ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಹಸು/ಎಮ್ಮೆ/ಕೋಣ/ಎತ್ತು/ಹಂದಿ/ಕೋಳಿ/ಆಡು ಸಾಕಣೆ ಕೇಂದ್ರಗಳು ಮತ್ತು ಬೆಳೆಗಳನ್ನು ಸೈಲೇಜ್(ರಸಮೇವು) ಮಾಡುವ ಘಟಕಗಳಲ್ಲಿ ಕ್ರಮವಾಗಿ 4 ಕೋಟಿ ರೂಪಾಯಿ, 1 ಕೋಟಿ ರೂಪಾಯಿ, 60 ಲಕ್ಷ ರೂಪಾಯಿ, 50 ಲಕ್ಷ ರೂಪಾಯಿ ಮೇಲೆ ಶೇಕಡಾ 50ರಷ್ಟು ಸಹಾಯಧನ ನೀಡುವ ಯೋಜನೆ ಇದೆ: ಡಾ. ಸಂಜೀವ್ ಬಲ್ಯಾನ್
ಪ್ರಾಣಿಗಳ ಚಿಕಿತ್ಸೆಗಾಗಿ 4,332 ಕ್ಕೂ ಹೆಚ್ಚು ಸಂಚಾರಿ ಪಶುವೈದ್ಯಕೀಯ ಘಟಕಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗುತ್ತಿದೆ: ಡಾ.ಬಲ್ಯಾನ್
ಒಟ್ಟು 90,598 ಉದ್ಯೋಗಗಳಲ್ಲಿ 16,000 ಯುವಕರು “ಮೈತ್ರಿ” ಯೋಜನೆಯಡಿಯಲ್ಲಿ ಉದ್ಯೋಗ ಪಡೆದಿದ್ದಾರೆ: ಡಾ.ಬಲ್ಯಾನ್
ದೇಶದ ಯುವಕರು ಸಚಿವಾಲಯದ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆನ್‌ಲೈನ್ ಸೌಲಭ್ಯವನ್ನು ಸಹ ಲಭ್ಯಗೊಳಿಸಲಾಗಿದೆ ಎಂದು ಡಾ.ಬಲ್ಯಾನ್ ಹೇಳುತ್ತಾರೆ
Posted On:
20 DEC 2022 5:00PM by PIB Bengaluru
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಅವರು ಇಂದು ದೆಹಲಿಯಲ್ಲಿ ಮಾಧ್ಯಮ ಸಂವಾದದಲ್ಲಿ "ಅಮೃತ್ ಕಾಲದಲ್ಲಿ ಅಮೃತ್ ಪೀಳಿಗೆಯನ್ನು ಸಶಕ್ತಗೊಳಿಸುವುದು ಮತ್ತು ಭಾರತದ ಯುವಕರನ್ನು ಸಬಲೀಕರಣಗೊಳಿಸುವ" ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಯುವಕರನ್ನು ಸ್ವಯಂ ಉದ್ಯೋಗಿಗಳನ್ನಾಗಿ ಮಾಡಿ ಸ್ವಾವಲಂಬಿಗಳನ್ನಾಗಿಸಲು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ನಮ್ಮ ಇಲಾಖೆಯಿಂದ ನೇರವಾಗಿ ಮತ್ತು ಪರೋಕ್ಷವಾಗಿ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಉದ್ಯೋಗ ನೀಡಲಾಗುವುದು. ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಹಸು / ಎಮ್ಮೆ/ಎತ್ತು/ಕೋಣ / ಹಂದಿ / ಕೋಳಿ / ಮೇಕೆ ಸಾಕಣೆ ಕೇಂದ್ರಗಳು ಮತ್ತು ಸೈಲೇಜ್ ತಯಾರಿಕೆ ಘಟಕಗಳಿಗೆ ಅನುಕ್ರಮವಾಗಿ 4 ಕೋಟಿ, 1 ಕೋಟಿ, 60 ಲಕ್ಷ, 50 ಲಕ್ಷ ರೂಪಾಯಿ ಸಹಾಯಧನ ನೀಡುವ ಯೋಜನೆ ಇದೆ. ಒಟ್ಟು ಮೊತ್ತದಲ್ಲಿ, ಶೇಕಡಾ 50ರಷ್ಟು ಸಬ್ಸಿಡಿಯನ್ನು ಭಾರತ ಸರ್ಕಾರವು ನೀಡುತ್ತದೆ ಮತ್ತು ಇದರ ಹೊರತಾಗಿ, ಸಾಲದ ಮೊತ್ತದ ಮೇಲೆ ಶೇಕಡಾ 3ರಷ್ಟು ಬಡ್ಡಿ ರಿಯಾಯಿತಿಯನ್ನು -ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (AHIDF) ಯೋಜನೆಯಡಿಯಲ್ಲಿ ತೆಗೆದುಕೊಳ್ಳಬಹುದು ಎಂದು ಡಾ ಸಂಜೀವ್ ಬಲ್ಯಾನ್ ತಿಳಿಸಿದರು.
ಪ್ರಾಣಿಗಳ ಚಿಕಿತ್ಸೆಗಾಗಿ 4,332 ಸಂಚಾರಿ ಪಶುವೈದ್ಯಕೀಯ ಘಟಕಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ದೇಶಿ ಗೋ ತಳಿಗಳ ಸಾಕಣೆಗೆ ಉತ್ತೇಜನ ನೀಡಲಾಗುತ್ತಿದೆ ಎಂದರು. ಒಟ್ಟು 90,598 ಉದ್ಯೋಗಗಳಲ್ಲಿ 16,000 ಯುವಕರು “ಮೈತ್ರಿ” ಯೋಜನೆಯಡಿಯಲ್ಲಿ ಉದ್ಯೋಗ ಪಡೆದಿದ್ದಾರೆ. ದೇಶದ ಯುವಕರು ಸಚಿವಾಲಯದ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆನ್‌ಲೈನ್ ಸೌಲಭ್ಯವನ್ನು ಸಹ ಲಭ್ಯಗೊಳಿಸಲಾಗಿದೆ ಎಂದು ವಿವರಿಸಿದರು.
