ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ವಿಶಿಷ್ಟಚೇತನರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಸಬಲೀಕರಣಕ್ಕೆ ಶಿಕ್ಷಣವು ಪ್ರಮುಖವಾಗಿದೆ" - ದ್ರೌಪದಿ ಮುರ್ಮು


 ಸರ್ಕಾರವು ಇಂದು ವಿಶಿಷ್ಟಚೇತನರ ಅಂತರರಾಷ್ಟ್ರೀಯ ದಿನವನ್ನು ಆಚರಿಸುತ್ತಿದೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಿವ್ಯಾಂಗರ ಸಬಲೀಕರಣಕ್ಕಾಗಿ ಮಾಡಿದ ಅತ್ಯುತ್ತಮ ಕೆಲಸಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

Posted On: 03 DEC 2022 5:15PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮಿ  ಅವರಿಂದು  ದೆಹಲಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ DEPwD ವತಿಯಿಂದ ಆಯೋಜಿಸಿದ್ದ " ಅಂತರರಾಷ್ಟ್ರೀಯ ವಿಶಿಷ್ಟಚೇತನರ ದಿನಾಚರಣೆ” ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮುರ್ಮು ಅವರು,ವ್ಯಕ್ತಿಗಳು,  ಸಂಸ್ಥೆಗಳು ಮತ್ತು ರಾಜ್ಯ/ಜಿಲ್ಲೆ ಇತ್ಯಾದಿಗಳಿಗೆ ವಿಶಿಷ್ಟಚೇತನರು  ಮಾಡಿದ  ಅತ್ಯುತ್ತಮ ಸಾಧನೆಗಳಿಗಾಗಿ ಮತ್ತು ವಿಕಲಾಂಗ ವ್ಯಕ್ತಿಗಳ (PwDs) ಸಬಲೀಕರಣಕ್ಕಾಗಿ ಮಾಡಿದ ಉತ್ತಮ‌ ಕೆಲಸಗಳಿಗಾಗಿ  ರಾಷ್ಟ್ರೀಯ ಪ್ರಶಸ್ತಿಗಳನ್ನು ವಿತರಿಸಿದರು. 

ಈ ಸಮಾರಂಭದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.  ವೀರೇಂದ್ರ ಕುಮಾರ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರುಗಳಾದ ಶ್ರೀ ರಾಮದಾಸ್ ಅಠಾವಳೆ, ಶ್ರೀಮತಿ ಪ್ರತಿಮಾ ಭೌಮಿಕ್ ಅವರುಗಳು ಉಪಸ್ಥಿತರಿದ್ದರು.

2021 ಮತ್ತು 2022 ರ ವಿಶಿಷ್ಟಚೇತನ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಕೆಳಗಿನ ವಿಭಾಗಗಳ ಅಡಿಯಲ್ಲಿ ನೀಡಲಾಗಿದೆ:-

1.ಅತ್ಯುತ್ತಮ ವಿಶಿಷ್ಟಚೇತನ;
 2.ಅತ್ಯುತ್ತಮ ದಿವ್ಯಾಂಗಜನ;
 3. ಅತ್ಯುತ್ತಮ ದಿವ್ಯಾಂಗ ಹುಡುಗ/ಹುಡುಗಿ;
 4.ಅತ್ಯುತ್ತಮ ವ್ಯಕ್ತಿ - ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ಕೆಲಸ;

5.ಸರ್ವಶ್ರೇಷ್ಠ ಪುನರ್ವಸ ಪೇಶೆವರ್ (ಪುನರ್ವಸತಿ ವೃತ್ತಿಪರ/ಕೆಲಸಗಾರ) – ದಿವ್ಯಾಂಗತ ಕೇ ಕ್ಷೇತ್ರ ಮೇ ಕಾರ್ಯರಥ್ :( ದಿವ್ಯಾಂಗರ ಅಭಿವೃದ್ಧಿ ಕ್ಷೇತ್ತದಲ್ಲಿ ತೊಡಗಿಸಿಕೊಂಡವರು)
6.ಸರ್ವಶ್ರೇಷ್ಠ ಅನುಸಂಧಾನ/ನವಪ್ರವರ್ತನ್/ಉತ್ಪದ್ವಿಕಾಸ್ – ದಿವ್ಯಾಂಗತ ಕೇ ಸಶಕ್ತಿಕರಣ್ ಕೇ ಕ್ಷೇತ್ರ ಮೇ; (ದಿವ್ಯಾಂಗರ ಸಶಕ್ತೀಕರಣ ಕ್ಷೇತ್ರದಲ್ಲಿ ಹೊಸಪರಿವರ್ತನೆ ಮತ್ತು ವಿಕಾಸ)

