ಕಛೇರಿ ಕಾರ್ಯವಿಧಾನದ ಪರಿಷ್ಕೃತ ಕೈಪಿಡಿ - 2022ರ (ಸಿ.ಎಸ್.ಎಂ.ಒ.ಪಿ. 2022) ಹದಿನಾರನೇ ಆವೃತ್ತಿಯನ್ನು 2022ರ ಆಗಸ್ಟ್ 5ರಂದು ಬಿಡುಗಡೆ ಮಾಡಲಾಯಿತು. ಅಧಿಕೃತ ಭಾಷೆಯಲ್ಲಿ ಸಚಿವಾಲಯದ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ 2022ರ ಅಕ್ಟೋಬರ್ 31ರಂದು ಡಿ.ಎ.ಆರ್.ಪಿ.ಜಿ. ಕೇಂದ್ರ ಸಚಿವಾಲಯದ ಕಛೇರಿ ಕಾರ್ಯವಿಧಾನ ಕೈಪಿಡಿಯ ಮೊದಲ ಹಿಂದಿ ಆವೃತ್ತಿಯನ್ನು ಹೊರತಂದಿದೆ.
• ಇ-ಕಛೇರಿಯ ಬಳಕೆಯು ಮತ್ತಷ್ಟು ಹೆಚ್ಚಳವನ್ನು ದಾಖಲಿಸಿದೆ, 63 ಸಚಿವಾಲಯಗಳು ಇ-ಆಫೀಸ್ 7.0 ರ ಇತ್ತೀಚಿನ ಆವೃತ್ತಿಗೆ ವರ್ಗಾವಣೆಯಾಗಿವೆ. ಇದು ಕಡತಗಳ ಅಂತರ್-ಸಚಿವಾಲಯದ ಚಲನೆಯನ್ನು ಶಕ್ತಗೊಳಿಸುತ್ತದೆ. ಇ-ರಸೀದಿಗಳು 2021ರಲ್ಲಿ ಶೇಕಡಾ 32ರಿಂದ 2022ರ ಡಿಸೆಂಬರ್ ನಲ್ಲಿ ಶೇಕಡಾ 73ಕ್ಕೆ ಏರಿದೆ. ಕೇಂದ್ರ ಸಚಿವಾಲಯಗಳ ಶೇಕಡಾ 80ಕ್ಕೂ ಹೆಚ್ಚು ಕೆಲಸಗಳು ಈಗ ಇ-ಕಛೇರಿಯಲ್ಲಿವೆ.

5. ಪ್ರಾಮಾಣಿಕ ಆಡಳಿತ (ಬೆಂಚ್ ಮಾರ್ಕಿಂಗ್ ಗವರ್ನೆನ್ಸ್):

