ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕಾಶಿ ಮತ್ತು ತಮಿಳುನಾಡು ನಡುವಿನ ಹಳೆಯ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಪುನರುಜ್ಜೀವನಗೊಳಿಸಿದ ಪ್ರಧಾನಿ: ಶ್ರೀ ಅನುರಾಗ್ ಸಿಂಗ್ ಠಾಕೂರ್
ಕಾಶಿ ಮತ್ತು ಶಿವಕಾಶಿಯಲ್ಲಿ ಸಂಸ್ಕೃತಿ, ಆಚರಣೆಗಳು, ಹೆಸರುಗಳು ಒಂದೇ: ಶ್ರೀ ಅನುರಾಗ್ ಸಿಂಗ್ ಠಾಕೂರ್
Posted On:
11 DEC 2022 7:35PM by PIB Bengaluru
ಕೇಂದ್ರ ಮಾಹಿತಿ ಮತ್ತು ಪ್ರಸಾರ,ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶಿ ಮತ್ತು ತಮಿಳುನಾಡು ನಡುವಿನ ಹಳೆಯ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧವನ್ನು ಪುನರುಜ್ಜೀವನಗೊಳಿಸಿದ್ದಾರೆ ಎಂದು ಬನಾರಸ್ ಹಿಂದೂ ಕಾಶಿ ತಮಿಳು ಸಂಗಮಮ್‌ನಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ವಾರಣಾಸಿಯಲ್ಲಿ ವಿಶ್ವವಿದ್ಯಾಲಯ. ಕಾಶಿ ತಮಿಳು ಸಂಗಮಮ್‌ನ ಉಪಕ್ರಮಕ್ಕಾಗಿ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನ ಮಂತ್ರಿಯವರ ಉಪಕ್ರಮದ ಮೇರೆಗೆ ತಮಿಳುನಾಡಿನ ವಿವಿಧ ಭಾಗಗಳಿಂದ 2500 ಜನರು ಕಾಶಿಗೆ ಬರುತ್ತಿದ್ದಾರೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮಕ್ಕೆ ಕ್ರೀಡೆಗಳನ್ನು ಸೇರಿಸುವ ಮೂಲಕ ಪ್ರಧಾನ ಮಂತ್ರಿ ಅವರು ಯುವಕರಲ್ಲಿ ಉತ್ಸಾಹ ಮೂಡಿಸಿದ್ದಾರೆ. ಇದು "ಏಕ್ ಭಾರತ್ ಶ್ರೇಷ್ಠ ಭಾರತಕ್ಕೆ" ಕ್ರೀಡೆಯ ಮಹತ್ವವನ್ನು ತೋರಿಸುತ್ತದೆ. ಆಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಇದು ಸೌಹಾರ್ದ ಪಂದ್ಯ. ಈ ಸೌಹಾರ್ದಯುತ ಪಂದ್ಯದ ಮೂಲಕ ಸ್ಪರ್ಧಿಗಳು ಪರಸ್ಪರ ಅರಿತುಕೊಳ್ಳಲು ಸಹಕಾರಿಯಾಗಲಿದೆ. ಭಾಷೆ ಗೊತ್ತಿಲ್ಲದಿದ್ದರೂ ಕ್ರೀಡೆ,ಸಾಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಒಬ್ಬರಿಗೊಬ್ಬರು ಸಂವಹನ ಮತ್ತು ಪರಿಚಯ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಶ್ರೀ ಠಾಕೂರ್ ಅವರು ಅಮೃತ್ ಕಾಲದ ಸಮಯದಲ್ಲಿ ನಾವು ಹಕ್ಕುಗಳನ್ನು ಹುಡುಕುವುದು ಮಾತ್ರವಲ್ಲದೇ ಅದರ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳಬೇಕು ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಎತ್ತಿ ತೋರಿಸಿದರು. ವಾರಣಾಸಿಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳು ಹಿಂದೆಂದೂ ಕಂಡಿಲ್ಲ ಎಂದರು. ಈ ಬೆಳವಣಿಗೆ ವಾರಣಾಸಿಯಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಆಗಿದೆ. ಕಾಶಿ ತಮಿಳು ಸಂಗಮಮ್ ಬಗ್ಗೆ ಮೊದಲು ಯಾರೂ ಯೋಚಿಸಿರಲಿಲ್ಲ. ತಮಿಳುನಾಡಿನಲ್ಲಿ ಕಾಶಿಯೊಂದಿಗೆ ತೆಂಕಶಿ, ಶಿವಕಾಶಿಯಂತಹ ಸಾಕಷ್ಟು ಪಟ್ಟಣಗಳಿವೆ. ಇದು ಆರಂಭವಷ್ಟೇ ಎಂದರು. ಈಗ ಕಾಶಿಗೆ ಬಂದ 2500 ಮಂದಿ ಪ್ರವಾಸಿಗರನ್ನು ಕಾಶಿಯಿಂದ ತಮಿಳುನಾಡಿಗೆ ವಾಪಸ್ ಕರೆತರಲಾಗುತ್ತದೆ. ಈ ಸಂಗಮಮ್ ಅನ್ನು ಮಾಡಲು ಒಟ್ಟಾಗಿ ಕೆಲಸ ಮಾಡಿದ ವಿವಿಧ ಸಚಿವಾಲಯಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಅಲ್ಲದೇ ತಮಿಳುನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಜನಪ್ರಿಯಗೊಳಿಸುವಂತೆ ಠಾಕೂರ್ ಅವರು ಈ ಸಂದರ್ಭದಲ್ಲಿ ತಮ್ಮ ಭಾಷಣದ ಮೂಲಕ ಜನತೆಯನ್ನು ಒತ್ತಾಯಿಸಿದರು.
