ವಾರ್ತಾ ಮತ್ತು ಪ್ರಸಾರ ಸಚಿವಾಲಯ
'ಆಯುಷ್ಮಾನ್'-ಭರವಸೆಯ ಉತ್ತುಂಗ ಪಯಣದ ನೈಜ ಜೀವನದ ಕಥೆ
'ಆಯುಷ್ಮಾನ್’ ಮೂಲಕ ಎಚ್‌ಐವಿ ರೋಗಿಗಳಿಗೆ ಸಂಬಂಧಿಸಿದ ಸಾಮಾಜಿಕ ಕಳಂಕ ಮತ್ತು ತಾರತಮ್ಯವನ್ನು ಪರಿಹರಿಸಲು ನಾನು ಬಯಸುತ್ತೇನೆ: ನಿರ್ದೇಶಕ ಜೇಕಬ್ ವರ್ಗೀಸ್
'ಆಯುಷ್ಮಾನ್' ಎಂಬುದು ಗ್ರಾಮೀಣ ಭಾರತದ ಇಬ್ಬರು 14 ವರ್ಷದ ಎಚ್‌ಐವಿ ಪೀಡಿತ ಬಾಲಕರ ಸ್ಪೂರ್ತಿದಾಯಕ ಪ್ರಯಾಣ ಕಥೆಯಾಗಿದೆ, ಎಚ್‌ಐವಿ ರೋಗಿಗಳ ವಿರುದ್ಧ ಸಮಾಜದಲ್ಲಿ ಇರುವ ಎಲ್ಲಾ ಸಾಮಾಜಿಕ ಕಳಂಕ ಮತ್ತು ತಾರತಮ್ಯವನ್ನು ನಿವಾರಿಸಲು ಈ ಇಬ್ಬರು ಬಾಲಕರು ಮ್ಯಾರಥಾನ್ ನಲ್ಲಿ ಭಾಗವಹಿಸಲು ಇಷ್ಟಪಡುತ್ತಾರೆ. ಈ ಮೂಲಕ ಸುತ್ತಮುತ್ತ ಇರುವ ವ್ಯಕ್ತಿಗಳಲ್ಲಿ ಸಕಾರಾತ್ಮಕ ಬದಲಾವಣೆ ಮತ್ತು ಭರವಸೆಯನ್ನು ತರಲು ಪ್ರಯತ್ನಿಸುತ್ತಾರೆ ಎಂದು ಚಿತ್ರದ ನಿರ್ದೇಶಕ ಜೇಕಬ್ ವರ್ಗೀಸ್ ಹೇಳಿದರು. ಅವರು ನಿನ್ನೆ ಗೋವಾದ ತೋಡಾದಲ್ಲಿ 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬದಿಯಲ್ಲಿ ಸಾರ್ವಜನಿಕ ಮಾಹಿತಿ ಕೇಂದ್ರ(PIB) ಆಯೋಜಿಸುತ್ತಿರುವ ‘ಟೇಬಲ್ ಟಾಕ್ಸ್’ ಸೆಷನ್ ನಲ್ಲಿ ಮಾಧ್ಯಮ ಮತ್ತು ಚಲನಚಿತ್ರೋತ್ಸವದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುತ್ತಿದ್ದರು.
ಈ ಸಾಕ್ಷ್ಯಚಿತ್ರವನ್ನು ನಿರ್ಮಿಸುವ ಹಿಂದಿನ ಸ್ಫೂರ್ತಿಯ ಬಗ್ಗೆ ಮಾತನಾಡಿದ ನಿರ್ದೇಶಕರು, “ಜೀವನದಲ್ಲಿ ಆಶಾಭಾವನೆ, ಭರವಸೆ ಕಳೆದುಕೊಳ್ಳಬಾರದು ಎಂಬ ಬಾಲಕರ ನಿಲುವು ನನಗೆ ಪ್ರೇರಣೆ ಮತ್ತು ಸ್ಫೂರ್ತಿ ನೀಡಿತು. ಅವರು ತಮ್ಮಲ್ಲಿರುವ ಸಂಕಟದ ಬಗ್ಗೆ ದೂರುವುದನ್ನು ನಿಲ್ಲಿಸಿ ಸವಾಲನ್ನು ಸ್ವೀಕರಿಸಿ ಹೃದಯಗಳನ್ನು ಗೆದ್ದರು.
