ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ಮೀನುಗಾರಿಕೆ ಇಲಾಖೆಯು " ಘನೀಕೃತ ಮೀನು ಮತ್ತು ಮೀನು ಉತ್ಪನ್ನಗಳ ಪ್ರಚಾರ" ಕುರಿತು ರಾಷ್ಟ್ರೀಯ ವೆಬಿನಾರ್

Posted On: 01 DEC 2022 1:02PM by PIB Bengaluru
1.    ಶ್ರೀ ಜತೀಂದ್ರ ನಾಥ್ ಸ್ವೈನ್, ಕಾರ್ಯದರ್ಶಿ, ಮೀನುಗಾರಿಕೆ ಇಲಾಖೆಯು “ಘನೀಕೃತ  ಮೀನು ಮತ್ತು ಮೀನು ಉತ್ಪನ್ನಗಳ ಪ್ರಚಾರ” ಕುರಿತು ವೆಬಿನಾರ್ನ ಅಧ್ಯಕ್ಷತೆ ವಹಿಸಿದರು. 
2.    ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಘನೀಕೃತ ಮೀನು ಮತ್ತು ಮೀನು ಉತ್ಪನ್ನಗಳನ್ನು ಸಿಗುವಂತೆ  ಮಾಡುವ ಬಗ್ಗೆ ಕಾರ್ಯದರ್ಶಿ ವಿಶೇಷವಾಗಿ ಹೇಳಿದರು 
3.    ಒಳನಾಡು ಮೀನುಗಾರಿಕೆಯ ಜಂಟಿ ಕಾರ್ಯದರ್ಶಿ ಶ್ರೀ ಸಾಗರ್ ಮೆಹ್ರಾ ಅವರು ಭಾರತೀಯ ಮೀನುಗಾರಿಕೆ ಕ್ಷೇತ್ರದ ಪ್ರಸ್ತುತ ಸ್ಥಿತಿ,  ಸಚಿವಾಲಯದ  ಪ್ರಮುಖ ಯೋಜನೆ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಮತ್ತು ದೇಶದಲ್ಲಿ  ಮೀನು ಸೇವನೆಯನ್ನು ಹೆಚ್ಚಿಸುವ ಮಹತ್ವವನ್ನು ಸಂಕ್ಷಿಪ್ತವಾಗಿ ಚರ್ಚಿಸುತ್ತಾರೆ

 

https://static.pib.gov.in/WriteReadData/userfiles/image/image002UAQ5.jpg

Glimpse from the webinar

https://static.pib.gov.in/WriteReadData/userfiles/image/image00387TM.jpg

Frozen fish processing plant, Accelerated Freeze Drying Company Ltd. (Amalgam Foods)

 

ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ, ಭಾರತ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಭಾಗವಾಗಿ 29 ನವೆಂಬರ್ 2022 ರಂದು “ಘನೀಕೃತ ಮೀನು ಮತ್ತು ಮೀನು ಉತ್ಪನ್ನಗಳ ಪ್ರಚಾರ” ಕುರಿತು ರಾಷ್ಟ್ರೀಯ ವೆಬಿನಾರನ್ನು ಆಯೋಜಿಸಿತ್ತು. ಭಾರತ ಸರ್ಕಾರದ ಮೀನುಗಾರಿಕಾ ಇಲಾಖೆ (ಡಿಒಎಫ್) ಕಾರ್ಯದರ್ಶಿ ಶ್ರೀ ಜತೀಂದ್ರ ನಾಥ್ ಸ್ವೈನ್ ಅಧ್ಯಕ್ಷತೆ ವಹಿಸಿದ್ದರು ಮತ್ತು ಉದ್ಯಮಿಗಳು, ಮೀನುಗಾರಿಕಾ ಸಂಘಗಳು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಮತ್ತು ಮೀನುಗಾರಿಕೆ ಅಧಿಕಾರಿಗಳು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ರಾಜ್ಯದ ಕೃಷಿ, ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯಗಳ ಅಧ್ಯಾಪಕರು, ಮೀನುಗಾರಿಕೆ ಸಂಶೋಧನಾ ಸಂಸ್ಥೆಗಳು, ಮೀನುಗಾರಿಕೆ ಸಹಕಾರಿ ಅಧಿಕಾರಿಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ದೇಶಾದ್ಯಂತ ಮೀನುಗಾರಿಕೆಗೆ ಸಂಬಂಧಪಟ್ಟವರು  ಭಾಗವಹಿಸಿದ್ದರು.

