ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

​​​​​​​ಭಾರತ ಆಸ್ಟ್ರೇಲಿಯಾ ಇಸಿಟಿಎ ಒಪ್ಪಂದವನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಆಸ್ಟ್ರೇಲಿಯಾದಲ್ಲಿ ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಉಕ್ಕು ಉದ್ಯಮಗಳಿಗೆ ಶ್ರೀ ಗೋಯಲ್ ಕರೆ ನೀಡಿದರು 


ಎಫ್ಟಿಎ- ವಿದೇಶಿ ವ್ಯಾಪಾರ ಒಪ್ಪಂದದ ಅನ್ವಯ ಆಯಾ ದೇಶಗಳಲ್ಲಿ ಸ್ಥಳೀಯವಾಗಿ ಉತ್ಪಾದನೆಯಾಗುವ ಉಕ್ಕು ಆಮದಿನ  ನಿಬಂಧನೆಯ ಮೂಲಕ ಭಾರತೀಯ ಉಕ್ಕು ಉದ್ಯಮವನ್ನು ರಕ್ಷಿಸುವುದು ಸರ್ಕಾರದ ಪ್ರಯತ್ನವಾಗಿದೆ

ಭಾರತದ ತಲಾವಾರು ಉಕ್ಕಿನ ಬಳಕೆಯಲ್ಲಿ ಕನಿಷ್ಠ ಮೂರು ಪಟ್ಟು   ಬೆಳವಣಿಗೆಯನ್ನು ಬಯಸಬೇಕೆಂದು ಉದ್ಯಮವನ್ನು ಉತ್ತೇಜಿಸಿದರು

ಕೋಕಿಂಗ್ ಕಲ್ಲಿದ್ದಲಿಗೆ ಪರ್ಯಾಯ ಸಮರ್ಥನೀಯ ಪರಿಹಾರಗಳನ್ನು ಹುಡುಕಲು ಪ್ರಖ್ಯಾತ ಸಂಸ್ಥೆಗಳೊಂದಿಗೆ ಸಹಕರಿಸಲು ಉದ್ಯಮವನ್ನು ಒತ್ತಾಯಿಸಿದರು

ಶ್ರೀ ಗೋಯಲ್    ಮೂರನೇ ಐಎಸ್ಎ ಉಕ್ಕು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು

Posted On: 22 NOV 2022 4:15PM by PIB Bengaluru

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಉಕ್ಕಿನ ಉದ್ಯಮವು ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಸಿಟಿಎ) ಒಪ್ಪಂದವನ್ನು ಸೂಕ್ತವಾಗಿ ಬಳಸಿಕೊಳ್ಳುವಂತೆ ಒತ್ತಾಯಿಸಿದರು ಮತ್ತು ಆಸ್ಟ್ರೇಲಿಯಾದಲ್ಲಿ ಹೊಸ ಅವಕಾಶಗಳನ್ನು ಬಳಸಿಕೊಳ್ಳುವತ್ತ ಗಮನಹರಿಸಬೇಕೆಂದು ಹೇಳಿದರು. ಇಂದು ನವದೆಹಲಿಯಲ್ಲಿ ನಡೆದ ಮೂರನೇ ಐಎಸ್ಎ ಉಕ್ಕು ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ  (ಇಸಿಟಿಎ)  ವನ್ನು ಆಸ್ಟ್ರೇಲಿಯಾ ಸಂಸತ್ತು ಅಂಗೀಕರಿಸಿದ್ದು ಇದೊಂದು ಗಮನಾರ್ಹ ಸಾಧನೆ ಎಂದು ಹೇಳಿದರು.  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತವು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಶಕ್ತಿಯುತವಾಗಿ  ತೊಡಗಿಸಿಕೊಂಡಿದೆ. ಭಾರತದ ಆರ್ಥಿಕತೆಯು ವಿಶ್ವದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅಭಿವೃದ್ಧಿ ಹೊಂದಿದ ದೇಶಗಳು ಗುರುತಿಸುತ್ತಿವೆ ಎಂದು ಅವರು ಹೇಳಿದರು. ಆಸ್ಟ್ರೇಲಿಯಾದೊಂದಿಗಿನ ಒಪ್ಪಂದದ ನಂತರ ಆಸ್ಟ್ರೇಲಿಯಾಕ್ಕೆ ನಮ್ಮ ಎಲ್ಲ ಉಕ್ಕಿನ ರಫ್ತುಗಳು  ತೆರಿಗೆಯಿಂದ  ಮುಕ್ತವಾಗುತ್ತವೆ ಎನ್ನುವ ಅಂಶವನ್ನು ಅವರು ಎತ್ತಿ ಹಿಡಿದರು. ಈ ಒಪ್ಪಂದವನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಮತ್ತು ಆಸ್ಟ್ರೇಲಿಯಾದಲ್ಲಿ ಹೊಸ ಅವಕಾಶಗಳನ್ನು ಪಡೆಯುವತ್ತ ಗಮನಹರಿಸುವಂತೆ ಅವರು ಉದ್ಯಮವನ್ನು ಒತ್ತಾಯಿಸಿದರು. ಅಭಿವೃದ್ಧಿ ಹೊಂದಿದ ದೇಶಗಳೊಂದಿಗಿನ ಈ ವ್ಯಾಪಾರ ಒಪ್ಪಂದಗಳು ನಮ್ಮ ಯುವಜನರಿಗೆ, ಕ್ಷೇತ್ರಗಳಾದ್ಯಂತ ವ್ಯವಹಾರಗಳಿಗೆ ಹೊಸ ಅವಕಾಶಗಳನ್ನು ನೀಡುತ್ತವೆ ಎಂದು ಅವರು ಹೇಳಿದರು.