7:  ದಿವ್ಯಾಂಗ್ ಸಶಕ್ತಿಕರಣ್ ಹೇತು ಸರ್ವಶ್ರೇಷ್ಠ ಸಂಸ್ಥಾನ (ಖಾಸಗಿ ಸಂಸ್ಥೆ, NGO);
 ದಿವ್ಯಾಂಗೋ ಕೆ ಲಿಯೇ ಸರ್ವಶ್ರೇಷ್ಠ ನಿಯೋಕ್ತ (ಸರ್ಕಾರಿ ಸಂಸ್ಥೆ/ PSEಗಳು/ ಸ್ವಾಯತ್ತ ಸಂಸ್ಥೆಗಳು/ Pvt.Sector);
 ದಿವ್ಯಾಂಗೋ ಕೆ ಲಿಯೇ ಸರ್ವಶ್ರೇಷ್ಠ ಪ್ಲೇಸ್‌ಮೆಂಟ್ ಏಜೆನ್ಸಿ - ಸರ್ಕಾರ/ರಾಜ್ಯ ಸರ್ಕಾರ/ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ; (ದಿವ್ಯಾಂಗರ ಸಶಕ್ತೀಕರಣಕ್ಕಾಗಿ ದುಡಿದ  ಖಾಸಗಿ ಸಂಸ್ಥೆಗಳು/ಎನ್‌ಜಿಓ)
8.ದಿವ್ಯಾಂಗ್‌ ಕೆ‌ ಸರ್ವಶ್ರೇಷ್ಠ್ ಉದ್ಯೋಗ ಸಂಸ್ಥೆ - ಸರ್ಕಾರ/ರಾಜ್ಯ ಸರ್ಕಾರ/ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ;( ದಿವ್ಯಾಂಗರಿಗೆ ಅತ್ಯುತ್ತಮ ಸರ್ವಶ್ರೇಷ್ಠವಾದ ಉದ್ಯೋಗ ಸಂಸ್ಥೆ)

9.ಸುಗಮ್ಯ ಭಾರತ್ ಅಭಿಯಾನ್ ಕೇ ಕಾರ್ಯಾನ್ವಯನ್/ಬಾಧಮುಕ್ತ ವರಣ್ ಕೇ ಸೃಜನ್ ಮೇ ಸರ್ವಶ್ರೇಷ್ಠ ರಾಜ್ಯ/UT/ಜಿಲ್ಲೆ; (ಸುಗಮ ಭಾರತ ಅಭಿಯಾನ‌ ತೊಂದರೆಮುಕ್ತ ರಚನೆಯಲ್ಲಿ ಅತ್ಯುತ್ತಮ ರಾಜ್ಯ/UT/ಜಿಲ್ಲೆ;
  10.ಅತ್ಯುತ್ತಮ ಸಂಚಾರ ನಿರ್ವಹಣೆ‌‌‌/ಮಾಹಿತಿ ಮತ್ತು ಸಂವಹನ ಉತ್ಪಾದಕತೆ (ಸರ್ಕಾರಿ/ಖಾಸಗಿ ಸಂಸ್ಥೆಗಳು);
11.  ವಿಶಿಷ್ಟಚೇತನರ ಹಕ್ಕುಗಳ ಕಾಯಿದೆ/ಯುಡಿಐಡಿ ಮತ್ತು ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ಇತರ ಯೋಜನೆಗಳ ಅನುಷ್ಠಾನದಲ್ಲಿ ಅತ್ಯುತ್ತಮ ರಾಜ್ಯ/UT/ಜಿಲ್ಲೆ;
  ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ, 2016 ರ ಅನುಷ್ಠಾನದಲ್ಲಿ ವಿಕಲಾಂಗ ವ್ಯಕ್ತಿಗಳಿಗೆ ಅತ್ಯುತ್ತಮ ರಾಜ್ಯ ಆಯುಕ್ತರು
 11.ಪುನರ್ವಸತಿ ವೃತ್ತಿಪರರ ಅಭಿವೃದ್ಧಿಯಲ್ಲಿ ಅತ್ಯುತ್ತಮ ಸಂಸ್ಥೆ

