ಕೃಷಿ ಸಚಿವಾಲಯ
azadi ka amrit mahotsav

ಡಿ ಎ ಆರ್ ಇ ಕಾರ್ಯದರ್ಶಿ ಮತ್ತು ಐ ಸಿ ಎ ಆರ್ ಮಹಾ ನಿರ್ದೇಶಕರಾದ ಡಾ. ಹಿಮಾಂಶು ಪಾಠಕ್ ಅವರು ಇಂದು ಜಿಎಮ್ ಸಾಸಿವೆಯ ವಿವಿಧ ವಿಷಯಗಳ ಕುರಿತು ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಿದರು.

Posted On: 23 DEC 2022 4:58PM by PIB Bengaluru


ಡಿ ಎ ಆರ್ ಇ ಕಾರ್ಯದರ್ಶಿ ಮತ್ತು ಐ ಸಿ ಎ ಆರ್ ಮಹಾ ನಿರ್ದೇಶಕರಾದ ಡಾ. ಹಿಮಾಂಶು ಪಾಠಕ್ ಅವರು ಇಂದು ಜಿಎಮ್ ಸಾಸಿವೆಯ ವಿವಿಧ ವಿಷಯಗಳ ಕುರಿತು ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಜಿ ಇ ಎ ಸಿ ಮೂಲ ತಳಿಯಿಂದ ಆನುವಂಶಿಕ ಬದಲಾವಣೆಯಿಂದ ಸಿದ್ಧಪಡಿಸಲಾದ ಡಿ ಎಂ ಎಚ್ 11 ತಳಿಯ ಪರಿಸರಾತ್ಮಕ ಬಿಡುಗಡೆಗೆ ಅನುಮೋದನೆ  ದೊರೆತಿರುವುದು  ದೊಡ್ಡ ಪ್ರಮಾಣದಲ್ಲಿ ಮಾಧ್ಯಮ ಮತ್ತು ಸಾರ್ವಜನಿಕರ ಗಮನ ಸೆಳೆದಿದೆ. 

ಜಿ ಎಂ ತಳಿಯನ್ನು ವಿರೋಧಿಸುವವರು  DMH 11 ಅನುಮೋದನೆಗೆ ಸಂಬಂಧಿಸಿದಂತೆ ಅನೇಕ ಪುಕಾರುಗಳನ್ನು ಸೃಷ್ಟಿಸುತ್ತಿದ್ದಾರೆ. ಮಾನವರು, ಪ್ರಾಣಿಗಳು ಮತ್ತು ಪರಿಸರಕ್ಕೆ ಇವು ಸುರಕ್ಷಿತವಾಗಿವೆ ಎಂದು ಧೃಡಪಡಿಸಲು ಆಧುನಿಕ ಮತ್ತು ಆಯುರ್ವೇದ ವಿಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ ಸೇರಿದಂತೆ ಕೃಷಿ, ಆರೋಗ್ಯ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಎಲ್ಲಾ ರಾಷ್ಟ್ರೀಯ ಏಜೆನ್ಸಿಗಳು ಮತ್ತು ಸಾರ್ವಜನಿಕ ಸಂಶೋಧನಾ ವ್ಯವಸ್ಥೆಗಳು ಈ ಉತ್ಪನ್ನದ ಅಪಾಯದ ಮೌಲ್ಯಮಾಪನದಲ್ಲಿ ಅಧಿಕೃತವಾಗಿ ಮತ್ತು ಔಪಚಾರಿಕವಾಗಿ ತೊಡಗಿಸಿಕೊಂಡಿವೆ.   

ಆದ್ದರಿಂದ ಈ ವಿಷಯದ ಕುರಿತು ಅಧಿಕೃತವಲ್ಲದ ಅಥವಾ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಮಾಜಿ ಉದ್ಯೋಗಿಗಳು ಪ್ರಕಟಿಸಿದ ಯಾವುದೇ ಅಭಿಪ್ರಾಯ ಅಥವಾ ಲೇಖನವು, EPA (1986) ಅಡಿಯಲ್ಲಿ  ಕಾರ್ಯನಿರ್ವಹಿಸುವ ನಿಯಂತ್ರಕ ಅಧಿಕಾರಿಗಳ ಹೇಳಿಕೆ ದಾಖಲಾತಿಗಳು ಮತ್ತು ನಿರ್ಧಾರಗಳಿಗಿಂತ ಭಿನ್ನವಾಗಿವೆ  ಎಂದು ಸ್ಪಷ್ಟಪಡಿಸಲು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಇದನ್ನು ಪ್ರಕಟಿಸಲಾಗುತ್ತಿದೆ .  ಇಂತಹ ಹೇಳಿಕೆಗಳನ್ನು ಕೌನ್ಸಿಲ್ ಅನುಮೋದಿಸುವುದಿಲ್ಲ ಮತ್ತು  ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಇಂತಹ ಹೇಳಿಕೆಗಳ ವಿರುದ್ಧ ಅಗತ್ಯ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುವುದು.

GM ತಂತ್ರಜ್ಞಾನವು ಸಾಧಿಸಲು ಕಷ್ಟಕರವಾದ ಅಥವಾ ಅಸಾಧ್ಯವಾದ ಸಮಸ್ಯೆಯನ್ನು ನಿವಾರಿಸಲು ಬೆಳೆ ವೈವಿಧ್ಯದಲ್ಲಿ ಯಾವುದೇ ಉದ್ದೇಶಿತ ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ ಅಲ್ಲದೆ ಮಾನವರು, ಪ್ರಾಣಿಗಳು ಮತ್ತು ಪರಿಸರಕ್ಕೆ ಸುರಕ್ಷಿತವಾಗಿದೆ. ಹೀಗೆ, GM ತಂತ್ರಜ್ಞಾನವು ಭಾರತೀಯ ಕೃಷಿಯಲ್ಲಿ  ಅಗತ್ಯ ಕ್ರಾಂತಿಯನ್ನು ಸೃಷ್ಟಿಸಬಲ್ಲ 
ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ದೇಶೀಯ ಉತ್ಪಾದನೆ, ಅಗತ್ಯತೆ ಮತ್ತು ದೇಶದಲ್ಲಿ ಖಾದ್ಯ ತೈಲಗಳ ಆಮದುಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಸನ್ನಿವೇಶದತ್ತ ಗಮನ ಹರಿಸುವುದು ಮುಖ್ಯವಾಗಿದೆ.