ಈ ಸಾಕ್ಷ್ಯಚಿತ್ರ ನಿರ್ಮಿಸಲು ನಿರ್ದೇಶಕರಿಗೆ ಸುಮಾರು 6 ವರ್ಷ ಬೇಕಾಯಿತಂತೆ. ಅಷ್ಟು ವರ್ಷಗಳ ತಮ್ಮ ಅನುಭವದ ಬಗ್ಗೆ ಹೇಳಿದ ಜಾಕೋಬ್ ವರ್ಗೀಸ್, 12 ವರ್ಷ ವಯಸ್ಸಿನ ಬಾಬು ಮತ್ತು ಮಾಣಿಕ್ ಎಂಬ ಹುಡುಗರನ್ನು ಎಚ್‌ಐವಿ ಪೀಡಿತ ಮಕ್ಕಳಿಗಾಗಿ ಗೊತ್ತುಪಡಿಸಿದ ಅನಾಥಾಶ್ರಮದಲ್ಲಿ ನೋಡಿದೆ. ಅವರಲ್ಲಿ ಒಬ್ಬ ಹುಟ್ಟಿನಿಂದಲೇ ಅನಾಥನಾಗಿದ್ದರೆ, ಇನ್ನೊಬ್ಬನು ತನ್ನ ಕುಟುಂಬ ಮತ್ತು ಭವಿಷ್ಯದ ಬಗ್ಗೆ ಭಯವನ್ನು ಹೋಗಲಾಡಿಸಲು ಹೋರಾಟ ನಡೆಸುತ್ತಿದ್ದವನು. ನಾನು ಅವರನ್ನು ಭೇಟಿಯಾದಾಗ, ಅವರು ಹೆಚ್ ಐವಿ ಪಾಸಿಟಿವ್ ಆಗಿದ್ದರು, ತಮ್ಮದಲ್ಲದ ತಪ್ಪಿಗೆ ಅವರಿಗೆ ಏಡ್ಸ್ ಬಂದಿತ್ತು. ಅವರು ತಮ್ಮ ಜೀವನವನ್ನು ಹೇಗೆ ನಡೆಸುತ್ತಾರೆ, ಅವರು ಹೇಗೆ ಬದುಕುತ್ತಾರೆ ಮತ್ತು ಅವರು ಎಷ್ಟು ದಿನ ಬದುಕುತ್ತಾರೆ ಎಂಬೆಲ್ಲ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡಿದವು. ಇಂತಹ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ.
