ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಅನಿಮೇಷನ್ ಚಲನಚಿತ್ರ ತಯಾರಿಕೆಯಲ್ಲಿನ ಶ್ರೇಷ್ಠ ಎವರ್ ಗ್ರೀನ್ ಪ್ರವೃತ್ತಿಯು ಭಾವನಾತ್ಮಕ ಕಥೆ ಹೇಳುವುದಾಗಿದೆ: IFFI 53 ಮಾಸ್ಟರ್ ಕ್ಲಾಸ್‌ನಲ್ಲಿ ಕುಂಗ್ ಫೂ ಪಾಂಡ ರಚನೆಕಾರ ಮಾರ್ಕ್ ಓಸ್ಬೋರ್ನ್



‘ಅನಿಮೇಷನ್ ಪ್ರಾಜೆಕ್ಟ್ ಗಳು ಯಾವಾಗಲೂ ವಿಕಸನಗೊಳ್ಳುವುದರಿಂದ ಅವುಗಳನ್ನು ಹಸ್ತಾಕ್ಷರ ರೂಪದಲ್ಲಿ ಅಂತಿಮಗೊಳಿಸಲಾಗುವುದಿಲ್ಲ’

Posted On: 22 NOV 2022 4:01PM by PIB Bengaluru

ಚಲನಚಿತ್ರಗಳನ್ನು ಪ್ರಸಾರ ಮಾಡುವ ವೇದಿಕೆಗಳು ಅನಿಮೇಷನ್ ಚಿತ್ರಗಳಿಗೆ ವರದಾನವಾಗಿದ್ದರೂ, ಅನಿಮೇಷನ್ ಚಲನಚಿತ್ರಗಳ ತಯಾರಿಕೆಯಲ್ಲಿ ಅತ್ಯಂತ ದೊಡ್ಡ ಸಾರ್ವಕಾಲಿಕ ಸದಾ ಪ್ರಚಲಿತದಲ್ಲಿರುವ ಪ್ರವೃತ್ತಿಯೆಂದರೆ ಭಾವನಾತ್ಮಕ ಕಥೆ ಹೇಳುವಿಕೆ ಎಂದು ಕುಂಗ್ ಫೂ ಪಾಂಡಾ ಮತ್ತು ದಿ ಲಿಟಲ್ ಪ್ರಿನ್ಸ್ ನಂತಹ ಚಲನಚಿತ್ರಗಳಿಗೆ ಪ್ರಸಿದ್ಧರಾದ ಅಮೇರಿಕದ ಚಲನಚಿತ್ರ ನಿರ್ಮಾಪಕ ಮತ್ತು ಆನಿಮೇಟರ್ ಮಾರ್ಕ್ ಓಸ್ಬೋರ್ನ್ ಹೇಳಿದರು. ಅವರು 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಬದಿಯಲ್ಲಿ ನಡೆದ 'ಅನಿಮೇಷನ್ ಆಸ್ ಎ ಟೂಲ್ ಫಾರ್ ಎಕ್ಸ್ ಪ್ರೆಶನ್' ವಿಷಯದ ಕುರಿತು ಮಾಸ್ಟರ್ ಕ್ಲಾಸ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. 

ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್ ಫಾರ್ಮ್ ಜನಪ್ರಿಯವಾಗುತ್ತಿರುವಾಗ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪುವಂತೆ ಚಲನಚಿತ್ರಗಳ ಕಥೆಗಳನ್ನು ತಯಾರಿಸುವುದು ನಿಯಮವಾಗಿರುತ್ತದೆ. ಆದರೆ ಅಂತಿಮವಾಗಿ ಒಂದು ಚಿತ್ರ ಪ್ರೇಕ್ಷಕರಿಗೆ ಹತ್ತಿರವಾಗಬೇಕು.ಅವರ ಮನಸ್ಸಿಗೆ ಹಿಡಿಸಬೇಕು ಎಂದು ಮಾರ್ಕ್ ಓಸ್ಬೋರ್ನ್ ಹೇಳುತ್ತಾರೆ.ಪ್ರೇಕ್ಷಕರಿಗೆ ಇಷ್ಟವಾಗುವ ಕಥೆ ನಿರ್ಮಾಣ ಮಾಡಲು ನಿಮಗೆ ಅರ್ಥವತ್ತಾಗುವಂತಹದ್ದು ಯಾವುದು ಎಂಬುದು ಮುಖ್ಯವಾಗುತ್ತದೆ. ನಿಮಗೆ ಸಿನಿಮಾದ ವಿಷಯ ಮುಖ್ಯವಾಗಿದ್ದರೆ, ನೀವು ಅದಕ್ಕೆ ಪ್ರಾಮಾಣಿಕವಾಗಿದ್ದರೆ, ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ ಜನತೆಗೆ ಇಷ್ಟವಾಗುತ್ತದೆ, ಪ್ರಾಮಾಣಿಕತೆಯು ಹೊಸ ವಿಧಾನವನ್ನು ಸೃಷ್ಟಿಸುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಮಾರ್ಕ್ ಓಸ್ಬೋರ್ನ್.

