ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

 ಪೆಟ್ರೋಲ್ ಪಂಪ್‌ಗಳು ಜೈವಿಕ ಇಂಧನವನ್ನು ಮಾರಾಟ ಮಾಡುತ್ತವೆ

प्रविष्टि तिथि: 08 DEC 2022 2:39PM by PIB Bengaluru

ದೇಶದಲ್ಲಿ ಜೈವಿಕ ಇಂಧನವನ್ನು ಮಾರಾಟ ಮಾಡುವ ಚಿಲ್ಲರೆ ಮಾರಾಟ ಮಳಿಗೆಗಳ’ ಈ ದಿನದವರೆಗಿನ (ROs) ಸಂಖ್ಯೆಯು ಈ ಕೆಳಗಿನಂತಿದೆ:
 ಸಾಂದ್ರೀಕೃತ ಜೈವಿಕ ಅನಿಲ (CBG) ಮಾರಾಟ ಮಾಡುವ ಚಿಲ್ಲರೆ ಮಳಿಗೆಗಳ  ಸಂಖ್ಯೆ - 90

E100 - ಅನ್ನು ಮಾರಾಟ ಮಾಡುವ ಚಿಲ್ಲರೆ ಮಳಿಗೆಗಳ  ಸಂಖ್ಯೆ -3

ಇದರ ಜೊತೆಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ದೇಶಾದ್ಯಂತ ಮಾರಾಟ ಮಾಡಲಾಗುತ್ತದೆ.

ಸರ್ಕಾರವು ನವೆಂಬರ್ 8, 2019 ರ ನಿರ್ಣಯದ ಪ್ರಕಾರ, ಸಾರಿಗೆ ಇಂಧನಗಳನ್ನು ಮಾರುಕಟ್ಟೆ ಮಾಡಲು ಅಧಿಕೃತವಾಗಿ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.  ಅಧಿಕೃತ ಘಟಕಗಳು ತಮ್ಮ ಪ್ರಸ್ತಾವಿತ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಜೈವಿಕ ಇಂಧನ ಸೇರಿದಂತೆ ಕನಿಷ್ಠ ಒಂದು ಹೊಸ ಪೀಳಿಗೆಯ ಪರ್ಯಾಯ ಇಂಧನವನ್ನು ಮಾರಾಟ ಮಾಡಲು ಸೌಲಭ್ಯಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.ಅದರಂತೆ ಔಟ್‌ಲೆಟ್ ಕಾರ್ಯಾಚರಣೆಯ ಮೂರು ವರ್ಷಗಳೊಳಗೆ ಹಲವಾರು ಇತರ ಶಾಸನಬದ್ಧ ಮಾರ್ಗಸೂಚಿಗಳನ್ನು ಅನುಸರಿಸುವ ಘಟಕಕ್ಕೆ ಒಳಪಟ್ಟಿರುತ್ತದೆ.

 ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾ (ARAI), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (IIP), ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಸೊಸೈಟಿ ಆಫ್ ಇಂಡಿಯನ್ ಆಟೋಮೋಟಿವ್ ಮ್ಯಾನುಫ್ಯಾಕ್ಚರರ್ಸ್ (SIAM) ನಡೆಸಿದ ಅಧ್ಯಯನ‌ ಪ್ರಕಾರ E-20 ಮಿಶ್ರಣವು ಕಾರ್ಬನ್ ಮಾನಾಕ್ಸೈಡ್ ಹೊರಸೂಸುವಿಕೆಯಲ್ಲಿ ಹೆಚ್ಚಿನ ಇಳಿಕೆಗೆ ಕಾರಣವಾಗಿದೆ ಎಂದು ಸೂಚಿಸಿದೆ. ಸಾಮಾನ್ಯ ಪೆಟ್ರೋಲ್‌ಗೆ ಹೋಲಿಸಿದರೆ ದ್ವಿಚಕ್ರ ವಾಹನಗಳಲ್ಲಿ ಶೇ.50 ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಶೇ.30 ಇದೆ. ಅಲ್ಲದೆ, ಸಾಮಾನ್ಯ ಪೆಟ್ರೋಲ್‌ಗೆ ಹೋಲಿಸಿದರೆ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಲ್ಲಿ ಹೈಡ್ರೋಕಾರ್ಬನ್ ಹೊರಸೂಸುವಿಕೆಯು ಶೇ.20 ರಷ್ಟು ಕಡಿಮೆಯಾಗಿದೆ.

ವಿದೇಶಿ ಕರೆನ್ಸಿಯ ನಿಜವಾದ ಉಳಿತಾಯದ ಮೇಲೆ ಯಾವುದೇ ನಿರ್ಣಾಯಕ ಅಂದಾಜುಗಳಿಲ್ಲ.‌ಏಕೆಂದರೆ ಇದು ಕಚ್ಚಾ ಬೆಲೆಗಳು ಮತ್ತು ಚಾಲ್ತಿಯಲ್ಲಿರುವ ವಿದೇಶಿ ವಿನಿಮಯ (ಫಾರೆಕ್ಸ್) ದರಗಳು ಇತ್ಯಾದಿಗಳಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ, ಆದಾಗ್ಯೂ, ಎಥೆನಾಲ್ ಪೂರೈಕೆ ವರ್ಷದಲ್ಲಿ (ESY) 15 ನೇ ನವೆಂಬರ್, 2022 ರವರೆಗೆ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ 2021-22 (ESY: 1ನೇ ಡಿಸೆಂಬರ್‌ನಿಂದ 30ನೇ ನವೆಂಬರ್‌ವರೆಗೆ) ರೂಪಾಯಿಗಿಂತಲೂ ಹೆಚ್ಚಿನ ಪ್ರಭಾವ ಬೀರಿದೆ ಎಂದು ಅಂದಾಜಿಸಲಾಗಿದೆ.  ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಆಮದು ಬಿಲ್ ಮೇಲೆ 20,000 ಕೋಟಿ ರೂ. ಆಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಶ್ರೀ ರಾಮೇಶ್ವರ್ ತೇಲಿ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

*****


(रिलीज़ आईडी: 1881836) आगंतुक पटल : 229
इस विज्ञप्ति को इन भाषाओं में पढ़ें: English , Urdu , Tamil , Kannada