ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ, 2019 ರಲ್ಲಿ ಉಲ್ಲೇಖಿಸಲಾದ ಕಾರ್ಯವಿಧಾನದ ಪ್ರಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್.ಎಂಸಿ), ಸ್ವಾಯತ್ತ ಮಂಡಳಿಗಳು ಮತ್ತು ಶೋಧನಾ ಸಮಿತಿಯ ಅರೆಕಾಲಿಕ ಸದಸ್ಯರನ್ನು ಲಾಟರಿಗಳ ಮೂಲಕ ಆಯ್ಕೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ


ಮುಂದಿನ ಎರಡು ವರ್ಷಗಳ ಅವಧಿಗೆ ಶೋಧನಾ ಸಮಿತಿಗೆ ಮಾಡಲಾದ ನೇಮಕಾತಿಯು ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಂದ 10 ಅರೆಕಾಲಿಕ ಸದಸ್ಯರು, ರಾಜ್ಯ ವೈದ್ಯಕೀಯ ಮಂಡಳಿಯಿಂದ 9 ಅರೆಕಾಲಿಕ ಸದಸ್ಯರು, ಪ್ರತಿ ಸ್ವಾಯತ್ತ ಮಂಡಳಿಯ ನಾಲ್ಕನೇ ಸದಸ್ಯರು ಮತ್ತು ಒಬ್ಬ ತಜ್ಞರನ್ನು ಒಳಗೊಂಡಿದೆ.

Posted On: 28 DEC 2022 4:58PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ), ಸ್ವಾಯತ್ತ ಮಂಡಳಿಗಳು ಮತ್ತು ಶೋಧನಾ ಸಮಿತಿಗೆ ಲಾಟರಿ ಮೂಲಕ ಮಾಡಲಾದ  ಅರೆಕಾಲಿಕ ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ನೇಮಕಾತಿಗಳ ಕಾರ್ಯವಿಧಾನವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಕಾಯ್ದೆ, 2019 ರಲ್ಲಿ ನಿಗದಿಪಡಿಸಲಾಗಿದೆ.

ಎನ್ಎಂಸಿ ಕಾಯ್ದೆ 2019ರ ಪ್ರಕಾರ, ಈ ನೇಮಕಾತಿಗಳನ್ನು ಎರಡು ವರ್ಷಗಳ ಅವಧಿಗೆ ಮಾಡಲಾಗಿದೆ. ವಿವಿಧ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸದಸ್ಯರನ್ನು ಈ ಕೆಳಗಿನ ವಿಭಾಗಗಳಲ್ಲಿ ಆಯ್ಕೆ ಮಾಡಲಾಗಿದೆ:

· ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರದ ನಾಮನಿರ್ದೇಶಿತರಿಂದ ಎನ್ಎಂಸಿಯ ಹತ್ತು ಅರೆಕಾಲಿಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ವೈದ್ಯಕೀಯ ಸಲಹಾ ಮಂಡಳಿಯಲ್ಲಿ (2020 ರಲ್ಲಿ ಈ ಹಿಂದೆ ನೇಮಕಗೊಂಡವರು): ಅಸ್ಸಾಂ, ಅರುಣಾಚಲ ಪ್ರದೇಶ, ಛತ್ತೀಸ್ ಗಢ, ಪುದುಚೇರಿ, ಉತ್ತರಾಖಂಡ್, ಲಡಾಖ್, ಸಿಕ್ಕಿಂ, ತೆಲಂಗಾಣ, ಕರ್ನಾಟಕ ಮತ್ತು ಕೇರಳ .

· ಎನ್ಎಂಸಿಯ ಒಂಬತ್ತು ಅರೆಕಾಲಿಕ ಸದಸ್ಯರನ್ನು ರಾಜ್ಯ ವೈದ್ಯಕೀಯ ಮಂಡಳಿಯ ವೈದ್ಯಕೀಯ ಸಲಹಾ ಮಂಡಳಿಯಲ್ಲಿ ನಾಮನಿರ್ದೇಶಿತರಾದವರಿಂದ ಆಯ್ಕೆ ಮಾಡಲಾಗುತ್ತದೆ. (2020 ರಲ್ಲಿ ಈ ಮೊದಲು ನೇಮಕಗೊಂಡವರು): ಆಂಧ್ರಪ್ರದೇಶ, ಹರಿಯಾಣ, ಗೋವಾ, ಗುಜರಾತ್, ದೆಹಲಿ,

ಒಡಿಶಾ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನ.

