ವಾರ್ತಾ ಮತ್ತು ಪ್ರಸಾರ ಸಚಿವಾಲಯ

'ರೆಡ್ ಶೂಸ್' ಮೆಕ್ಸಿಕೋದಲ್ಲಿ ಮಹಿಳೆಯರ ಮೇಲಿನ ಲಿಂಗ ಆಧಾರಿತ ಹಿಂಸೆಯ ಮೇಲೆ ಬೆಳಕು ಚೆಲ್ಲುವ ಕಥಾಹಂದರವನ್ನು ಹೊಂದಿದೆ.


ಈ ಚಿತ್ರ ನನಗೆ ತುಂಬಾ ವಿಶೇಷ. ಇದು ನನ್ನ ಹೃದಯಕ್ಕೆ ತಟ್ಟಿದೆ; ನಿರ್ದೇಶಕ ಕಾರ್ಲೋಸ್ ಐಚೆಲ್ಮನ್ ಕೈಸರ್

Posted On: 26 NOV 2022 5:24PM by PIB Bengaluru

''ಈ ಚಿತ್ರ ನನಗೆ ತುಂಬಾ ವಿಶಿಷ್ಟ. ಇದು ನನ್ನ ಹೃದಯವನ್ನು ಆಳವಾಗಿ ತಟ್ಟಿದೆ. ಚಲನಚಿತ್ರೋತ್ಸವದ ಚಪ್ಪಾಳೆಗಳಿಗಿಂತ ಇದು ಕಲಾವಿದರ ವೈಯಕ್ತಿಕ ಪ್ರಯಾಣವಾಗಿದೆ, ಅದು ನನಗೆ ಹೆಚ್ಚು ಮುಖ್ಯವಾಗಿದೆ ”ಎಂದು ಮೆಕ್ಸಿಕನ್ ಚಿತ್ರ ರೆಡ್ ಶೂಸ್ (ಝಪಾಟೋಸ್ ರೋಜೋಸ್) ನಿರ್ದೇಶಕ ಕಾರ್ಲೋಸ್ ಐಚೆಲ್ಮನ್ ಕೈಸರ್ ಹೇಳಿದರು. ಚಿತ್ರದ ನಿರ್ಮಾಪಕರಾದ ಅಲೆಜಾಂಡ್ರೊ ಡಿ ಇಕಾಜಾ ಮತ್ತು ಗೇಬ್ರಿಯೆಲಾ ಮಾಲ್ಡೊನಾಡೊ ಮತ್ತು ನಾಯಕಿ ನಟಿ ನಟಾಲಿಯಾ ಸೋಲಿಯನ್ ಅವರೊಂದಿಗೆ ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಪಿಐಬಿ ಆಯೋಜಿಸಿದ್ದ ಐಎಫ್‌ಎಫ್‌ಐ ‘ಟೇಬಲ್ ಟಾಕ್ಸ್’ ಅಧಿವೇಶನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

ಮೆಕ್ಸಿಕೋದ ಸಿನಿಮಾ ರೆಡ್ ಶೂಸ್, 53 ನೇ ಐಎಫ್ಎಫ್ಐ ನಲ್ಲಿ ಅಸ್ಕರ್ ಗೋಲ್ಡನ್ ಪಿಕಾಕ್‌ಗಾಗಿ ಅಂತಾರಾಷ್ಟ್ರೀಯ ಸ್ಪರ್ಧೆಯ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ 15 ಚಲನಚಿತ್ರಗಳಲ್ಲಿ ಒಂದಾಗಿದೆ.

ಒಂಟಿಯಾಗಿ ಜೀವನ ಸಾಗಿಸುತ್ತಿರುವ ರೈತನೊಬ್ಬನ ಜೀವನ ಮತ್ತು ಮಗಳ ಸಾವಿನ ಸುದ್ದಿ ತಿಳಿದ ನಂತರ ನಡೆಯುವ ಘಟನೆಗಳ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ರೈತನು, ತನ್ನ ಮಗಳ ಮೃತದೇಹವನ್ನು ಮನೆಗೆ ತರಲು ಪ್ರಯತ್ನಿಸುತ್ತಿರುವಾಗ ಅಪರಿಚಿತ ಮತ್ತು ಅನ್ಯಲೋಕವನ್ನು ಹಡಗಿನ ಮೂಲಕ ಹೋಗಲು ಯತ್ನಿಸುತ್ತಿರುವಾಗ ಚಿತ್ರದ ಕಥೆ ಸಾಗುತ್ತಾ ಹೋಗುತ್ತದೆ. ಚಿತ್ರವು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಹಲವು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದು ಮಾತ್ರವಲ್ಲದೆ ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರ ಪ್ರಶಸ್ತಿಗಾಗಿ ಸ್ಪರ್ಧೆಗಿಳಿದಿದೆ.