ಆದರೆ ಅಚ್ಚರಿಯ ವಿಷಯವೆಂದರೆ ಈ ಹುಡುಗರು ಬದುಕಿನಲ್ಲಿ ಧೈರ್ಯ ತೆಗೆದುಕೊಂಡಿದ್ದಾರೆ. ಹೆಚ್ ಐವಿ ವಿರುದ್ಧ ಹೋರಾಡುವ ಸಂಕಲ್ಪ ತೋರಿಸಿದರು. ಅದಕ್ಕೆ ಅವರು ಬಳಸಿಕೊಂಡ ಮಾರ್ಗ ಓಡುವುದು. ದೊಡ್ಡ ಗುರಿಯನ್ನು ತಲುಪಲು ತಮ್ಮ ಅನ್ವೇಷಣೆಯಲ್ಲಿ ಮಗುವಿನ ಹೆಜ್ಜೆಗಳನ್ನು ಹಾಕಿದ ಹುಡುಗರು ಮೊದಲು 10 ಕಿಲೋಮೀಟರ್ ಓಟವನ್ನು ಆರಿಸಿಕೊಂಡರು, ನಂತರ 21 ಕಿಮೀ ದೂರದ ಹಾಫ್ ಮ್ಯಾರಥಾನ್ ಮುಗಿಸಿದರು,
ಸಣ್ಣ ಮಟ್ಟದಲ್ಲಿ ತಮ್ಮ ಪ್ರಯಾಣ ಆರಂಭಿಸಿದ ಬಾಲಕರು ನೀರು ಹರಿಯುತ್ತಾ ಹೋಗುವಂತೆ ಪಯಣ ಮುಂದುವರಿಸಿದರು. ಅವರ ಪಯಣದೊಂದಿಗೆ ನಾನು ಕೂಡ ಸಾಕ್ಷ್ಯಚಿತ್ರ ನಿರ್ಮಿಸುವ ಹೆಜ್ಜೆ ಹಾಕಿದೆ. ಬಾಲಕರ ಯೋಜನೆ, ಗುರಿ ಅವರನ್ನು 5 ಖಂಡಗಳು ಮತ್ತು 12 ದೇಶಗಳಿಗೆ ಕರೆದೊಯ್ದಿತು. ನಾನು ಸುಮ್ಮನೆ ಅವರನ್ನು ಹಿಂಬಾಲಿಸಿ ಅವರ ಜೀವನವನ್ನು ದಾಖಲಿಸಿಕೊಳ್ಳುತ್ತಾ ಹೋದೆ ಎಂದು ವರ್ಗೀಸ್ ಹೇಳುತ್ತಾರೆ.
"ಅವರ ಗುರಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಬಾಲಕರ ಆರೋಗ್ಯ ಆ ಸಮಯದಲ್ಲಿ ಹೇಗಿದ್ದವು ಎಂದು ಕೇಳಿದಾಗ ನಿರ್ದೇಶಕರು, ಕ್ರೀಡೆಗಳು ದೇಹದಲ್ಲಿ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಇದು ರೋಗಕ್ಕೆ ಸಂಬಂಧಿಸಿದ ಕಳಂಕಗಳನ್ನು ಜಯಿಸಲು ಸಹಾಯ ಮಾಡುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ದೇಹಕ್ಕೆ ಸರಿಯಾದ ಪೋಷಣೆ ಮತ್ತು ದೈಹಿಕ ಕಸರತ್ತು ವಿಷಯದಲ್ಲಿ ಅವರಿಗೆ ತುಂಬಾ ಧನಾತ್ಮಕ ರೀತಿಯಲ್ಲಿ ಸಹಾಯ ಮಾಡುತ್ತಿದೆ ಎನ್ನುತ್ತಾರೆ.
ಹೆಚ್ ಐವಿ ಪೀಡಿತರ ಬಗ್ಗೆ ಇರುವ ಸಾಮಾಜಿಕ ಕಳಂಕ ಕಾಯಿಲೆಯಿಂದ ಉಂಟಾಗುವ ದೈಹಿಕ ಪರಿಣಾಮಗಳಿಗಿಂತ ದೊಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಪ್ರತಿಪಾದಿಸಿದ ವರ್ಗೀಸ್, ಅವರದ್ದಲ್ಲದ ತಪ್ಪಿಗೆ ಅವರನ್ನು ಕುಟುಂಬಸ್ಥರು ತೊರೆದಿದ್ದಾರೆ ಎಂಬ ಅಂಶ ಮುಖ್ಯವಾಗುತ್ತದೆ.