• ಜಮ್ಮು ಮತ್ತು ಕಾಶ್ಮೀರದ 10 ಆಡಳಿತ ವಲಯಗಳು ಮತ್ತು 58 ಸೂಚಕಗಳನ್ನು ಒಳಗೊಂಡ ಮೊದಲ ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕವನ್ನು (ಡಿ.ಜಿ.ಜಿ.ಐ.) 2022ರ ಜನವರಿ 22ರಂದು ಬಿಡುಗಡೆ ಮಾಡಲಾಯಿತು. ಆಡಳಿತ ಮತ್ತು ಆಡಳಿತದ ಮೂಲ ಘಟಕವಾಗಿರುವ ಜಿಲ್ಲೆಗಳಲ್ಲಿ ಆಡಳಿತವನ್ನು ಮಾನದಂಡಗೊಳಿಸುವ ಮೊದಲ ಪ್ರಯತ್ನ ಇದಾಗಿದೆ.
• ರಾಷ್ಟ್ರೀಯ ಇ-ಆಡಳಿತ ಸೇವೆಯ ವಿತರಣಾ ಮೌಲ್ಯಮಾಪನವನ್ನು (ಎನ್.ಇ.ಎಸ್.ಡಿ.ಎ) ಜೂನ್ 2022ರಲ್ಲಿ ಬಿಡುಗಡೆ ಮಾಡಲಾಯಿತು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳ ಇ-ಸೇವಾ ವಿತರಣಾ ಅರ್ಜಿಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವುದು ಎನ್.ಇ.ಎಸ್.ಡಿ.ಎ.ಯ ಚೌಕಟ್ಟು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 1400 ಇ-ಸೇವೆಗಳನ್ನು ಎನ್.ಇ.ಎಸ್.ಡಿ.ಎ. ಮೌಲ್ಯಮಾಪನ ಮಾಡಿದೆ ಮತ್ತು 2019-2021ರ ಅವಧಿಯಲ್ಲಿ ಭಾರತದ ಇ-ಸೇವೆಗಳು ಶೇಕಡಾ 60ರಷ್ಟು ಬೆಳೆದಿವೆ ಎಂದು ಅದು ವರದಿ ಮಾಡಿದೆ. ಹೆಚ್ಚು ಹೆಚ್ಚಾಗಿ ಕಡ್ಡಾಯ ಸೇವೆಗಳನ್ನು ಈಗ ವಿದ್ಯುನ್ಮಾನವಾಗಿ ತಲುಪಿಸಲಾಗುತ್ತದೆ. (2019ರಲ್ಲಿ ಶೇಕಡಾ 48ಕ್ಕೆ ಹೋಲಿಸಿದರೆ 2021ರಲ್ಲಿ ಶೇಕಡಾ 69). ಪ್ರತಿಸ್ಪಂದಿಸಿದವರಲ್ಲಿ 74 ಪ್ರತಿಶತದಷ್ಟು ಜನರು ಇ-ಸೇವೆಗಳಿಂದ ತೃಪ್ತರಾಗಿದ್ದಾರೆ ಅಥವಾ ತುಂಬಾ ತೃಪ್ತರಾಗಿದ್ದಾರೆ.

6. ಅರ್ಹತಾವರ್ಗವನ್ನು (ಮೆರಿಟೋಕ್ರಸಿ) ಗುರುತಿಸುವಿಕೆ - ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿಗಳು - 2021:

