ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯರ ಭವಿಷ್ಯದ ಆರೋಗ್ಯ ರಕ್ಷಣೆಗಾಗಿ ಸೌಕರ್ಯ ವ್ಯವಸ್ಥೆಗಳನ್ನು ಸಿದ್ಧಗೊಳಿಸಿದೆ: ಡಾ. ಸುಭಾಸ್ ಸರ್ಕಾರ್
ರೋಗದ ಚಿಕಿತ್ಸೆಯಿಂದ ಮನುಕುಲದ ಸ್ವಾಸ್ಥ್ಯಕ್ಕೆ ಆರೋಗ್ಯ ಮಾದರಿಯಲ್ಲಿ ಬದಲಾವಣೆಯಾಗಿದೆ: ಡಾ. ಸುಭಾಸ್ ಸರ್ಕಾರ್
ಎಲ್ಲರಿಗೂ ಸುಲಭವಾಗಿ, ಲಭ್ಯವಾಗುವಂತೆ ಮತ್ತು ಕೈಗೆಟಕುವಂತೆ ಮಾಡುವ ಮೂಲಕ ಸರ್ಕಾರವು ಆರೋಗ್ಯ ರಕ್ಷಣೆಯಲ್ಲಿ ಸರಳ ವಿಧಾನವನ್ನು ಅಳವಡಿಸಿದೆ: ಡಾ. ಸುಭಾಸ್ ಸರ್ಕಾರ್
ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದು ಮತ್ತು ಆರೋಗ್ಯ ರಕ್ಷಣೆಯಲ್ಲಿ ಸುಧಾರಣೆಗಳನ್ನು ತರುವುದು ಮೋದಿ ಸರ್ಕಾರದ ಮೂಲ ತತ್ವವಾಗಿದೆ: ಡಾ. ಸುಭಾಸ್ ಸರ್ಕಾರ್
Posted On:
23 DEC 2022 4:31PM by PIB Bengaluru
ಪ್ರಮುಖ ಮುಖ್ಯಾಂಶಗಳು:
- 2014 ರಲ್ಲಿ ಹೆರುವ ಸಂದರ್ಭದಲ್ಲಿ ತಾಯಂದಿರ ಮರಣ ಅನುಪಾತ ಪ್ರತಿ ಲಕ್ಷಕ್ಕೆ 130 ಇತ್ತು ಮತ್ತು 2020 ರಲ್ಲಿ ಇದು ಪ್ರತಿ ಲಕ್ಷಕ್ಕೆ 97 ಆಗಿದೆ.
- ಶಿಶುಗಳ ಮರಣ ಅನುಪಾತ ಕ್ರಮವಾಗಿ 2014 ರಲ್ಲಿ 39 ಇತ್ತು ಮತ್ತು 2022 ರಲ್ಲಿ ಪ್ರತಿ ಇದು 1000 ಜೀವಂತ ಜನನಗಳಿಗೆ 28ಕ್ಕೆ ಇಳಿದಿದೆ.
- 2014 ರಲ್ಲಿದ್ದ ಜೀವಂತ ಜನನ ಸಂದರ್ಭದಲ್ಲಿ ಮರಣ ಅನುಪಾತ 26 ಸಂಖ್ಯೆಯು 2020 ರಲ್ಲಿ 20 ಕ್ಕೆಇಳಿದಿದೆ ಜೀವಂತ ಜನನಗಳಿಗೆ ಮತ್ತು 2014 ರಲ್ಲಿದ್ದ 5 ವರ್ಷದೊಳಗಿನ ಮರಣ ಅನುಪಾತ 45 ಸಂಖ್ಯೆಯು 2020 ರಲ್ಲಿ 32 ಕ್ಕೆಇಳಿದಿದೆ
- ಕೇಂದ್ರ ಸರ್ಕಾರವು ಸುಮಾರು 10.74 ಕೋಟಿ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷಕ್ಕೆ 5 ಲಕ್ಷದವರೆಗೆ ಆರೋಗ್ಯ ರಕ್ಷಣೆಯನ್ನು ಒದಗಿಸಿದೆ.
- ಇಲ್ಲಿಯವರೆಗೆ ನೀಡಲಾದ ಆಯುಷ್ಮಾನ್ ಕಾರ್ಡ್‌ಗಳ ಒಟ್ಟು ಸಂಖ್ಯೆ 21.24 ಕೋಟಿ ಮತ್ತು ಈ ಯೋಜನೆಯಡಿಯಲ್ಲಿ ಒಟ್ಟು ಆಸ್ಪತ್ರೆಗಳ ದಾಖಲಾತಿಗಳ ಸಂಖ್ಯೆ 4.22 ಕೋಟಿ.