 12. ಸರ್ವಶ್ರೇಷ್ಠ ಸುಗಮ್ಯ ಯತಾಯತ್ ಕೆ ಸಾಧನ್/ಸೂಚನಾ ಏವಂ ಸಂಚಾರ ಪ್ರೊಡಿಯೋಗಿಕಿ (ಸರ್ಕಾರಿ/ಖಾಸಗಿ ಸಂಸ್ಥೆ);
 ಸರ್ವಶ್ರೇಷ್ಠ ರಾಜ್ಯ/UT/ಜಿಲ್ಲೆಯಲ್ಲಿ ದಿವ್ಯಾಂಗನ್ ಕೆ ಅಧಿನಿಕ್ ಅಧಿನಿಯಂ/ಯುಡಿಐಡಿ ಮತ್ತು ದಿವ್ಯಾಂಗ್ ಸಬಲೀಕರಣ ಯಾವುದೇ ಯೋಜನೆಗೆ ಕಾರ್ಯನ್ವಯನ; 


 13.  ದಿವ್ಯ ಜನೋ ಕೇ ಅಧಿಕಾರ ಅಧಿನಿಯಮ್, 2016 ಕೇ ಅಪ್ನೇ ರಾಜ್ಯ ಮೇಂ ಕಾರ್ಯಾನ್ವಯನ್ ಮೇ ಸರ್ವಶ್ರೇಷ್ಠ ರಾಜ್ಯ ಆಯುಕ್ತ ದಿವ್ಯಾಂಗಜನ್.
 ಪುನರ್ವಸನ್ ಪೇಶೆವಾರೋನ್ ಕೇ ವಿಕಾಸ್ ಮೇ ಸಂಲಂಗ್ನ ಸರ್ವಶ್ರೇಷ್ಠ ಸಂಘಟನೆ - ದಿವ್ಯಾಂಗರ ಅಧಿಕಾರ ಅಧಿನಿಯಮ,‌2016 ರ ಸಾಲಿನಲ್ಲಿ ನಮ್ಮ‌ರಾಜ್ಯಗಳ ಕಾರ್ಯದಲ್ಲಿ ಸಾಧನೆಗೈದ  ದಿವ್ಯಾಂಗಜನ್ ರಾಜ್ಯ ಆಯುಕ್ತ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ, 2016 ರ ಅನುಷ್ಠಾನದಲ್ಲಿ ವಿಕಲಾಂಗ ವ್ಯಕ್ತಿಗಳಿಗೆ ಅತ್ಯುತ್ತಮ ರಾಜ್ಯ ಆಯುಕ್ತರು)
  