ಖಾದ್ಯ ತೈಲದಲ್ಲಿ ಸ್ವಾವಲಂಬನೆ : ಪ್ರಸ್ತುತ ಸಮಯದ ಅವಶ್ಯಕತೆ 

ದೇಶೀಯ ಬೇಡಿಕೆಯನ್ನು ಪೂರೈಸಲು ಭಾರತದ ಖಾದ್ಯ ತೈಲಗಳ ಆಮದು ನಿರಂತರವಾಗಿ ಹೆಚ್ಚುತ್ತಿದೆ. 2021-22 ರ ಅವಧಿಯಲ್ಲಿ, ನಾವು ಮುಖ್ಯವಾಗಿ 14.1 ದಶಲಕ್ಷ್ಯ ಟನ್ ಗಳಷ್ಟು ತಾಳೆ, ಸೋಯಾಬೀನ್, ಸೂರ್ಯಕಾಂತಿ ಮತ್ತು ಕ್ಯಾನೋಲಾ ತೈಲಗಳನ್ನು ಒಳಗೊಂಡಿರುವ ಖಾದ್ಯ ತೈಲಗಳ ಆಮದಿಗಾಗಿ ರೂ.1,56,800 ವೆಚ್ಚ ಮಾಡಿದ್ದೇವೆ, ಇದು ಭಾರತದ ಒಟ್ಟು 21 ದಶಲಕ್ಷ್ಯ ಟನ್ ಗಳಷ್ಟು ಖಾದ್ಯ ತೈಲ ಬಳಕೆಯ ಮೂರನೇ ಎರಡರಷ್ಟು ಸಮಾನವಾಗಿದೆ. ಆದ್ದರಿಂದ, ಕೃಷಿ ಉತ್ಪನ್ನಗಳ -ಆಮದು ಮೇಲಿನ ವಿದೇಶಾಂಗ ವಿನಿಮಯ ವೆಚ್ಚದ ಸೋರಿಕೆಯನ್ನು ತಗ್ಗಿಸಲು ಖಾದ್ಯ ತೈಲದಲ್ಲಿ ಸ್ವಾವಲಂಬನೆ ಅಗತ್ಯವಿದೆ.

ದೇಶೀಯ ಉತ್ಪಾದನೆಯಲ್ಲಿನ ಕೊರತೆ ಮತ್ತು ಸವಾಲುಗಳು:

ಸೋಯಾಬೀನ್, ರೇಪ್ಸೀಡ್ ಸಾಸಿವೆ, ಶೇಂಗಾ, ಎಳ್ಳು, ಸೂರ್ಯಕಾಂತಿ, ಕುಸುಬೆ, ಅಗಸೆ ಮತ್ತು ಹುಚ್ಚೆಳ್ಳು ಈ ಬೆಳೆಗಳ ಉತ್ಪಾದಕತೆ ಜಾಗತಿಕ ಉತ್ಪಾದಕತೆಗಿಂತ ಕಡಿಮೆಯಾಗಿದೆ. 2020-21 ರಲ್ಲಿ, ಭಾರತವು ಎಣ್ಣೆ ಕಾಳುಗಳ ಬೆಳೆ ಒಟ್ಟು 28.8 ದಶಲಕ್ಷ ಹೆಕ್ಟೇರ್ ಪ್ರದೇಶ ವ್ಯಾಪ್ತಿಯನ್ನು ಹೊಂದಿದ್ದು, ಒಟ್ಟು ಉತ್ಪಾದನೆ 35.9 ದಶಲಕ್ಷ ಟನ್ ಮತ್ತು 1254 ಕಿಲೋ/ಹೆಕ್ಟೇರ್ ಇದು ಉತ್ಪಾದಕತೆ ಜಾಗತಿಕ ಸರಾಸರಿಗಿಂತ ಅತ್ಯಂತ ಕಡಿಮೆಯಾಗಿದೆ. ಒಟ್ಟು ಎಣ್ಣೆಕಾಳುಗಳ 35.9 ಮೆಟ್ರಿಕ್ ಟನ್ ನಿಂದ 8 ಮೆಟ್ರಿಕ್ ಟನ್ ನಷ್ಟು ಖಾದ್ಯ ತೈಲ ಚೇತರಿಕೆಯು ವರ್ಷಕ್ಕೆ 21 ಮೆಟ್ರಿಕ್ ಟನ್ (mtpa) ಗೆ  ನಿಗದಿಪಡಿಸಲಾದ ಒಟ್ಟು ಖಾದ್ಯ ತೈಲದ ಅವಶ್ಯಕತೆಯ 35-40 ಪ್ರತಿಶತವನ್ನು ಸಹ ಪೂರೈಸುವುದಿಲ್ಲ. 2029-30 ರ ವೇಳೆಗೆ 29.05 ದಶಲಕ್ಷ ಟನ್ ಬೇಡಿಕೆಯೊಂದಿಗೆ ಅಡುಗೆ ಎಣ್ಣೆಯ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾರಣ ಭವಿಷ್ಯದಲ್ಲಿ ಪರಿಸ್ಥಿತಿ ಹದಗೆಡುತ್ತದೆ.

ರಾಪ್ಸೀಡ್-ಸಾಸಿವೆ ಭಾರತದಲ್ಲಿ 9.17 ದಶಲಕ್ಷ ಹೆಕ್ಟೇರ್ ‌ನಲ್ಲಿ ಬೆಳೆಯುವ ಪ್ರಮುಖ ಎಣ್ಣೆಕಾಳು ಬೆಳೆಯಾಗಿದ್ದು, ಒಟ್ಟು ಉತ್ಪಾದನೆ 11.75 ದಶಲಕ್ಷ ಟನ್ (2021-22). ಆದಾಗ್ಯೂ, ಈ ಬೆಳೆಯು ಜಾಗತಿಕ ಸರಾಸರಿಗೆ ಹೋಲಿಸಿದರೆ (1281 ಕೆಜಿ/ಹೆ) ಕಡಿಮೆ ಉತ್ಪಾದಕತೆಯಿಂದ ಬಳಲುತ್ತಿದೆ (2000 ಕೆಜಿ/ಹೆ) ಸಾಮಾನ್ಯವಾಗಿ ಎಣ್ಣೆಬೀಜದ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ವಿಶೇಷವಾಗಿ ದೇಶದಲ್ಲಿ ಭಾರತೀಯ ಸಾಸಿವೆ ಬೆಳೆಗೆ ತಾಂತ್ರಿಕ ಪ್ರಗತಿಯ ಅಗತ್ಯವಿದೆ.

