ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಮಾರಿಷಸ್, ತಾಂಜಾನಿಯಾ, ಜಿಂಬಾಬ್ವೆ ಮತ್ತು ಘಾನಾದಿಂದ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸರಣಿ ಸಭೆಗಳನ್ನು ನಡೆಸಿ, ಶಿಕ್ಷಣ ಮತ್ತು ಕೌಶಲ್ಯದಲ್ಲಿ ಸಹಕಾರವನ್ನು ಬಲಪಡಿಸಲು ಕರೆ ನೀಡಿದರು.

Posted On: 24 NOV 2022 5:02PM by PIB Bengaluru

ಕೇಂದ್ರದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು, ರಾಷ್ಟ್ರರಾಜಧಾನಿ ನವದೆಹಲಿಯಲ್ಲಿಂದು ಮಾರಿಷಸ್, ತಾಂಜಾನಿಯಾ, ಜಿಂಬಾಬ್ವೆ ಮತ್ತು ಘಾನಾ ದೇಶಗಳ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.
ಮಾರಿಷಸ್‌ನ ಉಪಪ್ರಧಾನಿ ಹಾಗೂ  ತೃತೀಯ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಚ್.ಇ. ಶ್ರೀಮತಿ ಲೀಲಾ ದೇವಿ ಡುಕುನ್-ಲಚ್ಮುನ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ  ಶ್ರೀ ಪ್ರಧಾನ್ ಅವರು, ಭಾರತವು ಮಾರಿಷಸ್ ದೇಶದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದು ಉಭಯ ದೇಶಗಳು ಪರಸ್ಪರ ಇತಿಹಾಸ, ಸಂಸ್ಕೃತಿ, ಭಾಷೆಗೆ ಬದ್ಧವಾಗಿ ನಡೆಯುತ್ತಿದ್ದು ಏಕತೆಯನ್ನು ಪ್ರದರ್ಶಿಸುತ್ತಿವೆ ಎಂದು ಹೇಳಿದರು.

111.jpg 1.22.jpg

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರಿಷಸ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸಲು ಪ್ರಮುಖ ಆದ್ಯತೆ ನೀಡಿರುವುದಾಗಿಯೂ ಅವರು ಒತ್ತಿ ಹೇಳಿದರು.  ಮಾರಿಷಸ್‌ನೊಂದಿಗೆ ನಿಕಟವಾಗಿ ಕೆಲಸ ಮಾಡುವ ಜೊತೆಗೆ  ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಅವರು ಭರವಸೆ ನೀಡಿದರು.  ಮಾರಿಷಸ್ ಅನ್ನು ಆಫ್ರಿಕಾ ಮತ್ತು ಆಗ್ನೇಯ ಏಷ್ಯಾಕ್ಕೆ ಜ್ಞಾನ ಮತ್ತು ಕೌಶಲ್ಯಗಳ ಕೇಂದ್ರವಾಗಿ ಸ್ಥಾಪಿಸುವಲ್ಲಿ ನಮ್ಮ ದೇಶವು ಕೆಲಸ ಮಾಡುವುದು ಒಂದು ವಿಶೇಷವಾಗಿದೆ ಎಂದು ಶ್ರೀ ಪ್ರಧಾನ್ ಹೇಳಿದರು.  ಎರಡೂ ದೇಶಗಳು ಜ್ಞಾನ ಕ್ಷೇತ್ರದಲ್ಲಿ ನಮ್ಮ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸಲು ಮತ್ತು ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಸಮಗ್ರವಾಗಿ ಕೆಲಸ ಮಾಡಲು ಒಪ್ಪಿಕೊಂಡಿವುದಾಗಿ ಶ್ರೀ ಪ್ರಧಾನ್ ಸ್ಪಷ್ಟಪಡಿಸಿದರು.

