ಕಲ್ಲಿದ್ದಲು ಸಚಿವಾಲಯ
ಶೇ.18 ರಷ್ಟು ಸುಧಾರಣೆಯೊಂದಿಗೆ ಕಲ್ಲಿದ್ದಲಿನ ಗುಣಮಟ್ಟ ಗಣನೀಯವಾಗಿ ಏರಿಕೆಯಾಗಿದೆ
ಮಾನ್ಯತೆ ಪಡೆದ ಮೂರನೇ ಸಂಸ್ಥೆಯು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುತ್ತಿದೆ
ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ತಂತ್ರಜ್ಞಾನ ಆಧಾರಿತ ಕ್ರಮಗಳು
Posted On:
27 DEC 2022 3:45PM by PIB Bengaluru
ಎಲ್ಲಾ ಗ್ರಾಹಕರಿಗೆ ಗುಣಮಟ್ಟದ ಕಲ್ಲಿದ್ದಲನ್ನು ಪೂರೈಸುವ ಉದ್ದೇಶವನ್ನು ಸಾಧಿಸಲು ಕಲ್ಲಿದ್ದಲು ಸಚಿವಾಲಯ ಮತ್ತು ಕಲ್ಲಿದ್ದಲು ಕಂಪನಿಗಳು ವಿವಿಧ ಕ್ರಮಗಳನ್ನು ಕೈಗೊಂಡಿವೆ. ಕಲ್ಲಿದ್ದಲು ಕಂಪನಿಗಳು ಶೇ.100 ರಷ್ಟು ಗುಣಮಟ್ಟದ ತೃಪ್ತಿಯನ್ನು ಸಾಧಿಸಲು ಪ್ರಯತ್ನಿಸುತ್ತಿವೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಮೂಲಗಳ ಪ್ರಕಾರ ಘೋಷಿತ ದರ್ಜೆಯ ಕಲ್ಲಿದ್ದಲು ಪೂರೈಕೆಗೆ ಅನುಗುಣವಾಗಿ ಗಣನೀಯ ಸುಧಾರಣೆಯಾಗಿದೆ. ಗ್ರೇಡ್ ಅನುಸರಣೆ 2017-18 ರಲ್ಲಿದ್ದ ಶೇ.51 ರಿಂದ 2022-23 ರಲ್ಲಿ (ನವೆಂಬರ್ 22 ರವರೆಗೆ) ಶೇ.69 ಕ್ಕೆ ಏರಿಕೆಯಾಗಿದೆ.
ಗುಣಮಟ್ಟದ ಸುಧಾರಣೆಗಾಗಿ ಕಲ್ಲಿದ್ದಲು ಗಣಿಗಳನ್ನು ಕಾಲಕಾಲಕ್ಕೆ ಮರು-ದರ್ಜೆಗೊಳಿಸುವುದು, ಮೇಲ್ಮೈ ಗಣಿಗಾರಿಕೆಯಂತಹ ಸುಧಾರಿತ ಗಣಿಗಾರಿಕೆ ತಂತ್ರಜ್ಞಾನದ ಪರಿಚಯ, ತೊಳೆದ ಕಲ್ಲಿದ್ದಲಿನ ಪೂರೈಕೆ, ಕಲ್ಲಿದ್ದಲನ್ನು ನೇರವಾಗಿ ರವಾನಿಸಲು ಮೊದಲ ಮೈಲಿ ಸಂಪರ್ಕ, ಸ್ವಯಂ ವಿಶ್ಲೇಷಣೆಯ ಸ್ಥಾಪನೆ ಇತ್ಯಾದಿ ಕ್ರಮಗಳನ್ನು ಕೈಗೊಳಲ್ಲಾಗಿದೆ. ವಿವಿಧ ಅಧಿಕಾರಿಗಳು/ಏಜೆನ್ಸಿಗಳಿಗೆ ಘೋಷಿತ ಶ್ರೇಣಿಗಳಿಗೆ ಅನುಗುಣವಾಗಿ ಕಲ್ಲಿದ್ದಲು ಪೂರೈಕೆಯನ್ನು ಖಾತ್ರಿಪಡಿಸುವ ಕೆಲಸವನ್ನು ವಹಿಸಲಾಗಿದೆ. ಗ್ರೇಡ್ ವ್ಯತ್ಯಾಸಕ್ಕೆ ಪ್ರಾಥಮಿಕ ಕಾರಣವೆಂದರೆ ಭಾರತೀಯ ಕಲ್ಲಿದ್ದಲಿನ ವೈವಿಧ್ಯಮಯ ಸ್ವಭಾವ, ಅಂದರೆ, ಒಂದೇ ಘಟಕದ ವಿವಿಧ ಹಂತಗಳಲ್ಲಿ ಹೊರತೆಗೆಯಲಾದ ಕಲ್ಲಿದ್ದಲಿನ ಕ್ಯಾಲೋರಿಫಿಕ್ ಮೌಲ್ಯವು ಬದಲಾಗುತ್ತದೆ.
ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿನ ಅಧೀನದಲ್ಲಿರುವ ಕಲ್ಲಿದ್ದಲು ನಿಯಂತ್ರಕ ಸಂಸ್ಥೆ (ಸಿಸಿಒ)ಯು ವಾರ್ಷಿಕ ಕಲ್ಲಿದ್ದಲು ಗಣಿ/ಲೋಡಿಂಗ್ ಪಾಯಿಂಟ್‌ಗಳ ದರ್ಜೆಯ ಘೋಷಣೆಯ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಕಲ್ಲಿದ್ದಲು ಗಣಿಗಳ ಶ್ರೇಣಿಗಳನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡುತ್ತದೆ ಮತ್ತು ಘೋಷಿಸುತ್ತದೆ. ಗ್ರಾಹಕರ ಹೆಚ್ಚಿನ ತೃಪ್ತಿಗಾಗಿ, ಗಣಿಯಿಂದ ರವಾನೆಯ ಹಂತಕ್ಕೆ ಕಲ್ಲಿದ್ದಲಿನ ಗುಣಮಟ್ಟ ನಿರ್ವಹಣೆಗೆ ವಿಶೇಷ ಒತ್ತು ನೀಡಲಾಗಿದೆ. ಈಗ, ಸಿಐಎಲ್ ನ ಎಲ್ಲಾ ಗ್ರಾಹಕರು ಸ್ವತಂತ್ರ ಮೂರನೇ ವ್ಯಕ್ತಿ ಮಾದರಿ ಏಜೆನ್ಸಿಗಳ (ಟಿ ಪಿ ಎಸ್ ಎ) ಮೂಲಕ ಸರಬರಾಜುಗಳ ಗುಣಮಟ್ಟದ ಮೌಲ್ಯಮಾಪನ ಮಾಡಿಸುವ ಆಯ್ಕೆಯನ್ನು ಹೊಂದಿದ್ದಾರೆ. ಈ ಮಾನ್ಯತೆ ಪಡೆದ ಮೂರನೇ-ವ್ಯಕ್ತಿ ಏಜೆನ್ಸಿಗಳು ಬಿಐಎಸ್ ಮಾನದಂಡಗಳ ಅಡಿಯಲ್ಲಿ ನಿಗದಿತ ಮಾನದಂಡಗಳ ಪ್ರಕಾರ ಲೋಡ್ ಮಾಡಲಾದ ಕಲ್ಲಿದ್ದಲು ವ್ಯಾಗನ್‌ಗಳು/ಲಾರಿಗಳಿಂದ ಕಲ್ಲಿದ್ದಲು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುತ್ತವೆ. ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೈನಿಂಗ್ & ಫ್ಯುಯೆಲ್ ರಿಸರ್ಚ್ (ಸಿ ಐ ಎಂ ಎಫ್ ಆರ್) ಮತ್ತು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) ಜೊತೆಗೆ ವಿದ್ಯುತ್ ಮತ್ತು ವಿದ್ಯುತೇತರ ಕ್ಷೇತ್ರಗಳಿಗೆ ಎಸ್ ಜಿ ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಸಿಐಎಲ್ ಮೂಲಕ) ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಮಿತ್ರ ಎಸ್ ಕೆ ಪ್ರೈವೇಟ್ ಲಿ. ಗ್ರಾಹಕರಿಗೆ ಥರ್ಡ್-ಪಾರ್ಟಿ ಏಜೆನ್ಸಿಗಳ ಹೆಚ್ಚಿನ ಆಯ್ಕೆಗಳನ್ನು ಒದಗಿಸಲು ನಿಯೋಜಿಸಲಾಗಿದೆ. ವಿದ್ಯುತ್/ವಿದ್ಯುತೇತರ ವಲಯಗಳ ಎಲ್ಲಾ ಗ್ರಾಹಕರು ಯಾವುದೇ ಪಟ್ಟಿ ಮಾಡಲಾದ ಏಜೆನ್ಸಿಗಳ ಸೇವೆಗಳನ್ನು ಪಡೆಯಲು ಮುಕ್ತರಾಗಿದ್ದಾರೆ. ಕಲ್ಲಿದ್ದಲು ಕಂಪನಿಗಳು, ಮೂರನೇ ವ್ಯಕ್ತಿಯ ಏಜೆನ್ಸಿಗಳಿಂದ ಮಾದರಿಯ ಶೇ.50 ರಷ್ಟು ವೆಚ್ಚವನ್ನು ಸಹ ಹಂಚಿಕೊಳ್ಳುತ್ತವೆ. ಕಲ್ಲಿದ್ದಲಿನ ಜಂಟಿ ಮಾದರಿಯ ಸೌಲಭ್ಯವೂ ಗ್ರಾಹಕರಿಗೆ ಲಭ್ಯವಿದೆ.
