ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

26ನೇ ದೆಹಲಿ ಪುಸ್ತಕ ಮೇಳ 2022ರಲ್ಲಿ ಪ್ರಕಾಶನ ವಿಭಾಗದಿಂದ ತನ್ನ ಸಾಹಿತ್ಯ ರತ್ನಗಳ ಪ್ರದರ್ಶನ


ಭಾರತ ಸರ್ಕಾರದ ಪ್ರಮುಖ ಪ್ರಕಾಶನ ಸಂಸ್ಥೆಯ ಪ್ರಕಾಶನ ವಿಭಾಗವು ನವದೆಹಲಿಯ 26ನೇ ದೆಹಲಿ ಪುಸ್ತಕ ಮೇಳದಲ್ಲಿ ತನ್ನ ಪುಸ್ತಕಗಳು ಮತ್ತು ನಿಯತಕಾಲಿಕಗಳ ಸಂಗ್ರಹವನ್ನು ಪ್ರದರ್ಶಿಸಲಿದೆ

Posted On: 22 DEC 2022 8:31PM by PIB Bengaluru

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗವು 2022ರ ಡಿಸೆಂಬರ್ 22ರಿಂದ 26ರವರೆಗೆ ನವದೆಹಲಿಯಲ್ಲಿ ನಡೆಯುತ್ತಿರುವ ದೆಹಲಿಯ ಬಹುನಿರೀಕ್ಷಿತ ಪುಸ್ತಕ ಮೇಳವಾದ 26ನೇ ದೆಹಲಿ ಪುಸ್ತಕ ಮೇಳದಲ್ಲಿ ಭಾಗವಹಿಸುತ್ತಿದೆ. ಫೆಡರೇಷನ್ ಆಫ್ ಇಂಡಿಯನ್ ಪಬ್ಲಿಷರ್ಸ್ (ಎಫ್.ಐ.ಪಿ.) ಸಹಯೋಗದೊಂದಿಗೆ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಷನ್ (ಐ.ಟಿ.ಪಿ.ಒ.) ಈ ಮೇಳವನ್ನು ಆಯೋಜಿಸಿದೆ. ಪಬ್ಲಿಕೇಷನ್ಸ್ ಡಿವಿಷನ್ ತನ್ನ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ವ್ಯಾಪಕ ಸಂಗ್ರಹವನ್ನು ಮೇಳದಲ್ಲಿ ಪ್ರದರ್ಶಿಸುತ್ತಿದ್ದು ಜನಪ್ರಿಯ ಶೀರ್ಷಿಕೆಗಳ ಮೇಲೆ 90% ವರೆಗೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.

ಪ್ರಕಾಶನ ವಿಭಾಗದಿಂದ ಪ್ರತ್ಯೇಕವಾಗಿ ಪ್ರಕಟಿಸಲ್ಪಡುವ ರಾಷ್ಟ್ರಪತಿ ಭವನ ಮತ್ತು ಪ್ರಧಾನ ಮಂತ್ರಿಯವರ ಭಾಷಣಗಳ ಕುರಿತಾದ ಪುಸ್ತಕಗಳನ್ನು ಸಂಗ್ರಹಿಸಲು ಗ್ರಂಥಪಾಲಕರಿಗೆ ಇದೊಂದು ಸುವರ್ಣ ಅವಕಾಶವಾಗಲಿದೆ.

ಸ್ವಾತಂತ್ರದ ಅಮೃತ ಮಹೋತ್ಸವದ ಆಚರಣೆಯನ್ನು ಮುಂದುವರಿಸುತ್ತಾ, ಪ್ರಕಾಶನ ವಿಭಾಗವು ಸಂದರ್ಶಕರು ಮತ್ತು ಪುಸ್ತಕ ಪ್ರೇಮಿಗಳ ಮನಸ್ಸನ್ನು ಆಕರ್ಷಿಸಲು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸದ ಬಗ್ಗೆ ತನ್ನ ಪುಸ್ತಕಗಳ ಸಂಗ್ರಹವನ್ನು ಹೊರತಂದಿದೆ. ಪ್ರಕಾಶನ ವಿಭಾಗವು ಭಾರತೀಯ ಸಿನೆಮಾ, ಕಲೆ ಮತ್ತು ಸಂಸ್ಕೃತಿ, ಭಾರತೀಯ ಇತಿಹಾಸ, ಗಣ್ಯ ವ್ಯಕ್ತಿಗಳು ಮತ್ತು ಮಕ್ಕಳ ಸಾಹಿತ್ಯದ ಬಗ್ಗೆ ಹೆಚ್ಚು ಬೇಡಿಕೆಯ ಪುಸ್ತಕಗಳನ್ನು ಪ್ರದರ್ಶಿಸಲಿದೆ.

ಪುಸ್ತಕಗಳಲ್ಲದೆ, ಯೋಜನೆ, ಕುರುಕ್ಷೇತ್ರ, ಆಜ್ ಕಲ್ ಮತ್ತು ಬಾಲಭಾರತಿಯಂತಹ ವಿಭಾಗದ ಜನಪ್ರಿಯ ಮತ್ತು ವ್ಯಾಪಕವಾಗಿ ಪ್ರಸಾರವಾಗುವ ನಿಯತಕಾಲಿಕಗಳು ಮಳಿಗೆಯಲ್ಲಿ ಲಭ್ಯವಿವೆ. ಸಂದರ್ಶಕರು ಪ್ರಕಾಶನ ವಿಭಾಗದಿಂದ ಪ್ರಕಟಿಸಲಾಗುವ ನಿಯತಕಾಲಿಕಗಳು ಮತ್ತು ಉದ್ಯೋಗ ಸುದ್ದಿ / ರೋಜ್ಗಾರ್ ಸಮಾಚಾರ್ ನ ವಾರ್ಷಿಕ ಚಂದಾದಾರಿಕೆಗಳನ್ನು ಸಹ ಖರೀದಿಸಬಹುದು.

ಪ್ರಕಾಶನ ವಿಭಾಗವು ತನ್ನ ಪ್ರಕಟಣೆಗಳನ್ನು 4-03/ಬಿ.ಸಿ., ಸಭಾಂಗಣ ಸಂಖ್ಯೆ 4, ಪ್ರಗತಿ ಮೈದಾನ, ನವದೆಹಲಿಯಲ್ಲಿ ಪ್ರದರ್ಶಿಸುತ್ತಿದೆ.

*****


(Release ID: 1885881) Visitor Counter : 146
Read this release in: Assamese , English , Urdu , Hindi