ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ದೆಹಲಿಯಲ್ಲಿ ನಡೆದವ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
Posted On:
23 DEC 2022 3:49PM by PIB Bengaluru
* ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ NCS (ಎನ್‌ಸಿಎಸ್) ಪೋರ್ಟಲ್ 3600 ಉದ್ಯೋಗ ಪಾತ್ರಗಳ ಜ್ಞಾನ ಭಂಡಾರವನ್ನು ಹೊಂದಿದೆ.
* ಇ-ಶ್ರಮ್‌ನೊಂದಿಗೆ ಎನ್‌ಸಿಎಸ್ ಪೋರ್ಟಲ್‌ನ ಇಂಟರ್‌ಲಿಂಕಿಂಗ್, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪೋರ್ಟಲ್; ಉದ್ಯಮ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಪೋರ್ಟಲ್ ಮತ್ತು ASEEM (ಎಎಸ್‌ಈಈಎಮ್) ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಕುರಿತ ಪೋರ್ಟಲ್ ಪೂರ್ಣಗೊಂಡಿದೆ.
* ಎನ್‌ಸಿಎಸ್ ಪೋರ್ಟಲ್, ಇದು 27 ರಾಜ್ಯಗಳು ಮತ್ತು ಅನೇಕ ಖಾಸಗಿ ಪೋರ್ಟಲ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ.
|
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಂಸತ್ತಿನ ಸದಸ್ಯರ ಸಂಸದೀಯ ಸಲಹಾ ಸಮಿತಿಯ ಸಭೆಯು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಶ್ರೀ ರಾಮೇಶ್ವರ ತೇಲಿ ಉಪಸ್ಥಿತರಿದ್ದು, ವಿವಿಧ ರಾಜಕೀಯ ಪಕ್ಷಗಳ ಸಂಸದರು ಸಹ ಸಭೆಯಲ್ಲಿ ಭಾಗವಹಿಸಿದ್ದರು. ಸಂಸದರಾದ ಶ್ರೀ ಸುನೀಲ್ ಕುಮಾರ್ ಮೊಂಡಲ್, ಶ್ರೀ ಸುಮೇಧಾನಂದ ಸರಸ್ವತಿ, ಡಾ. ಉಮೇಶ್ ಜಿ. ಜಾಧವ್, ಶ್ರೀ ಸುನೀಲ್ ಕೆ. ಸೋನಿ, ಶ್ರೀ ಸುಶೀಲ್ ಕುಮಾರ್ ಗುಪ್ತಾ, ಶ್ರೀ ಅಹ್ಮದ್ ಅಶ್ಫಾಕ್ ಕರೀಂ, ಶ್ರೀ ಭಗೀರಥ ಚೌಧರಿ, ಶ್ರೀ ರಾಜಮಣಿ ಪಟೇಲ್ ಮತ್ತು ಶ್ರೀ ವಿನಯ್ ಡಿ. ತೆಂಡೂಲ್ಕರ್ ಉಪಸ್ಥಿತರಿದ್ದರು. ಸಭೆಯ ವಿಷಯವು "ರಾಷ್ಟ್ರೀಯ ವೃತ್ತಿ ಸೇವಾ ಪೋರ್ಟಲ್" ಆಗಿತ್ತು. ಉಪ ಮಹಾನಿರ್ದೇಶಕ (ಇ) ಶ್ರೀ ಅಮಿತ್ ನಿರ್ಮಲ್ ಅವರು ಸದರಿ ವಿಷಯದ ಕುರಿತು ಪ್ರಸ್ತುತಿ ನೀಡಿದರು.

