ಕಲ್ಲಿದ್ದಲು ಸಚಿವಾಲಯ

​​​​​​​ಕಲ್ಲಿದ್ದಲು ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ವಿದ್ಯುತ್ ವಲಯಕ್ಕೆ ಪೂರೈಕೆ

Posted On: 14 DEC 2022 1:01PM by PIB Bengaluru

ದೇಶದಲ್ಲಿ ಕಲ್ಲಿದ್ದಲಿನ ಕೊರತೆಯಿಲ್ಲ. ಅಖಿಲ ಭಾರತ ಮಟ್ಟದಲ್ಲಿ 2022-2023 ರಲ್ಲಿ (ನವೆಂಬರ್' 22 ರವರೆಗೆ) 524.2 ಮಿಲಿಯನ್ ಟನ್ (ತಾತ್ಕಾಲಿಕ) ಕಲ್ಲಿದ್ದಲು ಉತ್ಪಾದನೆಯಾಗಿದ್ದು,  ಕಳೆದ ವರ್ಷದ ಇದೇ ಅವಧಿಯಲ್ಲಿ ಉತ್ಪಾದನೆಯಾದ 448.1 ಮಿಲಿಯನ್  ಟನ್   ಕಲ್ಲಿದ್ದಲು ಉತ್ಪಾದನೆಗೆ ಹೋಲಿಸಿದರೆ, ಇದು  ಸುಮಾರು 17% ನಷ್ಟು ಹೆಚ್ಚಳವಾಗಿದೆ. ಅದೇ ರೀತಿ, ದೇಶದಲ್ಲಿ ಕಲ್ಲಿದ್ದಲಿನ ಪೂರೈಕೆ/ರವಾನೆಯು 2022-2023ರಲ್ಲಿ (ನವೆಂಬರ್'22 ರವರೆಗೆ)  558.24 ಮಿಲಿಯನ್ ಟನ್  (ತಾತ್ಕಾಲಿಕ) ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಉತ್ಪಾದನೆಯಾದ 521.08 ಮಿಲಿಯನ್ ಟನ್   ಗೆ ಹೋಲಿಸಿದರೆ, ಇದು ಸುಮಾರು 7.33 % ರಷ್ಟು ಹೆಚ್ಚಳವಾಗಿದೆ.

2022-23ರಲ್ಲಿ ವಿದ್ಯುತ್ ವಲಯದ ಹೆಚ್ಚಿದ ಬೇಡಿಕೆಯನ್ನು ಪೂರೈಸಲು, ಸಿ.ಐ.ಎಲ್. ಸಂಸ್ಥೆಯು 380.58 ಮಿಲಿಯನ್ ಟನ್  (ನವೆಂಬರ್'22 ರವರೆಗೆ) (ತಾತ್ಕಾಲಿಕ)  ಕಲ್ಲಿದ್ದಲನ್ನು ರವಾನಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಪೂರೈಸಿದ 339.8 ಮಿಲಿಯನ್ ಟನ್ ಗಳಿಗೆ ಹೋಲಿಸಿದರೆ, ಇದು ಸುಮಾರು 12% ರಷ್ಟು ಅಧಿಕ  ರವಾನಿಸಿದೆ.

ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ಪೂರೈಕೆಯ ಸಮಸ್ಯೆಗಳನ್ನು ಪರಿಹರಿಸಲು, ಕೇಂದ್ರ ವಿದ್ಯುತ್ ಸಚಿವಾಲಯಗಳು, ಕೇಂದ್ರ ಕಲ್ಲಿದ್ದಲು ಸಚಿವಾಲಯ, ಕೇಂದ್ರ ರೈಲ್ವೇ ಸಚಿವಾಲಯ, ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (ಸಿ.ಇ.ಎ.), ಕೋಲ್ ಇಂಡಿಯಾ ಲಿಮಿಟೆಡ್ (ಸಿ.ಐ.ಎಲ್.) ಮತ್ತು ಸಿಂಗರೇಣಿ ಕಾಲೀಯರೀಸ್ ಕಂಪನಿ ಲಿಮಿಟೆಡ್ (ಎಸ್.ಸಿ.ಸಿ.ಎಲ್.) ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಅಂತರ-ಸಚಿವಾಲಯದ ಉಪ ತಂಡ (ಗುಂಪು) ರಚಿಸಲಾಗಿದೆ. ಥರ್ಮಲ್ ಪವರ್ ಪ್ಲಾಂಟ್ ಗಳಿಗೆ ಕಲ್ಲಿದ್ದಲಿನ ಸರಬರಾಜನ್ನು ಹೆಚ್ಚಿಸಲು ವಿವಿಧ ಕಾರ್ಯಾಚರಣೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಸ್ಥಿತಿಯನ್ನು ನಿರ್ಣಯಿಸಲು, ಹಾಗೂ ವಿದ್ಯುತ್ ವಲಯಕ್ಕೆ ಸಂಬಂಧಿಸಿದ ಯಾವುದೇ ಅನಿಶ್ಚಿತ ಸಂದರ್ಭಗಳನ್ನು ಪೂರೈಸಲು ಈ ತಂಡ ನಿಯಮಿತವಾಗಿ ಸಭೆ ಸೇರುತ್ತದೆ. ಇದರ ಜೊತೆಗೆ, ಕಲ್ಲಿದ್ದಲು ಪೂರೈಕೆ ಮತ್ತು ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹಾಗೂ ಕಲ್ಲಿದ್ದಲು ಹೆಚ್ಚಳದ ಮೇಲ್ವಿಚಾರಣೆಗಾಗಿ ಅಧ್ಯಕ್ಷರು - ಕೇಂದ್ರ ರೈಲ್ವೆ ಮಂಡಳಿ, ಕಾರ್ಯದರ್ಶಿ - ಕೇಂದ್ರ ಕಲ್ಲಿದ್ದಲು ಸಚಿವಾಲಯ,  ಕಾರ್ಯದರ್ಶಿ - ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಕಾರ್ಯದರ್ಶಿ - ಕೇಂದ್ರ ವಿದ್ಯುತ್ ಸಚಿವಾಲಯ ಇವರುಗಳನ್ನು ಒಳಗೊಂಡ ಅಂತರ-ಸಚಿವಾಲಯ ಸಮಿತಿಯನ್ನು (ಐ.ಎಂ.ಸಿ.) ರಚಿಸಲಾಗಿದೆ. ಐ.ಎಂ.ಸಿ.ಗೆ ಅಗತ್ಯವಿದ್ದಾಗ ಕಾರ್ಯದರ್ಶಿ- ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಅಧ್ಯಕ್ಷರು - ಸಿ.ಇ.ಎ. ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುತ್ತಾರೆ. ಖನನ ಮಾಡುವ ಗಣಿ ಸಂಸ್ಥೆ ಬಳಸುವ ಕಲ್ಲಿದ್ದಲು ಬ್ಲಾಕ್ ಗಳಿಂದ ಕಲ್ಲಿದ್ದಲು ರವಾನೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಭಾರತದಲ್ಲಿ ಶಕ್ತಿಯ ಪ್ರಧಾನ ಮೂಲ ಕಲ್ಲಿದ್ದಲು ಆಗಿರುವುದರಿಂದ, 2030-2035 ರ ನಡುವೆ ಬೇಡಿಕೆಯು ಗರಿಷ್ಠ ಮಟ್ಟದಲ್ಲಿ ಮುಂದುವರಿಯಲಿದೆ. ಅಂತೆಯೇ, ದೇಶದಲ್ಲಿ ಕಲ್ಲಿದ್ದಲಿನ ಲಭ್ಯತೆಯನ್ನು ಸುಧಾರಿಸಲು ಸರ್ಕಾರವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ: 

