ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಉದ್ಯೋಗ ಸೃಷ್ಟಿಗೆ ಅತ್ಯುನ್ನತ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯ ಭಾಗವಾಗಿ ದೇಶಾದ್ಯಂತ 45 ಸ್ಥಳಗಳಲ್ಲಿ  ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. 

  

ಹೊಸದಾಗಿ ಸೇರ್ಪಡೆಯಾದ 71,000 ಮಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರ (ಒಒಎ) ವಿತರಿಸಿದ ಪ್ರಧಾನಿ 
  
ಕೇಂದ್ರ ವಿದ್ಯುತ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರು ಸೋನಿಪತ್‌ನ ಖೇವ್ರಾದಲ್ಲಿ 81 ಯುವಕರಿಗೆ ವಿವಿಧ ಹುದ್ದೆಗಳ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು 

Posted On: 22 NOV 2022 4:53PM by PIB Bengaluru

ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನ ಮಂತ್ರಿಯವರ ಬದ್ಧತೆಯ ಭಾಗವಾಗಿ, ಇಂದು ದೇಶಾದ್ಯಂತ 45 ಸ್ಥಳಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಹೊಸದಾಗಿ ಸೇರ್ಪಡೆಗೊಂಡ 71,000 ಅಭ್ಯರ್ಥಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿಯ ಪತ್ರಗಳನ್ನು (ಒಒಎ) ವಿತರಿಸಿದರು. 
  
ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ. ಸಿಂಗ್ ಅವರು ಸೋನಿಪತ್‌ನ ಖೇವ್ರಾದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಕೇಂದ್ರದಲ್ಲಿ ಆಯೋಜಿಸಲಾದ ಉದ್ಯೋಗ ಮೇಳದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, 81 ಯುವಕರಿಗೆ ವಿವಿಧ ಹುದ್ದೆಗಳ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು. ಉದ್ಯೋಗ ಮೇಳವನ್ನು ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಕೇಂದ್ರ ವಿದ್ಯುತ್‌, ಹೊಸ  ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಖೇವ್ರಾದ ಸಿಆರ್‌ಪಿಎಫ್‌ ಕೇಂದ್ರದಲ್ಲೂ ಪ್ರಧಾನಿ ಅವರ ಕಾರ್ಯಕ್ರಮದ ನೇರ ಪ್ರಸಾರ ಭಿತ್ತರಿಸಲಾಯಿತು. 

https://static.pib.gov.in/WriteReadData/userfiles/image/image001Y642.jpg

ಕೇಂದ್ರ ವಿದ್ಯುತ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ರಾಜ್ ಕುಮಾರ್ ಸಿಂಗ್ ಅವರು ನವೆಂಬರ್ 22, 2022 ರಂದು ಹರಿಯಾಣದ ಸೋನಿಪತ್‌ನಲ್ಲಿ ನಡೆದ 'ಉದ್ಯೋಗ ಮೇಳ'ದಲ್ಲಿ ಭಾಷಣ ಮಾಡಿದರು. 
 
https://static.pib.gov.in/WriteReadData/userfiles/image/image002PHGK.jpg

ಕೇಂದ್ರ ವಿದ್ಯುತ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ರಾಜ್ ಕುಮಾರ್ ಸಿಂಗ್ ಅವರು ನವೆಂಬರ್ 22, 2022 ರಂದು ಹರಿಯಾಣದ ಸೋನಿಪತ್‌ನಲ್ಲಿ ನಡೆದ 'ಉದ್ಯೋಗ ಮೇಳ'ದಲ್ಲಿ ಭಾಷಣ ಮಾಡಿದರು
 
ಹೊಸದಾಗಿ ನೇಮಕಗೊಂಡವರು ಸರಕಾರವನ್ನು ಸೇರಿ, ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಾರೆ. ಅವರು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಮತ್ತು ʻಇಂಡಿಯಾ@47ʼಗೆ ಸಾಕ್ಷಿಯಾಗುತ್ತಾರೆ. ಪ್ರಧಾನ ಮಂತ್ರಿಯವರ ಆಶಯದಂತೆ ಮುಂದಿನ ಒಂದು ವರ್ಷದಲ್ಲಿ 10 ಲಕ್ಷ ನೇಮಕಾತಿಗಳನ್ನು ನಡೆಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಸರಣಿಯಲ್ಲಿ ಇದು ಎರಡನೇಯದಾಗಿದೆ (ಮೊದಲನೆಯ ಕಾರ್ಯಕ್ರಮ 2022ರ ಅಕ್ಟೋಬರ್ 22ರಂದು 50 ಸ್ಥಳಗಳಲ್ಲಿ ನಡೆಯಿತು). 

https://static.pib.gov.in/WriteReadData/userfiles/image/image003ZCGU.jpg  

ಕೇಂದ್ರ ವಿದ್ಯುತ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ರಾಜ್ ಕುಮಾರ್ ಸಿಂಗ್ ಅವರು ನವೆಂಬರ್ 22, 2022 ರಂದು ಹರಿಯಾಣದ ಸೋನಿಪತ್ನಲ್ಲಿ ನಡೆದ 'ಉದ್ಯೋಗ ಮೇಳʼ ಹೊಸದಾಗಿ ಸೇರ್ಪಡೆಗೊಂಡವರಿಗೆ ನೇಮಕಾತಿ ಪತ್ರಗಳನ್ನು ನೀಡಿದರು. 