ಕೇಂದ್ರ ಶಿಕ್ಷಣ ರಾಜ್ಯ ಖಾತೆ ಸಚಿವ ಡಾ. ಸುಭಾಸ್ ಸರ್ಕಾರ್ ಅವರು ಇಂದು ನವದೆಹಲಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ಆರೋಗ್ಯ ಕ್ಷೇತ್ರದ ಪರಿವರ್ತನೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಕೇಂದ್ರ ಸರ್ಕಾರವು ಪೂರ್ವಭಾವಿ ವಿಧಾನವನ್ನು ಅಳವಡಿಸಿಕೊಂಡಿದೆ ಮತ್ತು ಇದು ಆರೋಗ್ಯ ಕ್ಷೇತ್ರದಲ್ಲಿ ಒಂದು ಮಾದರಿ ಬದಲಾವಣೆಯಾಗಿದೆ. ಅನಾರೋಗ್ಯದ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಬದಲು ಆರೋಗ್ಯ ಮತ್ತು ಸ್ವಾಸ್ಥ್ಯ-ಕ್ಷೇಮಕ್ಕೆ ಒತ್ತು ನೀಡುವ ಒಂದು ಹೊಸ ವಿಧಾನವು ಆರೋಗ್ಯ ವಲಯದ ಆಡಳಿತದ ತಿರುಳಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ಕೇಂದ್ರ ವಲಯದ ಯೋಜನೆಗಳ ಮೂಲಕ ದೇಶದಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಪೂರಕವಾಗಿದೆ ಎಂದು ಅವರು ಹೇಳಿದರು.
2014 ರಲ್ಲಿ ಹೆರಿಗೆ ಅವಧಿಯ ತಾಯಿಯ ಮರಣ ಅನುಪಾತ (ಎಂ.ಎಂ.ಆರ್) ಪ್ರತಿ ಲಕ್ಷಕ್ಕೆ 130 ಇತ್ತು ಮತ್ತು 2020 ರಲ್ಲಿ ಅದು ಲಕ್ಷಕ್ಕೆ 97 ಆಗಿದೆ. 2014 ರಲ್ಲಿದ್ದ ಪ್ರತಿ 1000 ಜೀವಂತ ಜನನಗಳಿಗೆ ಅನುಕ್ರಮವಾಗಿ ಶಿಶು ಮರಣ ಅನುಪಾತವು 39ರಿಂದ 2022 ರಲ್ಲಿ 28ಕ್ಕೆ ಇಳಿದಿದೆ. 2014 ರಲ್ಲಿದ್ದ ಜೀವಂತ ಜನನ ಸಂದರ್ಭದಲ್ಲಿ ಮರಣ ಅನುಪಾತ 26 ಸಂಖ್ಯೆಯು 2020 ರಲ್ಲಿ 20 ಕ್ಕೆಇಳಿದಿದೆ ಜೀವಂತ ಜನನಗಳಿಗೆ ಮತ್ತು 2014 ರಲ್ಲಿದ್ದ 5 ವರ್ಷದೊಳಗಿನ ಮರಣ ಅನುಪಾತ 45 ಸಂಖ್ಯೆಯು 2020 ರಲ್ಲಿ 32ಕ್ಕೆಇಳಿದಿದೆ ಎಂದು ಅವರು ಮರಣದ ಅನುಪಾತವನ್ನು ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಹೆಚ್.ಎಂ.), ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎ.ಬಿ.-ಪಿ.ಎಂ.ಎಂ.ಜೆ.ಎ.ವೈ), ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿ.ಎಂ.- ಎ.ಬಿ.ಹೆಚ್. ಐ.ಎಂ.), ಯೋಜನೆಗಳ ಅನುಷ್ಠಾನ ಹಾಗೂ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯಂತಹ ಕೆಲವು ಪ್ರಮುಖ ಯೋಜನೆಗಳು, ಮತ್ತು ಕ್ಯಾನ್ಸರ್, ಮಧುಮೇಹ, ಸಿ.ವಿ.ಡಿ.ಗಳು ಮತ್ತು ಪಾರ್ಶ್ವವಾಯು ತಡೆಗಟ್ಟುವಿಕೆ ಮತ್ತು ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮ, ಹಾಗೂ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ, ಮತ್ತು ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ, ಇತ್ಯಾದಿಗಳನ್ನು ಅವರು ಪಟ್ಟಿ ಮಾಡಿದರು.
ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಸರ್ಕಾರವು ಸಮಗ್ರ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುತ್ತಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ , ಆಯುಷ್ಮಾನ್ ಭಾರತ್- ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ,ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ , ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಎಂಬ 4 ಸ್ತಂಭಗಳ ಮೇಲೆ ಈ ಯೋಜನೆ ನಿಂತಿದೆ ಎಂದು ಅವರು ಹೇಳಿದರು.