ಅನಿಮೇಷನ್ ಪ್ರಭಾವ, ಶಕ್ತಿಯ ಬಗ್ಗೆ ಒತ್ತಿ ಹೇಳಿದ ಅವರು, ಅನಿಮೇಷನ್ ಯಾವುದೇ ಕಥೆಯನ್ನು ಹೇಳಬಲ್ಲ ವೈವಿಧ್ಯಮಯ ಮತ್ತು ವಿಶಾಲವಾದ ಮಾಧ್ಯಮವಾಗಿದೆ. ಯಾರಾದರೂ ಅಸ್ತಿತ್ವದಲ್ಲಿಲ್ಲದ ವಿಷಯದ ಬಗ್ಗೆ ಭಾವನೆ ಮೂಡಿಸುವುದು ನಿಜವಾಗಿಯೂ ಅದ್ಭುತವಾಗಿದೆ. ಪುನಃ ಬರೆಯುವುದು, ಪುನರ್ನಿರ್ಮಾಣ ಮತ್ತು ಪ್ರಯೋಗಗಳ ನಿರಂತರ ಪ್ರಕ್ರಿಯೆಯ ಫಲಿತಾಂಶವಾಗಿದೆ ಫಲಿತಾಂಶವಾಗಿದೆ. ಅನಿಮೇಷನ್‌ನನ್ನು ಕೊನೆಯದಾಗಿ ನೋಡಿದಾಗ ಅದನ್ನು ಅನುಭವಿಸಿದಾಗ ಮಾಂತ್ರಿಕತೆಯ ಅನುಭವವಾಗುತ್ತದೆ.

ಬರಹ ರೂಪದಲ್ಲಿ ಅನಿಮೇಷನ್ ಅನ್ನು ಅಂತಿಮಗೊಳಿಸಲು ಸಾಧ್ಯವಿಲ್ಲ. ‘’ ಅನಿಮೇಷನ್ ವಿಚಾರದಲ್ಲಿ ಬರಹ ಅಥವಾ ಸ್ಕ್ರಿಪ್ಟ್ ಗೆ ನಿರ್ಬಂಧವಿರುವುದಿಲ್ಲ. ಕೊನೆಯ ಹಂತದವರೆಗೂ ತಿದ್ದುವಿಕೆ, ಸುಧಾರಣೆಗೆ ಅವಕಾಶವಿರುತ್ತದೆ. ವಿಕಸನಗೊಳ್ಳುತ್ತಾ ಬದಲಾಗುತ್ತಾ ಹೋಗುತ್ತದೆ. ಒಂದು ದೃಶ್ಯ ಮಾಧ್ಯಮವಾಗಿ, ಅನಿಮೇಷನ್ ನಲ್ಲಿ ಸಾಕಷ್ಟು ಕೆಲಸ, ಕೈಚಳಕ ತೋರಲು ನಾವು ಅವಕಾಶ ನೀಡಬೇಕು ಎಂದು ವಿವರಿಸಿದರು.

ತಮ್ಮೊಳಗಿರುವ ಕಥೆಗಳನ್ನು ಸುಂದರವಾಗಿ, ಅದ್ಭುತವಾಗಿ ಹೊರತರಲು ಪ್ರತಿಯೊಬ್ಬ ಅನಿಮೇಟರ್ ಗೆ ಬೆಂಬಲ ವ್ಯವಸ್ಥೆ ಬೇಕಾಗುತ್ತದೆ. ಕಲಾವಿದರು ಮತ್ತು ಅನಿಮೇಷನ್ ತಯಾರಕರನ್ನು ಬೆಂಬಲಿಸಿದಾಗ ಅದ್ಭುತ ಜಾದು ಸೃಷ್ಟಿಯಾಗಬಹುದು. ಅನಿಮೇಷನ್ ತಯಾರಿಕೆಗೆ ಕಲಾವಿದರಿಗೆ ಒಂದು ಸುರಕ್ಷಿತ ಜಾಗದ ಅವಶ್ಯಕತೆಯಿರುತ್ತದೆ ಎಂದು ಒತ್ತಿ ಹೇಳಿದರು.

