ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಅನಂತ್ ಮಹದೇವನ್ ನಿರ್ದೇಶನದ ʼದಿ ಸ್ಟೋರಿ ಟೆಲ್ಲರ್ʼ 53ನೇ ಐಎಫ್ಎಫ್ಐನ ‘ದಿವ್ಯಾಂಗಜನ್’ ವಿಭಾಗದಲ್ಲಿ ಪ್ರಥಮ ಪ್ರದರ್ಶನ ಕಂಡಿತು


ಸಮಾಜದ ಎಲ್ಲ ವರ್ಗದವರು ಸಿನಿಮಾ ನೋಡಿ ಆನಂದಿಸುವಂತಾಗಬೇಕು -ನಾಗರಾಜ್ ಮಂಜುಳೆ

" ಚಲನಚಿತ್ರವು ಧ್ವನಿ ವಿವರಣೆ ಹೊಂದಿದೆಯೇ ಎಂದು ಯಾರೂ ಯೋಚಿಸಲಾಗದ ಉಜ್ವಲ ಭವಿಷ್ಯವನ್ನು ನಾವು ನೋಡುತ್ತಿದ್ದೇವೆ " - ತಾಹಾ ಹಾಜಿಕ್

ಪ್ರವೇಶದ ಮಾನದಂಡಗಳ ಪ್ರಕಾರ ನಾವು ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಲು ಪ್ರಯತ್ನಿಸುತ್ತೇವ: ಸಂಜಯ್ ರಾಮ್, ಕ್ರಿಯೇಟಿವ್ ಡೈರೆಕ್ಟರ್, ಫಿಲ್ಮ್ ಜಿಯೋ ಸ್ಟುಡಿಯೋಸ್

Posted On: 26 NOV 2022 5:07PM by PIB Bengaluru

53ನೇ ಐಎಫ್ಎಫ್ಐ ಎಲ್ಲರಿಗೂ ಸೇರಿದ್ದಾಗಿದೆ. ವಿಕಲಚೇತನ ಚಲನಚಿತ್ರ ರಸಿಕರೂ ಸಹ ಚಲನಚಿತ್ರಗಳನ್ನು ನೋಡಲು ಸಾಧ್ಯವಾಗುವಂತೆ ಮಾಡುವ ಮತ್ತು ಈ ವರ್ಷ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎಲ್ಲರನ್ನೂ ಒಳಗೊಳ್ಳುವ ಮನೋಭಾವವನ್ನು ಉತ್ತೇಜಿಸುವ ಪ್ರಯತ್ನ ನಡೆದಿದೆ.

ಅನಂತ್ ನಾರಾಯಣ್ ಮಹದೇವನ್ ನಿರ್ದೇಶನದ ದಿ ಸ್ಟೋರಿ ಟೆಲ್ಲರ್ ಇಂದು ಉತ್ಸವದ 'ದಿವ್ಯಾಂಗಜನ್' ವಿಭಾಗದಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಎಂಬೆಡೆಡ್ ಆಡಿಯೋ ವಿವರಣೆಗಳು ಮತ್ತು ಉಪಶೀರ್ಷಿಕೆಗಳೊಂದಿಗೆ ವಿಶೇಷ ಸ್ಕ್ರೀನಿಂಗ್ ಅನ್ನು ಆಡಿಯೋ-ದೃಶ್ಯವಾಗಿ ಅಳವಡಿಸಲಾಗಿತ್ತು.

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್ಎಫ್ಡಿಸಿ) ವ್ಯವಸ್ಥಾಪಕ ನಿರ್ದೇಶಕ ಶ್ರೀ ರವೀಂದರ್ ಭಾಕರ್ ಅವರು ಮರಾಠಿಯ ಖ್ಯಾತ ನಿರ್ದೇಶಕ ನಾಗರಾಜ್ ಮಂಜುಳೆ, ಫಿಲ್ಮ್ ಜಿಯೋ ಸ್ಟುಡಿಯೋಸ್ನ ಕ್ರಿಯೇಟಿವ್ ಡೈರೆಕ್ಟರ್ ಶ್ರೀ ಸಂಜಯ್ ರಾಮ್ ಅವರನ್ನು ಸನ್ಮಾನಿಸಿದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಉತ್ಸವವನ್ನು ಎಲ್ಲರಿಗೂ ತಲುಪಿಸುವಂತೆ ವಿಶೇಷ ಸೂಚನೆ ನೀಡಿದೆ ಎಂದು ರವೀಂದರ್ ಭಾಕರ್ ಹೇಳಿದರು. ಸಮಾಜದ ಎಲ್ಲ ವರ್ಗದವರು ಸಿನಿಮಾ ನೋಡಿ ಆನಂದಿಸುವಂತಾಗಬೇಕು ಎಂದು ನಾಗರಾಜ್ ಮಂಜುಳೆ ಆಶಿಸಿದರು.
ಚಲನಚಿತ್ರವನ್ನು ನಿರ್ಮಿಸಿರುವ ಫಿಲ್ಮ್ ಜಿಯೋ ಸ್ಟುಡಿಯೋಸ್ನ ಕ್ರಿಯೇಟಿವ್ ಡೈರೆಕ್ಟರ್ ಶ್ರೀ ಸಂಜಯ್ ರಾಮ್, "ನಾವು ಇಂದಿನ ಪ್ರವೇಶದ ಮಾನದಂಡಗಳ ಪ್ರಕಾರ ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಲು ಪ್ರಯತ್ನಿಸುತ್ತೇವೆ" ಎಂದು ಹೇಳಿದರು.