ಗಣಿಗಳಲ್ಲಿ ಗುಣಮಟ್ಟದ ಅರಿವು ಮೂಡಿಸಲು, ಕಲ್ಲಿದ್ದಲು ಕಂಪನಿಗಳು ಗ್ರಾಹಕರ ಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ನಿಯಮಿತವಾಗಿ ಗುಣಮಟ್ಟದ ವಾರಗಳು, ಸಪ್ತಾಹಗಳನ್ನು ಸಹ ಆಯೋಜಿಸುತ್ತವೆ. ನಿರಂತರ ಮೇಲ್ವಿಚಾರಣೆ, ಜಾಗೃತಿ ಅಭಿಯಾನಗಳು ಮತ್ತು ಸರಿಪಡಿಸುವ ಕ್ರಮಗಳು ಕಲ್ಲಿದ್ದಲು ಪೂರೈಕೆಯ ಗುಣಮಟ್ಟದ ಕ್ರಮಗಳ ಅನುಸರಣೆಯಲ್ಲಿ ಸುಧಾರಣೆಗಳನ್ನು ತೋರಿಸುತ್ತಿವೆ.
ಸಿಐಎಲ್ ಆರಂಭದಲ್ಲಿ ಗ್ರಾಹಕರಿಗೆ ಸರಬರಾಜು ಮಾಡಿದ ಕಲ್ಲಿದ್ದಲಿನ ಘೋಷಿತ ದರ್ಜೆಯ ಆಧಾರದ ಮೇಲೆ ಬಿಲ್ ಮಾಡುತ್ತದೆ. ಅಂತಹ ತಾತ್ಕಾಲಿಕ ಬಿಲ್‌ಗಳನ್ನು ಕಲ್ಲಿದ್ದಲಿನ ನಿಜವಾದ ಗುಣಮಟ್ಟವನ್ನು ಪರೀಕ್ಷಿಸಿ ಮತ್ತು ಅಧಿಕೃತ ಥರ್ಡ್-ಪಾರ್ಟಿ ಸ್ಯಾಂಪ್ಲಿಂಗ್ ಏಜೆನ್ಸಿ ಘೋಷಿಸಿದ ನಂತರ ಸರಿಹೊಂದಿಸಲಾಗುತ್ತದೆ. ಡೆಬಿಟ್/ಕ್ರೆಡಿಟ್ ಬಿಲ್‌ಗಳ ಇತ್ಯರ್ಥ ಮತ್ತು ಪಾವತಿಗೆ ವಾಣಿಜ್ಯ ವ್ಯವಸ್ಥೆ ಇದೆ, ಇದು 3 ನೇ ವ್ಯಕ್ತಿಯ ಮೌಲ್ಯೀಕರಣದ ಫಲಿತಾಂಶ ಮತ್ತು ಉಲ್ಲೇಖಿಸಿದ ಮಾದರಿ ವಿಶ್ಲೇಷಣೆಯ ಫಲಿತಾಂಶವನ್ನು ಆಧರಿಸಿದೆ. ಸಿಐಎಲ್ ಒದಗಿಸಿದ ಕಲ್ಲಿದ್ದಲು ಪೂರೈಕೆಯ ಒಟ್ಟಾರೆ ದರ್ಜೆಯ ಹೊಂದಾಣಿಕೆಯು ಸಿಐಎಲ್ ನೀಡಿದ ಕ್ರೆಡಿಟ್ ಮತ್ತು ಡೆಬಿಟ್ ಟಿಪ್ಪಣಿಯಿಂದ ಸ್ಪಷ್ಟವಾಗಿದೆ, ಇದು CIL 2021-22 ರ ಅವಧಿಯಲ್ಲಿ ಸುಮಾರು 400 ಕೋಟಿ ರೂಪಾಯಿಗಳ ಬೋನಸ್ ಗಳಿಸಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಅಕ್ಟೋಬರ್ 2022 ರವರೆಗೆ ಈಗಾಗಲೇ ಸುಮಾರು 201 ಕೋಟಿ ರೂ.ಗಳಷ್ಟು ಬೋನಸ್ ಗಳಿಸಿದೆ ಎಂದು ತೋರಿಸುತ್ತದೆ.
ಕಲ್ಲಿದ್ದಲು ಅಪ್ಲಿಕೇಶನ್ UTTAM (ಗಣಿಗಾರಿಕೆಯ ಕಲ್ಲಿದ್ದಲಿನ ಮೂರನೇ ವ್ಯಕ್ತಿಯ ಮೌಲ್ಯಮಾಪನದ ಪಾರದರ್ಶಕತೆ) ಕಲ್ಲಿದ್ದಲು ಪೂರೈಕೆಯ ಮೂರನೇ ವ್ಯಕ್ತಿಯ ಮೌಲ್ಯೀಕರಣವನ್ನು ವೀಕ್ಷಿಸಲು ಗ್ರಾಹಕರು/ ಸಾರ್ವಜನಿಕರಿಗೆ ಲಭ್ಯವಿದೆ. ಅನೇಕ ಗ್ರಾಹಕರು ತಮ್ಮ ಕಲ್ಲಿದ್ದಲು ಬಳಕೆಯಲ್ಲಿ ಈ ಅಪ್ಲಿಕೇಶನ್‌ನ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
*****
(Release ID: 1886897)
Visitor Counter : 158