ಮಿಶ್ರತಳಿಗಳ ಅವಶ್ಯಕತೆಯೇನು?

ವೈವಿಧ್ಯಮಯ ಮೂಲ ತಳಿಗಳನ್ನು ಕಸಿ ಮಾಡುವುದರ ಪರಿಣಾಮ ಹೆಚ್ಚಿನ ಇಳುವರಿ ನೀಡುವ ಮತ್ತು ಹೊಂದಾಣಿಕೆಯಾಗುವಂತಹ ಮಿಶ್ರತಳು ಲಭಿಸುತ್ತವೆ. ಇದನ್ನು ಹೈಬ್ರಿಡ್ ವಿಗೋರೊಹೆಟೆರೋಸಿಸ್ ಎಂದು ಕರೆಯಲಾಗುತ್ತದೆ . ಇಂತಹ ಪ್ರಕ್ರಿಯೆ ಅಕ್ಕಿ, ಜೋಳ, ಮುತ್ತು ರಾಗಿ, ಸೂರ್ಯಕಾಂತಿ ಮತ್ತು ಅನೇಕ ತರಕಾರಿಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತದೆ. ಮಿಶ್ರತಳಿಗಳು ಸಾಮಾನ್ಯವಾಗಿ ಬೆಳೆಗಳಾದ್ಯಂತ ಸಾಂಪ್ರದಾಯಿಕ ತಳಿಗಳಿಗಿಂತ ಶೇಕಡಾ 20-25  ರಷ್ಟು ಹೆಚ್ಚಿನ ಇಳುವರಿಯನ್ನು ನೀಡುತ್ತವೆ ಎಂದು ಮನವರಿಕೆಯಾಗುವಂತೆ ಸಾಬೀತುಪಡಿಸಲಾಗಿದೆ. ಹೈಬ್ರಿಡ್ ತಂತ್ರಜ್ಞಾನವು ದೇಶದಲ್ಲಿ ರೇಪ್ಸೀಡ್ ಸಾಸಿವೆ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ.

ಏಕೆ ಬರ್ನೇಸ್/ಬಾರ್ಸ್ಟಾರ್ ವ್ಯವಸ್ಥೆ :

ಹೈಬ್ರಿಡ್ ಬೀಜ ಉತ್ಪಾದನೆಗೆ ಸಮರ್ಥ ಪುರುಷ ಸಂತಾನಹೀನತೆ ಮತ್ತು ಫಲವತ್ತತೆ ಪುನಃಸ್ಥಾಪನೆ ವ್ಯವಸ್ಥೆಯ ಅಗತ್ಯವಿದೆ. ಸಾಸಿವೆಯಲ್ಲಿ ಪ್ರಸ್ತುತ ಲಭ್ಯವಿರುವ ಸಾಂಪ್ರದಾಯಿಕ ಸೈಟೋಪ್ಲಾಸ್ಮಿಕ್-ಜೆನೆಟಿಕ್ ಪುರುಷ ಸಂತಾನಹೀನ ವ್ಯವಸ್ಥೆಯು ಕೆಲವು ಪರಿಸರ ಪರಿಸ್ಥಿತಿಗಳಲ್ಲಿ ಸಂತಾನಹೀನತೆಯ ವಿಘಟನೆಯ ಮಿತಿಗಳನ್ನು ಹೊಂದಿದೆ, ಇದು ಬೀಜದ ಶುದ್ಧತೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಕೃಷಿ ಸಚಿವಾಲಯವು ಕಛೇರಿಯ ಜ್ಞಾಪಕ ಪತ್ರ ಸಂಖ್ಯೆ. 15-13/2014-SD- IV ರ ಮೂಲಕ  2014 ರಲ್ಲಿ ಬೀಜ ಕಾಯ್ದೆ 1966 ರ  ಸೆಕ್ಷನ್ 6(9) ಅಡಿಯಲ್ಲಿ ರೇಪ್ಸೀಡ್ ಮತ್ತು ಸಾಸಿವೆಗಳ ಹೈಬ್ರಿಡ್ ಬೀಜಗಳ ಸಾಮಾನ್ಯ ಶುದ್ಧತೆಯ ಗುಣಮಟ್ಟವನ್ನು 95% ರಿಂದ 85% ಕ್ಕೆ ಇಳಿಕೆ ಮಾಡಿತು.
ತಳೀಯವಾಗಿ ವಿನ್ಯಾಸಗೊಳಿಸಿದ ಬರ್ನೇಸ್/ಬಾರ್‌ಸ್ಟಾರ್ ವ್ಯವಸ್ಥೆಯು ಸಾಸಿವೆಯಲ್ಲಿ ಹೈಬ್ರಿಡ್ ಬೀಜ ಉತ್ಪಾದನೆಗೆ  ಸಮರ್ಥ ಮತ್ತು ದೃಢವಾದ ಪರ್ಯಾಯ ವಿಧಾನವನ್ನು ಒದಗಿಸುತ್ತದೆ ಮತ್ತು ಇದನ್ನು ಕೆನಡಾ, ಆಸ್ಟ್ರೇಲಿಯಾ ಮತ್ತು ಅಮೆರಿಕದಂತಹ ದೇಶಗಳಲ್ಲಿ ಹಲವು ದಶಕಗಳಿಂದ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಭಾರತದಲ್ಲಿ, ಸೆಂಟರ್ ಫಾರ್ ಜೆನೆಟಿಕ್ ಮ್ಯಾನಿಪ್ಯುಲೇಷನ್ ಆಫ್ ಕ್ರಾಪ್ ಪ್ಲಾಂಟ್ಸ್ (CGMCP), ದೆಹಲಿ ಸೌತ್ ಕ್ಯಾಂಪಸ್, ನವದೆಹಲಿ ವಿಶ್ವವಿದ್ಯಾಲಯವು ಬಾರ್ನೇಸ್/ಬಾರ್‌ಸ್ಟಾರ್ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳೊಂದಿಗೆ ಯಶಸ್ವಿ ಪ್ರಯತ್ನವನ್ನು ಮಾಡಿದೆ.

