ಸಂಸ್ಕೃತಿ ಸಚಿವಾಲಯ
azadi ka amrit mahotsav

ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಯಣ ಕುರಿತಂತೆ ಪ್ರಧಾನ ಮಂತ್ರಿ ಸಂಗ್ರಾಹಾಲಯದ ಮೊದಲ ಬೆಳಕು ಮತ್ತು ಧ್ವನಿ ಪ್ರದರ್ಶನಕ್ಕಿಂದು ಚಾಲನೆ 


ಚಿತ್ರಕಥೆಗೆ ತಮ್ಮ ಧ್ವನಿ ನೀಡಿರುವ ಹೆಸರಾಂತ ನಟ ಅಮಿತಾಭ್ ಬಚ್ಚನ್

Posted On: 07 DEC 2022 8:19PM by PIB Bengaluru

ಪ್ರಮುಖ ಮುಖ್ಯಾಂಶಗಳು:

•    ಈ ಪ್ರದರ್ಶನವು ಗಣಿತ ಮತ್ತು ಖಗೋಳಶಾಸ್ತ್ರದ ಬಗ್ಗೆ ಪ್ರಾಚೀನ ಭಾರತೀಯ ಜ್ಞಾನವನ್ನು ಆಸಕ್ತಿದಾಯಕ ರೀತಿಯಲ್ಲಿ ಬಿಂಬಿಸುತ್ತದೆ.
•    ಈಗಾಗಲೇ ಆಯ್ಕೆಯಾಗಿರುವ ಎರಡನೇ ಪ್ರದರ್ಶನವು ಭಾರತದ ಸ್ವಾತಂತ್ರ್ಯ ಹೋರಾಟದ ಎಲೆಮರೆಯಕಾಯಿಯಂತಹ ಮಹಿಳಾ ಯೋಧರ ಶೌರ್ಯವನ್ನು ಒಳಗೊಂಡಿದೆ.
•    ಪ್ರದರ್ಶನದ ಸಮಯ,  ಸಂಜೆ 6.30ಕ್ಕೆ ನಿಗದಿಪಡಿಸಲಾಗಿದೆ ಏಕೆಂದರೆ, ಸಂಗ್ರಾಹಾಲಯಕ್ಕೆ ಭೇಟಿ ನೀಡುವವರು ರಿಯಾಯಿತಿಯ ದರದಲ್ಲಿ ಎರಡಕ್ಕೂ ಟಿಕೆಟ್ ಖರೀದಿ
 ಸೌಲಭ್ಯದ ಪ್ರಯೋಜನ ಪಡೆಬಹುದು.

ಪ್ರಧಾನಮಂತ್ರಿ ಸಂಗ್ರಾಹಾಲಯದ ಬೆಳಕು ಮತ್ತು ಧ್ವನಿ ಪ್ರದರ್ಶನದ ಮೊದಲ ಸಂಚಿಕೆಯನ್ನು ನವದೆಹಲಿಯಲ್ಲಿಂದು ಪ್ರಾರಂಭಿಸಲಾಯಿತು.

ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಶ್ರೀ ಎಸ್. ಸೋಮನಾಥ್; ಎನ್.ಎಂ.ಎಂ.ಎಲ್.ನ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಶ್ರೀ ನೃಪೇಂದ್ರ ಮಿಶ್ರಾ, ಎನ್.ಎಂ.ಎಂ.ಎಲ್. ನ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಡಾ. ಎ. ಸೂರ್ಯ ಪ್ರಕಾಶ್ ಮತ್ತು ಬಾಹ್ಯಾಕಾಶ ಯಾನ ಕೈಗೊಂಡ ಮೊದಲ ಭಾರತೀಯ ಪ್ರಜೆ ವಿಂಗ್ ಕಮಾಂಡರ್ ಶ್ರೀ ರಾಕೇಶ್ ಶರ್ಮಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಚಿವಾಲಯದ ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿದ್ದರು.

ಪ್ರಧಾನಮಂತ್ರಿ ಸಂಗ್ರಾಹಾಲಯ ಸಂಕೀರ್ಣಕ್ಕೆ ಈ ಪ್ರದರ್ಶನವು ಒಂದು ಪ್ರಮುಖ ಸೇರ್ಪಡೆಯಾಗಿದೆ.  ಮೊದಲ ಸಂಚಿಕೆಯು ಸ್ವಾತಂತ್ರ್ಯಾನಂತರದ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಗಮನಾರ್ಹ ಪಯಣವನ್ನು ಪ್ರಸ್ತುತಪಡಿಸುತ್ತದೆ.  ಈ ಪ್ರದರ್ಶನವು ವಿಶ್ವದ ವಿವಿಧ ಸಂಶೋಧನಾ ತಾಣಗಳಲ್ಲಿ ಈ ಪರಿಣತಿಯ ನಂತರದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಗಣಿತ ಮತ್ತು ಖಗೋಳಶಾಸ್ತ್ರದ ಬಗ್ಗೆ ಪ್ರಾಚೀನ ಭಾರತೀಯ ಜ್ಞಾನವನ್ನು ಆಸಕ್ತಿದಾಯಕ ರೀತಿಯಲ್ಲಿ ಬಿಂಬಿಸುತ್ತದೆ.

