ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕ್ಲೀನ್-ಎ-ಥಾನ್ ಉಪಕ್ರಮದ ಧ್ಯೇಯವಾಕ್ಯವೆಂದರೆ "ನಾನೂ  ಕಸ ಹಾಕುವುದಿಲ್ಲ, ಕಸ ಹಾಕುವುದಕ್ಕೂ ಬಿಡುವುದಿಲ್ಲ"



"ನಾವು ಸ್ವಚ್ಛ ಮತ್ತು ಹಸಿರು ಗೋವಾಕ್ಕೆ ಬದ್ಧರಾಗಿದ್ದೇವೆ." -  ಡಾ ಪ್ರಮೋದ್ ಪಿ ಸಾವಂತ್

"ಸ್ವಚ್ಛ ಗೋವಾ ಭಾರತದ ಪ್ರವಾಸೋದ್ಯಮ ರಾಜಧಾನಿಯಾಗಬಹುದು." ಅಮೃತಾ ಫಡ್ನವಿಸ್, ಸ್ಥಾಪಕರು, ದಿವ್ಯಾಜ್ ಫೌಂಡೇಶನ್.

ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಅವರು ಮಿರಾಮಾರ್ ಕಡಲತೀರದಲ್ಲಿ ಕ್ಲೀನ್-ಎ-ಥಾನ್ ಕಾರ್ಯಕ್ರಮವನ್ನು ಪ್ರಾರಂಭಿಸಿದರು

Posted On: 28 NOV 2022 4:42PM by PIB Bengaluru

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022 ರ (ಐಎಫ್ಎಫ್ಎಫ್ ಐ ) ನ ಕೊನೆಯ ದಿನವು ಮಿರಾಮಾರ್ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನದೊಂದಿಗೆ ಪ್ರಾರಂಭವಾಯಿತು. ಗೋವಾ ಸರ್ಕಾರದ ಸಹಯೋಗದೊಂದಿಗೆ ದಿವ್ಯಾಜ್ ಫೌಂಡೇಶನ್ ಮತ್ತು ಭಾಮ್ಲಾ ಫೌಂಡೇಶನ್ ಆಯೋಜಿಸಿರುವ ಕ್ಲೀನ್-ಎ-ಥಾನ್ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಮೌಲ್ಯಗಳನ್ನು ಬಿತ್ತರಿಸುವ ಒಂದು ಉಪಕ್ರಮವಾಗಿದೆ. ಇದು ಗೋವಾ ರಾಜ್ಯದ ನಿವಾಸಿಗಳಿಗೆ ಮಾತ್ರವಲ್ಲದೆ ಪ್ರವಾಸಿಗರಿಗೂ ಅನ್ವಯಿಸುತ್ತದೆ.