14. ಪುನರ್ವಸತಿ ವೃತ್ತಿಪರರ ಅಭಿವೃದ್ಧಿಯಲ್ಲಿ ಅತ್ಯುತ್ತಮ ಸಂಸ್ಥೆ

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು, ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವದಲ್ಲಿ ಒಂದು ಶತಕೋಟಿಗೂ ಹೆಚ್ಚು ಜನರು ವಿಶಿಷ್ಟಚೇತನರಾಗಿದ್ದಾರೆ.  ಇದರರ್ಥ ಪ್ರಪಂಚದ ಪ್ರತಿ 8 ನೇ ವ್ಯಕ್ತಿ ಯಾವುದಾದರೂ ರೂಪದಲ್ಲಿ  ಅಂಗವೈಕಲ್ಯವನ್ನು ಹೊಂದಿರುತ್ತಾರೆ.  ಭಾರತದ ಜನಸಂಖ್ಯೆಯ ಶೇಕಡಾ ಎರಡಕ್ಕಿಂತ ಹೆಚ್ಚು ಜನರು ವಿಕಲಾಂಗ ವ್ಯಕ್ತಿಗಳು.  ಆದ್ದರಿಂದ ವಿಕಲಚೇತನರು ಸ್ವಾವಲಂಬಿಯಾಗಿ ಗೌರವಯುತ ಜೀವನ ನಡೆಸುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.  ಅವರು ಕೂಡ ಉತ್ತಮ ಶಿಕ್ಷಣವನ್ನು ಪಡೆದು  ಮನೆಗಳಲ್ಲಿ ಮತ್ತು ಸಮಾಜದಲ್ಲಿ ಸುರಕ್ಷಿತವಾಗಿರುವಂತೆ ಮಾಡಬೇಕು. ಅವರಿಗೆ ತಮ್ಮ ವೃತ್ತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ ಮತ್ತು ಸಮಾನ ಉದ್ಯೋಗಾವಕಾಶಗಳನ್ನು ಹೊಂದುವ ಅವಕಾಶವೂ ಇದೆ.ಇದೆಲ್ಲವೂ ಅವರಿಗೆ ನೀಡುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ, ಜ್ಞಾನವನ್ನು ಪಡೆಯಲು ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಅಂಗವೈಕಲ್ಯವನ್ನು ಎಂದಿಗೂ ಅಡ್ಡಿಯೆಂದು  ಪರಿಗಣಿಸಿಲ್ಲ ಎಂದು ರಾಷ್ಟ್ರಪತಿ ಹೇಳಿದರು.  ಆಗಾಗ್ಗೆ, ದಿವ್ಯಾಂಗರು ದೈವಿಕ-ಗುಣಗಳಿಂದ ಪ್ರತಿಭಾನ್ವಿತರಾಗಿರುವುದು ಕಂಡುಬರುತ್ತದೆ.  ನಮ್ಮ ದಿವ್ಯಾಂಗ ಸಹೋದರ ಸಹೋದರಿಯರು ತಮ್ಮ ಅದಮ್ಯ ಧೈರ್ಯ, ಪ್ರತಿಭೆ ಮತ್ತು ದೃಢಸಂಕಲ್ಪದ ಬಲದಿಂದ ಅನೇಕ ಕ್ಷೇತ್ರಗಳಲ್ಲಿ ಪ್ರಭಾವಶಾಲಿ ಸಾಧನೆಗಳನ್ನು ಸಾಧಿಸಿದ ಅಸಂಖ್ಯಾತ ಉದಾಹರಣೆಗಳಿವೆ.  ಸಾಕಷ್ಟು ಅವಕಾಶಗಳು ಮತ್ತು ಸರಿಯಾದ ವಾತಾವರಣವನ್ನು ನೀಡಿದರೆ, ಅವರು ಎಲ್ಲ ಕ್ಷೇತ್ರಗಳಲ್ಲಿಯೂ ಮಿಂಚಬಹುದು ಎಂದರು.