2.1.jpg 2.2.jpg

ಜಾಂಜಿಬಾರ್‌ನ ಶಿಕ್ಷಣ ಮತ್ತು ವೃತ್ತಿ ತರಬೇತಿ ಸಚಿವರಾದ  ಎಚ್.ಇ. ಶ್ರೀಮತಿ ಲೇಲಾ ಮುಹಮ್ಮದ್ ಮೂಸಾ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಶ್ರೀ ಪ್ರಧಾನ್, IIT (ಐಐಟಿ) ಯೋಜನೆಯೊಂದಿಗೆ ತಾಂಜಾನಿಯಾಗೆ ಸಹಕರಿಸುವ ಅವಕಾಶಕ್ಕಾಗಿ  ಸಂತಸ ವ್ಯಕ್ತಪಡಿಸಿದರು.  ತಾಂಜಾನಿಯಾದ ಐಐಟಿ ಆಫ್ರಿಕಾದಲ್ಲಿ ತಂತ್ರಜ್ಞಾನ ಶಿಕ್ಷಣದ ಕೇಂದ್ರವಾಗಲಿದ್ದು, ಈ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಾದ ಬೆಂಬಲವನ್ನು ಲೇಲಾ ಮುಹಮ್ಮದ್ ಮೂಸಾ ಅವರ ಮುಂದಿಟ್ಟರು. ಅಲ್ಲದೇ ಇದೇ ವೇಳೆ  ಜಂಜಿಬಾರ್‌ನಲ್ಲಿ 21 ನೇ ಶತಮಾನದ ಕೌಶಲ್ಯ ಕೇಂದ್ರವನ್ನು ಸ್ಥಾಪಿಸುವ ಭಾರತದ ಇಚ್ಛೆಯನ್ನು ಸಹ ಅವರೊಂದಿಗೆ  ವ್ಯಕ್ತಪಡಿಸಿ, NEP (ಎನ್‌ಇಪಿ) ಭಾರತದಲ್ಲಿ ಶಿಕ್ಷಣಕ್ಕಾಗಿ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿರುವುದಾಗಿ ಹೇಳಿದರು.  ಶ್ರೀ ಪ್ರಧಾನ್ ಅವರು ಟಾಂಜಾನಿಯಾ ಮತ್ತು ಆಫ್ರಿಕನ್ ವಿದ್ಯಾರ್ಥಿಗಳನ್ನು ಭಾರತದಲ್ಲಿ ಅಧ್ಯಯನ ಮಾಡಲು ಸಭೆಯಲ್ಲಿ ಆಹ್ವಾನಿಸಿದರು.  ಶ್ರೀಮತಿ ಲೇಲಾ ಮುಹಮದ್ ಮೂಸಾ ಅವರು ಶಿಕ್ಷಣ ಮತ್ತು ಕೌಶಲ್ಯ ಸಹಕಾರವನ್ನು ಹೆಚ್ಚು ಗಟ್ಟಿಗೊಳಿಸಲು ಮತ್ತು ತಾಂಜಾನಿಯಾ ಹಾಗೂ  ಜಾಂಜಿಬಾರ್‌ನ ಏಳಿಗೆಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಸಭೆಯಲ್ಲಿ ಭರವಸೆ ನೀಡಿದರು.  ಸಾಂಪ್ರದಾಯಿಕವಾಗಿ ನಿಕಟ ಮತ್ತು ಸೌಹಾರ್ದಯುತ ಸಂಬಂಧಗಳನ್ನು ಬಲಪಡಿಸುವ  ಜ್ಞಾನ ಮತ್ತು ಕೌಶಲ್ಯ ಪಾಲುದಾರಿಕೆಗಳನ್ನು  ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಆಧಾರ ಸ್ತಂಭವನ್ನಾಗಿ ಮಾಡುವ ಕುರಿತು ಇಬ್ಬರೂ ಸಚಿವರು ಅರ್ಥಪೂರ್ಣ ಸಂಭಾಷಣೆ ನಡೆಸಿದರು.