2006-07 ರಿಂದ 2013-14 ರವರೆಗೆ ಒಟ್ಟು ಬಿಡುಗಡೆಯಾದ ನಿಧಿಯು ಕೇವಲ ರೂ.1,59,832 ಕೋಟಿಗಳು ಮತ್ತು ನಂತರ 2014-15 ರಿಂದ 2013-14 ರಿಂದ 2021-22 ರವರೆಗಿನ ಬಿಡುಗಡೆಯಾದ ಒಟ್ಟು ನಿಧಿಯು ರೂ 4,27,501 ಕೋಟಿಗಳು ಎಂದು ಅವರು ಹೇಳಿದರು.
2012-13ರಲ್ಲಿ 6 ಏಮ್ಸ್‌ಗಳು ತಮ್ಮ ಶೈಕ್ಷಣಿಕವಾಗಿ ಪ್ರಾರಂಭವಾಗಿವೆ. ಆದರೆ 2014 ರಿಂದ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀಯವರ ದೂರದೃಷ್ಟಿಯನ್ನು ಅನುಸರಿಸುವ ಮೂಲಕ, ಪಿ.ಎಂ.ಎಸ್.ಎಸ್.ವೈ. ಯೋಜನೆಯಡಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಅಂದರೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ಹಿಮಾಚಲ ಪ್ರದೇಶ, ಅಸ್ಸಾಂ, ಜಾರ್ಖಂಡ್, ಗುಜರಾತ್, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಬಿಹಾರ, ಹರಿಯಾಣ ಮತ್ತು ತಮಿಳುನಾಡುಗಳಲ್ಲಿ ಹೊಸ 16 ಏಮ್ಸ್ ಸ್ಥಾಪನೆಯಾಗಿವೆ. ಈ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ಆರೋಗ್ಯ ರಕ್ಷಣೆಯನ್ನು ಮುಂದಿನ ಭವಿಷ್ಯತ್ತಿಗೆ ಸಿದ್ಧಗೊಳಿಸಿದೆ ಎಂದು ಅವರು ಹೇಳಿದರು.
30.11.2022 ರಂತೆ, ರೂ.20,944 ಕೋಟಿ ಗಳ ನಿಧಿಯೊಂದಿಗೆ 16 ಹೊಸ ಎ.ಐ.ಐ.ಎಂ.ಎಸ್.ಗಳಿಗೆ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು. ಹಾಗೂ ರೂ 10,595 ಕೋಟಿ ನಿಧಿ ಬಿಡುಗಡೆಯಾಗಿದೆ.
ಕೋವಿಡ್ ತಡೆಗಟ್ಟುವಿಕೆಯ ಬಗ್ಗೆ ಮಾತನಾಡುವಾಗ, ಅವರು 20-12-2022 ರಂತೆ, 102.55 ಕೋಟಿ ಮೊದಲ ಡೋಸ್ ಲಸಿಕೆ, 95.12 ಕೋಟಿ ಎರಡನೇ ಡೋಸ್ ಲಸಿಕೆ, ಮತ್ತು 22.34 ಕೋಟಿ ಮುನ್ನೆಚ್ಚರಿಕೆ ಡೋಸ್ ಲಸಿಕೆ, ಅಂದರೆ ಒಟ್ಟು 220.01 ಕೋಟಿ ಲಸಿಕೆ ಈ ತನಕ ನೀಡಲಾಗಿದೆ ಎಂದು ಅವರು ಹೇಳಿದರು.
ಲಸಿಕೆ ಮೈತ್ರಿ ಕಾರ್ಯಕ್ರಮದ ಅಡಿಯಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಭಾರತವು 150 ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್-19-ಸಂಬಂಧಿತ ವೈದ್ಯಕೀಯ ಮತ್ತು ಇತರ ಸಹಾಯವನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಪೂರೈಸಿದೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸರ್ಕಾರವು 2020 ರಿಂದ ನವೆಂಬರ್ 2022 ರವರೆಗೆ 3388 ಪರೀಕ್ಷಾ ಪ್ರಯೋಗಾಲಯಗಳನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು.
ಚುಚ್ಚುಮದ್ದಿನ ಬಗ್ಗೆ ಮಾತನಾಡುವಾಗ ಅವರು, ಮಿಷನ್ ಇಂದ್ರಧನುಷ್ ಗೆ ಒತ್ತು ನೀಡಿದರು. ದೇಶಾದ್ಯಂತ ವ್ಯಾಕ್ಸಿನೇಷನ್ ಮೂಲಕ ತಡೆಗಟ್ಟಬಹುದಾದ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಪ್ರತಿರಕ್ಷಣೆ ದರಗಳನ್ನು ಹೆಚ್ಚಿಸಲು ಡಿಸೆಂಬರ್ 25, 2014 ರಂದು ಮಿಷನ್ ಇಂದ್ರಧನುಷ್ ಘೋಷಿಸಲಾಯಿತು ಎಂದು ಅವರು ಹೇಳಿದರು.