ವಿಶಿಷ್ಟಚೇತನರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಸಬಲೀಕರಣಕ್ಕೆ ಶಿಕ್ಷಣ ಪ್ರಮುಖವಾಗಿದೆ
 ಶಿಕ್ಷಣದಲ್ಲಿ ಭಾಷೆಗೆ ಸಂಬಂಧಿಸಿದ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ವಿಕಲಾಂಗಚೇತನ‌‌ ಮಕ್ಕಳಿಗೆ ಶಿಕ್ಷಣವನ್ನು ಹೆಚ್ಚು ಸುಲಭವಾಗಿಸಲು ತಂತ್ರಜ್ಞಾನದ ಗರಿಷ್ಠ ಬಳಕೆಗೆ  ಒತ್ತು ನೀಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ 2020 ವಿಕಲಾಂಗಚೇತನ‌ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಸಮಾನ ಅವಕಾಶಗಳನ್ನು ಒದಗಿಸುವ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವ ಪ್ರಾಮುಖ್ಯವನ್ನು ಒತ್ತಿಹೇಳುತ್ತದೆ.  ಶ್ರವಣದೋಷವುಳ್ಳ ಮಕ್ಕಳಿಗಾಗಿ 1 ರಿಂದ 6 ನೇ ತರಗತಿಯ NCERT (ಎನ್‌ಸಿ‌ಇಆರ್‌ಟಿ) ಪಠ್ಯ ಪುಸ್ತಕಗಳನ್ನು ಭಾರತೀಯ ಸಂಜ್ಞಾ ಭಾಷೆಗೆ ಪರಿವರ್ತಿಸಲಾಗಿದೆ ಎಂದು ಅವರು ಸಂತೋಷಪಟ್ಟರು.  ಶ್ರವಣದೋಷವುಳ್ಳ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಯ ಶಿಕ್ಷಣ ಪ್ರಕ್ರಿಯೆಯಲ್ಲಿ ಸೇರಿಸುವುದು ಒಂದು ಪ್ರಮುಖ ಉಪಕ್ರಮವಾಗಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು.
ದಿವ್ಯಾಂಗರ ಸಬಲೀಕರಣಕ್ಕೆ ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ . ದಿವ್ಯಾಂಗರಲ್ಲಿ ಆತ್ಮಸ್ಥೈರ್ಯ ತುಂಬುವುದು ಅವರನ್ನು ಸಬಲೀಕರಣಗೊಳಿಸಲು ಬಹಳ ಮುಖ್ಯ .ವಿಶಿಷ್ಟಚೇತನರು ಸಾಮಾನ್ಯ ಜನರಂತೆ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಹೊಂದಿರುತ್ತಾರೆ ಮತ್ತು ಕೆಲವೊಮ್ಮೆ ಅವರಿಗಿಂತ ಹೆಚ್ಚು ಕೂಡ ಸಾಧಿಸಿ‌ ತೋರಿಸಿದ್ದಾರೆ. ವಿಶಿಷ್ಟಚೇತನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಅವರಲ್ಲಿ ಆತ್ಮಸ್ಥೈರ್ಯ ತುಂಬುವುದು ಅತ್ಯಗತ್ಯವಾಗಿದೆ.  ಸಮಾಜದ ಎಲ್ಲ ವರ್ಗದವರು ದಿವ್ಯಾಂಗರು ಸ್ವಾವಲಂಬಿಗಳಾಗಲು ಮತ್ತು ಜೀವನದಲ್ಲಿ ಮುನ್ನಡೆಯಲು ಪ್ರೇರೇಪಿಸಬೇಕು.
ನಮ್ಮ ದಿವ್ಯಾಂಗ ಸಹೋದರರು ಮತ್ತು ಸಹೋದರಿಯರನ್ನು ಮುಖ್ಯವಾಹಿನಿಗೆ ತರಲು ನಾವೆಲ್ಲ ಪರಿಣಾಮಕಾರಿ ಕೊಡುಗೆಯನ್ನು ನೀಡಿದಾಗ, ನಮ್ಮ ದೇಶವು ವೇಗವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತದೆ ಎಂದು ಅವರು ಹೇಳಿದರು.

 ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.  ವೀರೇಂದ್ರ ಕುಮಾರ್ ಮಾತನಾಡಿ, ದಿವ್ಯಾಂಗಜನರು ಅತ್ಯಮೂಲ್ಯ ಮಾನವ ಸಂಪನ್ಮೂಲಗಳಾಗಿದ್ದು, ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಪ್ರಧಾನಮಂತ್ರಿಯವರು ವಿಶಿಷ್ಟಚೇತನರ ಸಮಸ್ಯೆಗಳಿಗೆ ಆದ್ಯತೆ ನೀಡಿದ್ದಾರೆ.  ಅವರ ಧ್ಯೇಯವಾಕ್ಯ "ಒಳಗೊಳ್ಳುವ ಬೆಳವಣಿಗೆ, ಎಲ್ಲರ ಅಭಿವೃದ್ಧಿ ಮತ್ತು ಎಲ್ಲರ ವಿಶ್ವಾಸ".  ಸರ್ಕಾರವು 19.04.2017 ರಿಂದ ಜಾರಿಗೆ ಬಂದಿರುವ ವಿಕಲಾಂಗ ವ್ಯಕ್ತಿಗಳ ಹಕ್ಕು ಕಾಯಿದೆ, 2016 ಅನ್ನು ಜಾರಿಗೊಳಿಸಿದೆ.  ಅಂಗವಿಕಲರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಕಾಯಿದೆಯು ಒದಗಿಸುತ್ತದೆ ಎಂದರು.

