ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
2023-25ನೇ ಅವಧಿಯ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗದ (ಐಇಸಿ) ಉಪಾಧ್ಯಕ್ಷ ಸ್ಥಾನ ಹಾಗೂ ಕಾರ್ಯತಂತ್ರ ನಿರ್ವಹಣಾ ಮಂಡಳಿಯ (ಸ್ಟ್ರಾಟೆಜಿಕ್ ಮ್ಯಾನೇಜ್‌ಮೆಂಟ್ ಬೋರ್ಡ್-ಎಸ್‌ಎಂಬಿ) ಅಧ್ಯಕ್ಷ ಸ್ಥಾನಕ್ಕೆ ಭಾರತ ಆಯ್ಕೆ
Posted On:
25 NOV 2022 10:33AM by PIB Bengaluru
ಭಾರತವು 2023-25ನೇ ಅವಧಿಯ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗದ (ಐಇಸಿ) ಉಪಾಧ್ಯಕ್ಷ ಸ್ಥಾನ ಹಾಗೂ ಕಾರ್ಯತಂತ್ರ ನಿರ್ವಹಣಾ ಮಂಡಳಿಯ (ಸ್ಟ್ರಾಟೆಜಿಕ್ ಮ್ಯಾನೇಜ್‌ಮೆಂಟ್ ಬೋರ್ಡ್-ಎಸ್‌ಎಂಬಿ) ಅಧ್ಯಕ್ಷ ಸ್ಥಾನಕ್ಕೆ ಭಾಜನವಾಗಿದೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗದ (ಐಇಸಿ) ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗದ ಭಾರತೀಯ ರಾಷ್ಟ್ರೀಯ ಸಮಿತಿಯ ಸದಸ್ಯರು ಚಲಾವಣೆಯಾದ ಒಟ್ಟು ಮತದಲ್ಲಿ ಶೇ. 90ರಷ್ಟು ಮತಗಳನ್ನು ಪಡೆಯುವ ಮೂಲಕ ಭಾರತ ಪ್ರಮಾಣೀಕರಣ ದಳದ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್- ಬಿಐಎಸ್- ಇಂಡಿಯಾ) ಹಲವು ತಾಂತ್ರಿಕ ಸಮಿತಿಗಳಿಗೂ ಆಯ್ಕೆಯಾದರು.
ಅಂತಾರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಯ (ಇಂಟರ್‌ನ್ಯಾಷನಲ್ ಆರ್ಗನೈಸೇಷನ್ ಫಾರ್ ಸ್ಟ್ಯಾಂಡರ್ಡೈಸೇಷನ್ (ಐಎಸ್‌ಒ) ಹಾಗೂ ಐಇಸಿಯ ನೀತಿ ಹಾಗೂ ಆಡಳಿತ ಸಂಸ್ಥೆಗಳಲ್ಲಿ ಬಿಐಎಸ್‌ನ (ಭಾರತ) ಪ್ರಾತಿನಿಧ್ಯವು ಮಹತ್ವದ ಕಾರ್ಯತಂತ್ರ ಹಾಗೂ ನೀತಿ ನಿರೂಪಣೆ ವಿಚಾರಗಳಲಿ ಭಾರತೀಯ ದೃಷ್ಟಿಕೋನದ ಪ್ರತಿಪಾದನೆಗೆ ನೆರವಾಗಲಿದೆ. ಹಾಗೆಯೇ ರಾಷ್ಟ್ರೀಯ ಪ್ರಮಾಣೀಕರಣದ ಆದ್ಯತೆಗಳನ್ನು ಅಂತಾರಾಷ್ಟ್ರೀಯ ಉತ್ತಮ ಅಭ್ಯಾಸಗಳೊಂದಿಗೆ ಜೋಡಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯೆಲ್ ಅವರು ನೀಡಿದ ಅಭಿವೃದ್ಧಿ ಮಂತ್ರದಂತೆ ಕಾರ್ಯ ನಿರ್ವಹಿಸುವ ಮೂಲಕ ಬಿಎಸ್‌ಎಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವಿಸ್ತರಣೆಯ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ. ಸದ್ಯಕ್ಕೆ ಅಂತಾರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ಐಎಸ್‌ಒ) ಹಾಗೂ ಐಇಸಿಯ ಐಎಸ್‌ಒ ಕೌನ್ಸಿಲ್, ಐಎಸ್‌ಒ ತಾಂತ್ರಿಕ ನಿರ್ವಹಣಾ ಮಂಡಳಿ (ಟಿಎಂಬಿ) ಐಇಸಿ ಎಸ್ಎಂಬಿ, ಐಇಸಿ ಮಾರ್ಕೆಟ್ ಸ್ಟ್ರ್ಯಾಟೆಜಿ ಬೋರ್ಡ್ (ಎಂಎಸ್‌ಬಿ) ಹಾಗೂ ಐಇಸಿ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಇತರೆ ಸಂಸ್ಥೆಗಳ ನೀತಿ ಹಾಗೂ ಆಡಳಿತ ಸಂಸ್ಥೆಗಳಲ್ಲಿ ಬಿಐಎಸ್ (ಭಾರತ) ಪ್ರಾತಿನಿಧ್ಯ ಕಾಣುತ್ತಿದೆ.
ಅಂತಾರಾಷ್ಟ್ರೀಯ ಪ್ರಮಾಣೀಕರಣಗಳನ್ನು ರೂಪಿಸುವ ಸಂಸ್ಥೆಯಾದ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗವು (ಐಇಸಿ) ಎಲ್ಲ ರೀತಿಯ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಹಾಗೂ ಸಂಬಂಧಪಟ್ಟ ತಂತ್ರಜ್ಞಾನಗಳಿಗೆ ಅಂತಾರಾಷ್ಟ್ರೀಯ ಪ್ರಮಾಣೀಕರಣವನ್ನು ಪ್ರಕಟಿಸುತ್ತದೆ. ಪ್ರಮಾಣೀಕರಣ ನಿರ್ವಹಣಾ ಮಂಡಳಿಯು (ಎಸ್‌ಎಂಬಿ) ಐಇಸಿಯ ಉನ್ನತ ಆಡಳಿತ ಸಂಸ್ಥೆಯಗಿದ್ದು, ತಾಂತ್ರಿಕ ನೀತಿಗಳಿಗೆ ಸಂಬಂಧಪಟ್ಟ ವಿಷಯಗಳ ಹೊಣೆಗಾರಿಕೆ ಹೊಂದಿರುತ್ತದೆ.
ಸದ್ಯ ವಿಮಲ್ ಮಹೇಂದ್ರು ಅವರು ಐಇಸಿ ಉಪಾಧ್ಯಕ್ಷರಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
****
(Release ID: 1878783)
Visitor Counter : 154