DMH 11 ಗಣನೀಯ ಪ್ರಮಾಣದ ಇಳುವರಿ ಲಾಭ ಹೊಂದಿದೆಯೇ? 

DMH-11 ಅನ್ನು ಮೂರು ವರ್ಷಗಳ ಕಾಲ ರಾಷ್ಟ್ರೀಯ ಪರೀಕ್ಷೆ ವರುಣಾ ಮೂಲಕ ಭಾರತದಲ್ಲಿ ಅನೇಕ ಸ್ಥಳಗಳಲ್ಲಿ ಸೀಮಿತ ಕ್ಷೇತ್ರ ಪ್ರಯೋಗಗಳಲ್ಲಿ ಪರೀಕ್ಷಿಸಲಾಗಿದೆ. ನಿಗದಿತ ಮಾರ್ಗಸೂಚಿಗಳು ಮತ್ತು ಅನ್ವಯವಾಗುವ ನಿಯಮಗಳ ಪ್ರಕಾರ ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರಭಾವದ ಬಗ್ಗೆ ಅಂದಾಜಿಸಲು ಕ್ಷೇತ್ರ ಪ್ರಯೋಗಗಳನ್ನು ನಡೆಸಲಾಯಿತು. DMH-11 ರಾಷ್ಟ್ರೀಯ ಪರೀಕ್ಷೆಗಿಂತ  ಸರಿಸುಮಾರು ಶೇಕಡಾ 28 ರಷ್ಟು ಹೆಚ್ಚು ಇಳುವರಿಯನ್ನು ತೋರಿಸಿದೆ. 

ತಜ್ಞರ ಅಭಿಪ್ರಾಯ, ಜೈವಿಕ ಸುರಕ್ಷತೆ ಡೇಟಾ ಪರೀಕ್ಷೆಗಳು ಮತ್ತು ಸುದೀರ್ಘ ವೈಜ್ಞಾನಿಕ ಚರ್ಚೆಗಳ ನಂತರ, ಜೆನೆಟಿಕ್ ಇಂಜಿನಿಯರಿಂಗ್ ಮೌಲ್ಯಮಾಪನ ಸಮಿತಿಯ 147 ನೇ ಸಭೆಯಲ್ಲಿ, DMH 11 ಮತ್ತು ಅದರ ಮೂಲ ತಳಿಗಳನ್ನು ಪಾರಿಸರಿಕ ಆಳವಡಿಕೆಗಾಗಿ ಬಿಡುಗಡೆ ಮಾಡಲಾಯಿತು. ಆದಾಗ್ಯೂ, ಈ ಹೈಬ್ರಿಡ್ ತಳಿಯನ್ನು ಒಂದು ದಶಕಕ್ಕಿಂತಲೂ ಹೆಚ್ಚು ಅವಧಿಗೆ ಮೌಲ್ಯಮಾಪನ ಮಾಡಲಾಗಿದೆ, ICAR ಮಾರ್ಗಸೂಚಿಗಳ ಪ್ರಕಾರ ರಾಪ್ಸೀಡ್ ಮತ್ತು ಸಾಸಿವೆಯ ಮೇಲಿನ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಯಡಿಯಲ್ಲಿ ರಾಷ್ಟ್ರೀಯ ಪ್ರಯೋಗಗಳಲ್ಲಿ ಪ್ರಸ್ತುತ ಬೆಳೆದ ಹೈಬ್ರಿಡ್ ಗಳು ಮತ್ತು ಪ್ರಭೇದಗಳಿಗೆ ಹೋಲಿಸಿ ಇವುಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸುವುದು ಪ್ರಸ್ತುತವಾಗಿದೆ, ಅಲ್ಲದೆ  DMH 11 ಗಣನೀಯವಾಗಿ ಉತ್ಕೃಷ್ಟವೆಂದು ಕಂಡುಬಂದರೆ ಮಾತ್ರ, ಅದನ್ನು ವಾಣಿಜ್ಯ ಕೃಷಿಗಾಗಿ ಬಿಡುಗಡೆ ಮಾಡಲಾಗುತ್ತದೆ. ಈ ರೀತಿ GEAC ನಿಂದ ನಿಖರವಾಗಿ ಶಿಫಾರಸು ಮಾಡಲ್ಪಟ್ಟಿದೆ. ಆದಾಗ್ಯೂ, ತಂತ್ರಜ್ಞಾನವನ್ನು ವಿರೋಧಿಸುವಂತಹ ಕೆಲವು ಗುಂಪಿನ ಜನರು ಅನಗತ್ಯವಾಗಿ ಇಳುವರಿ ಪ್ರಯೋಜನಗಳ ಬಗ್ಗೆ ಚರ್ಚೆಗೆ ಮುಂದಾಗುತ್ತಿದ್ದಾರೆ. DMH 11, ಖಾದ್ಯ ತೈಲ ಆಮದು ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಯಾರೂ ಕಡಾಖಂಡಿತವಾಗಿ ಪ್ರತಿಪಾದಿಸುತ್ತಿಲ್ಲ, ಆದಾಗ್ಯೂ, ಹೈಬ್ರಿಡ್ DMH 11 ರ ವಾಣಿಜ್ಯ ಬಿಡುಗಡೆಯು ಪ್ರಯೋಗಗಳಲ್ಲಿ ಪ್ರಸ್ತುತ ಬಳಸಲಾಗುವ ಪರೀಕ್ಷಾ ಪ್ರಭೇದಗಳು/ ಮಿಶ್ರತಳಿಗಳ ಹೋಲಿಕೆಯಲ್ಲಿ ಅದರ ಪರೀಕ್ಷೆ ಮತ್ತು ಕಾರ್ಯಕ್ಷಮತೆಯನ್ನು ಆಧರಿಸಿದೆ. DMH 11 ರ ಪೋಷಕ ತಳಿಗಳ ಪಾರಿಸರಿಕ ಬಿಡುಗಡೆಯು ಸಾಸಿವೆ ತಳಿಗಾರರಿಗೆ ದೃಢವಾದ ಮತ್ತು ಬಹುಮುಖ ತಳೀಯವಾಗಿ ವಿನ್ಯಾಸಗೊಳಿಸಲಾದ ಬರ್ನೇಸ್/ಬಾರ್ಸ್ಟಾರ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಾಸಿವೆಯಲ್ಲಿ ಕಡಿಮೆ ಉತ್ಪಾದಕತೆ ಮತ್ತು ಭವಿಷ್ಯದಲ್ಲಿ ಖಾದ್ಯ ತೈಲದ ಆಮದು ಸಮಸ್ಯೆಯನ್ನು ಪರಿಹರಿಸುವಲ್ಲಿ ಇದು ಗುರುತರ ಹೆಜ್ಜೆಯಾಗಲಿದೆ