· ಪ್ರತಿ ಸ್ವಾಯತ್ತ ಮಂಡಳಿಯ ನಾಲ್ಕನೇ ಸದಸ್ಯರನ್ನು (ಅರೆಕಾಲಿಕ ಸದಸ್ಯ) ರಾಜ್ಯ ವೈದ್ಯಕೀಯ ಮಂಡಳಿಯ ವೈದ್ಯಕೀಯ ಸಲಹಾ ಮಂಡಳಿಯಲ್ಲಿ ನಾಮನಿರ್ದೇಶಿತರಿಂದ (ಈ ಹಿಂದೆ 2020 ರಲ್ಲಿ ನೇಮಕಗೊಂಡವರು). ಆಯ್ಕೆ ಮಾಡಲಾಗುತ್ತದೆ.

(ಎ) ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿಗೆ: ಮಹಾರಾಷ್ಟ್ರ

(ಬಿ) ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿಗೆ: ತಮಿಳುನಾಡು

(ಸಿ) ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಣೀಕರಣ ಮಂಡಳಿ: ಉತ್ತರ ಪ್ರದೇಶ

(ಡಿ) ನೈತಿಕ ಮತ್ತು ವೈದ್ಯಕೀಯ ನೋಂದಣಿ ಮಂಡಳಿ: ಬಿಹಾರ

· ಶೋಧನಾ ಸಮಿತಿಗೆ ಒಡಿಶಾದ ಒಬ್ಬ ತಜ್ಞರನ್ನು ನಾಮನಿರ್ದೇಶನ ಮಾಡಲಾಗಿದೆ.

ತಜ್ಞರ ಹೆಸರುಗಳ ಪಟ್ಟಿಯನ್ನು ಕೆಳಗಿನ ಅನುಬಂಧದಲ್ಲಿ ನೋಡಬಹುದು. ಲಾಟರಿ ಡ್ರಾದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಚಿತ್ರೀಕರಣ  ಮಾಡಲು ಮಾಧ್ಯಮ ಸಿಬ್ಬಂದಿ ಸಹ ಹಾಜರಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಹೆಚ್ಚುವರಿ ಕಾರ್ಯದರ್ಶಿ ಡಾ. ಮನೋಹರ್ ಅಗ್ನಾನಿ, ಜಂಟಿ ಕಾರ್ಯದರ್ಶಿ ಡಾ. ಸಚಿನ್ ಮಿತ್ತಲ್ ಮತ್ತು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

ಅನುಬಂಧ:

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾದ ಸದಸ್ಯರು

ಕ್ರ.ಸಂ.

ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಹೆಸರು

ಸದಸ್ಯರ ಹೆಸರು

1

ಅಸ್ಸಾಂ

ಶ್ರೀಮತಿ ಕೃಷ್ಣ ಗೊಹೈನ್, ಐಎಎಸ್ (ನಿವೃತ್ತ), ಉಪಕುಲಪತಿಗಳು, ಶ್ರೀಮಂತ ಶಂಕರದೇವ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

2

ಅರುಣಾಚಲ ಪ್ರದೇಶ

ಪ್ರೊ. ಸಾಕೇತ್ ಕುಶ್ವಾಹ ಉಪಕುಲಪತಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

3

ಪುದುಚೇರಿ

ಡಾ. ಗುರ್ಮೀತ್ ಸಿಂಗ್, ಉಪಕುಲಪತಿ, ಪುದುಚೇರಿ ವಿಶ್ವವಿದ್ಯಾಲಯ

4

ಉತ್ತರಾಖಂಡ್

ಪ್ರೊ.ಹೇಮ್ ಚಂದ್ರ, ಉಪಕುಲಪತಿ, ಹೇಮವತಿ ನಂದನ್ ಬಹುಗುಣ ಆರೋಗ್ಯ ವಿಶ್ವವಿದ್ಯಾಲಯ, ಡೆಹ್ರಾಡೂನ್

5

ಲಡಾಖ್

ಪ್ರೊ.ಎಸ್.ಕೆ.ಮೆಹ್ತಾ, ಉಪಕುಲಪತಿ, ಲಡಾಖ್ ವಿಶ್ವವಿದ್ಯಾಲಯ

6

ಸಿಕ್ಕಿಂ

ಲೆಫ್ಟಿನೆಂಟ್ ಜನರಲ್ (ಡಾ.) ರಾಜನ್ ಸಿಂಗ್ ಗೆರೆವಾಲ್, ಉಪಕುಲಪತಿ, ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯ

7

ತೆಲಂಗಾಣ

ಕರುಣಾಕರ ರೆಡ್ಡಿ, ಉಪಕುಲಪತಿ, ಕಲೋಜಿ ನಾರಾಯಣ ರಾವ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