ಶ್ರೀ ಗೋಯಲ್ ಅವರು ಉಕ್ಕಿನ ಉದ್ಯಮವು ದೇಶದ ಪ್ರಮುಖ ಪಾಲುದಾರವಾಗಿದ್ದು, ರಫ್ತು ಗಳಿಕೆಗೆ ಗಣನೀಯವಾಗಿ ಕೊಡುಗೆ ನೀಡಿವೆ. ಅನೇಕ ಭಾರತೀಯ ಉಕ್ಕು ಕಂಪನಿಗಳು ವಿಶ್ವದರ್ಜೆಯ ಉಕ್ಕು ಪೂರೈಕೆದಾರರಾಗಿದ್ದಾರೆ ಎಂದು ಅವರು ಗಮನಿಸಿದರು. ಭಾರತೀಯ ಉಕ್ಕಿನಿಂದ ತಯಾರಿಸಿದ ಎಂಜಿನ್ಗಳು, ವಾಲ್ವಗಳಂತಹ ಉತ್ತಮ ಗುಣಮಟ್ಟದ ಉತ್ಪನ್ನಗಳು ಉಕ್ಕಿನ ಉದ್ಯಮವು ಉತ್ಪಾದಿಸುತ್ತಿರುವ ಗುಣಮಟ್ಟದ ಉಕ್ಕಿನ ಸಾಕ್ಷಿಯಾಗಿದೆ. ಬ್ರಾಂಡ್ ಇಂಡಿಯಾವನ್ನು ಅಭಿವೃದ್ಧಿಪಡಿಸಲು ಶ್ರಮಿಸುವಂತೆ ಅವರು ಒತ್ತಾಯಿಸಿದರು ಮತ್ತು ಭಾರತೀಯ ಉತ್ಪನ್ನಗಳಿಗೆ ಜಾಗತಿಕ ಮನ್ನಣೆಯನ್ನು ಸೃಷ್ಟಿಸುವ ಭಾರತದ ಸಮಗ್ರ ಪ್ರಯತ್ನಗಳಲ್ಲಿ ಉಕ್ಕಿನ ಉದ್ಯಮವು ಕಡಿಮೆ ಪ್ರಮಾಣದಲ್ಲಿದೆ ಎಂದು ತಿಳಿಸಿದರು.

