ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

800 ದಶಲಕ್ಷಕ್ಕೂ ಹೆಚ್ಚು ಬ್ರಾಡ್‌ಬ್ಯಾಂಡ್‌ ಬಳಕೆದಾರರ ಮೂಲಕ ಭಾರತವು ಇಂದು ಜಗತ್ತಿನ ಅತಿ ಹೆಚ್ಚು "ಸಂಪರ್ಕʼ (ಕನೆಕ್ಟೆಡ್‌) ರಾಷ್ಟ್ರವಾಗಿ ಹೊರಹೊಮ್ಮಿದೆ: ಕೇಂದ್ರ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌


ಇಂಡಿಯಾ ಇಂಟರನ್‌ ಗವರ್ನೆನ್ಸ್‌ ಫೋರಂ- 2022ರ ಸಮಾರೋಪ ಸಮಾರಂಭದಲ್ಲಿ ಅಭಿಮತ

Posted On: 12 DEC 2022 9:11AM by PIB Bengaluru

ಸುಮಾರು 800 ದಶಲಕ್ಷಕ್ಕೂ ಹೆಚ್ಚು ಬ್ರಾಡ್‌ಬ್ಯಾಂಡ್‌ ಸೇವೆ ಬಳಕೆದಾರರ ಮೂಲಕ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು "ಸಂಪಕ" ಪಡೆದ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ. "ಭಾರತದ ಬಲವರ್ಧನೆಗೆ ತಂತ್ರಜ್ಞಾನ ಸಬಲೀಕರ" ಧ್ಯೇಯವಾಕ್ಯದಡಿ ನಡೆದ "ಭಾರತ ಅಂತರ್ಜಾಲ ಆಡಳಿತ ವೇದಿಕೆ" (ಇಂಡಿಯಾ ಇಂಟರ್‌ನೆಂಟ್‌ ಗವರ್ನೆನ್ಸ್‌ ಫೋರಂ)ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇಲಾಖೆ ಕಾರ್ಯದಶಿ ಅಖಿಲೇಶ್‌ ಕುಮಾರ್‌ ಶರ್ಮಾ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

IMG-7976.JPG

MoS, Shri Rajeev Chandrasekhar addressing IIGF 2022

ಸಮಾರೋಪ ಭಾಷಣ ಮಾಡಿದ ರಾಜೀವ್‌ ಚಂದ್ರಶೇಖರ್‌ ಅವರು, "800 ದಶಲಕ್ಷಕ್ಕೂ ಹೆಚ್ಚು ಭಾರತೀಯ ಬ್ರಾಡ್‌ಬ್ಯಾಂಡ್‌ ಬಳಕೆದಾರರ ಮೂಲಕ ಭಾತರುವ ಜಗತ್ತಿನ ಅತಿ ಹೆಚ್ಚು "ಸಂಪರ್ಕ" ಹೊಂದಿದ ರಾಷ್ಟ್ರವಾಗಿದೆ. 5ಜಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಬ್ರಾಡ್‌ಬ್ಯಾಂಡ್‌ ಸಂಪರ್ಕ ನೆಟ್‌ವರ್ಕ್‌ ಕಲ್ಪಿಸುವ ಸಲುವಾಗಿ ರೂಪಿಸಲಾದ ʼಭಾರತ್ ನೆಟ್‌ʼ ಯೋಜನೆಯ ಮೂಲಕ 1.2 ಶತಕೋಟಿ (ಬಿಲಿಯನ್‌) ಭಾರತೀಯ ಬಳಕೆದಾರರನ್ನು ಹೊಂದುವ ಗುರಿ ಮೂಲಕ ಜಗತ್ತಿನ ಇಂಟರ್‌ನೆಟ್‌ ಅತಿ ಹೆಚ್ಚು ಬಳಕೆದಾರರ ಏಕ ಪ್ರತಿನಿಧಿಯಾಗಿ ಭಾರತ ರೂಪುಗೊಳ್ಳಲಿದೆ. ಪ್ರಸ್ತುತತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ತಂತ್ರಜ್ಞಾನ ಕ್ಷೇತ್ರದ ಅನ್ವೇಷಣೆಯ ಬಳಕೆ ಹಾಗೂ ನಿಯಂತ್ರಣ ನೀತಿಗಳ ಮಾರ್ಪಾಡಿಗೂ ಒತ್ತು ನೀಡಲಾಗುವುದು. ಸಂಬಂಧಪಟ್ಟ ಎಲ್ಲ ಪಾಲುದಾರರ ಸಕ್ರಿಯ ಪಾಲ್ಗೊಳ್ಳುವಿಕೆಯು ಜಾಗತಿಕ ಸೈಬರ್‌ ಕಾನೂನು ಮಾನದಂಡಗಳನ್ನು ರೂಪಿಸುವ ಕಾರ್ಯದ ಮೂರನೇ ಹಂತವಾಗಿದೆ. ಇದು ಭಾರತೀಯ ಇಂಟರ್‌ನೆಟ್‌ ಹಾಗೂ ಆರ್ಥಿಕತೆಯ ಬಲವರ್ಧನೆಗೆ ನೆರವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