ಇಂದು ಬೆಳಗ್ಗೆ ಮಿರಾಮಾರ್ ಕಡಲ ತೀರದಲ್ಲಿ  ಕಡಲ ತೀರದ ಸ್ವಚ್ಛತೆಯ ಅಭಿಯಾನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗೋವಾದ ಮುಖ್ಯಮಂತ್ರಿ ಡಾ ಪ್ರಮೋದ್ ಪಿ ಸಾವಂತ್, ದಿವ್ಯಾಜ್ ಫೌಂಡೇಶನ್ನ ಸಂಸ್ಥಾಪಕಿ ಅಮೃತಾ ಫಡ್ನವಿಸ್, ಗೋವಾ ಸಚಿವ ಸಂಪುಟದ ಸದಸ್ಯರು ಇದರ ನೇತೃತ್ವ ವಹಿಸಿದ್ದರು. ಬಾಲಿವುಡ್ ನಟರಾದ ಜಾಕಿ ಶ್ರಾಫ್, ಕರಣ್ ಕುಂದ್ರಾ ಮತ್ತು ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಕೂಡ ಕ್ಲೀನ್-ಎ-ಥಾನ್ ನಲ್ಲಿ ಭಾಗವಹಿಸಿದ್ದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಡಾ. ಸಾವಂತ್, “ನಾವು ನಮ್ಮ ಕಡಲತೀರಗಳನ್ನು ಸ್ವಚ್ಛವಾಗಿಡುತ್ತೇವೆ, ಆದರೆ ಈ ಉಪಕ್ರಮವು ಪ್ರವಾಸಿಗರನ್ನೂ ತಲುಪುವ ಗುರಿಯನ್ನು ಹೊಂದಿದೆ. ಗೋವಾದ ಜನಸಂಖ್ಯೆಯ ಬಹು ದೊಡ್ಡ ಭಾಗವಾಗಿರುವ ಪ್ರವಾಸಿಗರು ಸಹ ಈ ಪ್ರಯತ್ನದಲ್ಲಿ ಕೈಜೋಡಿಸಿದಾಗ ಮಾತ್ರ ನಾವು ಗೋವಾವನ್ನು ಸ್ವಚ್ಛವಾಗಿ ಮತ್ತು ಹಸಿರಾಗಿಡಲು ಸಾಧ್ಯ. ನಮ್ಮದು ನೀಲಿ ಆರ್ಥಿಕತೆ, ನದಿ ಮತ್ತು ಸಮುದ್ರದ ನೀರನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮಗೆ ಬಹಳ ಮುಖ್ಯ, ಆದ್ದರಿಂದ ನೀರನ್ನು ಕಲುಷಿತಗೊಳಿಸಬಾರದೆಂದು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಮುಂದುವರಿದು ಮಾತನಾಡಿದ ಅವರು, “ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ ಪ್ರಾರಂಭಿಸಲಾದ ʼಸ್ವಚ್ಛ ಸಾಗರ, ಸುರಕ್ಷಿತ್ ಸಾಗರʼ ಅಭಿಯಾನವು 104 ಕಿಮೀ ಉದ್ದದ ಗೋವಾದ ಕರಾವಳಿಯನ್ನು ಸ್ವಚ್ಛವಾಗಿಡುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳು ಮತ್ತು ಎನ್ ಜಿಒಗಳು ಯಾವಾಗಲೂ ಈ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಿರುತ್ತಾರೆ ಮತ್ತು ಈಗ ಪ್ರವಾಸಿಗರು ಜೊತೆಯಾದಾಗ, ನಮ್ಮ ಸ್ವಚ್ಛತೆಯ ಉದ್ದೇಶವು ಪೂರ್ಣ ಪ್ರಮಾಣದಲ್ಲಿ ಸಾಧಿಸಲ್ಪಡುತ್ತದೆ.” ಎಂದು ಹೇಳಿದರು.  ತಮ್ಮ ಸರ್ಕಾರದ ಪರಿಸರದ ಗುರಿಗಳು ಕೇವಲ ಕಡಲತಿರಗಳಿಗೆ ಮಾತ್ರ ಸೀಮಿತವಾಗಿರದೆ   ಹೆದ್ದಾರಿಗಳು ಮತ್ತು ಪುರಸಭೆಗಳನ್ನೂ ಹೊಂದಿವೆ  ಎಂದು ಅವರು ಮಾಹಿತಿ ಹಂಚಿಕೊಂಡರು. ಈ ನಿಟ್ಟಿನಲ್ಲಿ, "ನಾವು ಸ್ವಚ್ಛ ಮತ್ತು ಹಸಿರು ಗೋವಾಕ್ಕೆ ಬದ್ಧರಾಗಿದ್ದೇವೆ ಮತ್ತು ಮುಂದುವರಿಯುತ್ತೇವೆ" ಎಂದು ಹೇಳಿದರು.