ಜಂಟಿ ಕಾರ್ಯದರ್ಶಿ (ಒಳನಾಡು ಮೀನುಗಾರಿಕೆ) ಶ್ರೀ ಸಾಗರ್ ಮೆಹ್ರಾ ಅವರ ಸ್ವಾಗತ ಭಾಷಣದೊಂದಿಗೆ ವೆಬಿನಾರ್  ಪ್ರಾರಂಭವಾಯಿತು. ಶ್ರೀ ಸಾಗರ್ ಮೆಹ್ರಾ ಅವರು ಭಾರತೀಯ ಮೀನುಗಾರಿಕಾ ಕ್ಷೇತ್ರದ ಪ್ರಸ್ತುತ ಸ್ಥಿತಿ,  ಸಚಿವಾಲಯದ ಪ್ರಮುಖ ಯೋಜನೆ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ ವೈ), ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಪೌಷ್ಟಿಕಾಂಶದ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚಿಸಲು ದೇಶದಲ್ಲಿ ಮೀನು ಸೇವನೆಯನ್ನು ಹೆಚ್ಚಿಸುವ ಪ್ರಾಮುಖ್ಯವನ್ನು ಸಂಕ್ಷಿಪ್ತವಾಗಿ ಚರ್ಚಿಸಿದರು. ದೇಶದಲ್ಲಿ ಮೀನು ವ್ಯಾಪಾರದ ಪ್ರಸರಣ. ಜಾಗತಿಕ ಮೀನು ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆಯ ಸಂದರ್ಭದಲ್ಲಿ ಖಚಿತವಾದ ವಲಯದ ಬೆಳವಣಿಗೆಗೆ ದೇಶದಲ್ಲಿ ಮೀನು ಸೇವನೆಯನ್ನು ಹೆಚ್ಚಿಸುವುದು ಭಾರತದ ಅಪಾಯ ತಗ್ಗಿಸುವ ಯೋಜನೆಯಾಗಬೇಕು ಎಂದು ಅವರು ವಿಶೇಷವಾಗಿ ಹೇಳಿದರು.

ಮುಖ್ಯ ಭಾಷಣದಲ್ಲಿ, ಸಚಿವಾಲಯದ ಕಾರ್ಯದರ್ಶಿ ಶ್ರೀ ಜತೀಂದ್ರ ನಾಥ್ ಸ್ವೈನ್ ರವರು  ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಮುಖ್ಯವಾಗಿ ಘನೀಕೃತ ಮೀನು ಮತ್ತು ಮೀನು ಉತ್ಪನ್ನಗಳನ್ನು ಮಾರಾಟ ಮಾಡಲು ಗ್ರಾಹಕರಲ್ಲಿ ವಿಶ್ವಾಸವನ್ನು ಮೂಡಿಸಲು ಘನೀಕೃತ ಮೀನು ಮತ್ತು ಮೀನು ಉತ್ಪನ್ನಗಳು ಲಭಿಸುವಂತೆ ಮಾಡುವುದರ ಬಗ್ಗೆ ವಿಶೇಷವಾಗಿ ಹೇಳಿದರು. ಗ್ರಾಹಕರ ನಂಬಿಕೆಯನ್ನು ಬೆಳೆಸುವ ಸಲುವಾಗಿ, ಪ್ರಸ್ತುತ ರಫ್ತುದಾರರು ಕಠಿಣ ಗುಣಮಟ್ಟದ ಅವಶ್ಯಕತೆಗಳನ್ನು ಅನುಸರಿಸುತ್ತಾರೆ ಆದ್ದರಿಂದ ಅದೇ ಗುಣಮಟ್ಟದ ಘನೀಕೃತ ಮೀನು ಮತ್ತು ಮೀನು ಉತ್ಪನ್ನಗಳನ್ನು ಅಗತ್ಯ ಲೇಬಲಿಂಗ್ ಮತ್ತು ಪ್ರಮಾಣೀಕರಣಗಳೊಂದಿಗೆ ದೇಶೀಯ ಮಾರುಕಟ್ಟೆಗೆ ವಿಸ್ತರಿಸಬೇಕು ಎಂದು ಸಲಹೆ ನೀಡಿದರು. ಹೆಚ್ಚುವರಿಯಾಗಿ, ನಗರ, ಉಪ ನಗರ ಮತ್ತು ಆಂತರಿಕ ಪ್ರದೇಶಗಳಲ್ಲಿ ಗ್ರಾಹಕರಿಗೆ ಲಭ್ಯತೆಯನ್ನು ಹೆಚ್ಚಿಸಲು ಇತರ ಉತ್ಪನ್ನಗಳ ಅಸ್ತಿತ್ವದಲ್ಲಿರುವ ಪೂರೈಕೆ ಸರಪಳಿಯ ಬಳಕೆಯನ್ನು ಅನ್ವೇಷಿಸಲು ಅವರು ಒತ್ತು ನೀಡಿದರು.