• ನಾಗರಿಕ ಸೇವಾ ದಿನವಾದ 2022ರ ಏಪ್ರಿಲ್ 21ರಂದು ಗೌರವಾನ್ವಿತ ಪ್ರಧಾನಮಂತ್ರಿಯವರು ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿ -  2021ಅನ್ನು ಪ್ರದಾನ ಮಾಡಿದರು. ಪೋಷಣ್ ಅಭಿಯಾನ್, ಖೇಲೋ ಇಂಡಿಯಾ, ಪಿಎಂ ಸ್ವನಿಧಿ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಮತ್ತು ಎಂಡ್-ಟು-ಎಂಡ್ ಸೇವೆಗಳ ವಿತರಣೆ ಮತ್ತು ಕೇಂದ್ರ / ರಾಜ್ಯ / ಜಿಲ್ಲಾ ಮಟ್ಟದಲ್ಲಿ ಆಡಳಿತದಲ್ಲಿನ ಆವಿಷ್ಕಾರಕ್ಕಾಗಿ ಐದು ಆದ್ಯತೆಯ ಕಾರ್ಯಕ್ರಮಗಳಲ್ಲಿ ಉನ್ನತ ಸಾಧನೆಗಾಗಿ ಈ ಪ್ರಶಸ್ತಿಗಳನ್ನು ನೀಡಲಾಯಿತು.
• 2022ರ ಏಪ್ರಿಲ್ 20 ಮತ್ತು  21ರಂದು 15ನೇ ನಾಗರಿಕ ಸೇವೆಗಳ ದಿನಾಚರಣೆಯ ಸಂದರ್ಭದಲ್ಲಿ "ವಿಷನ್ ಇಂಡಿಯಾ@2047 - ಸರ್ಕಾರ ಮತ್ತು ನಾಗರಿಕರ ಒಗ್ಗೂಡುವಿಕೆ" ಎಂಬ ವಿಷಯದ ಮೇಲೆ ಎರಡು ದಿನಗಳ ಸಮ್ಮೇಳನವನ್ನು ಸಹ ಆಯೋಜಿಸಲಾಗಿತ್ತು. 'ವಿಷನ್ ಇಂಡಿಯಾ @2047 - ಆಡಳಿತ' 'ಆತ್ಮನಿರ್ಭರ ಭಾರತ', 'ಪಿಎಂ ಗತಿ ಶಕ್ತಿ', 'ಡಿಜಿಟಲ್ ಪಾವತಿಗಳು' ಮತ್ತು, 'ಒಂದು ಜಿಲ್ಲೆ, ಒಂದು ಉತ್ಪನ್ನ' ಮತ್ತು 'ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ' ಎಂಬ ವಿಷಯಗಳ ಕುರಿತ ತಾಂತ್ರಿಕ ಗೋಷ್ಠಿಗಳ ಅಧ್ಯಕ್ಷತೆಯನ್ನು ಸಂಪುಟ ಸಚಿವರು ವಹಿಸಿದ್ದರು.
• 2022ರ ಜನವರಿ 7 ಮತ್ತು 8ರಂದು ಹೈದರಾಬಾದ್ ನಲ್ಲಿ "ಭಾರತದ ತಂತ್ರಜ್ಞಾನ: ಸಾಂಕ್ರಾಮಿಕೋತ್ತರ ಜಗತ್ತಿನಲ್ಲಿ ಡಿಜಿಟಲ್ ಆಡಳಿತ" ಎಂಬ ವಿಷಯದ ಮೇಲೆ ಇ-ಆಡಳಿತಕ್ಕೆ ಸಂಬಂಧಿಸಿದ 24ನೇ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಕೇಂದ್ರ ಸಚಿವಾಲಯಗಳು / ಇಲಾಖೆಗಳು, ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು, ಜಿಲ್ಲೆಗಳು, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಅತ್ಯುತ್ತಮ ಇ-ಆಡಳಿತ ಅಪ್ಲಿಕೇಶನ್ ಗಳಿಗಾಗಿ 6 ವಿಭಾಗಗಳ ಅಡಿಯಲ್ಲಿ 2021ರ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
• 2022ರ ನವೆಂಬರ್ 26 ಮತ್ತು 27ರಂದು ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಇ-ಆಡಳಿತ ಕುರಿತಾದ 25ನೇ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದ ಧ್ಯೇಯವಾಕ್ಯ "ಇ-ಆಡಳಿತ - ನಾಗರಿಕರು, ಕೈಗಾರಿಕೆಗಳು ಮತ್ತು ಸರ್ಕಾರವನ್ನು ಹತ್ತಿರಕ್ಕೆ ತರುವುದು" ಎಂಬುದಾಗಿತ್ತು. ಇ-ಆಡಳಿತ ಉಪಕ್ರಮಗಳ ಅನುಷ್ಠಾನವನ್ನು ಗುರುತಿಸಲು ಇ-ಆಡಳಿತ 2022ರಲ್ಲಿ ಒಟ್ಟು 18 ರಾಷ್ಟ್ರೀಯ ಪ್ರಶಸ್ತಿಗಳನ್ನು ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.
• ಕೇಂದ್ರ ಸಚಿವಾಲಯಗಳು/ ರಾಜ್ಯಗಳು ಮತ್ತು ಜಿಲ್ಲೆಗಳೊಂದಿಗೆ ಆಡಳಿತದಲ್ಲಿ ಪ್ರಶಸ್ತಿ ವಿಜೇತ ಅಭ್ಯಾಸಗಳನ್ನು ಪ್ರಚುರಪಡಿಸಲು ಪ್ರಶಸ್ತಿ ವಿಜೇತ ಉಪಕ್ರಮಗಳ ಬಗ್ಗೆ ಉತ್ತಮ ಆಡಳಿತ ವೆಬಿನಾರ್ ಸರಣಿಯನ್ನು ಪ್ರಾರಂಭಿಸಲಾಯಿತು. ಆರೋಗ್ಯ, ಶಿಕ್ಷಣ, ಪರಿಸರ, ವಿಪತ್ತು ನಿರ್ವಹಣೆ, ನೀರಿನ ನಿರ್ವಹಣೆ ಮತ್ತು ಸೇವಾ ವಿತರಣೆ ಮುಂತಾದ ವಿಷಯಗಳ ಮೇಲೆ ಇದುವರೆಗೆ 13 ವೆಬಿನಾರ್ ಗಳ ಸರಣಿಯಲ್ಲಿ 9 ವೆಬಿನಾರ್ ಗಳನ್ನು ನಡೆಸಲಾಗಿದೆ.