ಈ ಕ್ಲೀನ್-ಎ-ಥಾನ್ ಉಪಕ್ರಮವು ಜಾಗೃತಿಯನ್ನು ಹರಡುವ ಗುರಿಯನ್ನು ಮಾತ್ರ ಹೊಂದಿರದೆ ಅದರ ನಿಟ್ಟಿನಲ್ಲಿ ಕೆಲಸವನ್ನೂ ಪ್ರಾರಂಭಿಸುತ್ತದೆ. ಇಂದು ಬೆಳಗ್ಗೆ ಕಡಲತೀರದಲ್ಲಿ ಹಾಜರಿದ್ದ ಗಣ್ಯರು ಮತ್ತು ಸ್ವಯಂಸೇವಕರು ಸ್ವತಃ ನಡೆಸಿದ ಸ್ವಚ್ಛತಾ ಕಾರ್ಯದಿಂದ ಇದು ಸ್ಪಷ್ಟವಾಗಿದೆ.

ಈ ಸಂದರ್ಭದಲ್ಲಿ ಶ್ರೀಮತಿ ಫಡ್ನವಿಸ್, “ಗೋವಾ ತನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಂಸ್ಕೃತಿಯನ್ನು ಹೊಂದಿದೆ, ಆದರೆ ನಮಗೆ ತಿಳಿದಿರುವ ಪಾಠಗಳನ್ನು ಪರಿಷ್ಕರಿಸುವುದು ಮುಖ್ಯವಾಗಿದೆ, ಆದ್ದರಿಂದ ಈ ಉಪಕ್ರಮವು ಕಸವನ್ನು ಎಲ್ಲೆಂದರಲ್ಲಿ ಹಾಕದಂತೆ ಎಲ್ಲರಿಗೂ ನೆನಪಿಸುವ ಗುರಿಯನ್ನು ಹೊಂದಿದೆ, ಆದ್ದರಿಂದ ನಾವು ಆರೋಗ್ಯಕರ ಸಮುದ್ರ ಪರಿಸರವನ್ನು ಹೊಂದಬಹುದು ಮತ್ತು ನಮ್ಮ ಮಕ್ಕಳಿಗೆ ಆರೋಗ್ಯಕರ  ಪೃಥ್ವಿಯನ್ನು ನೀಡಬಹುದು. “"ನಾನೂ  ಕಸ ಹಾಕುವುದಿಲ್ಲ, ಕಸ ಹಾಕುವುದಕ್ಕೂ ಬಿಡುವುದಿಲ್ಲ"  ಎನ್ನುವುದು ಅಭಿಯಾನದ ಧ್ಯೇಯವಾಕ್ಯವಾಗಿದೆ ಎಂದು ಅವರು ಹೇಳಿದರು. ಈ ಉಪಕ್ರಮವು ಗೋವಾವನ್ನು ಭಾರತದ ಪ್ರವಾಸೋದ್ಯಮ ರಾಜಧಾನಿಯನ್ನಾಗಿ ಮಾಡುತ್ತದೆ ಎಂದು ಅವರು ಆಶಿಸಿದರು.

ಗೋವಾದಲ್ಲಿ ಸ್ವಚ್ಛತಾ ಉಪಕ್ರಮಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ವಿವಿಧ ಎನ್ಜಿಒಗಳು, ಗ್ರಾಮ ಪಂಚಾಯತ್ಗಳು ಮತ್ತು ಪುರಸಭೆಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದು ಉಪಕ್ರಮದ ಚೈತನ್ಯವನ್ನು ಗುರುತಿಸಿತು, ಇದು ಸರ್ಕಾರವನ್ನು ಮಾತ್ರವಲ್ಲದೆ ವಿದ್ಯಾರ್ಥಿಗಳು, ಎನ್ಜಿಒಗಳು ಮತ್ತು ಪ್ರವಾಸಿಗರು ಗೋವಾವನ್ನು ಸ್ವಚ್ಛವಾಗಿಡಲು ತಮಗೆ ಆಗುವಷ್ಟು ಮಾಡುವಂತೆ ಒತ್ತಾಯಿಸಿತು.

****



(Release ID: 1879684) Visitor Counter : 126