IMG-7984.JPG

ವೈವಿಧ್ಯದ ಹಾಗೂ ಪ್ರಭಾವಶಾಲಿ ಅಪ್ಲಇಕೇಷನ್‌ಗಳಿಗೆ ಗುರುತಿನ ದೃಢೀಕರಣ ಹಾಗೂ ಜಗತ್ತಿನ ದಕ್ಷಿಣ ಭಾಗದ ರಾಷ್ಟ್ರಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವ ಕಾರ್ಯಕದಲ್ಲಿ ಭಾರತ ನೆರವಾಗುವ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ. ಆ ಮೂಲಕ ಆರ್ಥಿಕತೆಗೆ ಇಂಟರ್‌ನೆಟ್‌ ಸ್ಪರ್ಶದ ಮೂಲಕ ಡಿಜಿಟಲೀಕರಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಲಾದ ರಾಷ್ಟ್ರಗಳಿಗೂ ನೆರವಾಗಬಹುದು. ಭಾರತವು ಒಂದು ವರ್ಷದ ಅವಧಿಗೆ ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಹೊತ್ತಿನಲ್ಲೇ ಪ್ರಧಾನ ಮಂತ್ರಿಗಳು ಭಾರತದ ಡಿಜಿಟಲ್‌ ಆರ್ಥಿಕತೆ ಪರಿವರ್ತನೆಯ ಮಾದರಿಯಂತೆ ಡಿಜಿಟಲ್‌ ಆರ್ಥಿಕತೆಯ ಪರಿವರ್ತನೆ ಬಯಸುವ ಜಗತ್ತಿನ ದಕ್ಷಿಣ ಭಾಗದ ರಾಷ್ಟ್ರಗಳಿಗೆ ವೇದಿಕೆ ಕಲ್ಪಿಸುವುದಾಗಿ ಹೇಳಿದ್ದಾರೆ. ಅವಿರತ ಪ್ರಯತ್ನಗಳ ಮೂಲಕ ಭಾರತದ ಇಂಟರ್‌ನೆಟ್‌ನ ಬಹುಮುಖಿ ಪಾಲುದಾರ ವ್ಯವಸ್ಥೆ ರೂಪುಗೊಂಡಿದೆ. ಮುಂದಿನ ಕೆಲ ವರ್ಷಗಳಲ್ಲಿ ಬಹುಮುಖಿ ಪಾಲುದಾರರು ಬೌದ್ಧಿಕ, ಶೈಕ್ಷಣಿಕ ವಿಚಾರವಾಗಿ ಚರ್ಚೆಗೆ ಮುಂದಾಗುವ ಜತೆಗೆ ಇಂಟರ್‌ನೆಟ್‌ ವೇಗ, ಬೆಳವಣಿಗೆ ಹಾಗೂ ಅನ್ವೇಷಣೆಯ ಬೆಳವಣಿಗೆಗೆ ಮೂಲಕ ಭಾರತದ ಕೋಟ್ಯಂತರ ಬಳಕೆದಾರರಿಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಉತ್ತರದಾಯಿ ಸೇವೆ ಒದಗಿಸಲು ಪ್ರಯತ್ನ ನಡೆಯಲಿದೆ ಎಂದು ಹೇಳಿದ್ದಾರೆ.