8

ಛತ್ತೀಸ್ ಗಢ

ಡಾ ಅಶೋಕ್ ಚಂದ್ರಕರ್, ಉಪಕುಲಪತಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಆರೋಗ್ಯ ವಿಜ್ಞಾನ ಮತ್ತು ಆಯುಷ್ ವಿಶ್ವವಿದ್ಯಾಲಯ ಛತ್ತೀಸ್ ಗಢ

9

ಕರ್ನಾಟಕ

ಡಾ.ಎಂ.ಕೆ.ರಮೇಶ್, ಉಪಕುಲಪತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

10

ಕೇರಳ

ಡಾ. ಮೋಹನನ್ ಕುನ್ನುಮ್ಮಾಳ್, ಉಪಕುಲಪತಿ, ಕೇರಳ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ, ತ್ರಿಶೂರ್, ಕೇರಳ

 

ವಿವಿಧ ರಾಜ್ಯಗಳ ವೈದ್ಯಕೀಯ ಮಂಡಳಿಗಳಿಂದ ಆಯ್ಕೆಯಾದ ಸದಸ್ಯರು

ಕ್ರ.ಸಂ

ರಾಜ್ಯ ವೈದ್ಯಕೀಯ ಮಂಡಳಿಯ ಹೆಸರು

ಸದಸ್ಯರ ಹೆಸರು

1

ಗುಜರಾತ್

ಡಾ. ಮಹೇಶ್ ಬಾಬುಲಾಲ್ ಪಟೇಲ್

2

ರಾಜಸ್ಥಾನ

ಡಾ. ದೀಪಕ್ ಶರ್ಮಾ

3

ಪಂಜಾಬ್

ಡಾ.ವಿ ಜಯ್ ಕುಮಾರ್,

4

ದೆಹಲಿ

ಡಾ.ರಾಜೀವ್ ಸೂದ್

5

ಹಿಮಾಚಲ ಪ್ರದೇಶ

ಡಾ.ವಿನೋದ್ ಕಶ್ಯಪ್,

6

ಒಡಿಶಾ

ಪ್ರೊ.ದತ್ತೇಶ್ವರ್ ಹುಟಾ

7

ಗೋವಾ

ಡಾ.ಪದ್ಮನಾಭ ವಾಮನ್ ರತಬೋಲಿ

8

ಹರಿಯಾಣ

ಡಾ.ಆರ್.ಕೆ.ಅನೇಜಾ

9

ಆಂಧ್ರ ಪ್ರದೇಶ

ಡಾ.ಬುಚಿಪುಡಿ ಸಾಂಬಶಿವ ರೆಡ್ಡಿ

 

ಎನ್.ಎಂ.ಸಿ. ಸ್ವಾಯತ್ತ ಮಂಡಳಿಗಳಿಗೆ ಆಯ್ಕೆಯಾದ ಸದಸ್ಯರು (ಅರೆಕಾಲಿಕ)

ಕ್ರ.ಸಂ.

ರಾಜ್ಯ ವೈದ್ಯಕೀಯ ಮಂಡಳಿಯ ಹೆಸರು

ಅರೆಕಾಲಿಕ ಸದಸ್ಯರ ಹೆಸರು

ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿ

1

ಮಹಾರಾಷ್ಟ್ರ

ಡಾ.ಪಲ್ಲವಿ ಪಿ.ಸಪ್ಲೆ

ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿ

1

ತಮಿಳುನಾಡು

ಡಾ.ಕೆ.ಸೆಂಥಿಲ್

ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಣೀಕರಣ ಮಂಡಳಿ

1

ಉತ್ತರ ಪ್ರದೇಶ

ಡಾ. ಊರ್ಮಿಳಾ ಸಿಂಗ್

ನೈತಿಕ ಮತ್ತು ವೈದ್ಯಕೀಯ ನೋಂದಣಿ ಮಂಡಳಿ

1

ಬಿಹಾರ

ಡಾ. ಸಹಜಾನಂದ ಪ್ರಸಾದ್ ಸಿಂಗ್

 

ಶೋಧನಾ ಸಮಿತಿಗೆ ಆಯ್ಕೆಯಾದ ತಜ್ಞರು

ಕ್ರ.ಸಂ.

ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಹೆಸರು

ಸದಸ್ಯರ ಹೆಸರು

1

ಒಡಿಶಾ

ಪ್ರೊ.ದತ್ತೇಶ್ವರ್ ಹುಟಾ

 

****

 

 

 


(Release ID: 1887168) Visitor Counter : 211