ಜೈವಿಕ ಸುರಕ್ಷತೆ ಕಾಳಜಿ:
ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಬಳಸಲಾದ ಬರ್ನೇಸ್, ಬಾರ್ಸ್ಟಾರ್ ಮತ್ತು ಬಾರ್ ಎಂಬ ಮೂರು ವಂಶವಾಹಿಗಳ ಸುರಕ್ಷತೆಯ ಬಗ್ಗೆ ಕೂಡ ಇದನ್ನು ವಿರೋಧಿಸುವ ಗುಂಪು ಪ್ರಶ್ನೆ ಮಾಡುತ್ತಿದೆ. ವಿಷಕಾರಿತನ, ಅಲರ್ಜಿ, ಸಂಯೋಜನಾ ವಿಶ್ಲೇಷಣೆ, ಕ್ಷೇತ್ರ ಪ್ರಯೋಗಗಳು ಮತ್ತು GM ಸಾಸಿವೆ ತಳಿಗಳ ಪರಿಸರ ಸುರಕ್ಷತಾ ಅಧ್ಯಯನಗಳ ಮೇಲೆ ನಡೆಸಿದ ವ್ಯಾಪಕ ಅಧ್ಯಯನಗಳು ಮತ್ತು ಅವುಗಳ ಟ್ರಾನ್ಸ್ಜೆನಿಕ್ ಅಲ್ಲದ ಹೋಲಿಕೆದಾರರು ಕೃಷಿಗೆ ಮತ್ತು ಆಹಾರಕ್ಕಾಗಿ ಪಶು ಆಹಾರದ ರೂಪದಲ್ಲಿ ಬಳಸಲು ಸುರಕ್ಷಿತವೆಂದು ಪುರಾವೆಗಳನ್ನು ಒದಗಿಸಿದ್ದಾರೆ ಎಂದು ಉಲ್ಲೇಖಿಸುವುದು ಸೂಕ್ತವಾಗಿದೆ.  ಪ್ರಯೋಗಗಳ ಸಮಯದಲ್ಲಿ ದಾಖಲಾದ ಮಾಹಿತಿಯ ಪ್ರಕಾರ ಟ್ರಾನ್ಸ್ಜೆನಿಕ್ ರೇಖೆಗಳಿಗೆ ಜೇನುನೊಣಗಳ ಸಂಪರ್ಕವು  ನಾನ್-ಟ್ರಾನ್ಸ್ಜೆನಿಕ್ ಸಹವರ್ತಿಗಳನ್ನು ಹೋಲುತ್ತದೆ”ಎಂದು ಕೂಡಾ ಪ್ರಕಟಣೆಯಲ್ಲಿ ಹೇಳಲಾಗಿದೆ.

RCGM ಮತ್ತು GEAC ಅನುಮೋದಿಸಿದ ಶಿಷ್ಟಾಚಾರಗಳ ಪ್ರಕಾರ ವಿವಿಧ ಸ್ಥಳಗಳಲ್ಲಿ ಮೂರು ಬೆಳವಣಿಗೆಯ ಋತುಗಳಲ್ಲಿ ನಡೆಸಿದ BRL-I ಮತ್ತು BRL-II ಪ್ರಯೋಗಗಳ ಸಮಯದಲ್ಲಿ ದಾಖಲಾದ ಮಾಹಿತಿಯ ಪ್ರಕಾರ ಟ್ರಾನ್ಸ್ಜೆನಿಕ್ ರೇಖೆಗಳಲ್ಲಿ ಇರುವ ಜೇನುನೊಣಗಳು ನಾನ್-ಟ್ರಾನ್ಸ್ಜೆನಿಕ್  ರೇಖೆಗಳಲ್ಲಿ ಇರುವ ಜೇನುನೊಣಗಳನ್ನು ಹೋಲುತ್ತವೆ ಎಂದು ತಿಳಿದುಬಂದಿದೆ . ಜೈವಿಕ ಸುರಕ್ಷತೆ ಸಂಶೋಧನಾ ಮಟ್ಟದ ಪ್ರಯೋಗಗಳ ಸಮಯದಲ್ಲಿ ಉತ್ಪತ್ತಿಯಾಗುವ ಜೈವಿಕ ಸುರಕ್ಷತೆ ದತ್ತಾಂಶ ಸಂಗ್ರಹಣೆಯಲ್ಲಿ GEAC ನಿಂದ ಅನುಮೋದಿಸಲಾದ ಶಿಷ್ಟಾಚಾರಗಳನ್ನು ಅನುಸರಿಸಲಾಗಿದ್ದು, ಅಲ್ಲಿ ಎಲ್ಲಾ ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಹಾರಕ್ಕೂ ಗಮನ ಹರಿಸಲಾಗಿದೆ. ಜೇನು ಉತ್ಪಾದನೆಯಲ್ಲಿನ ಹೆಚ್ಚಳ ಮತ್ತು ಜೇನುನೊಣಗಳ ಸಂಖ್ಯೆಯ ಮೇಲೆ ಅಂತರಾಷ್ಟ್ರೀಯ ಸ್ಥಾನಮಾನವನ್ನು ಆಧರಿಸಿ ಪ್ರಸ್ತುತ ಅನುಮೋದನೆಯನ್ನು ನೀಡಲಾಗಿದೆ, ವಿಶೇಷವಾಗಿ ಬರ್ನೇಸ್/ಬಾರ್ಸ್ಟಾರ್ ಆಧಾರಿತ ಮಿಶ್ರತಳಿಗಳ ಅಡಿಯಲ್ಲಿ 95 ಪ್ರತಿಶತ ರಾಪ್ಸೀಡ್ ಪ್ರದೇಶವನ್ನು ಹೊಂದಿರುವ ಕೆನಡಾಗೆ ಅನುಮೋದನೆ ಅನ್ವಯಿಸುವುದು. ಆದಾಗ್ಯೂ, ಮುನ್ನೆಚ್ಚರಿಕೆಯ ತತ್ವದ ರೂಪದಲ್ಲಿ  GEAC ಬಿಡುಗಡೆಯಾದ ಮೊದಲ ಎರಡು ವರ್ಷಗಳಲ್ಲಿ ಜೇನುಹುಳುಗಳು ಮತ್ತು ಪರಾಗಸ್ಪರ್ಶಕಗಳ ಮೇಲೆ GM ಸಾಸಿವೆಯ ಪರಿಣಾಮದ ದತ್ತಾಂಶ ಸಂಗ್ರಹಣೆಗೆ ಡೆವಲಪರ್‌ಗಳಿಗೆ ನಿರ್ದೇಶಿಸಲಾಗಿದೆ.

