ವಾರ್ತಾ ಮತ್ತು ಪ್ರಸಾರ ಸಚಿವಾಲಯ

‘ಸಿಯಾ’- ಕೆಟ್ಟ ವ್ಯವಸ್ಥೆ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಹುಡುಗಿಯ ಕರಳು ಕಿವುಚುವ ಸಾಹಸಗಾಥೆ


“ನನ್ನ ಸಿನೆಮಾ ಅನ್ಯಾಯಕ್ಕೊಳಗಾದ ವ್ಯಕ್ತಿಗಳ ಮಾನವೀಯ ಮುಖವನ್ನು ಬಿಂಬಿಸುವ ಪ್ರಯತ್ನ”; ನಿರ್ದೇಶಕ, ಮನೀಶ್ ಮುಂದ್ರಾ

Posted On: 23 NOV 2022 3:45PM by PIB Bengaluru

‘ಸಿಯಾ’ ನಮ್ಮ ಸಾಮಾಜಿಕ ನ್ಯಾಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಚಿತ್ರ. ಅನ್ಯಾಯಕ್ಕೊಳಗಾದ ವ್ಯಕ್ತಿಗಳ ಮಾನವೀಯ ಮುಖವನ್ನು ಬಿಂಬಿಸುವ ಪ್ರಯತ್ನ. ಇದು ‘ಸಿಯಾ’ ಚಿತ್ರದ ನಿರ್ದೇಶಕ ಮನೀಶ್ ಮುಂದ್ರಾ ಅವರು ಹೇಳಿದ ಮಾತುಗಳಿವು. ಕೆಟ್ಟ ವ್ಯವಸ್ಥೆ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಹುಡುಗಿಯ ಕರಳು ಕಿವುಚುವ ಸಾಹಸಗಾಥೆ ಇದಾಗಿದೆ. ಆಂಕೋನ್ ದೇಖಿ, ಮಾಸಾನ್ ಮತ್ತು ನ್ಯೂಟನ್ ನಂತಹ ಮಹೋನ್ನತ ಚಿತ್ರಗಳನ್ನು ನಿರ್ಮಿಸಿದ್ದ ಮನೀಶ್ ಮುಂದ್ರಾ ಅವರು, ಮೊದಲ ಬಾರಿಗೆ ‘ಸಿಯಾ’ ಚಿತ್ರದ ನಿರ್ದೇಶನಕ್ಕಾಗಿ ಟೋಪಿ ಧರಿಸಿದ್ದಾರೆ.        

ಗೋವಾದಲ್ಲಿ ನಡೆಯುತ್ತಿರುವ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಪಿಐಬಿ ಆಯೋಜಿಸಿದ್ದ ‘ಟೇಬಲ್ ಟಾಕ್ಸ್’ ಅಧಿವೇಶನದಲ್ಲಿ ಚಿತ್ರೋತ್ಸವದ ಪ್ರತಿನಿಧಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವಾಗ ಸಂತ್ರಸ್ತರು ನ್ಯಾಯಕ್ಕಾಗಿ ತಮ್ಮ ಪಯಣದ ಹಾದಿಯಲ್ಲಿ ಸಾಗುತ್ತಾರೆ, ಅವರ ನೋವಿನ ಸಂಗತಿಗಳನ್ನು ಅರ್ಥಮಾಡಿಕೊಳ್ಳುವುದು ಚಲನಚಿತ್ರದ ಪ್ರಮಾಣಿಕ ಪ್ರಯತ್ನವಾಗಿದೆ ಎಂದು ಮನೀಶ್ ಮುಂದ್ರಾ ಹೇಳಿದರು. “ಎಲ್ಲರೂ ಸಹ ಅದೇ ನೋವು ಮತ್ತು ಸಂಕಟ ಅನುಭವಿಸುವ ಭಾವನೆ ಮೂಡಬೇಕು. ಇದು ಜವಾಬ್ದಾರಿಯುತ ನಾಗರಿಕರಾಗಲು  ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.  