ಕಾಶಿಯೊಂದಿಗೆ ಸಂಪರ್ಕ ಹೊಂದಿದ ತಮಿಳುನಾಡಿನ ಶಿವಕಾಶಿಯಂತಹ ಸ್ಥಳಗಳಿಗೆ ಹೋಗಬೇಕೆಂದು ಶ್ರೀ ಠಾಕೂರ್ ಉತ್ತರ ಪ್ರದೇಶದ ಜನರನ್ನು ಒತ್ತಾಯಿಸಿದರು. ತಮಿಳುನಾಡಿನ ಹಲವು ಪಟ್ಟಣಗಳೊಂದಿಗೆ ಕಾಶಿಗೆ ಅನಾದಿ ಕಾಲದ ಸಂಪರ್ಕವಿದೆ. ಇದಕ್ಕೆ ಪ್ರಧಾನಿ ಮೋದಿಯವರು ಜೀವ ತುಂಬಿದ್ದಾರೆ. ಪ್ರಧಾನಿಯವರು ಸೋಮನಾಥ, ಕೇದಾರನಾಥ ಮತ್ತು ಅಯೋಧ್ಯೆಯ ದೇವಾಲಯಗಳನ್ನು ಭವ್ಯ ಮತ್ತು ದೈವಿಕವಾಗಿಸಿದ್ದಾರೆ ಎಂದು ಹೇಳಿದರು. ಹಾಗೆಯೇ ಕಾಶಿಯನ್ನು ವಿಶ್ವ ದಿವ್ಯ ಭಾವವನ್ನು ಕಾಶಿಯನ್ನಾಗಿ ಸಹ ಮಾಡಿದ್ದಾರೆಂದು ಹೇಳಿದರು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರು ಮಾತನಾಡಿ, ಭಾರತೀಯರ ಭಾರತದ ದೃಷ್ಟಿಕೋನಲ್ಲೆ ಅನುಗುಣವಾಗಿ ಕಾಶಿ ತಮಿಳು ಸಂಗಮಮ್ ಅನ್ನು ಪ್ರಧಾನ ಮಂತ್ರಿಗಳ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಕಾಶಿ ಮತ್ತು ತಮಿಳುನಾಡಿಗೆ ಅನಾದಿ ಕಾಲದ ಸಂಬಂಧವಿದೆ ಎಂದರು. ಕಂಚಿ ಮತ್ತು ಕಾಶಿ ರೇಷ್ಮೆ ಸೀರೆಗಳಂತೆ ಈ ಪ್ರದೇಶಗಳು ಜನಪ್ರಿಯತೆಯೊಂದಿಗೆ ಸಮಾನತೆಯನ್ನು ಸಹ ಹೊಂದಿವೆ ಎಂದು ಅವರು ಹೇಳಿದರು. ಕಾಶಿ ಮತ್ತು ತಮಿಳುನಾಡು ನಡುವೆ ಹೊಸ ರೈಲು ಸೇವೆಯನ್ನು ಘೋಷಿಸಿದ್ದಕ್ಕಾಗಿ ಅವರು ರೈಲ್ವೆ ಸಚಿವರನ್ನು ಶ್ಲಾಘಿಸಿದರು. ಬಿಎಚ್‌ಯುನಲ್ಲಿ ಭಾರತಿಯಾರ್ ಅವರನ್ನು ಸ್ಮರಿಸುವ ಕುರ್ಚಿಯನ್ನು ಸ್ಥಾಪಿಸಿದ್ದಕ್ಕಾಗಿ ಮುರುಗನ್ ಅವರು ಪ್ರಧಾನಿ ನರೇಂದ್ರ ಮೋದಿಜೀಯನ್ನು ಶ್ಲಾಘಿಸಿದರು.