ಸಾರ್ವತ್ರಿಕ ರೋಗನಿರೋಧಕತೆಯ ಕಡೆಗೆ ಶಾಶ್ವತವಾದ ಪ್ರಯೋಜನಗಳನ್ನು ಗಳಿಸಲು ಮಿಷನ್ ಇಂದ್ರಧನುಷ್ ಅಪಾರ ಕೊಡುಗೆ ನೀಡಿದೆ ಹಾಗೂ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ವಿಶ್ವದ ಅತಿದೊಡ್ಡ ಆರೋಗ್ಯ ಭರವಸೆ ಯೋಜನೆಯಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವು ಸುಮಾರು 10.74 ಕೋಟಿ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ರಕ್ಷಣೆಯನ್ನು ಒದಗಿಸಿದೆ. ಇಲ್ಲಿಯವರೆಗೆ ನೀಡಲಾದ ಆಯುಷ್ಮಾನ್ ಕಾರ್ಡ್‌ಗಳ ಒಟ್ಟು ಸಂಖ್ಯೆ 21.24 ಕೋಟಿ ಮತ್ತು ಒಟ್ಟು ಆಸ್ಪತ್ರೆಗಳ ದಾಖಲಾತಿಗಳ ಸಂಖ್ಯೆ 4.22 ಕೋಟಿ ಎಂದು ಅವರು ಮಾಹಿತಿ ನೀಡಿದರು.
ಸರ್ಕಾರವು ನಾಗರಿಕರ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದೆ ಎಂದು ಅವರು ಹೇಳಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕುಟುಂಬಗಳಿಗೆ ಮಾನಸಿಕ ಸಾಮಾಜಿಕ ಬೆಂಬಲವನ್ನು ನೀಡುವ 'ಮನೋದರ್ಪಣ್' ಎಂಬ ವಿನೂತನ ಆರೋಗ್ಯ ಉಪಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ, 2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪ್ರಾರಂಭವಾದ ನಂತರ 2015 ರಿಂದ ವಾರ್ಷಿಕವಾಗಿ ಜೂನ್ 21 ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.
ಯೋಗವು ನಮ್ಮ ರಾಷ್ಟ್ರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವುದರಿಂದ ಯೋಗವನ್ನು ವಿಶ್ವಾದ್ಯಂತ ಒಪ್ಪಿಕೊಳ್ಳುವುದು ನಮ್ಮ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಯೋಗವು ಹಲವಾರು ಪ್ರಯೋಜನಗಳನ್ನು ಹೊಂದಿದೆ, ಇದು ನಮ್ಮ ದೇಹದ ಅಂಶಗಳನ್ನು ಸಮತೋಲನಗೊಳಿಸುವ ಮೂಲಕ ನಾವು ಮಾಡುವ ವ್ಯಾಯಾಮವಾಗಿದೆ.
ಭಾರತೀಯ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಗಳು ಮತ್ತು ಸಂಶೋಧನೆಗಳನ್ನು ಉತ್ತೇಜಿಸಲು, ನಮ್ಮ ಪ್ರಾಚೀನ ವೈದ್ಯಕೀಯ ಪದ್ಧತಿಗಳ ಆಳವಾದ ಜ್ಞಾನವನ್ನು ಪುನರುಜ್ಜೀವನಗೊಳಿಸುವ ಮತ್ತು ಅತ್ಯುತ್ತಮವಾದ ಅಭಿವೃದ್ಧಿ ಮತ್ತು ಪ್ರಸರಣವನ್ನು ಖಾತ್ರಿಪಡಿಸುವ ದೃಷ್ಟಿಯೊಂದಿಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಆಯುಷ್ ನ ಪ್ರತ್ಯೇಕ ಮತ್ತು ಸಮರ್ಪಿತ ಸಚಿವಾಲಯವನ್ನು 2014 ರಲ್ಲಿ ಸ್ಥಾಪಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು 2021-22ರಲ್ಲಿ ಅಂದಾಜು ರೂಪಾಯಿ3,000 ಕೋಟಿಗಳ ಬಜೆಟ್ ಅನ್ನು ಕೂಡಾ ಮೀಸಲಿಟ್ಟಿದೆ.
*****
(Release ID: 1886201)
Visitor Counter : 199