‘ಸಿಯಾ’ ಅತ್ಯಾಚಾರ ಸಂತ್ರಸ್ತರ ಭಯಾನಕ ಮತ್ತು ನೋವುಗಳನ್ನು ಕಲಕುವ ನೈಜ ಜೀವನದ ಘಟನೆಯಿಂದ ಸ್ಪೂರ್ತಿ ಪಡೆದ ಚಲನಚಿತ್ರವಾಗಿದ್ದು, ಉತ್ತರ ಭಾರತದ ಗ್ರಾಮೀಣ ಹಳ್ಳಿಯ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನಂತರ ನ್ಯಾಯಕ್ಕಾಗಿ ಹೋರಾಡಲು ನಿರ್ಧರಿಸುತ್ತಾಳೆ. ನ್ಯಾಯಕ್ಕಾಗಿ ಧೈರ್ಯದಿಂದ ಹೋರಾಡುತ್ತಾಳೆ ಮತ್ತು ಬಲಿಷ್ಠರ ಕೈಯಲ್ಲಿ ಕೈಗೊಂಬೆಯಾಗಿ ಬದಲಾಗಿರುವ ದೋಷಪೂರಿತ ನ್ಯಾಯ ವ್ಯವಸ್ಥೆಯ ವಿರುದ್ಧ ಚಳವಳಿ ಪ್ರಾರಂಭಿಸುತ್ತಾಳೆ.

ಚಿಲನಚಿತ್ರಕ್ಕೆ ವಿಷಯವನ್ನು ಆಯ್ಕೆ ಮಾಡಿದ ಕುರಿತು ಕೇಳಿದಾಗ, ‘ಸಿಯಾ’ ನೈಜ ಜೀವನದ ಘಟನೆಗಳನ್ನು ಆಧರಿಸಿದೆ ಎಂದು ಮನೀಶ್ ಮುದ್ರಾ ಅವರು ಹೇಳಿದರು. ‘ನನಗೆ ಸಿನೆಮಾ ಮಾಡುವುದರಲ್ಲಿ ತುಂಬಾ ಆಸಕ್ತಿಯಿದೆ. ವಾಣಿಜ್ಯ ಬ್ಲಾಕ್ ಬಸ್ಟರ್ಸ್ ಚಿತ್ರಗಳನ್ನು ಮಾಡುವುದಿಲ್ಲ. ಆತ್ಮ ಮತ್ತು ಹೃದಯವನ್ನು ತಟ್ಟುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಕಥೆ ಪ್ರೇಕ್ಷಕನ ಆತ್ಮವನ್ನು ಶಾಶ್ವತವಾಗಿ ಕಲಕಬೇಕು” ಎಂದು ಹೇಳಿದರು.   

ಕಾನೂನು ಹೋರಾಟದ ಸಂದರ್ಭದಲ್ಲಿ ಸಮಾಜ ಸಂತ್ರಸ್ತರನ್ನು ಕ್ರೂರವಾಗಿ ಮೂಲೆಗೆ ತಳ್ಳುವ ದೊಡ್ಡ ಸಂದಿಗ್ದತೆಯ ಬಗ್ಗೆ ಮಾತನಾಡಿದ ಮನೀಶ್, ಜನತೆ ಮೊದಲು ಹೆಜ್ಜೆ ಇಡುವ ಧೈರ್ಯ ತೋರುವುದಿಲ್ಲ. ಹೇಗಾದರೂ ಅವರು ಆ ಹೆಜ್ಜೆ ಇಡಲು ನಿರ್ಧರಿಸಿದರೂ ಸಹ ಇದು ಸಾಕಷ್ಟು ಧೈರ್ಯದ ಮತ್ತು ಊಹಿಸಲು ಸಾಧ್ಯವಾಗದ ನೋವಿನಿಂದ ಕೂಡಿರುತ್ತದೆ ಎಂದರು. “ಇದು ನಮ್ಮ ಸಾಮಾಜಿಕ ನ್ಯಾಯ ವ್ಯವಸ್ಥೆಯನ್ನು ಪ್ರತಿಫಲಿಸುತ್ತದೆ’. ಅಂತಹ ಸಮಸ್ಯೆಗಳ ಬಗ್ಗೆ ಯಾವುದೇ ಸ್ವಯಂ ಪ್ರೇರಿತ ಕಾಳಜಿಯನ್ನು ನಾವು ಹೊಂದಿಲ್ಲ. ನಾವು ತಕ್ಷಣವೇ ಅವರನ್ನು ಮರೆತು, ಸಂತ್ರಸ್ತರಿಗೆ ಸಾಂತ್ವಾನ ಹೇಳದೇ ಮುನ್ನಡೆಯುತ್ತೇವೆ ಎಂದರು.  