ಸಭೆಯಲ್ಲಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಷ್ಟ್ರೀಯ ವೃತ್ತಿ ಸೇವೆ (ಎನ್‌ಸಿಎಸ್ ) ಪೋರ್ಟಲ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 20, 2015 ರಂದು ಪ್ರಾರಂಭಿಸಿದರು ಎಂದು ಸಮಿತಿಗೆ ತಿಳಿಸಲಾಯಿತು. ಎನ್‌ಸಿಎಸ್ ಪೋರ್ಟಲ್, ಇದು ಬರೀ ಉದ್ಯೋಗ ಪೋರ್ಟಲ್ ಮಾತ್ರವಲ್ಲ, ದೇಶದ ಉದ್ಯೋಗಾಕಾಂಕ್ಷಿಗಳಿಗೆ ಸಂಪೂರ್ಣ ವೃತ್ತಿ ಅಭಿವೃದ್ಧಿ ಪೋರ್ಟಲ್ ಆಗಿದೆ. ಈ ಪೋರ್ಟಲ್ ಸರ್ಕಾರ ಮತ್ತು ಖಾಸಗಿ ಪೋರ್ಟಲ್‌ಗಳೊಂದಿಗೆ ವಿವಿಧ ಏಕೀಕರಣಗಳ ಮೂಲಕ ವಿಕಸನಗೊಂಡಿದೆ. ವೃತ್ತಿ ಸಮಾಲೋಚನೆ, ವೃತ್ತಿಪರ ಮಾರ್ಗದರ್ಶನ, ಆನ್‌ಲೈನ್ ಮತ್ತು ಆಫ್‌ಲೈನ್ ಉದ್ಯೋಗ ಮೇಳಗಳನ್ನು ಆಯೋಜಿಸುವಂತಹ ವೃತ್ತಿ ಸಂಬಂಧಿತ ಸಹಾಯದ ಹೊರತಾಗಿ ಡಿಜಿಟಲ್ ಕೌಶಲ್ಯ ಮತ್ತು ಸಾಫ್ಟ್-ಸ್ಕಿಲ್‌ಗಳ ಕುರಿತು ಆನ್‌ಲೈನ್ ಉದ್ಯೋಗ ಇತ್ಯಾದಿ ತರಬೇತಿ ಕುರಿತ ಮಾಹಿತಿಯನ್ನೂ ಒದಗಿಸುತ್ತದೆ. ಜಿಲ್ಲಾ ಮಟ್ಟದಲ್ಲಿ ವಿವಿಧ ವೃತ್ತಿ ಸಂಬಂಧಿತ ಸೇವೆಗಳನ್ನು ಒದಗಿಸಲು ಸರ್ಕಾರವು 370 ಮಾದರಿ ವೃತ್ತಿ ಕೇಂದ್ರಗಳನ್ನು ಅನುಮೋದಿಸಿದೆ.

ಅಂತರರಾಷ್ಟ್ರೀಯ ಉದ್ಯೋಗಗಳಿಗಾಗಿ ಹೊಸ ಮಾಡ್ಯೂಲ್ ಅನ್ನು ಏಪ್ರಿಲ್ 2022 ರಲ್ಲಿ ಎನ್‌ಸಿಎಸ್ ಪೋರ್ಟಲ್‌ಗೆ ಸೇರಿಸಲಾಗಿದೆ. ಎನ್‌ಸಿಎಸ್ ಪೋರ್ಟಲ್‌ನಲ್ಲಿ ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳನ್ನು ಪೋಸ್ಟ್ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಅಡಿಯಲ್ಲಿ ನೋಂದಾಯಿಸಲಾದ ನೇಮಕಾತಿ ಏಜೆಂಟ್‌ಗಳನ್ನು ಮಾಡ್ಯೂಲ್ ಸುಗಮಗೊಳಿಸುತ್ತದೆ ಮತ್ತು ಎನ್‌ಸಿಎಸ್ ಪೋರ್ಟಲ್‌ನಲ್ಲಿ ಉದ್ಯೋಗಾಕಾಂಕ್ಷಿಗಳು ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳನ್ನು ಹುಡುಕಬಹುದಾಗಿದೆ ಹಾಗೂ ಅರ್ಜಿ ಕೂಡ ಸಲ್ಲಿಸಬಹುದಾಗಿದೆ.