ಕೋವಿಡ್ ಅವಧಿಯಲ್ಲಿ ಉಕ್ಕು ಉದ್ಯಮವು ಮಾಡಿದ ಗಮನಾರ್ಹ ಕೆಲಸಗಳಿಗಾಗಿ ಸಚಿವರು ಶ್ಲಾಘಿಸಿದರು. ವೈದ್ಯಕೀಯ ಸಾಧನಗಳನ್ನು ತಯಾರಿಸಲು ಅಗತ್ಯವಾದ ಉಪಕರಣಗಳ ತಯಾರಿಕೆ ಮತ್ತು  ದ್ರವ ವೈದ್ಯಕೀಯ ಆಮ್ಲಜನಕ ಪೂರೈಕೆಗೆ ಆದ್ಯತೆ ನೀಡುವ ಸಲುವಾಗಿ ಅನೇಕ ಉಕ್ಕಿನ ಕಂಪನಿಗಳು ಉತ್ಪಾದನೆಯನ್ನು ಮೊಟಕುಗೊಳಿಸಿ ಕೋವಿಡ್ ಚಿಕಿತ್ಸೆಗಾಗಿ ದ್ರವ ವೈದ್ಯಕೀಯ ಆಮ್ಲಜನಕವನ್ನು ಪೂರೈಸಿದ  ಉದ್ಯಮದ ಅಪಾರ ಕೊಡುಗೆಗಾಗಿ ಅವರು ಉದ್ಯಮಿಗಳಿಗೆ ಧನ್ಯವಾದ ಅರ್ಪಿಸಿದರು.

ಶ್ರೀ ಗೋಯಲ್ ಅವರು ಉಕ್ಕಿನ ಉದ್ಯಮವು ಗಮನಾರ್ಹ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ ಮತ್ತು 2030 ರ ವೇಳೆಗೆ 300 ಮಿಲಿಯನ್ ಟನ್ಗಳ ಗುರಿಯನ್ನು ಸಾಧಿಸಲು ಒತ್ತಾಯಿಸಿದರು. ಅವರು ಭವಿಷ್ಯದಲ್ಲಿ ಬರುತ್ತಿರುವ ದೊಡ್ಡ ಹೂಡಿಕೆಗಳೊಂದಿಗೆ, ಉದ್ಯಮವು ಏಳಿಗೆ ಮತ್ತು ಬೆಳವಣಿಗೆಯನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಉಕ್ಕಿನ ದೊಡ್ಡ ಉತ್ಪಾದಕ ರಾಷ್ಟ್ರಗಳಾಗಿರುವ ಇತರ ಹಲವು ದೇಶಗಳು ತೀವ್ರ ಒತ್ತಡವನ್ನು ಎದುರಿಸುತ್ತಿದ್ದರೆ, ದೊಡ್ಡ ದೇಶೀಯ ಮಾರುಕಟ್ಟೆ, ವೆಚ್ಚದ ಸ್ಪರ್ಧಾತ್ಮಕತೆ, ಆಧುನಿಕ ತಂತ್ರಜ್ಞಾನ, ವ್ಯಾಪಕ ಶ್ರೇಣಿಯ ಉತ್ಪನ್ನಗಳು ಮತ್ತು ಸ್ವದೇಶಿ  ಕಬ್ಬಿಣದ ಅದಿರಿನ ಸಾಮರ್ಥ್ಯದ ವಿಷಯದಲ್ಲಿ ಭಾರತವು ದೊಡ್ಡ ಅವಕಾಶವನ್ನು ಹೊಂದಿದೆ ಎಂದು ಅವರು ಹೇಳಿದರು.

ನಮ್ಮ ತಯಾರಕರಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನು ಹುಡುಕಲು ವಿಶೇಷವಾಗಿ ಸ್ಪರ್ಧಾತ್ಮಕ, ಉತ್ತಮ ಗುಣಮಟ್ಟದ ಮಾನದಂಡಗಳನ್ನು ಹೊಂದಿರುವ ಮತ್ತು ಜಾಗತಿಕವಾಗಿ ಪ್ರಸ್ತುತವಾಗಿರುವ ಕೈಗಾರಿಕೆಗಳಲ್ಲಿ,  ಸರ್ಕಾರವು ಇತರ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ,. ರಾಷ್ಟ್ರೀಯ ಉಕ್ಕು ನೀತಿ 2017 ಭಾರತವು ಉಕ್ಕಿನ ಎರಡನೇ ಅತಿದೊಡ್ಡ ಉತ್ಪಾದಕ ದೇಶವಾಗಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