ಋಣಾತ್ಮಕತೆಯ ಬದಲು ಸಮಾಜದಲ್ಲಿನ ವಿವಿಧ ಸಕಾರಾತ್ಮಕ ಅಂಶಗಳನ್ನು ಬಿಂಬಿಸುವ ಕುರಿತ ವಿಷಯದ ಬಗ್ಗೆ ಕೇಳಿದಾಗ, ಮನೀಶ್ ಮುಂದ್ರಾ ಅವರು ‘ಸಿಯಾ’ದಂತಹ ಚಿತ್ರದಲ್ಲಿ ಸಮಾಜದ ಸತ್ಯವನ್ನು ನಿರೂಪಿಸುವುದು ಮುಖ್ಯ ಎಂದರು. “ಇದು ಕೇವಲ ದುಃಖವಲ್ಲ. ನಮ್ಮ ಚಿತ್ರದ ಆತ್ಮ. ಇದು ಸತ್ಯಕ್ಕೆ ಸಂಬಂಧಿಸಿದ್ದು ಮತ್ತು ನೋವು, ಸಂತಸ, ವಿಶ್ವಾಸ ಮತ್ತು ಹತಾಶೆಯನ್ನು ಸತ್ಯ ಒಳಗೊಂಡಿದೆ”.  “ಯಾವಾಗಲೂ ಹೊಗಳಿಕೆಗಳಿರುತ್ತವೆ, ಆದರೆ ಚಲನಚಿತ್ರಗಳಲ್ಲಿ ಸಕಾರಾತ್ಮಕತೆಯನ್ನು ಪ್ರತಿಂಬಿಸುವುದು ಮತ್ತು ಸಮಾಜದ ಸತ್ಯವನ್ನು ತೋರಿಸುವುದು ಮುಖ್ಯವಾಗುತ್ತದೆ. ಇದು ಸಿನೆಮಾ ನಿರ್ಮಿಸುವ ನನ್ನ ಶೈಲಿಯಾಗಿದೆ ಮತ್ತು “ವಾಸ್ತವಿಕ ಚಲನಚಿತ್ರಗಳು ಯಾವಾಗಲೂ ಜೀವನವನ್ನು ಉತ್ತಮವಾಗಿ ಸೆರೆ ಹಿಡಿದಿರುತ್ತವೆ ಮತ್ತು ಜನರ ಮನಸ್ಸನ್ನು ತಟ್ಟುತ್ತದೆ.” ಎಂದು ಹೇಳಿದರು.  

ಭಾರತದಾದ್ಯಂತ ಚಲನಚಿತ್ರಗಳನ್ನು ನಿರ್ಮಿಸುವ ತಮ್ಮ ಅದಮ್ಯ ಉತ್ಸಾಹವನ್ನು ಹಂಚಿಕೊಂಡ ಮನೀಶ್ ಮುಂದ್ರಾ, ಪ್ಯಾನ್ ಇಂಡಿಯಾ ಚಲನಚಿತ್ರ ನಿರ್ಮಾಣಕಾರರಾಗುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು. “ಯಾರಾದರೂ ಒಂದು ಅವಧಿಯಲ್ಲಿ ನನ್ನ ಎಲ್ಲಾ ಚಲನಚಿತ್ರಗಳನ್ನು ನೋಡಿದಾಗ ಅದು ಅವರಿಗೆ ಭಾರತದ ರುಚಿ ನೀಡಬೇಕು.” ಎಂದು ಹೇಳಿದರು.

ಚಲನಚಿತ್ರ ನಿರ್ಮಾಪಕರಾಗಿ ಎಂಟು ವರ್ಷಗಳ ತಮ್ಮ ಯಾನವನ್ನು ಸ್ಮರಿಸಿಕೊಂಡರು ಮತ್ತು ಇದೀಗ ನಿರ್ದೇಶನ ಮಾಡಿದ್ದು, ಮಾನವೀಯ ವ್ಯಕ್ತಿಗಳು ಸದಾ ಕಾಲ ಹಲವಾರು ಸವಾಲುಗಳನ್ನು ತೆಗೆದುಕೊಳ‍್ಳುತ್ತಾರೆ. “ನಿರ್ದೇಶಕರ ವಲಯದಲ್ಲಿ ಇದು ತನ್ನದೇ ಆದ ಸವಾಲುಗಳನ್ನು ಹೊಂದಿರುತ್ತದೆ ಮತ್ತು ಸಿನೆಮಾ ನಿರ್ಮಾಣದಲ್ಲಿ ಮಿಂಚಲು ಒತ್ತಡದ ಪ್ರೇರೇಪಣೆ ನೀಡುತ್ತದೆ ಮನೀಶ್ ಮುಂದ್ರಾ ಅಭಿಪ್ರಾಯಪಟ್ಟರು.  