ಪ್ರವರ್ಧಮಾನಕ್ಕೆ ಬರುತ್ತಿರುವ ಅನಿಮೇಷನ್ ತಯಾರಕರಿಗೆ ಇದೇ ಸಂದರ್ಭದಲ್ಲಿ ಎಚ್ಚರಿಕೆ ಸಂದೇಶವನ್ನು ನೀಡಿದ ಮಾರ್ಕ್ ಓಸ್ಬೋರ್ನ್, ಅನಿಮೇಷನ್ ಚಿತ್ರಗಳ ತಯಾರಿಕೆಯ ಅನುಭವಿಗಳು, ತಜ್ಞರಿಂದ ಸ್ಫೂರ್ತಿಯನ್ನು ಪಡೆಯಬಹುದೇ ಹೊರತು ಅವರ ಕೆಲಸಗಳನ್ನು ಅನುಕರಣೆ ಮಾಡಬಾರದು. ನಿಮ್ಮ ಆಲೋಚನೆಗಳನ್ನು ಕಂಡುಹಿಡಿದು ಹೊರತೆಗೆಯುವ ಕೌಶಲ್ಯ ಕಂಡುಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನ ದೃಷ್ಟಿಕೋನ ಮತ್ತು ಜೀವನಾನುಭವಗಳಿರುತ್ತವೆ. ಈ ಸ್ವಂತ ಜೀವನಾನುಭವಗಳನ್ನು ಮತ್ತು ವೈಯಕ್ತಿಕ ಪಯಣವನ್ನು ಚಿತ್ರ ತಯಾರಿಕೆಯಲ್ಲಿ ತರುವುದು ಅತಿಮುಖ್ಯವಾಗುತ್ತದೆ. ಮಾರ್ಕ್ ಓಸ್ಬೋರ್ನ್ ಅವರು, ಆಂಟೊಯಿನ್ ಡಿ ಸೇಂಟ್-ಎಕ್ಸೂಪೆರಿ ಬರೆದ ಕಾದಂಬರಿಯನ್ನು ಅಳವಡಿಸಿಕೊಂಡು ದಿ ಲಿಟಲ್ ಪ್ರಿನ್ಸ್ ಚಲನಚಿತ್ರವನ್ನು ರಚಿಸುವಲ್ಲಿನ ತಮ್ಮ ಪಯಣದ ಪ್ರಸ್ತುತಿಯನ್ನು ನೀಡಿದರು. ಈ ಅಧಿವೇಶನವನ್ನು ಪ್ರೊಸೆನ್‌ಜಿತ್ ಗಂಗೂಲಿ ನಿರ್ವಹಿಸಿಕೊಟ್ಟರು.

ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ (SRFTI), ಎನ್‌ಎಫ್‌ಡಿಸಿ, ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಮತ್ತು ಇಎಸ್‌ಜಿ ಜಂಟಿಯಾಗಿ ಮಾಸ್ಟರ್‌ಕ್ಲಾಸ್‌ಗಳು ಮತ್ತು ಮಾತುಕತೆ ಸೆಷನ್ ಗಳನ್ನು ಆಯೋಜಿಸುತ್ತಿವೆ. ಚಲನಚಿತ್ರ ನಿರ್ಮಾಣದ ಪ್ರತಿಯೊಂದು ಅಂಶದಲ್ಲೂ ವಿದ್ಯಾರ್ಥಿಗಳು ಮತ್ತು ಸಿನಿಮಾ ಉತ್ಸಾಹಿಗಳನ್ನು ಪ್ರೋತ್ಸಾಹಿಸಲು ಈ ವರ್ಷ ಮಾಸ್ಟರ್‌ಕ್ಲಾಸ್‌ಗಳು ಮತ್ತು ಸಂಭಾಷಣೆಗಳನ್ನು ಒಳಗೊಂಡ ಒಟ್ಟು 23 ಸೆಷನ್‌ಗಳನ್ನು ನಡೆಸಲಾಗುತ್ತಿದೆ.

*****



(Release ID: 1878147) Visitor Counter : 162