ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಎಫ್ಎಫ್ಐ - 53 ಯಲ್ಲಿ ಚಲನಚಿತ್ರಗಳಲ್ಲಿ ವರ್ಣ ನಿರ್ವಹಣೆ ಮಾನದಂಡ ಅನಾವರಣ
ಅಕಾಡೆಮಿ ಕಲರ್ ಎನ್ಕೋಡಿಂಗ್ ಸಿಸ್ಟಂ (ಎಸಿಇಎಸ್) ಚಿತ್ರ ನಿರ್ಮಾಣದುದ್ದಕ್ಕೂ ವರ್ಣ ನಿರ್ವಹಣೆಯ ಬದ್ಧತೆಯನ್ನು ಸರಳೀಕರಣಗೊಳಿಸಿ ಮಾನದಂಡ ನಿಗದಿಪಡಿಸಿದೆ
2022 ರ ನವೆಂಬರ್ 26 ರಂದು ಗೋವಾದಲ್ಲಿ ನಡೆದ 53ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಕಾಡೆಮಿ ಕಲರ್ ಎನ್ಕೋಡಿಂಗ್ ಸಿಸ್ಟಂ (ಎಸಿಇಎಸ್) ಉಪಾಧ್ಯಕ್ಷ & ಎಚ್ ಡಿ ಆರ್ ಕಂಟೆಂಟ್ ವರ್ಕ್ ಫ್ಲೋ ಮುಖ್ಯಸ್ಥ ಜೋಯಕಿಮ್ ಝೆಲ್ ಹಾಗೂ ಗ್ಲೋಬಲ್ ಎಸಿಇಎಸ್ ಅಡಾಪ್ಷನ್ ಲೀಡ್ ಸ್ಟೀವ್ ಟೊಬೆನ್ಕಿನ್ ಅವರುಗಳು ಅಕಾಡೆಮಿ ಕಲರ್ ಎನ್ಕೋಡಿಂಗ್ ಸಿಸ್ಟಂ (ಎಸಿಇಎಸ್) ಕುರಿತ ವಿಶೇಷ ಅವಧಿಯ ಮಾಸ್ಕರ್ ಕ್ಲಾಸಿನಲ್ಲಿ ಮಾತನಾಡಿದರು.
ಈ ವೇಳೆ ಜೋಯಕಿಮ್ ಝೆ; ಅವರು “ಎಸಿಇಎಸ್ ಕಾರ್ಯ ಹಂತಗಳ ಚರ್ಚೆ” ಪ್ರಸ್ತುತಪಡಿಸಿದರು. ಅವರು ಸಾಮಾನ್ಯ ವರ್ಣ ಸ್ಥಳ ವೈವಿಧ್ಯಮಯ ವರ್ಣಗಳ ವ್ಯಾಪ್ತಿ ಮತ್ತು ಕ್ರಿಯಾತ್ಮಕ ವರ್ಣವ್ಯಾಪ್ತಿಯನ್ನು ಎಸಿಇಎಸ್ ವರ್ಣ ಸ್ಥಳ ಹೇಗೆ ವ್ಯಾಖ್ಯಾನಿಸುತ್ತದೆ ಎಂಬುದನ್ನು ವಿವರವಾಗಿ ತಿಳಿಸಿದರು. ರೆಫರೆನ್ಸ್ ರೆಂಡಿಂಗ್ ಟ್ರಾನ್ಸ್ಫಾರ್ಮ್ (ಆರ್ ಆರ್ ಟಿ), ಎಸಿಇಎಸ್ ಕಲರ್ ಕೋಡಿಂಗ್, ಎಸಿಇಎಸ್ ವರ್ಚುಯಲ್ ಪ್ರೊಡಕ್ಷನ್, ವಾಲ್ ಕ್ಯಾಲಿಬ್ರೇಷನ್, ಇಂಟರ್ ಕಟ್ಟಿಂಗ್ ಕಂಟೆಂಟ್ ಮೊದಲಾದ ಎಸಿಇಎಸ್ ವ್ಯವಸ್ಥೆಯಲ್ಲಿನ ವಿವಿಧ ತಾಂತ್ರಿಕತೆಗಳ ಬಗ್ಗೆ ಬೆಳಕು ಚೆಲ್ಲಿದರು.