 DMH 11 MNC ಗಳಿಗೆ ಮಣೆ ಹಾಕಲು ಕಳೆನಾಶಕ ವನ್ನು ಉತ್ತೇಜಿಸುತ್ತದೆಯೇ: 

DMH11 ಕಳೆನಾಶಕ  ಬಳಕೆಯನ್ನು ಉತ್ತೇಜಿಸುತ್ತದೆ, ತನ್ಮೂಲಕ ಕಳೆನಾಶಕ  ತಯಾರಿಕೆಗೆ  MNC ಗಳಿಗೆ ಒಲವು ತೋರುತ್ತಿದೆ ಎಂಬುದು ವಿರೋಧಿಗಳಿಂದ ಮಾಡಲ್ಪಟ್ಟ ಮತ್ತೊಂದು ಆರೋಪವಾಗಿದೆ. ಎರಡು ಕಾರಣಗಳಿಗಾಗಿ ಕಳೆನಾಶಕ  ಗ್ಲುಫೋಸಿನೇಟ್ ‌ಗೆ ಪ್ರತಿರೋಧವನ್ನು ನೀಡುವ ಬಾರ್ ಜೀನ್ ಅನ್ನು GM ಸಾಸಿವೆಯಲ್ಲಿ ಬಳಸಲಾಗಿದೆ, ಮೊದಲನೆಯದಾಗಿ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಅಂಗಾಂಶ ಕೃಷಿಯಲ್ಲಿ ಆಯ್ಕೆ ಮಾಡಬಹುದಾದ ಮಾರ್ಕರ್ ಆಗಿ ಮತ್ತು ಎರಡನೆಯದಾಗಿ, ಬರ್ನೇಸ್ ಹೆಣ್ಣು ಮತ್ತು ಬಾರ್ಸ್ಟಾರ್ ಗಂಡು ರೇಖೆಗಳ ಕಳೆನಾಶಕ  ಸಹಿಷ್ಣುತೆಯ ಲಕ್ಷಣವನ್ನು ಹೈಬ್ರಿಡ್ ಬೀಜ ಉತ್ಪಾದನಾ ಕಾರ್ಯಕ್ರಮದಲ್ಲಿ ಮಾತ್ರ ಬಳಸಿಕೊಳ್ಳಬೇಕು ಮತ್ತು ಹೈಬ್ರಿಡ್ ‌ಗಳ ವಾಣಿಜ್ಯ ಕೃಷಿಯಲ್ಲಿ ಅಲ್ಲ ಎಂಬುದಕ್ಕಾಗಿ. ಏಕೆಂದರೆ ಈ ಗುಣಲಕ್ಷಣವನ್ನು ಅರ್ಜಿದಾರರು ದಾಖಲಾತಿಯಲ್ಲಿ ನೋಂದಾಯಿಸಿಲ್ಲ. ಅಂತೆಯೇ, ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಲೇಬಲ್ ಕ್ಲೈಮ್ ವಿಸ್ತರಣೆಯನ್ನು ಪಡೆದ ನಂತರ ಹೈಬ್ರಿಡ್ ಬೀಜ ಉತ್ಪಾದನೆಗೆ ಕಳೆನಾಶಕ ಬಳಕೆಗೆ GEAC ಅನುಮೋದನೆ ನೀಡಿದೆ,  ಇದನ್ನು ವಿಶೇಷವಾಗಿ ಅನುಮೋದನೆಯಲ್ಲಿ ಉಲ್ಲೇಖಿಸಲಾಗಿದೆ. 

ಕಳೆನಾಶಕ ಸಹಿಷ್ಣುತೆಯಿಲ್ಲದಿದ್ದರೂ ಸಹ, ಸುಮಾರು ರೂ. 7000 ಕೋಟಿ ಮೊತ್ತದ 15000 ಟನ್ ತಾಂತ್ರಿಕ ದರ್ಜೆಯ ಕಳೆನಾಶಕಗಳನ್ನು ಭಾರತೀಯ ಕೃಷಿಯಲ್ಲಿ  ಅಕ್ಕಿ, ಗೋಧಿ ಮತ್ತು ಸೋಯಾಬೀನ್ ‌ನಂತಹ ಬೆಳೆಗಳಲ್ಲಿ ಬಳಸಲಾಗುತ್ತಿದೆ ಎಂಬುದು ಗಮನಾರ್ಹ ಸಂಗತಿ. ಈ ಎಲ್ಲಾ ಕಳೆನಾಶಕಗಳು ವಿದೇಶಿ ಕಂಪನಿಗಳ ಒಡೆತನದಲ್ಲಿವೆ. ಎಂದರೆ ಎಂಎನ್‌ಸಿಗೆ ಒಲವು ತೋರಲಾಗುತ್ತಿದೆ ಎಂದರ್ಥವೆ? ವಿರೋಧಿಗಳ ಈ ಆತಂಕವು ತರ್ಕಬದ್ಧವಾಗಿಲ್ಲ. 