ದಿವ್ಯಾಂಗಜನ ಪ್ರೇಕ್ಷಕರೊಂದಿಗೆ ಗೋವಾದ ವಿಕಲಾಂಗ ವ್ಯಕ್ತಿಗಳ ರಾಜ್ಯ ಆಯೋಗದ ಕಾರ್ಯದರ್ಶಿ ತಾಹಾ ಹಾಜಿಕ್ 


ಎನ್ಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕರು ನಾಗರಾಜ್ ಮಂಜುಳೆ ಅವರನ್ನು ಸನ್ಮಾನಿಸಿದರು

ಗೋವಾದ ವಿಕಲಾಂಗಚೇತನರ ರಾಜ್ಯ ಆಯೋಗದ ಕಾರ್ಯದರ್ಶಿ  ಹಾಜಿಕ್ ಉಪಸ್ಥಿತರಿದ್ದರು. ದಿವ್ಯಾಂಗರಿಗೆ ಎರಡು ಚಲನಚಿತ್ರಗಳನ್ನು ಪ್ರದರ್ಶಿಸಲು ಎನ್ಎಫ್ಡಿಸಿ ಮತ್ತು ಐಎಫ್ಎಫ್ಐ ಮಾಡಿದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. "ಚಿತ್ರವು ಧ್ವನಿ ವಿವರಣೆಯಿಂದ ಕೂಡಿದೆಯೇ ಎಂದು ಯಾರೂ ಯೋಚಿಸದಂತಹ ಉಜ್ವಲ ಭವಿಷ್ಯವನ್ನು ನಾವು ನೋಡುತ್ತಿದ್ದೇವೆ" ಎಂದು ಅವರು ಹೇಳಿದರು. ಧ್ವನಿ ವಿವರಣೆಯ ಚಲನಚಿತ್ರದ ಅನುಭವವನ್ನು ವೈಯಕ್ತಿಕವಾಗಿ ಅನುಭವಿಸಲು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಚಲನಚಿತ್ರವನ್ನು ವೀಕ್ಷಿಸುವಂತೆ ಕೆಲವು ಪ್ರೇಕ್ಷಕರಿಗೆ ಹೇಳಿದರು.

ಐಎಫ್ಎಫ್ಐನಲ್ಲಿ ಈ ವರ್ಷದ ದಿವ್ಯಾಂಗಜನ ವಿಶೇಷ ವಿಭಾಗವು ಸಿನಿಮಾವನ್ನು ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರವೇಶಿಸಬಹುದಾದ ಮಾರ್ಗವನ್ನಾಗಿ ಮಾಡುವತ್ತ ಒಂದು ಹೆಜ್ಜೆಯಾಗಿದೆ. ಈ ವಿಭಾಗದಲ್ಲಿ, ಚಲನಚಿತ್ರ ಪ್ರದರ್ಶನ ಮತ್ತು ಸ್ಥಳದ ಮೂಲಸೌಕರ್ಯ ಮತ್ತು ನಿರ್ವಹಣೆಯ ಸ್ವರೂಪಗಳ ವಿಷಯದಲ್ಲಿ ಅವರ ಪ್ರವೇಶ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಸಾಮರ್ಥ್ಯದ ಪ್ರೇಕ್ಷಕರಿಗೆ ಮೀಸಲಾದ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಈ ವಿಭಾಗದಲ್ಲಿನ ಚಲನಚಿತ್ರಗಳು ಎಂಬೆಡ್ ಮಾಡಿದ ಉಪಶೀರ್ಷಿಕೆಗಳು ಮತ್ತು ಧ್ವನಿ ವಿವರಣೆಗಳನ್ನು ಹೊಂದಿವೆ. ಧ್ವನಿ ವಿವರಣೆಗಳು ವಿಶೇಷವಾಗಿ ರಚಿಸಲಾದ ಆಡಿಯೊ ಟ್ರ್ಯಾಕ್ಗಳಾಗಿವೆ, ಅದು ಚಲನಚಿತ್ರದಲ್ಲಿನ ದೃಶ್ಯ ಮಾಹಿತಿಯನ್ನು ನಿರೂಪಿಸುತ್ತದೆ. ದಿ ಸ್ಟೋರಿ ಟೆಲ್ಲರ್ ಹೊರತಾಗಿ, ರಿಚರ್ಡ್ ಅಟೆನ್ಬರೋ ಅವರ ಆಸ್ಕರ್ ವಿಜೇತ ಗಾಂಧಿ ಚಲನಚಿತ್ರವನ್ನು ಈ ವರ್ಷದ ಐಎಫ್ಎಫ್ಐನಲ್ಲಿ ಪ್ರದರ್ಶಿಸಲು ಎಂಬೆಡೆಡ್ ಆಡಿಯೊ ವಿವರಣೆಗಳು ಮತ್ತು ಉಪಶೀರ್ಷಿಕೆಗಳೊಂದಿಗೆ ಧ್ವನಿ ವಿವರಣೆಯ ದೃಶ್ಯವಾಗಿ ಅಳವಡಿಸಲಾಗಿದೆ.

