ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ದೇಶದ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಲಭ್ಯ


ಭಾರತ ಸರ್ಕಾರ ನಿಯಮಿತವಾಗಿ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತಿರುತ್ತದೆ

Posted On: 17 DEC 2022 12:41PM by PIB Bengaluru

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ(NFSA) ಮತ್ತು ಇತರ ಕಲ್ಯಾಣ ಯೋಜನೆಗಳ ಅಗತ್ಯತೆಗಳನ್ನು ಪೂರೈಸಲು ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ(PMGKAY) ಯ ಹೆಚ್ಚುವರಿ ಹಂಚಿಕೆಗಾಗಿ ಕೇಂದ್ರ ಸಂಗ್ರಹದಡಿಯಲ್ಲಿ ಭಾರತ ಸರ್ಕಾರವು ಸಾಕಷ್ಟು ಆಹಾರ ಧಾನ್ಯ ದಾಸ್ತಾನುಗಳನ್ನು ಹೊಂದಿದೆ. 2023ರ ಜನವರಿ 1ರ ಹೊತ್ತಿಗೆ ಸುಮಾರು 159 ಮೆಟ್ರಿಕ್ ಟನ್ ಗೋಧಿ ಮತ್ತು 104 ಮೆಟ್ರಿಕ್ ಟನ್ ಅಕ್ಕಿ ಲಭ್ಯವಿರುತ್ತದೆ, ಇದು ಜನವರಿ 1 ರಂದು 138 ಮೆಟ್ರಿಕ್ ಟನ್ ಗೋಧಿ ಮತ್ತು 76 ಮೆಟ್ರಿಕ್ ಟನ್ ಅಕ್ಕಿಯ ಸಂಬಂಧಿತ ದಾಸ್ತಾನು ಮಾನದಂಡಗಳ ಅಗತ್ಯಕ್ಕಿಂತ ಹೆಚ್ಚಾಗಿರುತ್ತದೆ. ಮೊನ್ನೆ ಡಿಸೆಂಬರ್ 15ರಂತೆ, ಕೇಂದ್ರ ಸಂಗ್ರಹದಡಿ ಸುಮಾರು 180 ಮೆಟ್ರಿಕ್ ಟನ್ ಗೋಧಿ ಮತ್ತು 111 ಮೆಟ್ರಿಕ್ ಟನ್ ಅಕ್ಕಿ ಲಭ್ಯವಿದೆ.

ಏಪ್ರಿಲ್ 1, ಜುಲೈ 1, ಅಕ್ಟೋಬರ್ 1 ಮತ್ತು ಜನವರಿ 1 ರಂತೆ ವರ್ಷದ ನಿರ್ದಿಷ್ಟ ದಿನಾಂಕಗಳಿಗೆ ದಾಸ್ತಾನು ಮಾನದಂಡಗಳ ಅವಶ್ಯಕತೆಗಳನ್ನು ಕಲ್ಪಿಸಲಾಗಿದೆ. ಕೇಂದ್ರ ಸಂಗ್ರಹದಡಿಯಲ್ಲಿ  ಗೋಧಿ ಮತ್ತು ಅಕ್ಕಿಯ ಸಂಗ್ರಹ ಸ್ಥಾನವು ಯಾವಾಗಲೂ ದಾಸ್ತಾನು ಮಾನದಂಡಗಳಿಗಿಂತ ಉತ್ತಮವಾಗಿರುತ್ತದೆ. ಕಳೆದ ಅಕ್ಟೋಬರ್ 1ರಂತೆ ಸುಮಾರು 227 ಮೆಟ್ರಿಕ್ ಟನ್ ಗೋಧಿ ಮತ್ತು 205 ಮೆಟ್ರಿಕ್ ಟನ್ ಅಕ್ಕಿಯು ಆಯಾ ದಾಸ್ತಾನು ಮಾನದಂಡಗಳ ಅವಶ್ಯಕತೆಗಳಾದ 205 ಮೆಟ್ರಿಕ್ ಟನ್ ಗೋಧಿ ಮತ್ತು 103 ಮೆಟ್ರಿಕ್ ಟನ್ ಅಕ್ಕಿ ಅಕ್ಟೋಬರ್ 1 ರಂದು ಲಭ್ಯವಿತ್ತು. ಜನವರಿ 1, 2023 ರಂತೆ ಸಾಕಷ್ಟು ಪ್ರಮಾಣದ ಆಹಾರ ಧಾನ್ಯಗಳು ಜನವರಿ 1 ರ ದಾಸ್ತಾನು ಮಾನದಂಡಗಳ ಅಗತ್ಯಕ್ಕಿಂತ ಹೆಚ್ಚು ಲಭ್ಯವಿರುತ್ತವೆ.

ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ಪರಿಣಾಮವಾಗಿ ಮುಕ್ತ ಮಾರುಕಟ್ಟೆಯಲ್ಲಿ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ರೈತರು ಮಾರಾಟ ಮಾಡುವುದರ ಜೊತೆಗೆ ಕಡಿಮೆ ಉತ್ಪಾದನೆಯಿಂದಾಗಿ ಕಳೆದ ಋತುವಿನಲ್ಲಿ ಗೋಧಿಯ ಸಂಗ್ರಹವು ಕಡಿಮೆ ಮಟ್ಟದಲ್ಲಿದ್ದರೂ, ಕೇಂದ್ರೀಯ ಸಂಗ್ರಹದಡಿ ಪೂರೈಸಲು ಮುಂದಿನ ಗೋಧಿ ಬೆಳೆ ಬರುವವರೆಗೆ ದೇಶದ ಅಗತ್ಯಗಳಿಗೆ ಪೂರೈಸಲು ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಇದಲ್ಲದೆ, ಕಲ್ಯಾಣ ಯೋಜನೆಗಳ ಅಗತ್ಯತೆಗಳನ್ನು ಪೂರೈಸಲು ಕೇಂದ್ರ ಸಂಗ್ರಹದಡಿ ಸಾಕಷ್ಟು ಗೋಧಿ ದಾಸ್ತಾನು ಹೊಂದಲು ಅಕ್ಕಿಯ ಪರವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ-NFSA ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಆನ್ ಯೋಜನೆ-PMGKAY ಅಡಿಯಲ್ಲಿ ಹಂಚಿಕೆಗಳನ್ನು ಪರಿಷ್ಕರಿಸಲಾಗಿದೆ.

ಕಳೆದ ವರ್ಷದ ಗರಿಷ್ಠ ಮಾರಾಟ ಬೆಲೆ ಪ್ರತಿ ಕ್ವಿಂಟಾಲ್ ಗೆ 2,015ರಿಂದ ಭಾರತ ಸರ್ಕಾರವು ಈ ವರ್ಷ ಗೋಧಿ ಬೆಳೆಯ ಗರಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ 2,125 ರೂಪಾಯಿಗಳಿಗೆ ವಿಸ್ತರಿಸಿದೆ. ಹೀಗಾಗಿ, ಗರಿಷ್ಠ ಮಾರಾಟ ಬೆಲೆಯಲ್ಲಿ ಕ್ವಿಂಟಾಲ್ ಗೆ 110 ರೂಪಾಯಿ ಹೆಚ್ಚಾಗಿದೆ.  ಉತ್ತಮ ಹವಾಮಾನ ಪರಿಸ್ಥಿತಿಯಿಂದ ಮುಂದಿನ ಋತುವಿನಲ್ಲಿ ಗೋಧಿಯ ಉತ್ಪಾದನೆ ಮತ್ತು ಸಂಗ್ರಹಣೆಯು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂದಿನ ಹಂಗಾಮಿನಲ್ಲಿ ಗೋಧಿ ಸಂಗ್ರಹವು ಏಪ್ರಿಲ್ 2023 ರಿಂದ ಪ್ರಾರಂಭವಾಗಲಿದೆ. ಆರಂಭಿಕ ಮೌಲ್ಯಮಾಪನದ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಗೋಧಿ ಬೆಳೆ ಬಿತ್ತನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

ದೇಶಾದ್ಯಂತ ಎಲ್ಲಾ ಕಲ್ಯಾಣ ಯೋಜನೆಗಳ ಅಗತ್ಯತೆಗಳನ್ನು ಪೂರೈಸಲು ಕೇಂದ್ರ ದಾಸ್ತಾನು ಸಂಗ್ರಹದಲ್ಲಿ ಸಾಕಷ್ಟು ಆಹಾರ ಧಾನ್ಯಗಳು ಲಭ್ಯವಿವೆ ಮತ್ತು ಬೆಲೆಗಳು ನಿಯಂತ್ರಣದಲ್ಲಿರುತ್ತವೆ ಎಂದು ಭಾರತ ಸರ್ಕಾರ ಭರವಸೆ ನೀಡಿದೆ. 

*****




(Release ID: 1884483) Visitor Counter : 170