ರಾಷ್ಟ್ರೀಯ ಮತ್ತು ಜಾಗತಿಕ ದೃಷ್ಟಿಕೋನದಲ್ಲಿ ಟ್ರಾನ್ಸ್ ಜೆನಿಕ್ ಬೆಳೆಗಳು:

ಜಾಗತಿಕವಾಗಿ, 30 ಕ್ಕೂ ಹೆಚ್ಚು ದೇಶಗಳಲ್ಲಿ 195 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ GM ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹಲವಾರು ದೇಶಗಳಲ್ಲಿ, GM ತಳಿಗಳ ಅಳವಡಿಕೆ ದರಗಳು ತುಂಬಾ ಹೆಚ್ಚಿವೆ; ಕೆಲವೆಡೆ 95% ಕ್ಕಿಂತ ಹೆಚ್ಚಾಗಿದೆ. ಜಾಗತಿಕವಾಗಿ GM ಬೆಳೆಗಳ ಬಳಕೆಯಿಂದ ಪ್ರತಿಕೂಲ ಪರಿಣಾಮಗಳು ಆಗಿರುವುದರ ವರದಿಯಾಗಿಲ್ಲ. ಅಮೇರಿಕ, ಅರ್ಜೆಂಟೀನಾ ಮತ್ತು ಬ್ರೆಜಿಲ್ ನಂತಹ ಅಧಿಕ ಜಿ ಎಂ ತಳಿಗಳನ್ನು ಬೆಳೆಯುವಂತಹ ರಾಷ್ಟ್ರಗಳು ಐರೋಪ್ಯ ಒಕ್ಕೂಟ ಸೇರಿದಂತೆ ಹಲವಾರು ದೇಶಗಳಿಗೆ ಮೆಕ್ಕೆ ಜೋಳ, ಸೋಯಾಯಬೀನ ನಂತಹ ಹಲವು ಬೆಳೆಗಳನ್ನು ಪ್ರಾಣಿ ಆಹಾರದ ರೂಪದಲ್ಲಿ ರಫ್ತು ಮಾಡುತ್ತಿವೆ ಮತ್ತು ಜಿ ಎಂ  ಬೆಳೆಗಳ ರಫ್ತು ಮೂಲಕ ಸಾಕಷ್ಟು ವಿದೇಶ ವಿನಿಮಯ ಗಳಿಸುತ್ತಿದ್ದಾರೆ.  ಐರೋಪ್ಯ ಒಕ್ಕೂಟಕ್ಕೆ ಪ್ರಮುಖವಾಗಿ ಬಾಸುಮತಿ ಅಕ್ಕಿ ರಫ್ತು ಮಾಡಲಾಗುತ್ತಿರುವ ಪ್ರಮುಖ ಆಹಾರ ಧಾನ್ಯವಾಗಿದೆ. ಭಾರತ ಸರ್ಕಾರ ಈಗಾಗಲೇ. ರಫ್ತು ಮಾರುಕಟ್ಟೆಯನ್ನು ಪರಿಗಣಿಸಿ ಬಾಸ್ಮತಿಯಲ್ಲಿ ಯಾವುದೇ ಜೈವಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡದಿರಲು ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಸ್ತುತ, ಸಮಸ್ಯೆಯು GM ಸಾಸಿವೆಗೆ ಸಂಬಂಧಿಸಿದ್ದಾಗಿದ್ದು, ಭಾರತವು ಈಗಾಗಲೇ ತನ್ನ ದೇಶೀಯ ಅಗತ್ಯಗಳಿಗಾಗಿ GM ಕೆನೊಲಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ, ಬಾರ್ನೇಸ್/ಬಾರ್ಸ್ಟಾರ್ ಆಧಾರಿತ ಹೈಬ್ರಿಡ್ ಗಳನ್ನು ಬಳಸುವ ಪ್ರಸ್ತುತ ತಂತ್ರಜ್ಞಾನವು ರಾಪ್ಸೀಡ್ ಸಾಸಿವೆ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಖಾದ್ಯ ತೈಲಗಳ ಆಮದನ್ನು ಕಡಿಮೆ ಮಾಡುತ್ತದೆ. ಇದು ಐರೋಪ್ಯ ಒಕ್ಕೂಟದ ರಫ್ತಿನ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದು  ವಿವೇಚನೆಗೆ ಮೀರಿದ್ದಾಗಿದೆ. ಇದು ಮತ್ತೊಮ್ಮೆ ಇದನ್ನು ವಿರೋಧಿಸುತ್ತಿರುವವರ ತಿಳುವಳಿಕೆಯ ಕೊರತೆಯನ್ನು ಎತ್ತಿ ತೋರುತ್ತದೆ.

ಮುಂದೆ ಉಜ್ವಲ ಭವಿಷ್ಯವಿದೆ :

ಐ ಸಿ ಎ ಆರ್ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾಲಯಗಳು ಜೈವಿಕ ಮತ್ತು ಅಜೈವಿಕ ಒತ್ತಡ ಸಹಿಷ್ಣುತೆ ಹೊಂದಿದ, ಇಳುವರಿ ಮತ್ತು ಗುಣಮಟ್ಟ ಸುಧಾರಣೆಗಾಗಿ ಬೇರೆ ಬೇರೆ ತಳಿಯ ಹತ್ತಿ, ಪಪ್ಪಾಯಿ, ಬದನೆ, ಬಾಳೆ, ಕಡಲೆ, ತೊಗರಿ ಕಾಳು, ಆಲೂಗಡ್ಡೆ, ಜೋಳ, ಬ್ರಾಸಿಕಾ, ಅಕ್ಕಿ, ಅಗಸೆ, ಗೋಧಿ ಮತ್ತು ಕಬ್ಬು ಮುಂತಾದ 13 ಬೆಳೆಗಳಲ್ಲಿ ವಿಭಿನ್ನ ಜಿ ಎಂ ತಳಿಗಳ ಅಭಿವೃದ್ಧಿಯಲ್ಲಿ ಗಾಢವಾಗಿ ತೊಡಗಿಸಿಕೊಂಡಿವೆ.  2006 ರಿಂದ ಅದರ "ಕ್ರಿಯಾತ್ಮಕ ಜೀನೋಮಿಕ್ಸ್ ಮತ್ತು ಜೀನೋಮ್ ಮಾರ್ಪಾಡುಗಳ ನೆಟ್ವರ್ಕ್ ಯೋಜನೆ" ಮೂಲಕ 11 ಸಂಸ್ಥೆಗಳನ್ನು ಇದು ಒಳಗೊಂಡಿದೆ.