ಈ ಚಲನ ಚಿತ್ರ ಮುಂದಿನ ಪೀಳಿಗೆಯ ಚಲನಚಿತ್ರ ನಿರ್ಮಾಪಕರು ತೆರೆಯ ಮೇಲೆ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ಉದಾಹರಿಸುವ 6 ಅಂತರರಾಷ್ಟ್ರೀಯ ಮತ್ತು ಚೊಚ್ಚಲ ಚಿತ್ರ ನಿರ್ದೇಶನ ಮಾಡಿದ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ. ‘ಸಿಯಾ’ 53 ನೇ ಐಎಫ್ಎಫ್ಐ ಭಾರತೀಯ ಪನೋರಮಾ ಚಲನಚಿತ್ರ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ. ನಟರಾದ ಪೂಜಾ ಪಾಂಡೆ ಮತ್ತು ವಿನೀತ್ ಕುಮಾರ್ ಅವರು ಸೀತಾ ಮತ್ತು ಮಹೇಂದ್ರ ಪಾತ್ರಗಳಲ್ಲಿ ನಟಿಸಿದ್ದಾರೆ.   


 

ಸಿನೆಮಾ ಬಗ್ಗೆ

ನಿರ್ದೇಶಕರು: ಮನೀಶ್ ಮುಂದ್ರಾ

ನಿರ್ಮಾಪಕರು; ದೃಶ್ಯಂ ಫಿಲಂಸ್

ಚಿತ್ರಕಥೆ; ಮನೀಶ್ ಮುಂದ್ರಾ

ಸಿನೆಮಾಟೋಗ್ರಾಫರ್; ರಫೇಯ್ ಮಹ್ಮೂದ್ ಮತ್ತು ಸುಬ್ರಾನ್ಸು ಕುಮಾರ್ ದಾಸ್

ಸಂಕಲಕಾರ; ಮುನೇಂದ್ರ ಸಿಂಗ್ ಲೋಧಿ

ತಾರಾಗಣ; ಪೂಜಾ ಪಾಂಡೆ, ವಿನೀತ್ ಕುಮಾರ್ ಸಿಂಗ್

2022/ಹಿಂದಿ/ಬಣ್ಣದ ಚಿತ್ರ/108 ನಿಮಿಷ.

ಸಾರಂಶ;

ಈ ಚಲನಚಿತ್ರ ನೈಜ ಘಟನೆಯಿಂದ ಪ್ರೇರಿತವಾಗಿದ್ದು, ಉತ್ತರ ಭಾರತದ ಹಳ್ಳಿಯೊಂದರ ಯುವತಿಯೊಬ್ಬಳು ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಪ್ರಬಲ, ಹಾಲಿ ಶಾಸಕರಿಂದ ಅತ್ಯಾಚಾರಕ್ಕೆ ಒಳಗಾದ ನಂತರ ನ್ಯಾಯಕ್ಕಾಗಿ ಹೋರಾಡಲು ನಿರ್ಧರಿಸುತ್ತಾಳೆ  ಮತ್ತು ಆ ಮೂಲಕ ಕೆಟ್ಟ ಪ್ರಭುತ್ವದ ವಿರುದ್ಧ ಚಳವಳಿ ಪ್ರಾರಂಭಿಸುತ್ತಾಳೆ.

ನಿರ್ದೇಶಕ; ಮನೀಶ್ ಮುಂದ್ರಾ ಆಂಕೋನ್ ದೇಖಿ (2014), ಮಾಸಾನ್(2015), ಧನಕ್ (2016), ನ್ಯೂಟನ್ (2017), ರಾಮ್ ಪ್ರಸಾದ್ ಕಿ ತೆಹ್ರ್ವಿ (2021) ಮತ್ತು ಸಿಯಾ (2022) ದಂತಹ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಮತ್ತು ನಿರ್ದೇಶಕರು.

ನಿರ್ಮಾಪಕರು; ದೃಶ್ಯಂ ಫಿಲಂಸ್, ಈ ಸಂಸ್ಥೆ ಮನೀಶ್ ಮುಂದ್ರಾ ಅವರ ಚಲನಚಿತ್ರ ನಿರ್ಮಾಣ ಸ್ಟುಡಿಯೋ ನ್ಯೂಟನ್ (2017) ನಂತಹ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ನಿರ್ಮಿಸಿದೆ. ಇದು 2018 ರಲ್ಲಿ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶಕ್ಕಾಗಿ ಆಯ್ಕೆಯಾದ ಚಿತ್ರವಾಗಿದೆ.

*****



(Release ID: 1878292) Visitor Counter : 135