2022-23ರ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪೋರ್ಟಲ್‌ನ ಇ-ಶ್ರಮ್‌ನೊಂದಿಗೆ ಎನ್‌ಸಿಎಸ್ ಪೋರ್ಟಲ್‌ನ ಇಂಟರ್‌ಲಿಂಕಿಂಗ್; ಉದ್ಯಮ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಪೋರ್ಟಲ್ ಮತ್ತು ಎಎಸ್‌ಇಇಎಂ, ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಪೋರ್ಟಲ್‌ಗಳ ಪೋರ್ಟಲ್ ಪೂರ್ಣಗೊಂಡಿದೆ.
ಉದ್ಯಮ್ ಪೋರ್ಟಲ್‌ನೊಂದಿಗೆ ರಾಷ್ಟ್ರೀಯ ವೃತ್ತಿ ಸೇವೆ ಪೋರ್ಟಲ್‌ನ ಏಕೀಕರಣದಂದಾಗಿ ಎನ್‌ಸಿಎಸ್ ಪೋರ್ಟಲ್‌ನಲ್ಲಿ ಉದ್ಯೋಗದಾತರಾಗಿ ಉದ್ಯಮ್ ನೋಂದಾಯಿತ ಎಂಎಸ್‌ಎಂಇಯ ತಡೆರಹಿತ ನೋಂದಣಿಯನ್ನು ಸಕ್ರಿಯಗೊಳಿಸಿದೆ. ಈ ಉದ್ಯೋಗದಾತರು ತಮ್ಮ ಕೆಲಸದ ಅವಶ್ಯಕತೆಗಳನ್ನು ಎನ್‌ಸಿಎಸ್ ನಲ್ಲಿ ಪೋಸ್ಟ್ ಮಾಡಬಹುದಾಗಿದೆ. ಅಂದ್ಹಾಗೆ ಇಲ್ಲಿಯವರೆಗೆ 3.36 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇ ಉದ್ಯೋಗದಾತರು ಎನ್‌ಸಿಎಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇಲ್ಲಿಯವರೆಗೆ, 10 ಲಕ್ಷಕ್ಕೂ ಹೆಚ್ಚು ಇ-ಶ್ರಮ್ ನೋಂದಣಿದಾರರು ಎನ್‌ಸಿಎಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಮತ್ತು ಇಶ್ರಮ್ ಕಾರ್ಯಕರ್ತರು ಎನ್‌ಸಿಎಸ್ ಮೂಲಕ ಯೋಗ್ಯ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ.
ಎನ್‌ಸಿಎಸ್ ಪೋರ್ಟಲ್ ಸಹ 27 ರಾಜ್ಯಗಳೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು Monster India, Naukari.com, Freshersworld, Merajob ಮುಂತಾದ ಅನೇಕ ಖಾಸಗಿ ಪೋರ್ಟಲ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಎನ್‌ಸಿಎಸ್ ಹುದ್ದೆಯ ದತ್ತಾಂಶಗಳ ಪುಷ್ಟೀಕರಣಕ್ಕೆ ಸಹಾಯಕವಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಾದ ಉದ್ಯೋಗಗಳೊಂದಿಗೆ ಸಂಪರ್ಕಿಸಿದೆ.
ಡಿಜಿಟಲ್ ಕೌಶಲ್ಯಗಳು ಮತ್ತು ಸಾಫ್ಟ್-ಸ್ಕಿಲ್‌ಗಳ ಕುರಿತು ಎನ್‌ಸಿಎಸ್ ಪೋರ್ಟಲ್‌ನಲ್ಲಿ ಆನ್‌ಲೈನ್ ಉದ್ಯೋಗ ತರಬೇತಿಗಳನ್ನು ಸಹ ನೀಡಲಾಗುತ್ತದೆ. ಎನ್‌ಸಿಎಸ್ ಪೋರ್ಟಲ್ ಉದ್ಯೋಗಾಕಾಂಕ್ಷಿಗಳು, ಉದ್ಯೋಗ ಅಧಿಕಾರಿಗಳು ಮತ್ತು ವೃತ್ತಿ ಮಾರ್ಗದರ್ಶನಕ್ಕಾಗಿ ವೃತ್ತಿ ಸಲಹೆಗಾರರ ಬಳಕೆಗಾಗಿ 3600+ ಉದ್ಯೋಗ ಪಾತ್ರಗಳ ಜ್ಞಾನ ಭಂಡಾರವನ್ನು ಹೊಂದಿದೆ. ಉದ್ಯೋಗಾಕಾಂಕ್ಷಿಗಳಿಗೆ ಗುಣಮಟ್ಟದ ವೃತ್ತಿ ಸಲಹೆ/ಮಾರ್ಗದರ್ಶನ ಬೆಂಬಲವನ್ನು ಒದಗಿಸಲು ಪೋರ್ಟಲ್‌ನಲ್ಲಿ ಸುಮಾರು 900 ಅರ್ಹ ವೃತ್ತಿ ಸಲಹೆಗಾರರ ನೆಟ್‌ವರ್ಕ್ ಅನ್ನು ಸಹ ಹೊಂದಿದೆ.