ಈ ಕಾಯಿಲೆಗೆ ಸಂಬಂಧಿಸಿದ ಸಾಮಾಜಿಕ ಕಳಂಕ ಮತ್ತು ತಾರತಮ್ಯವು ಅವರ ಜೀವನದ ಸಣ್ಣ ಸಂತೋಷಗಳನ್ನು ಹೇಗೆ ಕಸಿದುಕೊಳ್ಳುತ್ತಿದೆ ಮತ್ತು ಹಾಗೆ ಮಾಡುವಲ್ಲಿ ತಪ್ಪು ಮಾಹಿತಿಯು ಪಾತ್ರ ವಹಿಸುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಿದ ವರ್ಗೀಸ್, ಎಚ್‌ಐವಿ, ಕುಷ್ಠರೋಗದಂತಹ ಕಾಯಿಲೆಗಳ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದೆ ಎಂದು ಹೇಳಿದರು. ಜೀವನವನ್ನು ಅದರ ಪೂರ್ಣ ರೂಪದಲ್ಲಿ ಅನುಭವಿಸಲು ಜನರು ತಮ್ಮ ಮುಂದೆ ಗೋಡೆ ನಿರ್ಮಿಸಿಕೊಂಡಿದ್ದಾರೆ ಎಂದರು.
ಈಗ ಹುಡುಗರು ತಮ್ಮ ಅನಾಥಾಶ್ರಮದಲ್ಲಿರುವ ಇತರ ಮಕ್ಕಳಿಗೆ ಮಾದರಿಯಾಗಿದ್ದಾರೆ. ತಮ್ಮ ಕೊನೆಯ ಉಸಿರು ಇರುವವರೆಗೂ ದೊಡ್ಡ ಸ್ಫೂರ್ತಿಯಾಗಿ ಓಡುತ್ತಲೇ ಇರುತ್ತಾರೆ ಎಂದು ನಿರ್ದೇಶಕರು ಹೇಳಿದರು.
ನಿರ್ದೇಶಕ ಜೇಕಬ್ ವರ್ಗೀಸ್ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಸಂವೇದನಾಶೀಲ, ವಾಣಿಜ್ಯಿಕವಾಗಿ ಯಶಸ್ವಿ ಮತ್ತು ಹೆಚ್ಚಿನ ಮೌಲ್ಯದ ಸಿನಿಮೀಯ ಮನರಂಜನೆಗಾಗಿ ಹೆಸರುವಾಸಿಯಾದ ಪ್ರಶಸ್ತಿ ವಿಜೇತ ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರರಾಗಿದ್ದಾರೆ. ತಮ್ಮ ಹೃದಯಕ್ಕೆ ತಟ್ಟುವ, ತಮ್ಮ ಮೇಲೆ ಶಾಶ್ವತವಾದ ಛಾಪು ಮೂಡಿಸುವ ವಿಷಯಗಳ ಮೇಲೆ ಚಲನಚಿತ್ರಗಳನ್ನು ನಿರ್ಮಿಸಲು ಆಗಾಗ್ಗೆ ಒಲವು ತೋರುವ ವರ್ಗೀಸ್, ನೀವು ಅನುಸರಿಸುತ್ತಿರುವ ವಿಷಯ ಮತ್ತು ವ್ಯಕ್ತಿತ್ವವು ಚಿತ್ರ ನಿರ್ಮಿಸಲು ತಮಗೆ ಪ್ರೇರಣೆಯಾಗಿದೆ ಎನ್ನುತ್ತಾರೆ.
ಇಂತಹ ಚಲನಚಿತ್ರಗಳನ್ನು ನಿರ್ಮಿಸಿದರೆ ಖರ್ಚು ಮಾಡಿದ ಹಣವನ್ನು ನೀವು ಮರುಪಡೆಯಲು ಸಾಧ್ಯವಿಲ್ಲ. ಚಲನಚಿತ್ರೋತ್ಸವಗಳನ್ನು ಹೊರತುಪಡಿಸಿ ಅವುಗಳನ್ನು ಪ್ರದರ್ಶಿಸಲು ಬೇರೆ ಯಾವುದೇ ಮಾರ್ಗಗಳಿರುವುದಿಲ್ಲ ಎಂದು ಪ್ರತಿಪಾದಿಸಿದರು. 'ಆಯುಷ್ಮಾನ್' ಬಾಬು ಮತ್ತು ಮಾಣಿಕ್ ಎಂಬ ಬಾಲಕರ ನೈಜ ಕಥೆಯಾಗಿದೆ. ಹೀಗಾಗಿ ನಾನು ನೈಜ ಸಂಗತಿಗಳನ್ನು ನೀಡಲು ಬಯಸುತ್ತೇನೆ. ಅದಕ್ಕಾಗಿ ಅದನ್ನು ನಾನು ಸಾಕ್ಷ್ಯಚಿತ್ರವಾಗಿ ಮಾಡಿದ್ದೇನೆ ಎಂದರು.
