ಆಯುಷ್
azadi ka amrit mahotsav

​​​​​​​ಸಾಂಪ್ರದಾಯಿಕ ಔಷಧ ಜ್ಞಾನ ಕುರಿತ ಸಂಶೋಧನೆ

Posted On: 20 DEC 2022 4:03PM by PIB Bengaluru

ನವದೆಹಲಿಯ ಕೇಂದ್ರೀಯ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಮಂಡಳಿ ಆಯುಷ್ ಕುರಿತ ಪ್ರಾಚೀನ ಹಸ್ತಪ್ರತಿಗಳು, ಆಯುಷ್ ಪದ್ಧತಿಗಳ ಪುಸ್ತಕ ಸಂಗ್ರಹ, ಪುನರುಜ್ಜೀವನ ಮತ್ತು ಪುನಶ್ಚೇತನ ಕಾರ್ಯದಲ್ಲಿ ನಿರತವಾಗಿದೆ.  ಹೈದರಾಬಾದ್ ನ ಎನ್.ಐ.ಐ.ಎಂ.ಎಚ್ ವೈದ್ಯಕೀಯ – ಐತಿಹಾಸಿಕ ಗ್ರಂಥಾಲಯ ರೆಫರಲ್ ಗ್ರಂಥಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಗ್ರಂಥಾಲಯವನ್ನು ಎರಡು ಉದ್ದೇಶಗಳಿಂದ ನಿರ್ವಹಣೆ ಮಾಡಲಾಗುತ್ತಿದೆ:

     i.        ವೈದ್ಯಕೀಯ ವಿದ್ಯಾರ್ಥಿಗಳು, ಬೋಧಕರು, ಆಸಕ್ತ ಜನರಿಗೆ ಔಷಧ ಇತಿಹಾಸ ಕುರಿತಾದ ಜ್ಞಾನವನ್ನು ಇದು ಉತ್ತೇಜಿಸುತ್ತದೆ.

   ii.        ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಅವಧಿಯಲ್ಲಿ ಭಾರತೀಯ ಇತಿಹಾಸದಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸುವುದು ಹಾಗೂ ಇತರೆ ಕೇಂದ್ರಗಳಲ್ಲಿನ ಅಂತರಿಕ ಸಂಬಂಧಗಳನ್ನು ದೃಢೀಕರಣಗೊಳಿಸುವ, ಪ್ರಾಚೀನ ಮತ್ತು ಮಧ್ಯಯುಗದಲ್ಲಿ ಭಾರತೀಯ ಔಷಧದ ವಿಕಾಸವನ್ನು ಇದು ಪ್ರೋತ್ಸಾಹಿಸುತ್ತದೆ.