IMG-7981.JPG

ಐಐಜಿಎಫ್‌ನ ಎರಡನೇ ಆವೃತಿಯ ಕಾಯಕ್ರಮದಲ್ಲಿ ಮಾತನಾಡಿದ ಇಲಾಖೆ ಕಾರ್ಯದರ್ಶಿ ಶ್ರೀ ಅಖಿಲೇಶ್‌ ಶರ್ಮಾ, "ಡಿಜಿಟಲ್‌ ಇಂಡಿಯಾ ಕಾರ್ಯಕ್ರಮವು ದೇಶದಲ್ಲಿ ಡಿಜಿಟಲ್‌ ಸಾಕ್ಷರತೆಯ ಕೌಶಲ್ಯ ಉತ್ತೇಜಿಸುವ ಮೂಲಕ ಸಾಧಿಸಿರುವ ಯಶೋಗಾಥೆಯು ತಂತ್ರಜ್ಞಾನ ಪ್ರಗತಿ ಮೂಲಕ ನವ ಭಾರತವಾಗಿ ರೂಪುಗೊಳ್ಳುವ ಜಗತ್ತಿನ ಯಶಸ್ವಿ ಕಥೆಯಾಗುತ್ತಿದೆ. ಐಐಜಿಎಫ್‌- 2022ರ "ಭಾರತದ ಬಲವರ್ಧನೆಗೆ ತಂತ್ರಜ್ಞಾನ ಸಬಲೀಕರಣ"ರ ಧ್ಯೇಯವಾಕ್ಯವು ಸಂಪರ್ಕದಲ್ಲಿ ಇಲ್ಲದವರನ್ನು ಸಂಪರ್ಕ ಜಾಲ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನಗಳಿಗೆ ಸೂಕ್ತವಾಗಿದೆ. ದೇಶದ ಜನರ ಖಾಸಗಿತನ, ರಕ್ಷಣೆ, ದತ್ತಾಂಶ, ಸುರಕ್ಷತೆ ಹಾಗೂ ಭದ್ರತೆಗೆ ಪೂರಕವಾದ ಕಾನೂನುಗಳನ್ನು ರೂಪಿಸಲು ಒತ್ತು ನೀಡಲಾಗುವುದು. ಹಾಗೆಯೇ ಮುಂದಿನ ಮೂರು ವರ್ಷದಲ್ಲಿ ಭಾರತವನ್ನು ಟ್ರಿಲಿಯನ್‌ ಡಾಲರ್‌ ಡಿಜಿಟಲ್‌ ಆರ್ಥಿಕತೆಯಾಗಿ ರೂಪಿಸುವ ನಿಟ್ಟಿನಲ್ಲಿಯೂ ಪ್ರಯತ್ನ ಮುಂದುವರಿಯಲಿದೆ,ʼʼ ಎಂದು ಹೇಳಿದರು.

ಐಐಜಿಎಫ್‌ ಕುರಿತು ಮಾಹಿತಿ
ಇಂಡಿಯಾ ಇಂಟರ್‌ನೆಟ್‌ ಗವರ್ನಮೆಂಟ್‌ ಫೋರಂ ವಿಶ್ವಸಂಸ್ಥೆಯ ಇಂಟರ್‌ನೆಟ್‌ ಗವರ್ನೆನ್ಸ್‌ ಫೋರಂ (ಯುಎನ್‌- ಐಜಿಎಫ್‌)ನ ಸಹಯೋಗದಲ್ಲಿರುವ ರೂಪುಗೊಂಡ ಕಾರ್ಯಕ್ರಮವಾಗಿದೆ. ಇಂಟರ್‌ನೆಟ್‌ ಗವರ್ನೆನ್ಸ್‌ ಫೋರಂ ಬಹುಪಾಲುದಾರ ವೇದಿಕೆಯಾಗಿದ್ದು ಸಂಬಂಧಪಟ್ಟ ನಾನಾ ಸಮೂಹಗಳ ಪ್ರತಿನಿಧಿಗಳು ಸೇರಿ ಇಂಟರ್‌ನೆಟ್‌ಗೆ ಸಂಬಂಧಪಟ್ಟಂತೆ ನೀತಿ ನಿರೂಪಣೆ ಕುರಿತಂತೆ ಎಲ್ಲ ವಿಚಾರಗಳ ಬಗ್ಗೆ ಚಚಿಸುವ ವೇದಿಕೆಯಾಗಿದೆ.


(Release ID: 1882827) Visitor Counter : 187