ತಾಂತ್ರಿಕ ಅಧಿವೇಶನಕ್ಕಾಗಿ, ಉದ್ಯಮದ ತಜ್ಞರಾದ ಶ್ರೀ. ಜಿ. ಎಸ್. ರಾತ್ (ಸೀನಿಯರ್ ಜನರಲ್ ಮ್ಯಾನೇಜರ್, ಸೇಲ್ಸ್ & ಮಾರ್ಕೆಟಿಂಗ್, ಫಾಲ್ಕನ್ ಮೆರೈನ್ ಎಕ್ಸ್ ಪೋರ್ಟ್ಸ್ ಲಿಮಿಟೆಡ್), ಶ್ರೀ ಎ ಜೆ ತಾರಕನ್ (ಅಮಲ್ಗಮ್ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷರು), ಮತ್ತು ಶ್ರೀ ಮ್ಯಾಥ್ಯೂ ಜೋಸೆಫ್ (ಸಿಒಒ ಮತ್ತು ಸಹ- ಸಂಸ್ಥಾಪಕ, ಫ್ರೆಶ್ ಟು ಹೋಮ್) ಅವರುಗಳನ್ನು ಮಾರುಕಟ್ಟೆ ಪ್ರವೃತ್ತಿಗಳು, ಗ್ರಾಹಕರ ಒಳನೋಟಗಳು ಮತ್ತು ಘನೀಕೃತ ಮೀನು ಮತ್ತು ಮೀನು ಉತ್ಪನ್ನಗಳ ಸಂಸ್ಕರಣೆಗಾಗಿ ಬಳಸುವ ತಂತ್ರಜ್ಞಾನಗಳ ಕುರಿತು ಮಾತನಾಡಲು ಆಹ್ವಾನಿಸಲಾಯಿತು. ಪ್ರಸ್ತುತ ಮಾರುಕಟ್ಟೆಯ ಸನ್ನಿವೇಶ ಮತ್ತು ಒಳಗೊಂಡಿರುವ ತಂತ್ರಜ್ಞಾನಗಳನ್ನು ಚರ್ಚಿಸುವಾಗ ತಜ್ಞರು ತಾಜಾ ಮೀನುಗಳಿಗೆ ಹೋಲಿಸಿದರೆ ಘನೀಕೃತ ಮೀನುಗಳಿಗೆ ಇರುವ ಕಡಿಮೆ ಗ್ರಾಹಕರ ಆದ್ಯತೆಗೆ ಸಂಬಂಧಿಸಿದ ಸವಾಲುಗಳು, ವಿಭಜಿತ ಪೂರೈಕೆ ಸರಪಳಿ, ಗ್ರಾಹಕ ಮಾರುಕಟ್ಟೆಯಲ್ಲಿ ಘನೀಕೃತ ಮೀನು ಮತ್ತು ಮೀನು ಉತ್ಪನ್ನಗಳ ಕಡಿಮೆ ಸ್ಥಾನ, ಕಡಿಮೆ ಉತ್ಪನ್ನ ಲಭ್ಯತೆ, ಇತ್ಯಾದಿಗಳ ಬಗ್ಗೆ ಎತ್ತಿ ತೋರಿಸಿದರು.