ಚಿತ್ರದಲ್ಲಿ ಅದ್ಭುತ ಕಥೆಯಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಾವು ಚಿತ್ರವನ್ನು ಶೂಟ್ ಮಾಡಿದ್ದರಿಂದ ದೀರ್ಘ ಸಮಯ ಹಿಡಿದು ಪ್ರಕ್ರಿಯೆ ಕಠಿಣವಾಗಿದ್ದರೂ ಕೂಡ ಕಾರ್ಲೋಸ್ ಜೊತೆ ಕೆಲಸ ಮಾಡಿದ್ದು ಉತ್ತಮ ಅನುಭವ ನೀಡಿತು ಎಂದರು.

ಕಲೆಯನ್ನು ವಾಣಿಜ್ಯೀಕರಣಗೊಳಿಸುವುದು ಕಷ್ಟವಾದ್ದರಿಂದ ಚಿತ್ರವನ್ನು ಫೆಡರಲ್ ನಿಧಿಯನ್ನು ಬಳಸಿ ನಿರ್ಮಿಸಲಾಗಿದೆ, ಕೋವಿಡ್ ಸಾಂಕ್ರಾಮಿಕ ರೋಗವು ಚಿತ್ರ ನಿರ್ಮಾಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿ ಕಷ್ಟಕರವಾಗಿಸಿತು. “ಭಾರತಕ್ಕೆ ಬಂದಿರುವುದು ನಮಗೆ ಸಂತೋಷವಾಗಿದೆ. ಭಾರತ ಮತ್ತು ಮೆಕ್ಸಿಕೋ ಸಾಕಷ್ಟು ಸಾಂಸ್ಕೃತಿಕ ಸಾಮ್ಯತೆಗಳನ್ನು ಹೊಂದಿವೆ” ಎಂದು ಹೇಳಿದರು. ಭಾರತದಲ್ಲಿನ ಚಲನಚಿತ್ರೋದ್ಯಮದ ಬಗ್ಗೆ ಕೇಳಿದಾಗ ಅವರು ವಿಶೇಷವಾಗಿ ವಿಶಾಲವಾದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಬಾಲಿವುಡ್ ಉದ್ಯಮವನ್ನು ಶ್ಲಾಘಿಸಿದರು. ನಟಿಯಾಗಿ ತಮ್ಮ ಚೊಚ್ಚಲ ಚಿತ್ರದ ಅನುಭವ ಹಂಚಿಕೊಂಡ ನಟಾಲಿಯಾ ಸೋಲಿಯನ್, ಯಾವಾಗಲೂ ಚಿತ್ರ ಮಾಡಲು ಬಯಸುತ್ತಿದ್ದೆ ತುಂಬಾ ಉತ್ಸುಕಳಾಗಿದ್ದೆ ಕೂಡ ಎಂದರು. ''ತಾಚೊ ಅವರೊಂದಿಗೆ ಕೆಲಸ ಮಾಡಲು ನಾನು ತುಂಬಾ ಕಾತರಳಾಗಿದ್ದೆ, ಏಕೆಂದರೆ ಅವರು ಸಹಜ ನಟ. ನಿರ್ದೇಶಕರಿಗೆ ತಾವು ಮಾಡುವ ಚಿತ್ರದ ಬಗ್ಗೆ ಸ್ಪಷ್ಟ ಮನಸ್ಥಿತಿಯಿತ್ತು. ಭಾವನಾತ್ಮಕವಾಗಿಯೂ ಅವರು ಬಹಳ ಸಮತೋಲನ ಸ್ಥಿತಿಯವರು. ಮೆಕ್ಸಿಕನ್ ಮಹಿಳೆಯಾಗಿ ನಾನು ಯಾವಾಗಲೂ ಸಮತೋಲಿತ ಮತ್ತು ಭಾವನಾತ್ಮಕ ಸಂಘದವರ ಜೊತೆಗಿದ್ದೆ. ಒಟ್ಟಾರೆ ನನ್ನ ಈ ಪಯಣ ವಿಶೇಷ ಭಾವನೆ ಕೊಟ್ಟಿತು ಎನ್ನುತ್ತಾರೆ. 