ಉಕ್ಕುಗಳು ಮತ್ತು ವಿವಿಧ ಉಕ್ಕಿನ ಉತ್ಪನ್ನಗಳ ಮೇಲಿನ ರಫ್ತು ಸುಂಕವನ್ನು ಹಿಂತೆಗೆದುಕೊಂಡ ಮೇಲೆ, ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ದೇಶದಲ್ಲಿ ಬೆಳವಣಿಗೆಯ ವೇಗವನ್ನು ಕಾಪಾಡಿಕೊಳ್ಳಲು ತಾತ್ಕಾಲಿಕ ಕ್ರಮವಾಗಿ ಸುಂಕವನ್ನು ವಿಧಿಸಲಾಗಿದೆ ಎಂದು ಶ್ರೀ ಗೋಯಲ್ ವಿವರಿಸಿದರು. ಸರ್ಕಾರದ ಈ ಕ್ರಮಗಳು ಹಣದುಬ್ಬರವನ್ನು ನಿಯಂತ್ರಿಸಲು ಕಾರಣವಾಗಿವೆ ಎಂದು ಅವರು ಹೇಳಿದರು. ಉಕ್ಕು ಉದ್ಯಮವು ಸಮಸ್ಯೆಯನ್ನು ಅರ್ಥಮಾಡಿಕೊಂಡಿದಕ್ಕಾಗಿ ಮತ್ತು ಸರ್ಕಾರದ ಕ್ರಮವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಕ್ಕಾಗಿ ಶ್ಲಾಘಿಸಿದರು.

ನಮ್ಮ ಎಫ್ಟಿಎಗಳಲ್ಲಿ ‘ಕರಗಿಸಿ ಮತ್ತು ಸುರಿಯುವ’(ಮೆಲ್ಟ್ ಅಂಡ್ ಪೋರ್) ನಿಬಂಧನೆಯ ಮೂಲಕ ಭಾರತೀಯ ಉಕ್ಕು ಉದ್ಯಮವನ್ನು ರಕ್ಷಿಸುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ಶ್ರೀ ಗೋಯಲ್ ಹೇಳಿದರು. ಈ ನಿಬಂಧನೆಯ ಮೂಲಕ ಆ ದೇಶಗಳಲ್ಲಿ ಸ್ಥಳೀಯವಾಗಿ ಉತ್ಪಾದಿಸುವ ಉಕ್ಕನ್ನು ಮಾತ್ರ ಭಾರತಕ್ಕೆ ಆಮದು ಮಾಡಿಕೊಳ್ಳಬಹುದು ಎಂದು ಅವರು ಭರವಸೆ ನೀಡಿದರು. ಉಕ್ಕಿನ ರಫ್ತಿನ ಮೇಲಿನ ಸುಂಕವನ್ನು ತೆಗೆದುಹಾಕುವುದರೊಂದಿಗೆ ಭಾರತೀಯ ಉಕ್ಕು ಉದ್ಯಮವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತರರಿಗಿಂತ ಉತ್ತಮ ಸ್ಥಿತಿಯಲ್ಲಿರುವುದನ್ನು  ಮುಂದುವರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೋಕಿಂಗ್ ಕಲ್ಲಿದ್ದಲಿನ ವಿರಳ ಲಭ್ಯತೆಯು ಉಕ್ಕಿನ ಉದ್ಯಮಕ್ಕೆ ದೊಡ್ಡ ಸವಾಲಾಗಿದೆ ಎಂದು ಅವರು ತಿಳಿಸಿದರು. ಇದಕ್ಕೆ ಪರ್ಯಾಯ ಪರಿಹಾರಗಳನ್ನು ಕಂಡುಹಿಡಿಯಲು ಉದ್ಯಮವು ಪ್ರಖ್ಯಾತ ಸಂಸ್ಥೆಗಳೊಂದಿಗೆ ಸಹಕರಿಸಬೇಕು ಮತ್ತು ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಕೋಕಿಂಗ್ ಕಲ್ಲಿದ್ದಲಿಗಾಗಿ ಕೆಲವು ದೇಶಗಳ ಮೇಲೆ ಅವಲಂಬಿತರಾಗದೇ ಇರಬೇಕಾದ ಅಗತ್ಯ ಮತ್ತು ಸ್ವಾವಲಂಬಿಯಾಗಲು ಹೊಸ ಮಾರ್ಗಗಳನ್ನು ಹುಡುಕುವ ಬಗ್ಗೆ  ಅವರು ಒತ್ತಿ ಹೇಳಿದರು  