ಇದಲ್ಲದೆ, ಭಾಗವಹಿಸಿ ಮಾತನಾಡಿದವರು ಅವಕಾಶ ಕ್ಷೇತ್ರಗಳಿಗೆ ಒತ್ತು ನೀಡಿದರು ಮತ್ತು ಮುಂದುವರಿಯಲು ತಂತ್ರಗಳನ್ನು ಶಿಫಾರಸು ಮಾಡಿದರು. ಗ್ರಾಹಕರ ಅರಿವು ಮತ್ತು ವರ್ತನೆಯ ಬದಲಾವಣೆಯ ಸಂವಹನ ಅಭಿಯಾನಗಳನ್ನು  ಪ್ರಾರಂಭಿಸುವ ಮೂಲಕ ಘನೀಕೃತ ಮೀನು ಮತ್ತು ಮೀನು ಉತ್ಪನ್ನಗಳಿಗೆ ಮಾರುಕಟ್ಟೆ ಪ್ರಚಾರವನ್ನು ಅಭಿವೃದ್ಧಿಪಡಿಸುವುದು, ವಹಿವಾಟಿನ ವೆಚ್ಚವನ್ನು ಕಡಿಮೆ ಮಾಡಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು, ಸಿದ್ಧ ಆಹಾರ,   ರೆಡಿ-ಟು-ಈಟ್  ಮತ್ತು ರೆಡಿ-ಟು-ಕುಕ್ (ಆರ್ ಟಿ ಸಿ) ಗ್ರಾಹಕರನ್ನು ಬಳಸಿಕೊಳ್ಳುವುದು, ಬೆಲೆಯ ಪಾರದರ್ಶಕತೆಯನ್ನು ತರಬಲ್ಲ ಮೀನು ಮಾರುಕಟ್ಟೆಗಳನ್ನು ಸಂಘಟಿಸುವ ಬಗ್ಗೆ ನೀತಿಗಳನ್ನು ಅಭಿವೃದ್ಧಿಪಡಿಸುವುದು, ಗುಣಮಟ್ಟ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸುವ್ಯವಸ್ಥಿತ ಪ್ರಕ್ರಿಯೆಗಳು ಇತ್ಯಾದಿಗಳು ಇದರಲ್ಲಿ ಸೇರಿದೆ.   

ಕೈಗಾರಿಕಾ ಅಭ್ಯಾಸಗಳ ಕುರಿತು ತಜ್ಞರು ತೋರಿಸಿದ ವೀಡಿಯೊಗಳು ಮತ್ತು ಮುಕ್ತ ವೇದಿಕೆಯಲ್ಲಿ ತೆಗೆದುಕೊಂಡ ಪ್ರಶ್ನೆಗಳು ಅಧಿವೇಶನವನ್ನು ಸಂವಾದಾತ್ಮಕ ಮತ್ತು ಫಲಪ್ರದಗೊಳಿಸಿದವು. ವಲಯದ ಕಾರ್ಯತಂತ್ರಗಳು ಮತ್ತು ಕ್ರಿಯಾ ಯೋಜನೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಒಳನೋಟವುಳ್ಳ ಚರ್ಚೆಗಳಿಂದ ಅನುಸರಣಾ ಕ್ರಿಯೆಯ ಅಂಶಗಳು ಹೊರಬಂದವು. ಅಧ್ಯಕ್ಷರು, ಪ್ರತಿನಿಧಿಗಳು, ಅತಿಥಿ ಉಪನ್ಯಾಸಕರು ಮತ್ತು ಭಾಗವಹಿಸಿದವರಿಗೆ ಮೀನುಗಾರಿಕೆ ಸಚಿವಾಲಯ, ಸಹಾಯಕ ಆಯುಕ್ತರಾದ  ಡಾ. ಎಸ್.ಕೆ. ದ್ವಿವೇದಿ ಅವರ ವಂದನಾರ್ಪಣೆಯೊಂದಿಗೆ ವೆಬಿನಾರ್ ಮುಕ್ತಾಯಗೊಂಡಿತು.

*****



(Release ID: 1880309) Visitor Counter : 164


Read this release in: Tamil , English , Urdu , Hindi , Telugu