ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಸತತ್ ಯೋಜನೆಯಡಿ ಗುರಿಗಳು

Posted On: 08 DEC 2022 2:41PM by PIB Bengaluru

2018ರ ಅಕ್ಟೋಬರ್ ನಲ್ಲಿ ಪ್ರಾರಂಭಿಸಲಾದ ಸುಸ್ಥಿರ ಪರ್ಯಾಯ ಸಾರಿಗೆ (ಸತತ್) ಉಪಕ್ರಮವು 2023-24ರ ವೇಳೆಗೆ ವಾರ್ಷಿಕ 15 ದಶಲಕ್ಷ ಮೆಟ್ರಿಕ್ ಟನ್ (ಎಂಎಂಟಿ) ಸಿಬಿಜಿ ಉತ್ಪಾದನೆಗಾಗಿ 5000 ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.

2022ರ ಅಕ್ಟೋಬರ್ 31 ರವರೆಗೆ ಸತತ್ ಯೋಜನೆಯಲ್ಲಿ ಭಾಗವಹಿಸುವ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ತಾವು ಉತ್ಪಾದಿಸಿದ ಸಿಬಿಜಿ ಖರೀದಿಗಾಗಿ ಉದ್ಯಮಿಗಳಿಗೆ 3694 ಲೆಟರ್ಸ್ ಆಫ್ ಇಂಟೆಂಟ್ (ಎಲ್ಒಐ) ಗಳನ್ನು ವಿತರಿಸಿವೆ. ಜೊತೆಗೆ, ವರ್ಷಕ್ಕೆ ಸುಮಾರು 225 ಮೆಟ್ರಿಕ್ ಟನ್ ಸ್ಥಾಪಿತ ಸಾಮರ್ಥ್ಯದ 38 ಸಿಬಿಜಿ /ಸಾಂದ್ರೀಕೃತ ಜೈವಿಕ ಅನಿಲ ಸ್ಥಾವರಗಳನ್ನು ಎಲ್ಒಐ ಹೊಂದಿರುವವರು ಪ್ರಾರಂಭಿಸಿದ್ದಾರೆ.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮಗಳ 1ನೇ ಹಂತ ಅಂಬ್ರೆಲ್ಲಾ ಯೋಜನೆಯಡಿ ಎಲ್ಲ ರೀತಿಯ ಜೈವಿಕ ಅನಿಲ ಸ್ಥಾವರಗಳಿಗೆ ಸಬ್ಸಿಡಿ / ಕೇಂದ್ರ ಆರ್ಥಿಕ ನೆರವನ್ನು ಒದಗಿಸುವ ಅವಧಿಯನ್ನು 31.03.2026ರವರೆಗೆ ವಿಸ್ತರಿಸಲಾಗಿದೆ.

ಪಳೆಯುಳಿಕೆ ಇಂಧನಗಳಲ್ಲಿ ದೇಶದ ಆಮದು ಅವಲಂಬನೆಯನ್ನು ತಗ್ಗಿಸುವ ಸಲುವಾಗಿ, ಸರ್ಕಾರವು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ವಿವಿಧ ನೀತಿ ಉಪಕ್ರಮಗಳನ್ನು ಕೈಗೊಂಡಿದೆ / ಪ್ರಾರಂಭಿಸಿದೆ ಹಾಗೂ ಜೈವಿಕ ಇಂಧನಗಳ ಉತ್ತೇಜನ, ಅನಿಲ ಆಧಾರಿತ ಆರ್ಥಿಕತೆ, ಇಂಧನ ದಕ್ಷತೆ ಮತ್ತು ಇಂಧನ ಸಂರಕ್ಷಣೆ, ಸಂಸ್ಕರಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಕಾರ್ಯತಂತ್ರಗಳನ್ನು ಅಳವಡಿಸಿಕೊಂಡಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರಾದ ಶ್ರೀ ರಾಮೇಶ್ವರ್ ತೇಲಿ  ಲೋಕಸಭೆಯಲ್ಲಿಂದು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
 

****
 


(Release ID: 1881885) Visitor Counter : 169


Read this release in: Kannada , English , Urdu , Tamil