ಯುವಕರಿಗೆ ಕ್ರೀಡೆ, ವಿಜ್ಞಾನ, ಕೌಶಲ್ಯ, ಆವಿಷ್ಕಾರದ ಕ್ಷೇತ್ರಗಳಲ್ಲಿ ಇತರ ಸಚಿವಾಲಯಗಳು ಮಾಡಿದ ಪ್ರಯತ್ನಗಳನ್ನು ಡಾ.ಬಲ್ಯಾನ್ ಇಲ್ಲಿ ಉಲ್ಲೇಖಿಸಿದರು. ಈ ಮೂಲಕ ಯುವ ಪೀಳಿಗೆಯು ಶಕ್ತಿಯಿಂದ ಮುನ್ನಡೆಯಲು ಸಾಧ್ಯವಾಗುತ್ತದೆ. ನಮ್ಮ ಸರ್ಕಾರ ಯುವಜನರ ಸಬಲೀಕರಣಕ್ಕೆ ಬದ್ಧವಾಗಿದ್ದು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಮುಂದೆಯೂ ಕೆಲಸ ಮಾಡಲಿದೆ ಎಂದು ಹೇಳಿದರು.
ಪ್ರಸ್ತುತ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸಿದ ಅವರು, ಕಳೆದ 8 ವರ್ಷಗಳಲ್ಲಿ ಶಿಕ್ಷಣ, ಉದ್ಯೋಗ, ಕ್ರೀಡೆ, ಆರೋಗ್ಯ, ವಿಜ್ಞಾನ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳ ಮೂಲಕ ಸರ್ಕಾರವು ದೇಶದ ಯುವಕರಿಗಾಗಿ ಹೇಗೆ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು. ಹೊಸ ಶಿಕ್ಷಣ ನೀತಿ 2020ರ ಉದ್ದೇಶಗಳು ಮತ್ತು ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಪವರ್ ಮಾಡುವ ದೃಷ್ಟಿಕೋನದ ಬಗ್ಗೆ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಚೀನಾ, ಜಪಾನ್ ಮತ್ತು ಅಮೆರಿಕದಂತಹ ದೇಶಗಳನ್ನು ಹಿಂದಿಕ್ಕಿ 2030 ರಲ್ಲಿ ಭಾರತದ ಸರಾಸರಿ ವಯಸ್ಸು 31.7 ವರ್ಷಗಳಾಗಲಿದ್ದು, ಇದರ ಪ್ರಯೋಜನವು ಅಭಿವೃದ್ಧಿ ಹೊಂದುತ್ತಿರುವ ಭಾರತ ದೇಶದ ಪ್ರಯಾಣದಲ್ಲಿ ನಿಸ್ಸಂದೇಹವಾಗಿ ಇರುತ್ತದೆ. ಯುವ ಪೀಳಿಗೆಯು ದೇಶದ ಬೆನ್ನೆಲುಬಾಗಿದ್ದು, ಭವಿಷ್ಯದ ರಾಷ್ಟ್ರ ನಿರ್ಮಾತೃಗಳಾಗಿದ್ದಾರೆ. ಆದ್ದರಿಂದ ಇಂದಿನ ಯುವ ಪೀಳಿಗೆಯನ್ನು ಸಶಕ್ತಗೊಳಿಸುವುದು ಎಂದರೆ ಭಾರತದ ಭವಿಷ್ಯವನ್ನು ಸಶಕ್ತಗೊಳಿಸುವುದು ಎಂದರ್ಥ.
ಸರ್ಕಾರದ ಪ್ರಸ್ತಾವಿತ ಹೊಸ ರಾಷ್ಟ್ರೀಯ ಯುವ ನೀತಿಯು, ಯುವಜನರ ಸಮಗ್ರ ಅಭಿವೃದ್ಧಿಗೆ ಅಭೂತಪೂರ್ವ ಹೆಜ್ಜೆಯಾಗಿದೆ. ಇದು 2030ರ ವೇಳೆಗೆ ಭಾರತವು ಸಾಧಿಸಲು ಬಯಸುತ್ತಿರುವ "ಯುವ ಅಭಿವೃದ್ಧಿಗಾಗಿ ಹತ್ತು ವರ್ಷಗಳನ್ನು" ಕಲ್ಪಿಸುತ್ತದೆ. ಇದರ ಅಡಿಯಲ್ಲಿ ಶಿಕ್ಷಣ ಸೇರಿದಂತೆ ಐದು ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸವನ್ನು ಮಾಡಲಾಗುತ್ತಿದೆ; ಅವು ಉದ್ಯೋಗ ಮತ್ತು ಉದ್ಯಮಶೀಲತೆ; ಯುವ ನಾಯಕತ್ವ ಮತ್ತು ಅಭಿವೃದ್ಧಿ; ಆರೋಗ್ಯ, ಸದೃಢತೆ ಮತ್ತು ಕ್ರೀಡೆ ಮತ್ತು ಸಾಮಾಜಿಕ ನ್ಯಾಯ.
2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರವು ಯುವಕರ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ನವ ಭಾರತದಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೆಲಸ ಮಾಡಿದೆ ಎಂದು ಡಾ. ಬಲ್ಯಾನ್ ಉಲ್ಲೇಖಿಸಿದರು.
******
(Release ID: 1885256)
Visitor Counter : 245