ಅಕಾಡೆಮಿ ಕಲರ್ ಎನ್ಕೋಡಿಂಗ್ ಸಿಸ್ಟಂ (ಎಸಿಇಎಸ್) ಚಲನಚಿತ್ರ ಅಥವಾ ದೂರದರ್ಶನ ಕಾರ್ಯಕ್ರಮಗಳುದ್ದಕ್ಕೂ ವರ್ಣ ನಿರ್ವಹಣೆಯ ಕೈಗಾರಿಕಾ ಮಾನದಂಡವಾಗಿದೆ. ಚಿತ್ರ ಸೆರೆ ಹಿಡಿಯುವುದರಿಂದ ಹಿಡಿದು ಎಡಿಟಿಂಗ್, ವಿಎಫ್ಎಕ್ಸ್, ಮಾಸ್ಟರಿಂಗ್, ಸಾರ್ವಜನಿಕ ಪ್ರಸ್ತುತಿ, ದಾಖಲೀಕರಣ ಮತ್ತು ಭವಿಷ್ಯದಲ್ಲಿ ಮತ್ತೆ ಧ್ವನಿ ಸುಧಾರಣೆ ಸಹಿತ ಬಳಕೆಯಾಗಲು, ಎಸಿಇಎಸ್ ಚಿತ್ರನಿರ್ಮಾತೃವಿನ ಕ್ರಿಯಾತ್ಮಕ ನೋಟವನ್ನು ಸಂರಕ್ಷಿಸುವ ಸ್ಥಿಮಿತ ವರ್ಣಾನುಭವ ಖಾತರಿಪಡಿಸುತ್ತದೆ. ಈ ಕ್ರಿಯಾತ್ಮಕ ಲಾಭಗಳ ಜೊತೆಗೆ, ಹೆಚ್ಚುತ್ತಿರುವ ಡಿಜಿಟಲ್ ಕ್ಯಾಮೆರಾ ವೈವಿಧ್ಯತೆ ಮತ್ತು ಫಾರ್ಮ್ಯಾಟ್ ಗಳಿಂದಾಗಿ ಉದ್ಭವಿಸಿರುವ ಮಹತ್ವದ ನಿರ್ಮಾಣ, ನಿರ್ಮಾಣ ನಂತರದ, ವಿತರಣೆ ಮತ್ತು ದಾಖಲೀಕರಣದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಎಸಿಇಎಸ್ ಮಹತ್ವದ ಪಾತ್ರ ವಹಿಸಿದೆ. ಮಾತ್ರವಲ್ಲದೇ ಚಿತ್ರ ಪ್ರದರ್ಶನಕ್ಕೆ ವಿಶ್ವವ್ಯಾಪಿ ಸಹಯೋಗಗಳಲ್ಲಿ ಡಿಜಿಟಲ್ ಇಮೇಜ್ ಫೈಲ್ ಗಳನ್ನು ಹಂಚಿಕೊಳ್ಳುಬೇಕಿದ್ದು ವಿವಿಧ ಫಾರ್ಮ್ಯಾಟ್ ಗಳಿಂದಾಗುವ ಸಮಸ್ಯೆ ನಿವಾರಣೆಯಾಗಿದೆ.
ಸ್ಟೀವ್ ಟೊಬೆನ್ಕಿನ್ ಎಸಿಇಎಸ್ ಬಗೆಗಿನ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾ ಡಿಜಿಟಲ್ ಚಿತ್ರಗಳ ಪರಸ್ಪರ ಹಂಚಿಕೆಗೆ, ವರ್ಣ ನಿರ್ವಹಣೆ ಕಾರ್ಯಹಂತಗಳು ಮತ್ತು ವಿತರಣೆ ಹಾಗೂ ದಾಖಲೀಕರಣಕ್ಕೆ ಮಾಸ್ಟರ್ ತಯಾರಿಕೆಗೆ ಅಕಾಡೆಮಿ ಕಲರ್ ಎನ್ಕೋಡಿಂಗ್ ಸಿಸ್ಟಂ ಜಾಗತಿಕ ಮಾನದಂಡವಾಗಿದೆ ಎಂದು ಹೇಳಿದರು. ಎಸ್ ಎಂ ಪಿ ಟಿ ಇ ಮಾನದಂಡಗಳು, ಉತ್ತಮ ಅಭ್ಯಾಸಗಳು, ಹಾಗೂ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್, ಆರ್ಟ್ ಅಂಡ್ ಸೈನ್ಸಸ್ ನ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದ ವರ್ಣ ವಿಜ್ಞಾನಿಗಳು ಮತ್ತು ನೂರಾರು ವೃತ್ತಿಪರ ಸಿನಿಮಾ ತಯಾರಕರು ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ವರ್ಣ ವಿಜ್ಞಾನದ ಸಂಯೋಜನೆ ಎಸಿಇಎಸ್ ಎಂದು ಅವರು ವಿವರಿಸಿದ್ದಾರೆ.
ಸಿನಿಮಾಟೋಗ್ರಫಿಯಲ್ಲಿ ಎಸಿಇಎಸ್ ಮಹತ್ವದ ಬಗ್ಗೆ ಮಾತನಾಡುತ್ತಾ, ಇದು ನಿರ್ಮಾಣದಿಂದ ಹಿಡಿದು ಪೋಸ್ಟ್ ಪ್ರೊಡಕ್ಷನ್ ಮತ್ತು ಆರ್ಕೈವಿಂಗ್ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳಲ್ಲಿ ನಿಮ್ಮ ಚಿತ್ರದ ವರ್ಣ ಬದ್ಧತೆ ನಿರ್ವಹಿಸುತ್ತಾ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಳ್ಳುತ್ತದೆ ಮತ್ತು ವರ್ಣ ನಿರ್ವಹಣೆ ಸರಳೀಕರಣಗೊಳಿಸುತ್ತದೆ ಎಂದು ಸ್ಟೀವ್ ಹೇಳಿದ್ದಾರೆ.