ಮಣಿಪುರದ ಗವರ್ನರ್ ಡಾ. ಎಲ್.ಗಣೇಶನ್ ಅವರು ಮಾತನಾಡಿ, ಕಾಶಿ ತಮಿಳು ಸಂಗಮಮ್‌ನ ಉದ್ದೇಶವು ಭಾರತವನ್ನು ಒಂದು ದೇಶವಾಗಿ ಐಕ್ಯತೆಯನ್ನು ಎತ್ತಿ ತೋರಿಸುವುದಾಗಿದೆ ಎಂದು ಒತ್ತಿ ಹೇಳಿದರು. ಭಾರತವನ್ನು ಎಂದಿಗೂ ಪ್ರತ್ಯೇಕಿಸಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಕಾಶಿ ಯಾತ್ರೆ ಅನಾದಿ ಕಾಲದ ಸಂಪ್ರದಾಯವಾಗಿದೆ ಎಂದರು. ತೀರ್ಥಯಾತ್ರೆ ದೇಶದ ಜನರ ರಕ್ತ ಸಂಚಾರವಾಗಿದೆ
ಭಾರತಿಯಾರ್ ಭಾರತವನ್ನು ತಾಯಿಯಂತೆ ಕಲ್ಪಿಸಿಕೊಂಡಿದ್ದಾರೆ ಎಂದ ಶ್ರೀ ಗಣೇಶನ್ ಅವರು, ಭಾರತದ ಬಗ್ಗೆ ಭಾರತಿಯಾರ್ ಅವರ ಅಭಿಪ್ರಾಯಗಳನ್ನು ವಿವರಿಸಿದರು.
ಕ್ರೀಡಾ ಹಬ್ಬ:(ಕ್ರೀಡೋತ್ಸವ)
ವಾರಣಾಸಿಯಲ್ಲಿ ಇಂದು ನಡೆದ ಸ್ನೇಹ ಕ್ರಿಕೆಟ್ ಪಂದ್ಯದ ಆಟಗಾರರನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ ಎಲ್ ಮುರುಗನ್ ಉಪಸ್ಥಿತರಿದ್ದರು.
ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಕಾಶಿ ತಮಿಳು ಸಂಗಮಮ್‌ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಣಿಪುರದ ರಾಜ್ಯಪಾಲರಾದ ಶ್ರೀ ಎಲ್ ಗಣೇಶನ್, ಡಾ ಎಲ್ .ಮುರುಗನ್ ಮತ್ತು ಮೇಘಾಲಯದ ಮಾಜಿ ರಾಜ್ಯಪಾಲರಾದ ಶ್ರೀ ಷಣ್ಮುಗನಾಥನ್ ಅವರು ಉಪಸ್ಥಿತರಿದ್ದರು.
ಕಾಶಿ ತಮಿಳು ಸಂಗಮಮ್‌ನ ಅಂಗವಾಗಿ ಕ್ರೀಡೋತ್ಸವ ಆಯೋಜಿಸಲಾಗಿತ್ತು. ನಾಲ್ಕನೇ ದಿನ ಉತ್ತರ ಪ್ರದೇಶ ಮತ್ತು ತಮಿಳುನಾಡು ನಡುವೆ ಸ್ನೇಹ ಕ್ರಿಕೆಟ್ ಪಂದ್ಯ ನಡೆಯಿತು. ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಆಟಗಾರರನ್ನು ಸನ್ಮಾನಿಸಿದರು ಮತ್ತು ತಮಿಳುನಾಡು ಆಟಗಾರರನ್ನು ವಾರಣಾಸಿಗೆ ಸ್ವಾಗತಿಸಿದರು.
ಈ ಪಂದ್ಯದಲ್ಲಿ ಭಾಗವಹಿಸಿದ ಉತ್ತರ ಪ್ರದೇಶ ಮತ್ತು ತಮಿಳುನಾಡಿನ ಕ್ರಿಕೆಟ್ ತಂಡಗಳಿಗೆ ಡಾ.ಎಲ್.ಮುರುಗನ್ ಅವರು ಶುಭ ಹಾರೈಸಿದರು. ಇಂದು ತಮಿಳು ಕವಿ ಭಾರತಿಯಾರ್ ಅವರ ಜನ್ಮದಿನವಾಗಿದ್ದು, ಅವರು ವಾರಣಾಸಿಯಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಅವರು ಸ್ಮರಿಸಿದರು. ಅವರು ಭಾರತಿಯಾರ್ ಅವರ ಕವಿತೆಯನ್ನು ಉಲ್ಲೇಖಿಸಿ, ಅವರು ತಿಳಿದಿರುವ ಎಲ್ಲಾ ಭಾಷೆಗಳಲ್ಲಿ ತಮಿಳು ಭಾಷೆ ಅತ್ಯಂತ ಮಧುರವಾಗಿದೆ ಎಂದು ಹೇಳಿದರು. ಏಕ್ ಭಾರತ್ ಶ್ರೇಷ್ಠ ಭಾರತ್ ಸ್ಫೂರ್ತಿಗೆ ಅನುಗುಣವಾಗಿ ಕಾಶಿ ತಮಿಳು ಸಂಗಮಮ್‌ನ ಉಪಕ್ರಮಕ್ಕಾಗಿ ಅವರು ಪ್ರಧಾನ ಮಂತ್ರಿಗಳನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.
*****
(Release ID: 1882802)