 ವಿಶಿಷ್ಟಚೇತನರು ಗೌರವಯುತವಾಗಿ ಅರ್ಥಪೂರ್ಣ ಜೀವನ ನಡೆಸುವಂತಾಗಲು ವಿಶಿಷ್ಟಚೇತನರಿಗೆ ಸಾರ್ವತ್ರಿಕ ಪ್ರವೇಶವನ್ನು ಕಲ್ಪಿಸಲು ಸುಗಮ್ಯ ಭಾರತ ಅಭಿಯಾನವನ್ನು 03.12.2015 ರಂದು ಸರ್ಕಾರವು ಪ್ರಾರಂಭಿಸಿದೆ ಎಂದು ಅವರು ಹೇಳಿದರು.  ಸಾರ್ವಜನಿಕ ಕಟ್ಟಡಗಳು, ಸಾರಿಗೆ ವ್ಯವಸ್ಥೆ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಈ ಅಭಿಯಾನದ ಅಡಿಯಲ್ಲಿ ಸೇರಿಸಲಾಗಿದೆ.  ಜನಸಾಮಾನ್ಯರು ಎದುರಿಸುತ್ತಿರುವ ಪ್ರವೇಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಆ ಸಮಸ್ಯೆಗಳನ್ನು ತ್ವರಿತವಾಗಿ ಮತ್ತು ವ್ಯವಸ್ಥಿತವಾಗಿ ಪರಿಹರಿಸಲು ಇಲಾಖೆಯು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಶ್ರವಣದೋಷವುಳ್ಳವರ ಸಬಲೀಕರಣವನ್ನು ಉತ್ತೇಜಿಸಲು ಮತ್ತು ಭಾರತದಲ್ಲಿ ಸಂಜ್ಞಾ ಭಾಷೆಯನ್ನು ರಚಿಸಲು ಸರ್ಕಾರವು ಭಾರತೀಯ ಸಂಜ್ಞಾ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ.  ಸಂಸ್ಥೆಯು ಇತರ ಕಾರ್ಯಗಳ ಜೊತೆಗೆ, ಇದುವರೆಗೆ 10,000 ಕ್ಕಿಂತ ಹೆಚ್ಚು ಪದಗಳನ್ನು ಒಳಗೊಂಡಿರುವ ಸಂಜ್ಞಾ ಭಾಷೆಯ ನಿಘಂಟುಗಳನ್ನು ನಿರಂತರವಾಗಿ ಸಿದ್ಧಪಡಿಸುತ್ತಿದೆ‌ ಅವರು ತಿಳಿಸಿದರು.

 ವಿಶಿಷ್ಟಚೇತನರಿಗಾಗಿ ರಾಷ್ಟ್ರೀಯ ದತ್ತಸಂಚಯ ರಚಿಸುವ ಉದ್ದೇಶದಿಂದ ಸರಕಾರ ವಿಶಿಷ್ಟ  ಗುರುತಿನ ಚೀಟಿ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದರು.  ಇಲ್ಲಿಯವರೆಗೆ, ಎಲ್ಲ ರಾಜ್ಯಗಳು/UTಗಳ 713 ಜಿಲ್ಲೆಗಳಲ್ಲಿ 84 ಲಕ್ಷಕ್ಕೂ ಹೆಚ್ಚು UDID ಕಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಸರ್ಕಾರವು ಗ್ವಾಲಿಯರ್‌ನಲ್ಲಿ ಅಂಗವಿಕಲರ ಕ್ರೀಡಾ ಕೇಂದ್ರ ಮತ್ತು ಮಧ್ಯಪ್ರದೇಶದ ಸೆಹೋರ್‌ನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸುತ್ತಿದೆ‌ ಎಂದು ವಿವರಿಸಿದರು.

 ಡಾ.  ವೀರೇಂದ್ರ ಕುಮಾರ್ ಅವರು ದಿವ್ಯಾಂಗ ಯುವಕರು ಮತ್ತು ಮಕ್ಕಳ ಪ್ರತಿಭೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಲು ಸಚಿವಾಲಯವು ಆಯೋಜಿಸುತ್ತಿರುವ 'ದಿವ್ಯ ಕಲಾ ಶಕ್ತಿ' ಕುರಿತು ಮಾಹಿತಿ ನೀಡಿದರು.

 ಶ್ರೀ ರಾಜೇಶ್ ಅಗರವಾಲ್, ಕಾರ್ಯದರ್ಶಿ, DEPwD ಮತ್ತು ವಿಶಿಷ್ಟಚೇತನರ ಸಬಲೀಕರಣ ಇಲಾಖೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

****



(Release ID: 1880759) Visitor Counter : 143