ಪ್ರವಾಸೋದ್ಯಮ ಸಚಿವಾಲಯ
ದೇಶದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸ್ವದೇಶ ದರ್ಶನ ಯೋಜನೆಯಡಿಯಲ್ಲಿ 15 ವಿಷಯಾಧಾರಿತ ಸರ್ಕ್ಯೂಟ್‌ಗಳಲ್ಲಿ "ಇಕೋ ಸರ್ಕ್ಯೂಟ್" ಅನ್ನು ಗುರುತಿಸಲಾಗಿದೆ: ಶ್ರೀ ಜಿ. ಕಿಶನ್ ರೆಡ್ಡಿ
Posted On:
15 DEC 2022 3:18PM by PIB Bengaluru
ಪ್ರವಾಸೋದ್ಯಮ ಸಚಿವಾಲಯವು ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪರಿಸರ ಪ್ರವಾಸೋದ್ಯಮವನ್ನು ಸೂಕ್ತ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಒಂದೆಂದು ಗುರುತಿಸಿದೆ. ಇದರಲ್ಲಿ ಒಡಿಸ್ಸಾ ಸಹ ಸೇರಿದೆ.
ಪ್ರವಾಸೋದ್ಯಮ ಸಚಿವಾಲಯವು ಒಡಿಶಾ ಸೇರಿದಂತೆ ದೇಶದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ, ಅವುಗಳಲ್ಲಿ ಕೆಲವು ಹೀಗಿವೆ:
(i) ಭಾರತವನ್ನು ಪರಿಸರ/ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದಲ್ಲಿ ಆದ್ಯತೆಯ ಜಾಗತಿಕ ತಾಣವಾಗಿಸಲುಸಲು, ಪ್ರವಾಸೋದ್ಯಮ ಸಚಿವಾಲಯವು ಪರಿಸರ ಪ್ರವಾಸೋದ್ಯಮ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರಗಳನ್ನು ರೂಪಿಸಿದೆ.
ಕಾರ್ಯತಂತ್ರದ ಕಾರ್ಯಾಚರಣೆ ಮತ್ತು ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಲು, ಕಾರ್ಯದರ್ಶಿ (ಪ್ರವಾಸೋದ್ಯಮ) ಅವರ ಅಧ್ಯಕ್ಷತೆಯಲ್ಲಿ ಸುಸ್ಥಿರ ಪ್ರವಾಸೋದ್ಯಮಕ್ಕಾಗಿ ರಾಷ್ಟ್ರೀಯ ಮಂಡಳಿಯನ್ನು ರಚಿಸಲಾಗಿದೆ. ಮಂಡಳಿಯ ಮೊದಲ ಮತ್ತು ಎರಡನೇ ಸಭೆಗಳನ್ನು ಕ್ರಮವಾಗಿ 16ನೇ ಆಗಸ್ಟ್ 2022 ಮತ್ತು 31ನೇ ಅಕ್ಟೋಬರ್ 2022 ರಂದು ನಡೆಸಲಾಯಿತು, ಈ ಸಮಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಒಳಗೊಂಡಿರುವ ಕಾರ್ಯತಂತ್ರದ ಕಾರ್ಯಾಚರಣೆ ಮತ್ತು ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆ ಕುರಿತು ವಿವರವಾಗಿ ಚರ್ಚಿಸಲಾಯಿತು.
(ii) ಪ್ರವಾಸೋದ್ಯಮ ಸಚಿವಾಲಯವು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯು ಎನ್ ಇ ಪಿ) ಮತ್ತು ಭಾರತೀಯ ಜವಾಬ್ದಾರಿಯುತ ಪ್ರವಾಸೋದ್ಯಮ ಸೊಸೈಟಿ (ಆರ್ ಟಿ ಎಸ್ ಒ ಐ) ಯೊಂದಿಗೆ 2021 ರ ಸೆಪ್ಟೆಂಬರ್ 27 ರಂದು ಪರಸ್ಪರ ಪ್ರವಾಸೋದ್ಯಮ ಕ್ಷೇತ್ರದಲ್ಲಿ 'ಸುಸ್ಥಿರತೆಯ ಉಪಕ್ರಮಗಳನ್ನು' ಸಕ್ರಿಯವಾಗಿ ಉತ್ತೇಜಿಸಲು ಮತ್ತು ಬೆಂಬಲಿಸಲು ಕ್ರಮಗಳನ್ನು ಕೈಗೊಳ್ಳಲು ಮತ್ತು ಸಹಯೋಗದ ಮಾದರಿಯಲ್ಲಿ ಕೆಲಸ ಮಾಡಲು ತಿಳುವಳಿಕೆ ಒಪ್ಪಂದವನ್ನು (ಎಂಒಯು) ಮಾಡಿಕೊಂಡಿದೆ.
(iii) ಪ್ರವಾಸೋದ್ಯಮ ಸಚಿವಾಲಯವು ಪ್ರವಾಸೋದ್ಯಮದ ಪ್ರಮುಖ ವಿಭಾಗಗಳಾದ ವಸತಿ ಘಟಕಗಳು ಮತ್ತು ಪ್ರವಾಸ ನಿರ್ವಾಹಕರಿಗೆ ಭಾರತದ ಸಮಗ್ರ ಸುಸ್ಥಿರ ಪ್ರವಾಸೋದ್ಯಮ ಮಾನದಂಡ (ಎಸ್ ಟಿ ಸಿ ಐ) ಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಅಳವಡಿಸಿಕೊಂಡಿದೆ, ಇವು ಒಡಿಶಾ ಸೇರಿದಂತೆ ಇಡೀ ದೇಶಕ್ಕೆ ಅನ್ವಯಿಸುತ್ತವೆ.
(iv) ದೇಶದಲ್ಲಿ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಯ ಸಾಮರ್ಥ್ಯವನ್ನು ಗುರುತಿಸಿ, ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ ದರ್ಶನ ಯೋಜನೆಯಡಿಯಲ್ಲಿ 15 ವಿಷಯಾಧಾರಿತ ಸರ್ಕ್ಯೂಟ್‌ಗಳಲ್ಲಿ "ಇಕೋ ಸರ್ಕ್ಯೂಟ್" ಅನ್ನು ಗುರುತಿಸಿದೆ.
ಈ ಮಾಹಿತಿಯನ್ನು ಪ್ರವಾಸೋದ್ಯಮ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದ ಮೂಲಕ ತಿಳಿಸಿದ್ದಾರೆ.
****
(Release ID: 1883780)
Visitor Counter : 235