ಗ್ರಂಥಾಲಯದಲ್ಲಿ ಸುಮಾರು 10,384 ಪುಸ್ತಕಗಳಿದ್ದು, [ಈ ಪೈಕಿ 448 ಪುಸ್ತಕಗಳು ಅತ್ಯಂತ ವಿರಳವಾದವು] ಇವು ಔಷಧದ ಇತಿಹಾಸ ಕುರಿತ ವಿವಿಧ ಆಯಾಮಗಳು ಮತ್ತು ಶಾಖೆಗಳನ್ನು ಒಳಗೊಂಡಿದೆ. ಆಯುಷ್ ವ್ಯವಸ್ಥೆ ಮತ್ತು ಐರೋಪ್ಯ ರಾಷ್ಟ್ರಗಳ ಆರಂಭಿಕ ಆವೃತ್ತಿಗಳನ್ನು ಒಳಗೊಂಡ ಶಾಸ್ತ್ರೀಯ ಕೃತಿಗಳನ್ನು ಇದು ಹೊಂದಿದೆ. ಈ ಗ್ರಂಥಾಲಯದಲ್ಲಿ 285 ಹಸ್ತಪ್ರತಿಗಳು [ತಾಳೆ ಗರಿ ಮತ್ತು ಕಾಗದ] ಇದ್ದು, 173 ಆಯುರ್ವೇದ, 106 ಯುನಾನಿ ವೈದ್ಯಕೀಯ ವ್ಯವಸ್ಥೆ ಮತ್ತು 6 ಸಿದ್ಧ ಔಷಧ ವ್ಯವಸ್ಥೆಯ ಕೃತಿಗಳನ್ನು ಒಳಗೊಂಡಿದೆ. ಈ ಸಂಸ್ಥೆಯು ದಕ್ಷಿಣ ಭಾರತ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಾದ್ಯಂತ ವಿವಿಧ ಹಸ್ತಪ್ರತಿ ಸಂಗ್ರಹ, ರಾಜ್ಯ ವಸ್ತು ಸಂಗ್ರಹಾಲಯಗಳು ಮತ್ತು ವೈಯಕ್ತಿಕವಾಗಿ ಸಂಗ್ರಹಿಸಿದ 2700 ವೈದ್ಯಕೀಯ ಡಿಜಿಟಲ್ ಹಸ್ತಪ್ರತಿಗಳು ಹಾಗೂ 1335 ಅಪರೂಪದ ಪುಸ್ತಕಗಳ ಭಂಡಾರವನ್ನು ಹೊಂದಿದೆ. 2700 ಡಿಜಿಟಲ್ ಹಸ್ತಪ್ರತಿಗಳಲ್ಲಿ 1335 ಆಯುರ್ವೇದ: 542 ಯುನಾನಿ; 598 ಸಿದ್ಧ, 49 ಯೋಗ ಮತ್ತು 176 ಇತರೆ ವಿಷಯಗಳಿಗೆ ಸಂಬಂಧಿಸಿದ್ದಾಗಿವೆ. ಮುಂದುವರೆದಂತೆ 1679 ಹಸ್ತಪ್ರತಿಗಳು/ವಿರಳ ಪುಸ್ತಕಗಳನ್ನು ಈ ಯೋಜನೆಯಡಿ “ಪೂರ್ವ ಭಾರತದ [ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರ] ವೈದ್ಯಕೀಯ ಹಸ್ತಪ್ರತಿಗಳ ಸಮೀಕ್ಷೆ ಮತ್ತು ಕ್ಯಾಟಲಾಗ್ ಮತ್ತು ಡಿಜಿಟಲೀಕೃತ ದಾಸ್ತಾನಿನಡಿ ಡಿಜಿಟಲೀಕರಣ ಮಾಡಲಾಗಿದೆ. ಸಿ.ಸಿ.ಆರ್.ಎ.ಎಸ್ ನಿಂದ “ಈಶಾನ್ಯ ಭಾರತದ ವೈದ್ಯಕೀಯ ಹಸ್ತಪ್ರತಿಗಳ ಸಮೀಕ್ಷೆ, ಕ್ಯಾಟಲಾಗ್ ಮತ್ತು ಡಿಜಿಟಲೀಕೃತ ದಾಸ್ತಾನಿನಡಿಯೂ  ಸಮೀಕ್ಷೆ, ಕ್ಯಾಟಲಾಗ್ ಮತ್ತು ಡಿಜಿಟಲೀಕರಣ ಮಾಡಲಾಗಿದೆ.

ನವದೆಹಲಿಯ ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿ ಭಾಷಾಂತರ, ಹಸ್ತಪ್ರತಿಗಳ ಪ್ರಕಟಣೆ, ಪ್ರಾಚೀನ ಮತ್ತು ಜಾಗತಿಕವಾಗಿ ಅಧ್ಯಯನಕ್ಕಾಗಿ ಮಧ್ಯಯುಗದ ಅಪರೂಪದ ಪುಸ್ತಕಗಳ ವ್ಯಾಪಕ ಪ್ರಸಾರ ಕಾರ್ಯಕ್ರಮವನ್ನು ಪ್ರೋತ್ಸಾಹಿಸುತ್ತಿದೆ. ಜಾಗತಿಕ ನಾಯಕತ್ವದಡಿ ಇದೇ ರೀತಿ ಸಿದ್ಧ ಕುರಿತ ಕೇಂದ್ರೀಯ ಸಂಶೋಧನಾ ಮಂಡಳಿ [ಸಿಸಿಆರ್ ಎಸ್] ಮೂಲತಃ ತಮಿಳು ಗದ್ಯದಲ್ಲಿ ಲಭ್ಯವಿರುವ ಪ್ರಾಚೀನ ಸಿದ್ಧ ಸಾಹಿತ್ಯವನ್ನು ಅರ್ಥೈಸಿಕೊಂಡು ಅವುಗಳನ್ನು ತಮಿಳು ಮತ್ತು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಲಾಗಿದೆ. ಆಯುಷ್ ಸಚಿವಾಲಯದಡಿ ಬರುವ ವಿವಿಧ ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಮತ್ತು ಸಂಶೋಧನಾ ಮಂಡಳಿಗಳು ಸಂಶೋಧನಾ ಫಲಿತಾಂಶಗಳ ವ್ಯಾಪಕ ಪ್ರಸಾರಕ್ಕಾಗಿ ನಿಯಮಿತವಾಗಿ ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದೆ.

