ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ(SAI NCOE) ಭೋಪಾಲ್‌ಗೆ ಭೇಟಿ ನೀಡಿ ಎಂಪಿ ಹಾಲ್‌ನಲ್ಲಿ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು


​​​​​​​ಮಧ್ಯಪ್ರದೇಶ ನಿಧಾನವಾಗಿ ಭಾರತದಲ್ಲಿ ಕ್ರೀಡೆಯ ಕೇಂದ್ರವಾಗುತ್ತಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 26 DEC 2022 7:48PM by PIB Bengaluru

ಮುಖ್ಯಾಂಶಗಳು-

SAI NCOE ಭೋಪಾಲ್ ಅಥ್ಲೆಟಿಕ್ಸ್, ಬಾಕ್ಸಿಂಗ್, ಹಾಕಿ, ಜೂಡೋ, ವುಶು ಮತ್ತು ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಕ್ರೀಡಾ ವಿಭಾಗಗಳನ್ನು ಒಳಗೊಂಡಿರುತ್ತದೆ. 

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ನಿನ್ನೆ ಸೋಮವಾರ ಭೋಪಾಲ್‌ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರದಲ್ಲಿರುವ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿದರು. ಮಧ್ಯಪ್ರದೇಶದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯುವ ಪಂದ್ಯಾವಳಿ ಚಿಹ್ನೆ ಬಿಡುಗಡೆಗೂ ಮುನ್ನ ಈ ಭೇಟಿ ನಡೆದಿದೆ.

ಕ್ರೀಡಾ ವಿಜ್ಞಾನ ವಿಭಾಗಗಳು ಹಾಗೂ ಜೂಡೋ, ವುಶು, ಬಾಕ್ಸಿಂಗ್ ಮತ್ತು ಹಾಕಿ ಫೀಲ್ಡ್ ಆಫ್ ಪ್ಲೇಸ್ (FOP)ಗಳನ್ನು ಒಳಗೊಂಡಿರುವ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿರುವ ಎಂಪಿ ಹಾಲ್‌ಗೆ ಶ್ರೀ ಠಾಕೂರ್ ಭೇಟಿ ನೀಡಿದರು. SAI NCOE ಅಥ್ಲೆಟಿಕ್ಸ್, ಬಾಕ್ಸಿಂಗ್, ಹಾಕಿ, ಜೂಡೋ, ವುಶು ಮತ್ತು ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಕ್ರೀಡಾ ವಿಭಾಗಗಳನ್ನು ಒಳಗೊಂಡಿದೆ. 

ಭಾರತೀಯ ಕ್ರೀಡಾ ಪ್ರಾಧಿಕಾರವು ಸುಮಾರು 100 ಎಕರೆ ದೊಡ್ಡ ಕೇಂದ್ರಗಳು ಮತ್ತು ಕ್ಯಾಂಪಸ್‌ಗಳನ್ನು ನಿರ್ವಹಿಸಲು ಏನು ಮಾಡುತ್ತಿದೆ ಎಂಬುದೂ ಗಮನಾರ್ಹವಾಗಿದೆ. ಕ್ರೀಡಾಪಟುಗಳು, ತರಬೇತುದಾರರು, ಸಹಾಯಕ ಸಿಬ್ಬಂದಿ ಹೀಗೆ ಹಲವಾರು ಕಾರ್ಯಗಳನ್ನು ಮಾಡುವ ಅಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ" ಎಂದು ಕ್ರೀಡಾ ಸಚಿವ ಶ್ರೀ ಠಾಕೂರ್ ಹೇಳಿದರು.

ಇದಕ್ಕೂ ಮುನ್ನ ಕೇಂದ್ರ ಸಚಿವರು ರಾಜ್ಯದ ಪ್ಯಾರಾ ಕ್ಯಾನೋಯಿಂಗ್ ಸೌಲಭ್ಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಧ್ಯ ಕ್ರೀಡಾ ಮತ್ತು ಯುವಜನ ಕಲ್ಯಾಣ ಸಚಿವೆ ಶ್ರೀಮತಿ ಯಶೋಧರ ರಾಜೇ ಸಿಂಧಿಯಾ ಮತ್ತು ಮಧ್ಯಪ್ರದೇಶ ಸರ್ಕಾರದ ಇತರ ಅಧಿಕಾರಿಗಳು ಇದ್ದರು. ಈ ವರ್ಷದ ಆರಂಭದಲ್ಲಿ ಪೋಲೆಂಡ್‌ನಲ್ಲಿ ನಡೆದ ಪ್ಯಾರಾಕಾನೊ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ಯಾರಾ-ಕ್ಯಾನೋಯಿಸ್ಟ್ ಪ್ರಾಚಿ ಯಾದವ್ ಸೇರಿದಂತೆ ಕೆಲವು ಅಥ್ಲೀಟ್‌ಗಳೊಂದಿಗೆ ಅವರು ಸಂವಾದ ನಡೆಸಿದರು.

ರಾಜ್ಯಾದ್ಯಂತ ಲಭ್ಯವಿರುವ ಕ್ರೀಡಾ ಮೂಲಸೌಕರ್ಯಗಳ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, "ಭೋಪಾಲ್ ಅತ್ಯುತ್ತಮ ಶೂಟಿಂಗ್ ಮತ್ತು ಈಕ್ವೆಸ್ಟ್ರಿಯನ್ ರೇಂಜ್‌ಗಳಲ್ಲಿ ಒಂದಾಗಿದೆ. ಇದು ವಿಶ್ವ ದರ್ಜೆಗೆ ಹತ್ತಿರದಲ್ಲಿದೆ. ಮಧ್ಯ ಪ್ರದೇಶ ರಾಜ್ಯವೂ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗಾಗಿ ಸಾಕಷ್ಟು ಸಿದ್ಧವಾಗಿದೆ. 

ಮಧ್ಯ ಪ್ರದೇಶ ನಿಧಾನವಾಗಿ ಭಾರತದಲ್ಲಿ ಕ್ರೀಡೆಯ ಕೇಂದ್ರವಾಗುತ್ತಿದೆ. ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಮಾದರಿಯನ್ನು ಅನುಸರಿಸಿದರೆ, ಭಾರತವು ಶೀಘ್ರದಲ್ಲೇ ಕ್ರೀಡಾ ಸೂಪರ್ ಪವರ್ ಆಗಲಿದೆ ಎಂದು ನಾನು ಆಶಿಸುತ್ತೇನೆ ಎಂದರು.

*****


(Release ID: 1886858) Visitor Counter : 136


Read this release in: English , Urdu , Marathi , Hindi