ಶ್ರೀ ಗೋಯಲ್ ಅವರು ಭಾರತದ ತಲಾ ಉಕ್ಕಿನ ಬಳಕೆಯು ವಿಶ್ವ ಸರಾಸರಿಗಿಂತ ಕಡಿಮೆಯಾಗಿದೆ ಮತ್ತು ಜಾಗತಿಕ ಸರಾಸರಿಯನ್ನು ತಲುಪಲು ಕನಿಷ್ಠ ಮೂರು ಪಟ್ಟು  ಬೆಳವಣಿಗೆಯನ್ನು ಸಾಧಿಸುತೆ ಉದ್ಯಮವನ್ನು ಒತ್ತಾಯಿಸಿದರು.

ಹೆಚ್ಚುತ್ತಿರುವ ಸಮೃದ್ಧಿಯೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ವಿದ್ಯುತ್ ಚಾಲಿತ (ಇವಿ) ವಾಹನ ಉದ್ಯಮವು ಉಕ್ಕು ಮತ್ತು ಅಲ್ಯೂಮಿನಿಯಂ ಉದ್ಯಮದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು. ಹೂಡಿಕೆಯ ಪ್ರಕ್ರಿಯೆಯನ್ನು  ಹೆಚ್ಚಿಸಲು   ಮತ್ತು ಉಕ್ಕಿನಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಗೆ  (ಪಿಎಲ್ಐ)   ಅವರು ಉದ್ಯಮವನ್ನು ಒತ್ತಾಯಿಸಿದರು.

ಇಂಗಾಲದ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ಸುಸ್ಥಿರತೆಯ ಕ್ಷೇತ್ರದಲ್ಲಿ ಸಾಮೂಹಿಕ ಸಂಶೋಧನೆಯನ್ನು ಕೈಗೊಳ್ಳಲು ಉದ್ಯಮಕ್ಕೆ ಶ್ರೀ ಗೋಯಲ್ ಸಲಹೆ ನೀಡಿದರು. ಇದು ಭಾರತೀಯ ಉಕ್ಕು ಇತರ ದೇಶಗಳಿಗಿಂತ ಆದ್ಯತೆಯನ್ನು ಪಡೆಯಲು ಮತ್ತು ದೊಡ್ಡ ಮಾರುಕಟ್ಟೆಗಳನ್ನು ವಶಪಡಿಸಿಕೊಳ್ಳಲು ಮತ್ತು ಸುಸ್ಥಿರ ಉಕ್ಕಿನ ಉತ್ತಮ ಮೌಲ್ಯವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಸಣ್ಣ ಉತ್ಪಾದಕರನ್ನು ಬೆಂಬಲಿಸಲು  ಮತ್ತು ಉಕ್ಕಿನ ಮೇಲಿನ ರಫ್ತು ಸುಂಕವನ್ನು ಹಿಂತೆಗೆದುಕೊಳ್ಳುವುದರಿಂದ ಸಣ್ಣ ತಯಾರಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕಾರ್ಯವಿಧಾನವನ್ನು ರೂಪಿಸಲು ಉದ್ಯಮದ ನಾಯಕರುಗಳಿಗೆ ಒತ್ತಾಯಿಸಿದರು. ಎಂಎಸ್ಎಂಇ ಉದ್ಯಮ ಮತ್ತು ಇಂಜಿನಿಯರಿಂಗ್ ಉತ್ಪನ್ನಗಳ ರಫ್ತುದಾರರಿಗೆ ಬೆಂಬಲ ನೀಡುವುದನ್ನು ಮುಂದುವರಿಸುವಂತೆ ಅವರು ಉತ್ತೇಜಿಸಿದರು.

***** 

 

 


(Release ID: 1878139) Visitor Counter : 209