ಪ್ರಸ್ತುತ ಶಿಮ್ಲಾದ ICAR-ಸೆಂಟ್ರಲ್ ಪೊಟಾಟೊ ರಿಸರ್ಚ್ ಇನ್ಸ್ಟಿಟ್ಯೂಟ್,  ಅಭಿವೃದ್ಧಿಪಡಿಸಿದ ಲೇಟ್ ಬ್ಲೈಟ್ ಶಿಲೀಂಧ್ರ ನಿರೋಧಕ ಆಲೂಗೆಡ್ಡೆ, ನವದೆಹಲಿಯ ICAR-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪ್ಲಾಂಟ್ ಬಯೋಟೆಕ್ನಾಲಜಿ ಅಭಿವೃದ್ಧಿಪಡಿಸಿದ ತೊಗರಿಯಲ್ಲಿ ಕಾಯಿ ಕೊರೆಯುವ ಪ್ರತಿರೋಧಕತೆಯನ್ನು ಹೊಂದಿದ ತಳಿ, ಕಾನ್ಪುರದ ಐಸಿಎಆರ್-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಲ್ಸಸ್ ರಿಸರ್ಚ್ ಅಭಿವೃದ್ಧಿಪಡಿಸಿದ ಕೀಟ ನಿರೋಧಕ ಕಡಲೆ ಮತ್ತು ತಿರ್ಚುರಪಳ್ಳಿಯ ಐಸಿಎಆರ್- ರಾಷ್ಟ್ರೀಯ ಬಾಳೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ಪ್ರೊ-ವಿಟಮಿನ್ ಸಮೃದ್ಧ ಬಾಳೆಹಣ್ಣು ಹೀಗೆ     ಪ್ರಸ್ತುತ ನಾಲ್ಕು ಬೆಳೆಗಳಲ್ಲಿ ವಿಬಿನ್ನ ಗುಣಲಕ್ಷಣಗಳನ್ನು ಹೊಂದಿರುವ ಜಿಎಂ ಉತ್ಪನ್ನಗಳು ಸಂಭವನೀಯ ಆಯ್ಕೆ ಹಂತದಿಂದ    ಜೈವಿಕ ಸುರಕ್ಷತೆಯವರೆಗೆ ಎಲ್ಲಾ ಜೈವಿಕ ಸುರಕ್ಷತೆ ಮಾರ್ಗಸೂಚಿಗಳನ್ನು ಅನುಸರಿಸಿ ಸಂಶೋಧನಾ ಮಟ್ಟದ ಪ್ರಯೋಗಗಳನ್ನು ಕೈಗೊಳ್ಳುತ್ತಿರುವ ವಿವಿಧ ಹಂತಗಳಲ್ಲಿವೆ. 

ಇದಲ್ಲದೆ, ಹಿಂದಿನ ಯೋಜನೆಯಿಂದ ದೊರೆತ ಫಲಿತದೊಂದಿಗೆ ಮುನ್ನಡೆ ಸಾಧಿಸಲು, ICAR ಜೈವಿಕ ತಂತ್ರಜ್ಞಾನದ ಬೆಳೆಗಳ ಮೇಲಿನ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಯಲ್ಲಿ ಒಂದು ನೆಟ್‌ವರ್ಕ್ ಪ್ರಾಜೆಕ್ಟ್ ಪ್ರಾರಂಭಿಸಿದೆ, ಇದು 2021- 26 ರ ಯೋಜನಾ ಅವಧಿಯಲ್ಲಿ ರೂ. 24.75 ಕೋಟಿ ವೆಚ್ಚದಲ್ಲಿ ಆರು ಬೆಳೆಗಳ ಉದ್ದೇಶಿತ ಗುಣಲಕ್ಷಣಗಳಿಗಾಗಿ ಸಂಶೋಧನೆ ಮತ್ತು ಸಂಬಂಧವಿಲ್ಲದ ವ್ಯಕ್ತಿ/ಸಂಸ್ಥೆಯಿಂದ ಮೌಲ್ಯಮಾಪನ ಮಾಡುವಂತಹ ಸೌಲಭ್ಯ ಮತ್ತು ಜೈವಿಕ ಸುರಕ್ಷತೆ ಅಧ್ಯಯನಗಳನ್ನು ಹೊಂದಿದೆ.  ಆದ್ದರಿಂದ, ಭಾರತದ ರೈತರು ಮತ್ತು ಗ್ರಾಹಕರು ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಈ ಮಹತ್ವದ ನಿರ್ಧಾರದಿಂದ ಟ್ರಾನ್ಸ್‌ಜೆನಿಕ್ ಅಭಿವೃದ್ಧಿಯ ಕ್ಷೇತ್ರದಲ್ಲಿ ಸಂಶೋಧನೆಯ ಬಗ್ಗೆ ಅನುಭವಿ ಮತ್ತು ಯುವ ಉದಯೋನ್ಮುಖ ವಿಜ್ಞಾನಿಗಳ ಮನಸ್ಸಿನಲ್ಲಿ ಸಕಾರಾತ್ಮಕತೆಯನ್ನು ಸೃಷ್ಟಿಸಲೇಬೇಕಾದ ಸಮಯವಾಗಿದೆ.  GM ಸಾಸಿವೆಯ ಅನುಮೋದನೆಯ ಸರ್ಕಾರದ ಈ ಮಹತ್ವಪೂರ್ಣ  ತೀರ್ಮಾನ  ತಾರ್ಕಿಕ ಅಂತ್ಯವನ್ನು ಕಲ್ಪಿಸಿದೆ.

****
                                      


(Release ID: 1886357) Visitor Counter : 268


Read this release in: English , Urdu , Hindi , Marathi