ದೇಶವು ಆರ್ಥಿಕ ಅಭಿವೃದ್ಧಿಯ ಪಥದಲ್ಲಿದೆ ಎಂದು ಶ್ರೀ ಸಿಂಗ್ ಹೇಳಿದರು. ದೇಶದಲ್ಲಿ ಸರಕಾರಿ ವಲಯದ ಜೊತೆಗೆ ಖಾಸಗಿ ವಲಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಕೇಂದ್ರ ಸರಕಾರವು ಸರಕಾರಿ ಸೇವೆಗಳಲ್ಲಿ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದರ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಇಂದು ನಡೆದ ಎರಡನೇ ಉದ್ಯೋಗ ಮೇಳದಲ್ಲಿ ದೇಶಾದ್ಯಂತ 71 ಸಾವಿರ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸವನ್ನು ಮಾಡಲು ರಾಜ್ಯ ಸರಕಾರಗಳನ್ನು ಸಹ ಪ್ರೋತ್ಸಾಹಿಸಲಾಗುತ್ತಿದೆ. ಸರಕಾರದ ಗಮನ ಈಗ ಉದ್ಯೋಗದ ಮೇಲೆ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದರು. 

ಕೇಂದ್ರ ವಿದ್ಯುತ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ರಾಜ್‌ಕುಮಾರ್‌ ಸಿಂಗ್‌ @RajKSinghIndia ಅವರು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಯೋಗ ಮೇಳದ #RozgarMela ಎರಡನೇ ಆವೃತ್ತಿಯನ್ನುದ್ದೇಶಿಸಿ ಮಾತನಾಡಿದರು. @narendramodi@PMOIndia @mygovindia @DoPTGoI @PIBHomeAffairs pic.twitter.com/H0Q6TKn6ER
- ಇಂಧನ ಸಚಿವಾಲಯ (@MinOfPower) ನವೆಂಬರ್ 22, 2022 
  
2027-28ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಶ್ರೀ ಸಿಂಗ್ ಅವರು ಒತ್ತಿ ಹೇಳಿದರು. ನಮ್ಮ ಆರ್ಥಿಕ ಬೆಳವಣಿಗೆಯ ದರವು ಸುಮಾರು 7 ಪ್ರತಿಶತದಷ್ಟಿದ್ದು, ತುಂಬಾ ಉತ್ತಮವಾಗಿದೆ. ಈ ಬೆಳವಣಿಗೆ ದರವು ಮುಂದಿನ 20ವರ್ಷಗಳವರೆಗೆ ಮುಂದುವರಿಯುತ್ತದೆ ಎಂದು ಹೇಳಿದರು. ಹೊಸದಾಗಿ ಆಯ್ಕೆಯಾದ ಯುವಕರನ್ನು ಅಭಿನಂದಿಸಿದ ಕೇಂದ್ರ ಸಚಿವ ಆರ್.ಕೆ.ಸಿಂಗ್, ಈ ಕೆಲಸವನ್ನು ಒಂದು ಧ್ಯೇಯವಾಗಿ ಅಳವಡಿಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡುವ ಮನೋಭಾವದಿಂದ ಮುಂದುವರಿಯುವಂತೆ ಕರೆ ನೀಡಿದರು. ದೇಶವನ್ನು ಕಟ್ಟುವುದು ಮತ್ತು ಬೆಳೆಸುವುದು ನಿಮ್ಮ ಜವಾಬ್ದಾರಿಯಾಗಿದೆ. ಯಾವುದೇ ಪಾತ್ರವಿರಲಿ, ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ಕೆಲಸ ಮಾಡಬೇಕು ಎಂದು ಅವರು ಹೇಳಿದರು. 
  
ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳು ಬಲವಾದ ಕೊಂಡಿಯಾಗಿದ್ದು, ಇವುಗಳ ಸಹಾಯದಿಂದ ನವೋದ್ಯಮಗಳಿಗೆ ಹೊಸ ಆಯಾಮಗಳನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಬ್ಯಾಂಕಿಂಗ್ ವಲಯದ ಅಧಿಕಾರಿಗಳು ಮತ್ತು ಉದ್ಯೋಗಿಗಳು ತಮಗೆ ಬರುವ ಯಾವುದೇ ಯುವ ನವೋದ್ಯಮ ಯೋಜನೆಗೆ ಹಣಕಾಸು ಒದಗಿಸಬೇಕು ಎಂದು ಅವರು ಕರೆ ನೀಡಿದರು. ದೇಶವು ಮುನ್ನಡೆಯುತ್ತಿದೆ, ಇದಕ್ಕಾಗಿ ಸಾಕಷ್ಟು ಶಕ್ತಿಯ ಅಗತ್ಯವಿದೆ. ಇದಕ್ಕಾಗಿ ಬಲವಾದ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. 
  
ಕೇಂದ್ರ ಸಚಿವರನ್ನು ಸ್ವಾಗತಿಸಿದ ʻಸಿಆರ್‌ಪಿಎಫ್‌ʼ ವಾಯುವ್ಯ ವಲಯದ ಪೊಲೀಸ್ ಇನ್ಸ್‌ಪೆಕ್ಟರ್‌ ಜನರಲ್ (ಐಜಿ) ಮೂಲ್‌ಚಂದ್ ಪವಾರ್ ಅವರು ಹೊಸದಾಗಿ ನೇಮಕಗೊಂಡ ಯುವಕರನ್ನು ಅಭಿನಂದಿಸಿ ಮಾತನಾಡಿದರು. ಸರಕಾರಿ ಉದ್ಯೋಗವು ಬಹಳ ಮುಖ್ಯವಾದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಹೊಸ ಉಪಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು,  ಹತ್ತು ಲಕ್ಷ ಉದ್ಯೋಗಗಳನ್ನು ಒದಗಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಹೊಸದಾಗಿ ನೇಮಕಗೊಂಡ ಉದ್ಯೋಗಿಗಳಿಗೆ ʻಕರ್ಮವೀರ್ʼ ಎಂಬ ಹೆಸರನ್ನು ನೀಡಲಾಗಿದ್ದು, ಅವರು ಭಾರತ ಸರಕಾರದ ಪ್ರತಿನಿಧಿಯಾಗಿ ಸಾರ್ವಜನಿಕ ಸೇವಕರಾಗಿ ಕೆಲಸ ಮಾಡಲಿದ್ದಾರೆ. ಸರಕಾರಿ ವಲಯಕ್ಕೆ ಬರುವುದರಿಂದ ಸಮಾಜ ಮತ್ತು ನಾಗರಿಕರ ಕಡೆಗೆ ಜವಾಬ್ದಾರಿ ಹೆಚ್ಚಾಗುತ್ತದೆ, ಅದನ್ನು ಸಂಪೂರ್ಣ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು ಎಂದು ಕರೆ ನೀಡಿದರು. 
  
ಈ ಮಧ್ಯೆ, ಕೇಂದ್ರ ಮೀಸಲು ಪೊಲೀಸ್ ಪಡೆ ಕೇಂದ್ರದ ಡೆಪ್ಯೂಟಿ ಇನ್ಸ್‌ಪೆಕ್ಟರ್‌ ಜನರಲ್(ಡಿಐಜಿ) ಕೋಮಲ್ ಸಿಂಗ್ ಅವರು ಮುಖ್ಯ ಅತಿಥಿ ಮತ್ತು ಇತರ ಅತಿಥಿಗಳನ್ನು ಸ್ವಾಗತಿಸಿದರು. ಉದ್ಯೋಗಾಕಾಂಕ್ಷಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಹೊಸದಾಗಿ ನೇಮಕಗೊಂಡವರಿಗಾಗಿ ವಿಶೇಷವಾಗಿ ʻಕರ್ಮಯೋಗಿ ಪ್ರಾರಂಭ್ʼ ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅದರ ಮೂಲಕ ಹೊಸದಾಗಿ ನೇಮಕಗೊಂಡ ಯುವಕರಿಗೆ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ, ʻಕರ್ಮಯೋಗಿ ಪ್ರಾರಂಭ್‌ʼ ಯೋಜನೆ ಮತ್ತು ʻಉದ್ಯೋಗ ಮೇಳʼ ಕುರಿತು ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ವಲಯ ಡೆಪ್ಯೂಟಿ ಇನ್ಸ್‌ಪೆಕ್ಟರ್‌ ಜನರಲ್ ಮಹೇಂದ್ರ ಸಿಂಗ್ ಮತ್ತು ʻಸಿಆರ್‌ಪಿಎಫ್‌ʼನ ಇತರ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು. 

*****


(Release ID: 1878145)
Read this release in: English , Urdu , Hindi