ಈ ಪ್ರದರ್ಶನವು ಆಸಕ್ತಿದಾಯಕ ನಿರೂಪಣಾ ಸಾಹಿತ್ಯವನ್ನು ಹೊಂದಿದೆ, ಇದರಲ್ಲಿ ಯುವ ಜಿಜ್ಞಾಸೆಯ ಹುಡುಗಿ ಭೂಮಿಯಾಚೆಗಿನ ಬ್ರಹ್ಮಾಂಡದ ಬಗ್ಗೆ ಮುಗ್ಧತೆಯಿಂದ ಮಾಹಿತಿಯ ಅನ್ವೇಷಣೆ ಮಾಡುತ್ತಾಳೆ.  ಈ ವಿಷಯದ ಬಗ್ಗೆ ನೀಡಲಾದ ಜ್ಞಾನವು ವಿವಿಧ ವಯೋಮಾನದ ಸಂದರ್ಶಕರಿಗೆ ಆಕರ್ಷಕ ನಿರೂಪಣೆಯಾಗಿದೆ. ಹೆಸರಾಂತ ನಟ ಅಮಿತಾಭ್ ಬಚ್ಚನ್ ಅವರು ಚಿತ್ರಕಥೆಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಕಾರ್ಯಕಾರಿ ಮಂಡಳಿಯ ಸದಸ್ಯರ ಅಂದರೆ ಎನ್.ಎಂ.ಎಂ.ಎಲ್.ನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶ್ರೀ ನೃಪೇಂದ್ರ ಮಿಶ್ರಾ, ಎನ್.ಎಂ.ಎಂ.ಎಲ್.ನ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಡಾ. ಎ. ಸೂರ್ಯ ಪ್ರಕಾಶ್, ಸದಸ್ಯ ಡಾ. ವಿನಯ್ ಸಹಸ್ರಬುದ್ಧೆ, ಸದಸ್ಯ ಡಾ. ಸ್ವಪನ್ ದಾಸ್ ಗುಪ್ತಾ, ಸದಸ್ಯ ಪ್ರೊ. ಕಪಿಲ್ ಕಪೂರ್, ಪಿಎಂಎಸ್ ನ ನಿರ್ದೇಶಕ ಶ್ರೀ ಸಂಜೀವ್ ನಂದನ್ ಸಹಾಯ್ ಮತ್ತು ಇತರ ಅಧಿಕಾರಿಗಳ ವಿಶಾಲ ಮಾರ್ಗದರ್ಶನದಲ್ಲಿ ಇಡೀ ಪ್ರದರ್ಶನವನ್ನು ಸಿದ್ಧಪಡಿಸಲಾಗಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷರಾದ ಶ್ರೀ ಪ್ರಸೂನ್ ಜೋಶಿ ಮತ್ತು ಶ್ರೀ ಎಂ.ಜೆ. ಅಕ್ಬರ್ ಅವರು ನಿರ್ಮಾಣದ ಮೇಲ್ವಿಚಾರಣೆಯನ್ನು ನಿರ್ವಹಿಸಿದ್ದಾರೆ. 

ಈ ಸಂಚಿಕೆ ಸುಮಾರು 30 ನಿಮಿಷಗಳ ಕಾಲದ್ದಾಗಿದ್ದು, ಇಂದಿನ ಸುಧಾರಿತ ಉಡಾವಣಾ ಕೇಂದ್ರಗಳು ಮತ್ತು ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಸೈಕಲ್ ಗಳಲ್ಲಿ ಉಪಕರಣಗಳನ್ನು ಸಾಗಿಸುತ್ತಿದ್ದ ಆರಂಭಿಕ ದಿನಗಳನ್ನೂ ಒಳಗೊಂಡಿದೆ.  ನಿರೂಪಣಾ ಸಾಹಿತ್ಯ ಭಾರತದ ಗಮನಾರ್ಹ ಬಾಹ್ಯಾಕಾಶ ಪಯಣದ ಎಲ್ಲಾ ಪ್ರಮುಖ ಮೈಲಿಗಲ್ಲುಗಳನ್ನು ಒಳಗೊಂಡಿದೆ.  ಈ ಪ್ರದರ್ಶನವನ್ನು ಸಿಎಸ್ ಡಿರೆಕ್ಟ್ ರಚಿಸಿದ್ದಾರೆ.

ಭಾರತವು ಉಪಗ್ರಹಗಳು ಮತ್ತು ರಾಕೆಟ್ ಗಳನ್ನು ಮಾತ್ರ ಉಡಾವಣೆ ಮಾಡುವುದಿಲ್ಲ, ಜೊತೆಗೆ ಚಂದ್ರಯಾನ ಮತ್ತು ಮಂಗಳಯಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.  ವಿವಿಧ ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ, ಭಾರತವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅತ್ಯಂತ ಮುಂದುವರಿದ ರಾಷ್ಟ್ರಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

ಈಗಾಗಲೇ ಆಯ್ಕೆಯಾಗಿರುವ ಎರಡನೇ ಪ್ರದರ್ಶನವು ಭಾರತದ ಸ್ವಾತಂತ್ರ್ಯ ಹೋರಾಟದ ಎಲೆಮರೆಯ  ಕಾಯಿಯಂತಿರುವ ಮಹಿಳಾ ಯೋಧರ ಶೌರ್ಯವನ್ನು ಒಳಗೊಂಡಿದೆ.  ಇದು 2023 ರ ಫೆಬ್ರವರಿ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ.   ಪ್ರದರ್ಶನದ ಸಮಯವನ್ನು, ಸಂಜೆ 6.30 ಕ್ಕೆ ನಿಗದಿಪಡಿಸಲಾಗಿ, ಏಕೆಂದರೆ, ಸಂಗ್ರಾಹಾಲಯಕ್ಕೆ ಭೇಟಿ ನೀಡುವವರು ರಿಯಾಯಿತಿ ದರದಲ್ಲಿ ಎರಡಕ್ಕೂ ಟಿಕೆಟ್  ಖರೀದಿಸುವ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದಾಗಿದೆ.

*****


(Release ID: 1881626) Visitor Counter : 179


Read this release in: English , Urdu , Marathi