ಭಾರತದ ಸರ್ಕಾರದ ಆಯುಷ್ ಸಚಿವಾಲಯ ಹೈದರಾಬಾದ್ ನ ಭಾರತೀಯ ವೈದ್ಯಕೀಯ ಪಾರಂಪರಿಕ ಸಂಸ್ಥೆ [ಎನ್.ಐ.ಐ.ಎಂ.ಎಚ್]ಯನ್ನು ಕೇಂದ್ರೀಯ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಮಂಡಳಿ [ಸಿ.ಸಿ.ಆರ್.ಎ.ಎಸ್]ಯಡಿ ಒಂದು ಘಟಕವಾಗಿದೆ. ಇದು

                     i.        ಸಾಹಿತ್ಯ ಸಂಶೋಧನೆ ಮತ್ತು ದಾಖಲೀಕರಣ

                   ii.        ಪ್ರಾಚೀನ ಹಸ್ತಪ್ರತಿಗಳು ಮತ್ತು ಅಪರೂಪದ ಪುಸ್ತಕಗಳಿಂದ ಪಠ್ಯಗಳ ಪುನರುಜ್ಜೀವನ ಮತ್ತು ಪುನಶ್ಚೇತನ

                 iii.        ಆಯುಷ್ ಕುರಿತ ಅಪರೂಪದ ಹಸ್ತಪ್ರತಿಗಳು/ಪುಸ್ತಕಗಳ ಮಾಹಿತಿ, ವಿವರಣಾತ್ಮಕ ಟಿಪ್ಪಣಿಗಳು, ಸಂಪಾದನೆ ಮತ್ತು ಪ್ರಕಟಣೆ

                 iv.        ದಾಖಲೀಕರಣ

                   v.        ಆಯುರ್ವೇದ ವಿಶ್ವಕೋಶ

                 vi.        ಔಷಧ ಇತಿಹಾಸ ಕುರಿತ ವಸ್ತು ಸಂಗ್ರಹಾಲಯ

               vii.        ಆಧುನಿಕ ಔಷಧ ಮತ್ತು ಆಯುಷ್ ಔಷಧ ವ್ಯವಸ್ಥೆ ಕುರಿತ ರೆಫರಲ್ ಗ್ರಂಥಾಲಯ

              viii.        ಆಯುಷ್ ಸಂಶೋಧನಾ ಪೋರ್ಟಲ್

                 ix.        ಸಿಸಿಆರ್ ಎಎಸ್ – ಸಂಶೋಧನಾ ನಿರ್ವಹಣಾ ಮಾಹಿತಿ

                   x.        ರಾಷ್ಟ್ರೀಯ ಆಯುಷ್ ಅಸ್ವಸ್ಥತೆ ಮತ್ತು ಪ್ರಮಾಣೀಕೃತ ಪರಿಭಾಷೆಗಳು, ವಿದ್ಯುನ್ಮಾನ [ನಮಸ್ತೆ]- ಪೋರ್ಟಲ್

                 xi.        ಆಯುರ್ವೇದ, ಸಿದ್ಧ, ಯುನಾನಿ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ಅಂತರರಾಷ್ಟ್ರೀಯ ಪರಿಭಾಷೆಗಳ ಅಭಿವೃದ್ಧಿ

                xii.        ಆಯುರ್ವೇದ, ಸಿದ್ಧ, ಯುನಾನಿಗಾಗಿ ಎಸ್.ಎನ್.ಒ.ಎಂ.ಇ.ಡಿ - ಸಿಟಿಯ ರಾಷ್ಟ್ರೀಯ ವಿಸ್ತರಣೆ

ಈ ಸಂಸ್ಥೆಯನ್ನು ಹೊರತುಪಡಿಸಿ ಆಯುಷ್ ಸಚಿವಾಲಯದಡಿ ಬರುವ ಎಲ್ಲಾ ಐದು ಸಂಶೋಧನಾ ಮಂಡಳಿಗಳು ಸಹ ತಮ್ಮ ಸಂಶೋಧನಾ ಆದೇಶದ ಭಾಗವಾಗಿ ಸಾಹಿತ್ಯ ಸಂಶೋಧನೆಯಲ್ಲಿ ನಿರತವಾಗಿವೆ.

ಆಯುಷ್ ಸಚಿವ ಶ್ರೀ ಸರ್ಬಾನಂದ್ ಸೋನೆವಾಲ್ ಅವರು ರಾಜ್ಯಸಭೆಗಿಂದು ಲಿಖಿತ ಉತ್ತರದಲ್ಲಿ ಈ ವಿಷಯ  ತಿಳಿಸಿದ್ದಾರೆ.

*****


(Release ID: 1885247)
Read this release in: English , Urdu , Tamil , Telugu