ಚಿತ್ರವನ್ನು ಮಾಡಲು ಸ್ಫೂರ್ತಿ ಏನು ಎಂದು ಕೇಳಿದಾಗ ನಿರ್ದೇಶಕ ಕಾರ್ಲೋಸ್, ಪ್ರಮುಖ ಆಲೋಚನೆ ತಮ್ಮ ತಂದೆಯೊಂದಿಗೆ ಹೊಂದಿದ್ದ ಸಂಬಂಧದಿಂದ ಹುಟ್ಟಿಕೊಂಡಿತು. “ಈ ಚಿತ್ರವು ಪುರುಷ ಶಕ್ತಿಯ ಸಂಭಾಷಣೆಯನ್ನು ತೆರೆಯಲು ಪ್ರಯತ್ನಿಸುತ್ತದೆ ಮತ್ತು ಅದನ್ನು ಹೇಗೆ ಸಕಾರಾತ್ಮಕ ರೀತಿಯಲ್ಲಿ ಬಳಸುವುದು ಎಂದು ನೋಡುತ್ತದೆ. ಇಲ್ಲಿ ಮುಖ್ಯ ವಿಷಯವೆಂದರೆ ಮಹಿಳೆಯರ ಮೇಲಿನ ದೌರ್ಜನ್ಯ. ಮೆಕ್ಸಿಕೋದಲ್ಲಿ ಮಹಿಳೆಯರ ವಿರುದ್ಧ ಪ್ರಚಲಿತದಲ್ಲಿರುವ ಲಿಂಗ ಆಧಾರಿತ ಹಿಂಸೆಯನ್ನು ಎತ್ತಿ ತೋರಿಸಲು ಕೆಂಪು ಬೂಟುಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯಕರ್ತರೇ ಚಿತ್ರದ ಶೀರ್ಷಿಕೆಗೆ ಪ್ರೇರಣೆ ಎಂದರು. 

ಸಿನಿಮಾದ ಮುಖ್ಯ ಪಾತ್ರ ಟ್ಯಾಚೊವನ್ನು ನಿರ್ವಹಿಸಲು ನಟ ಯುಸ್ಟಾಸಿಯೊ ಅಸ್ಕಾಸಿಯೊಗೆ ಹೇಗೆ ತರಬೇತಿ ನೀಡಿದ್ದೀರಿ ಎಂದು ಕೇಳಿದಾಗ, ಟ್ಯಾಚೊ ಅವರೊಂದಿಗೆ ಬಲವಾದ ಭಾವನಾತ್ಮಕ ಹೋಲಿಕೆಯನ್ನು ಹೊಂದಿದ್ದರಿಂದ ಮತ್ತು ಚಿತ್ರವನ್ನು ಮಾಡಲು ತುಂಬಾ ಆಳವಾದ ಭಾವನಾತ್ಮಕ ಮಟ್ಟಕ್ಕೆ ಹೋಗಿದ್ದರಿಂದ ಅದು ಹೆಚ್ಚು ಕಷ್ಟವಾಗಲಿಲ್ಲ ಎಂದು ನಿರ್ದೇಶಕ ಕಾರ್ಲೋಸ್ ಹೇಳಿದರು. "ಚಿತ್ರದ ಲಯವು ಟ್ಯಾಚೊ ಲಯಕ್ಕೆ ಹೊಂದಿಕೊಳ್ಳುತ್ತದೆ, ನಾವು ಅವರನ್ನು ಅನುಸರಿಸಲು ಪ್ರಯತ್ನಿಸಿದ್ದೇವೆ" ಎಂದು ಹೇಳಿದರು.



(Release ID: 1879232) Visitor Counter : 151