ಉಕ್ಕು ಸಚಿವಾಲಯ
azadi ka amrit mahotsav

​​​​​​​ ಸ್ಟೀಲ್ ರಿಸರ್ಚ್ & ಟೆಕ್ನಾಲಜಿ ಮಿಷನ್ ಆಫ್ ಇಂಡಿಯಾ ನೋಂದಾಯಿತ ಸಂಸ್ಥೆಯಾಗಿದೆ: ಕೇಂದ್ರ ಉಕ್ಕು ಇಲಾಖೆಯ ರಾಜ್ಯ ಸಚಿವ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ

Posted On: 07 DEC 2022 3:46PM by PIB Bengaluru

ಉದ್ಯಮ, ರಾಷ್ಟ್ರೀಯ ಆರ್&ಡಿ ಪ್ರಯೋಗಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸೇರಿ ಸಂಶೋಧನೆ ಕಾರ್ಯ ನಡೆಸುವ ಉದ್ದೇಶದಿಂದ 1860 ರ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ XXI ಅಡಿಯಲ್ಲಿ ನೋಂದಾಯಿಸಲಾದ ಸ್ಟೀಲ್ ರಿಸರ್ಚ್ ಅಂಡ್ ಟೆಕ್ನಾಲಜಿ ಮಿಷನ್ ಆಫ್ ಇಂಡಿಯಾ (ಎಸ್‌.ಆರ್‌.ಟಿ.ಎಂ.ಐ.) ಸಂಸ್ಥೆಯು ಯಥಾರ್ಥವಾಗಿ ಉದ್ಯಮ ಚಾಲಿತ ಒಂದು ಉಪಕ್ರಮವಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಶ್ರೀ ಫಗ್ಗನ್ ಸಿಂಗ್ ಕುಲಾಸ್ತೆ ಅವರು ಹೇಳಿದ್ದಾರೆ.

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ , ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ , ಟಾಟಾ ಸ್ಟೀಲ್, ಜೆ.ಎಸ್.ಡಬ್ಲ್ಯೂ  ಸ್ಟೀಲ್, ಜೆ.ಎಸ್.ಪಿ.ಎಲ್., ಎನ್.ಎಂ.ಡಿ.ಸಿ. ಮತ್ತು ಮೆಕೊನ್ ಸಂಸ್ಥೆಗಳು ಎಸ್‌.ಆರ್‌.ಟಿ.ಎಂ.ಐ.ಯ ಆಡಳಿತ ಮಂಡಳಿಯ ಸದಸ್ಯರಾಗಿವೆ. ಆಡಳಿತ ಮಂಡಳಿಯಲ್ಲಿ ಸರದಿ ಆಧಾರದ ಮೇಲೆ ಉದ್ಯಮದ ಸದಸ್ಯರಲ್ಲಿ ಒಬ್ಬರು ಅಧ್ಯಕ್ಷರಾಗಿರುತ್ತಾರೆ. ಉಕ್ಕಿನ ಸಚಿವಾಲಯದ ಜಂಟಿ ಕಾರ್ಯದರ್ಶಿ ಅವರೂ ಕೂಡಾ ಎಸ್‌.ಆರ್‌.ಟಿ.ಎಂ.ಐ. ಆಡಳಿತ ಮಂಡಳಿಯಲ್ಲಿ  ಸದಸ್ಯರಾಗಿದ್ದಾರೆ. ಎಲ್ಲಾ ನಿರ್ಧಾರಗಳನ್ನು ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ. ಆರ್ & ಡಿ ಯೋಜನೆಗಳನ್ನು ಆಡಳಿತ ಮಂಡಳಿಯು ಚರ್ಚಿಸುತ್ತದೆ ಮತ್ತು ಅನುಮೋದಿಸುತ್ತದೆ.

ಎಸ್‌.ಆರ್‌.ಟಿ.ಎಂ.ಐ ನೋಂದಾಯಿತ ಸಂಸ್ಥೆಯಾಗಿದೆ. ಇದು ಸರ್ಕಾರದ ಸ್ವಾಯತ್ತ ಸಂಸ್ಥೆ ಅಲ್ಲ. ಆದ್ದರಿಂದ, ಇದರ ಸಂಶೋಧನಾ ಯೋಜನೆಗಳನ್ನು ಅಥವಾ ಅವುಗಳ ಪರಿಣಾಮಗಳು, ಮಾನವ ಸಂಪನ್ಮೂಲ ನಿಯೋಜನೆ ಅಥವಾ ಯಾವುದೇ ಇತರ ಕ್ರಮಗಳನ್ನು ಸರ್ಕಾರ ನಿರ್ಣಯಿಸುವುದಿಲ್ಲ ಎಂದು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ  ಕೇಂದ್ರ ಸಚಿವ ಶ್ರೀ ಕುಲಸ್ತೆ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದರು .

*****


(Release ID: 1881617) Visitor Counter : 140