ಹಿನ್ನೆಲೆ:
ಆಕ್ಸೆಸಿಬಿಲಿಟಿ ಇಂಡಿಯಾ (ಸುಗಮ್ಯ ಭಾರತ್) ಅಭಿಯಾನವು ಮೂರು ಗುರಿಗಳನ್ನು ಸಾಧಿಸಲು ಸಹಾಯಕವಾಗುತ್ತದೆ. ಅವುಗಳೆಂದರೆ, ಅಂತರ್ನಿರ್ಮಿತ ಪರಿಸರ, ಸಾರಿಗೆ ಪರಿಸರ ವ್ಯವಸ್ಥೆ ಮತ್ತು ಮಾಹಿತಿ ಮತ್ತು ಸಂವಹನ ಪರಿಸರ ವ್ಯವಸ್ಥೆ.
ಈ ಅಭಿಯಾನವು ಸಾರಿಗೆ, ಸಾರ್ವಜನಿಕ ಸ್ಥಳ, ಪ್ರವಾಸಿ ಸ್ಥಳಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಭಾರತದಲ್ಲಿನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ವಿಶೇಷ ಚೇತನ ಸ್ನೇಹಿಯನ್ನಾಗಿ ಮಾಡುವುದನ್ನು ಒಳಗೊಂಡಿರುತ್ತದೆ.

ದಿ ಸ್ಟೋರಿ ಟೆಲ್ಲರ್ ಚಿತ್ರದ ಬಗ್ಗೆ:
ತಾರಿಣಿ ರಂಜನ್ ಬಂಧೋಪಾಧ್ಯಾಯ, ಒಬ್ಬ ಅಸಾಂಪ್ರದಾಯಿಕ  ಕಥೆ ಹೇಳುವವರು. ಒಂದು ಕೆಲಸಕ್ಕೆ ಅಂಟಿಕೊಳ್ಳದೆ ತಮ್ಮ ವೃತ್ತಿಜೀವನದಲ್ಲಿ 32 ಉದ್ಯೋಗಗಳನ್ನು ಬದಲಾಯಿಸಿರುತ್ತಾರೆ. 60 ವರ್ಷ ವಯಸ್ಸಿನ ಅವರು, ನಿವೃತ್ತಿಯ ನಂತರ ಕೋಲ್ಕತ್ತಾದಲ್ಲಿದ್ದಾರೆ ಮತ್ತು ಹೆಂಡತಿಯನ್ನು ಕಳೆದುಕೊಂಡಿದ್ದಾರೆ. ಅವರಿಗಿರುವ ಏಕೈಕ ವಿಷಾದವೆಂದರೆ, ಅವರ ದಿವಂಗತ ಪತ್ನಿ ಅನುರಾಧಾ ಅವರು ಸದಾ ಬಯಸುತ್ತಿದ್ದ ಪ್ರವಾಸಕ್ಕಾಗಿ ಅವರಿಗೆ ಸಮಯ ಸಿಗಲಿಲ್ಲ ಎಂಬುದು. ಈಗ ಇದ್ದಕ್ಕಿದ್ದಂತೆ, ಕೆಲಸವಿಲ್ಲದ ಅವರಿಗೆ, ಸಾಕಷ್ಟು ಸಮಯವನ್ನು ಹೊಂದಿದ್ದಾರೆ, ಆದರೆ ಅವರ ಹತ್ತಿರದವರು ಅವರಿಗೆ ಹತ್ತಿರದಲ್ಲಿಲ್ಲ. ಇದು ಸತ್ಯಜಿತ್ ರೇ ಅವರ 'ಗೋಲ್ಪೋ ಬೋಲಿ ತಾರಿಣಿ ಖುರೋ' ಕಥೆಯನ್ನು ಆಧರಿಸಿದೆ.

https://static.pib.gov.in/WriteReadData/userfiles/image/02CZQZ.jpg

*****



(Release ID: 1879235) Visitor Counter : 146