ಪೋರ್ಟಲ್ ಕಳೆದ 7 ವರ್ಷಗಳಲ್ಲಿ ವಿಕಸನಗೊಂಡಿದ್ದು, ಈಗ ಹೆಚ್ಚಿನ ಏಕೀಕರಣಗಳಿಗಾಗಿ, ಜಾಗತಿಕ ದೃಷ್ಟಿಕೋನದ ದೃಷ್ಟಿಯಿಂಮದಾಗಿ ಮಧ್ಯಸ್ಥಗಾರರಿಗೆ ಉತ್ತಮ ಸೇವೆಯನ್ನು ಒದಗಿಸಲು ಹೊಸ ಇತ್ತೀಚಿನ ಲಭ್ಯವಿರುವ ತಂತ್ರಜ್ಞಾನಕ್ಕೆ ಬದಲಾಯಿಸುವ ಅಗತ್ಯತೆ ಬಗ್ಗೆ ವಿವರಿಸಿ ಇದಕ್ಕಾಗಿ ಇದು ಸೂಕ್ತ ಸಮಯ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಯುವಜನರಿಗೆ ಉದ್ಯೋಗ ಮತ್ತು ಇತರ ಸಂಬಂಧಿತ ಸೇವೆಗಳನ್ನು ಒದಗಿಸುವುದಕ್ಕಾಗಿ ಎನ್‌ಸಿಎಸ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುವ ಸರ್ಕಾರದ ಉಪಕ್ರಮವನ್ನು ಸಂಸತ್ತಿನ ಸದಸ್ಯರು ಶ್ಲಾಘಿಸಿದರು.ಅಲ್ಲದೇ ಎನ್‌ಸಿಎಸ್ ಅಡಿಯಲ್ಲಿ ಕೈಗೊಂಡ ವಿವಿಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ಸಲಹೆಗಳನ್ನು ಸದಸ್ಯುರು ಈ ಸಂದರ್ಭದಲ್ಲಿ ನೀಡಿದರು, ಉದ್ಯೋಗ ಮೇಳಗಳನ್ನು ನಡೆಸುವುದು, ನಿಯೋಜನೆಯ ಬಗ್ಗೆ ನಿಗಾ ಇಡುವುದು, ಶಾರ್ಟ್‌ಲಿಸ್ಟ್ ಮತ್ತು ಅಂತಿಮ ನೇಮಕಾತಿಗಳ ನಡುವಿನ ಸಮಯವನ್ನು ಕಡಿಮೆ ಮಾಡುವುದು, ಇವುಗಳನ್ನೆಲ್ಲಾ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಕೇಂದ್ರಗಳೊಂದಿಗೆ ಸಂಯೋಜಿಸಬೇಕು. ಎನ್‌ಸಿಎಸ್ ಪೋರ್ಟಲ್‌ನ ಅರಿವಿನ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕೆಂದು ಸಭೆಯಲ್ಲಿ ಚಿಂತನೆ ನಡೆಸಲಾಯಿತು.
ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದವರ ಸೂಕ್ತ ಮತ್ತು ಮೌಲ್ಯಯುತ ಸಲಹೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸಿ, ತದನಂತರ ಸಭೆಯನ್ನು ಮುಕ್ತಾಯಗೊಳಿಸಿದರು.
(Release ID: 1886095)