7. ಅಂತಾರಾಷ್ಟ್ರೀಯ ವಿನಿಮಯ ಮತ್ತು ಸಹಕಾರ:

ಜಂಟಿ ಕಾರ್ಯ ಗುಂಪಿನ ಸಭೆಗಳು, ವರ್ಚುವಲ್ ಸಮ್ಮೇಳನಗಳು ಮತ್ತು ಉನ್ನತ ಮಟ್ಟದ ವಿನಿಮಯ ಭೇಟಿಗಳ ಮೂಲಕ ಆಸ್ಟ್ರೇಲಿಯಾ, ಸಿಂಗಾಪುರ, ಫ್ರಾನ್ಸ್ ಮತ್ತು ಗ್ಯಾಂಬಿಯಾಗಳೊಂದಿಗೆ ಅಂತರರಾಷ್ಟ್ರೀಯ ಸಹಯೋಗವನ್ನು ಮತ್ತಷ್ಟು ಬಲಪಡಿಸಲಾಯಿತು.

8. ವಿಷನ್ ಇಂಡಿಯಾ@2047 ಡಿ.ಎ.ಆರ್.ಪಿ.ಜಿ. (ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ):

ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯು ಆಡಳಿತದ ಬಗ್ಗೆ ವಿಷನ್ ಇಂಡಿಯಾ @2047 ರ ಮಾರ್ಗಸೂಚಿಯನ್ನು ರೂಪಿಸಲು ಕಾರ್ಯಕಾರಿ ಗುಂಪು ಮತ್ತು ಸಲಹಾ ಗುಂಪನ್ನು ರಚಿಸಿತು. ಯುವ ನಾಗರಿಕ ಸೇವಕರು, ಯುವ ಬೋಧಕರು ಮತ್ತು ಉದ್ಯಮಿಗಳನ್ನು ಒಳಗೊಂಡ ಇಂಧನ, ಆರೋಗ್ಯ ಸೇವೆ, ಮೂಲಸೌಕರ್ಯ, ಶಿಕ್ಷಣ, ನೀರು, ನಗರೀಕರಣ, ಗ್ರಾಮೀಣಾಭಿವೃದ್ಧಿ, ಫಿನ್ಟೆಕ್ ನಲ್ಲಿ ಆಡಳಿತ ಎಂಬ 10 ವಿಷಯಾಧಾರಿತ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಸಿದ್ಧ ಭಾರತದ ದೃಷ್ಟಿಕೋನವನ್ನು ರೂಪಿಸಲು ಐಐಟಿ ಮದ್ರಾಸ್ ನೊಂದಿಗೆ ಇದು ಸಹಯೋಗ ಹೊಂದಿತು.

9. ಚೆನ್ನೈ, ಶ್ರೀನಗರ, ಬೆಂಗಳೂರು ಮತ್ತು ಇಟಾನಗರದಲ್ಲಿ ಉತ್ತಮ ಅಭ್ಯಾಸಗಳ ಪ್ರಸಾರದ ಬಗ್ಗೆ ನಾಲ್ಕು ಪ್ರಾದೇಶಿಕ ಸಮ್ಮೇಳನಗಳನ್ನು ಆಯೋಜಿಸಲಾಯಿತು.

*****



(Release ID: 1887421) Visitor Counter : 174