ಇದು ವರ್ಣ ಮತ್ತು ಕೆಲಸದ ಹರಿವಿನ ಸಂವಹನ ಸುಧಾರಿಸುತ್ತದೆ, ಚಿತ್ರ ವೀಕ್ಷಣೆ ವ್ಯವಸ್ಥೆಯ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ, ಸರಳೀಕರಣಗೊಳಿಸುತ್ತದೆ ಮತ್ತು ಔಟ್ ಪುಟ್ ಸೃಷ್ಟಿಯ ಫ್ಯೂಚರ್ ಪ್ರೂಫ್ (ಭವಿಷ್ಯದಲ್ಲೂ ಬಳಕೆಗೆ ಅರ್ಹ)ವಾಗುತ್ತವೆ, ಅಲ್ಲದೇ ದಾಖಲೀಕರಣದ ವೇಳೆಗೆ ಪ್ರಮಾಣ ತಿಳಿಯಲು ನೆರವಾಗುತ್ತದೆ ಎಂದು ಸಹ ಅವರು ತಿಳಿಸಿದರು.
ಮುಖ್ಯವಾಗಿ, ಎಸಿಇಎಸ್ ಉಚಿತ ಮತ್ತು ಮುಕ್ತವಾಗಿ ಲಭ್ಯವಿರುವ ಕಾರಣ, ಅನೇಕ ಕಂಪೆನಿಗಳು ಅದನ್ನು ತಮ್ಮ ಸಾಧನಗಳಲ್ಲಿ ಅಳವಡಿಸಿಕೊಂಡಿದ್ದು ಅದರ ನಿರ್ದಿಷ್ಟ ಮಾನದಂಡ ಚೌಕಟ್ಟಿಗಿಂತ ಉನ್ನತ ನವೀನತೆಯ ನಿರಂತರ ಪ್ರಯತ್ನ ಮಾಡುತ್ತಿವೆ ಎಂದೂ ಟೋಬೆನ್ಕಿನ್ ಹೇಳಿದರು.
ಕೊನೆಯಲ್ಲಿ, ಚಿತ್ರ ತಯಾರಕರು, ಸಿನಿಮಾಟೋಗ್ರಫಕರ್ ಗಳು ಮತ್ತು ಇತರ ಪ್ರೇಕ್ಷಕರ ಪ್ರಶ್ನೆಗಳಿಗೆ ಭಾಷಣಕಾರರು ಉತ್ತರಿಸಿದರು.
ಈ ಕಾರ್ಯಕ್ರಮವನ್ನು ಆಸ್ಕರ್ ಅಕಾಡೆಮಿ ಸದಸ್ಯ ಮತ್ತು ಎಸ್ ಎಂ ಪಿ ಟಿ ಇ - ಇಂಡಿಯಾದ ಮುಖ್ಯಸ್ಥರಾದ ಉಜ್ವರ್ ನಿರ್ಗುಡ್ಕ್ರ್ ನಡೆಸಿಕೊಟ್ಟರು.
ಐಎಫ್ಎಫ್ಐ 53 ರ ಮಾಸ್ಟರ್ ಕ್ಲಾಸ್ ಮತ್ತು ಸಂವಾದ ಕಾರ್ಯಕ್ರಮಗಳನ್ನು ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ (ಎಸ್ ಆರ್ ಎಫ್ ಟಿ ಐ), ಎನ್ ಎಫ್ ಡಿ ಸಿ, ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ ಟಿ ಐ ಐ) ಮತ್ತು ಇ ಎಸ್ ಜಿ ಜಂಟಿಯಾಗಿ ಆಯೋಜಿಸಿವೆ. ವಿದ್ಯಾರ್ಥಿಗಳು ಮತ್ತು ಸಿನಿಪ್ರೇಮಿಗಳಿಗಾಗಿ ಸಿನಿಮಾ ತಯಾರಿಕೆಯ ಪ್ರತಿ ಹಂತಗಳ ಬಗ್ಗೆ ಮಾಸ್ಟರ್ ಕ್ಲಾಸ್ ಮತ್ತು ಸಂವಾದವನ್ನೊಳಗೊಂಡ ಒಟ್ಟು 23 ಸೆಷನ್ ಗಳನ್ನು ಈ ವರ್ಷ ನಡೆಸಲಾಗುತ್ತಿದೆ.
*******
(Release ID: 1879341)
Visitor Counter : 181