* ಅಸ್ತಿತ್ವದಲ್ಲಿರುವ ಗಣಿಗಳ ಸಾಮರ್ಥ್ಯ ವರ್ಧನೆ ಮತ್ತು ಹೊಸ ಗಣಿಗಳು/ಯೋಜನೆಗಳ ಕಾರ್ಯಾಚರಣೆ ಮೂಲಕ ಕೋಲ್ ಇಂಡಿಯಾ ಲಿಮಿಟೆಡ್ (ಸಿ.ಐ.ಎಲ್.) ತನ್ನ ಗಣಿಗಳಿಂದ ಹೆಚ್ಚುವರಿ ಕಲ್ಲಿದ್ದಲು ಉತ್ಪಾದನೆ ಮಾಡಲಿದೆ.

* ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಉತ್ಪಾದನೆ ವರ್ಧನೆ.

* ಅಗತ್ಯತೆಗಳನ್ನು ಪೂರೈಸಿದ ಖನನ ಮಾಡುವ ಕಲ್ಲಿದ್ದಲು ಗಣಿ ಮಾಲೀಕರು (ಪರಮಾಣು ಖನಿಜಗಳನ್ನು ಹೊರತುಪಡಿಸಿ), ಆನಂತರ ತಮ್ಮ ವಾರ್ಷಿಕ ಖನಿಜ (ಕಲ್ಲಿದ್ದಲು ಸೇರಿದಂತೆ) ಉತ್ಪಾದನೆಯ 50% ವರೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯಿದೆ 2021 ರಲ್ಲಿ ಅನುವು ಮಾಡಿಕೊಡುತ್ತದೆ.  

* ಗಣಿ ತನಕದ ಸಂಪರ್ಕ ವ್ಯವಸ್ಥೆ, ರೈಲು ಯೋಜನೆಗಳು, ಮತ್ತು ಏಕೀಕೃತ ಸಾಗಾಟ ಸಾರಿಗೆ ವ್ಯವಸ್ಥೆಗಳ ಮೂಲಕ ಕಲ್ಲಿದ್ದಲು ಸಾಗಾಟದಲ್ಲಿ ಒಟ್ಟಾರೆ ಸುಧಾರಣೆ.

* ವರ್ಧಿತ ಸಮಗ್ರ ಉತ್ಪಾದನಾ ತಂತ್ರಜ್ಞಾನಗಳ ಬಳಕೆ ಮತ್ತು ಕಾರ್ಯಾಚರಣೆಯ ಡಿಜಿಟೈಸೇಶನ್ ಮತ್ತು ಇ.ಆರ್.ಪಿ.ಯ ಪರಿಚಯದೊಂದಿಗೆ ಗಣಿಗಳ ದಕ್ಷತೆಯನ್ನು ಹೆಚ್ಚಿಸಲಾಗಿದೆ.

* ಕೇಂದ್ರ ಕಲ್ಲಿದ್ದಲು ಸಚಿವಾಲಯದ ನಿಯಮಿತ ಮೇಲ್ವಿಚಾರಣೆ.

* ಕಲ್ಲಿದ್ದಲು ಗಣಿಗಳ ಪ್ರಾರಂಭಿಕ ಕಾರ್ಯಾಚರಣೆಗಾಗಿ ಏಕಗವಾಕ್ಷಿ (ಕಿಟಕಿ) ಮೂಲಕ ಸುಲಭಗೊಳಿಸಿದ ದಸ್ತಾವೇಜು ಕ್ಲಿಯರೆನ್ಸ್ ವ್ಯವಸ್ಥೆ

* ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

****



(Release ID: 1883436) Visitor Counter : 157