ಗೋವಾದಲ್ಲಿ ನಡೆಯುತ್ತಿರುವ ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವೈಶಿಷ್ಟ್ಯವಲ್ಲದ(Non feature category) ವಿಭಾಗದಲ್ಲಿ ಆಯುಷ್ಮಾನ್ ನ್ನು ಪ್ರದರ್ಶಿಸಲಾಯಿತು.
ಚಲನಚಿತ್ರದ ಬಗ್ಗೆ
ನಿರ್ದೇಶಕ: ಜೇಕಬ್ ವರ್ಗೀಸ್
ನಿರ್ಮಾಪಕರು: ದಿನೇಶ್ ರಾಜ್ ಕುಮಾರ್ ಎನ್, ಮ್ಯಾಥ್ಯೂ ವರ್ಗೀಸ್, ನವೀನ್ ಫ್ರಾಂಕೋ
ಚಿತ್ರಕಥೆ: ಜೇಕಬ್ ವರ್ಗೀಸ್
ಛಾಯಾಗ್ರಾಹಕ: ಜೇಕಬ್ ವರ್ಗೀಸ್
ಸಂಪಾದಕರು: ಕಲ್ವೀರ್ ಬಿರಾದಾರ್, ಅಶ್ವಿನ್ ಪ್ರಕಾಶ್ ಆರ್
ಸಾರಾಂಶ: ಇದು ಗ್ರಾಮೀಣ ಭಾರತದ ಇಬ್ಬರು 14 ವರ್ಷ ವಯಸ್ಸಿನ, ಎಚ್‌ಐವಿ ಪಾಸಿಟಿವ್, ಕಡಿಮೆ ಸವಲತ್ತು ಹೊಂದಿರುವ ಮಕ್ಕಳ ಕಥೆ. ಒಬ್ಬನು ಹುಟ್ಟಿನಿಂದಲೇ ಅನಾಥನಾಗಿದ್ದರೆ ಇನ್ನೊಬ್ಬನು ಭವಿಷ್ಯದ ಭಯ, ಆತಂಕಗಳನ್ನು ಹೋಗಲಾಡಿಸಲು ಹೋರಾಡುತ್ತಾನೆ. ಓಟದಿಂದ ಪ್ರೇರೇಪಿಸಲ್ಪಟ್ಟ ಅವರು, ಜಾಗೃತಿ ಮೂಡಿಸಲು ಮತ್ತು ಜಗತ್ತಿನಾದ್ಯಂತ ಧನಾತ್ಮಕ ಬದಲಾವಣೆಯನ್ನು ತರಲು ಹೆಚ್ ಐವಿ ಪಾಸಿಟಿವ್ ಹೊಂದಿರುವ ವ್ಯಕ್ತಿಗಳ ಬಗ್ಗೆ ಇರುವ ಸಾಮಾಜಿಕ ಕಳಂಕ ಮತ್ತು ತಾರತಮ್ಯವನ್ನು ಹೋಗಲಾಡಿಸಲು ಹೋರಾಡುತ್ತಾರೆ.
ನಿರ್ಮಾಪಕ: ದಿನೇಶ್ ರಾಜ್ ಕುಮಾರ್ ಎನ್ ಹಿರಿಯ ಪತ್ರಕರ್ತ, ಛಾಯಾಗ್ರಾಹಕ ಮತ್ತು ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ. ಆಂಧಿಯುಮ್ (2008) ಮತ್ತು ಡ್ರಿಬ್ಲಿಂಗ್ ವಿತ್ ಅವರ ಫ್ಯೂಚರ್ (2016) ಚಿತ್ರಗಳಿಗೆ ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
*****
(Release ID: 1879144)
Visitor Counter : 200