3.1.jpg 3.2.jpg

 ಶ್ರೀ ಪ್ರಧಾನ್ ಅವರು ಜಿಂಬಾಬ್ವೆಯ ಉನ್ನತ ಮತ್ತು ತೃತೀಯ ಶಿಕ್ಷಣ, ನಾವೀನ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಸಚಿವಾಲಯದ  ಮಂತ್ರಿ ಶ್ರೀ ರೇಮೋರ್ ಮಚಿಂಗುರಾ ಅವರೊಂದಿಗೆ ಇಂದು ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು.  ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ನಮ್ಮ ಪಾಲುದಾರಿಕೆಯನ್ನು ತೀವ್ರಗೊಳಿಸುವ ಕುರಿತು ಸಭೆಯಲ್ಲಿ ಫಲಪ್ರದ ಚರ್ಚೆಗಳನ್ನು ನಡೆಸಿದರು.  ಭಾರತ ಮತ್ತು ಆಫ್ರಿಕಾ ಎರಡೂ ದೇಶಗಳ ಆಕಾಂಕ್ಷೆಗಳನ್ನು ಮತ್ತು ಪರಸ್ಪರ ಆದ್ಯತೆಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಾಯಿತು.  ಭಾರತ ಮತ್ತು ಜಿಂಬಾಬ್ವೆ ನಡುವೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವರ್ಧನೆ ಕುರಿತು ಜಂಟಿ ಕಾರ್ಯ ತಂಡವನ್ನು ರಚಿಸುವಂತೆ ಶ್ರೀ ಪ್ರಧಾನ್ ಸಲಹೆ ನೀಡಿದರು.  ಎಚ್‌.ಇ. ಶ್ರೀ ಮಚಿಂಗುರ ಅವರು ಜಂಟಿ ಕಾರ್ಯ ತಂಡವನ್ನು ರಚಿಸುವ ತಮ್ಮ ಇಚ್ಛೆಯನ್ನು ಸಭೆಯಲ್ಲಿ ವ್ಯಕ್ತಪಡಿಸಿ  ಇಬ್ಬರೂ, ಪರಸ್ಪರ ಏಳಿಗೆ ಮತ್ತು ಬೆಳವಣಿಗೆಗಾಗಿ ಶಾಲೆಯಿಂದ ಸಂಶೋಧನೆಯವರೆಗೆ ನಮ್ಮ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸಲು ಸಚಿವರು ಒಪ್ಪಿಕೊಂಡರು.  ಜಿಂಬಾಬ್ವೆ ಮತ್ತು ಆಫ್ರಿಕಾದ ವಿಶ್ವಾಸಾರ್ಹ ಪಾಲುದಾರನಾಗಿರುವುದಕ್ಕೆ ಭಾರತವು ಹೆಮ್ಮೆಪಡುತ್ತದೆ.

4.2.jpg4.1.jpg

ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಘಾನಾದ ಶಿಕ್ಷಣದ ಉಪ ಸಚಿವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಪರಸ್ಪರ ಆದ್ಯತೆಗಳನ್ನು ಸಾಧಿಸಲು ಪೂರ್ವ ಶಾಲೆಯಿಂದ ಸಂಶೋಧನೆಯವರೆಗೆ ಭಾರತ ಮತ್ತು ಘಾನಾ ನಡುವೆ ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ಜಂಟಿ ಕಾರ್ಯ ಗುಂಪುಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿದರು.   ಶ್ರೀ. ಜಾನ್ ಅವರು ಪ್ರಧಾನ್ ಅವರ ಕಲ್ಪನೆಗೆ ತಮ್ಮ ಭಾವವನ್ನು ವ್ಯಕ್ತಪಡಿಸಿ, ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು.   ಆತ್ಮೀಯ ಮತ್ತು ಸೌಹಾರ್ದಯುತ ಸಂಬಂಧಗಳನ್ನು ಹೆಚ್ಚು ರೋಮಾಂಚಕಗೊಳಿಸುವ ಮತ್ತು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವ ಕುರಿತು ಸಚಿವರು ಉಪಯುಕ್ತ ಚರ್ಚೆಗಳನ್ನು ನಡೆಸಿದರು.

ಪ್ರಸ್ತುತ ನಡೆಯುತ್ತಿರುವ ಯುನೆಸ್ಕೋ ಇಂಡಿಯಾ ಆಫ್ರಿಕಾ ಹ್ಯಾಕಥಾನ್‌ನಲ್ಲಿ ಪಾಲ್ಗೊಳ್ಳಲು ಮಾರಿಷಸ್, ತಾಂಜಾನಿಯಾ, ಜಿಂಬಾಬ್ವೆ ಮತ್ತು ಘಾನಾ ಸಚಿವರು ಇಲ್ಲಿಗೆ ಬಂದಿದ್ದು,
 ಎಐಎಸ್‌ಎಚ್‌ಇ ಡೇಟಾ (2019-20) ಪ್ರಕಾರ, ಭಾರತದಲ್ಲಿ ಒಟ್ಟು 11083 ಆಫ್ರಿಕನ್ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

******



(Release ID: 1878695) Visitor Counter : 84


Read this release in: English , Urdu , Hindi , Odia , Tamil