ವಾರ್ತಾ ಮತ್ತು ಪ್ರಸಾರ ಸಚಿವಾಲಯ
53ನೇ ಐಎಫ್ ಎಫ್ ಐ ನಲ್ಲಿ ಖ್ಯಾತ ಸ್ಪ್ಯಾನಿಷ್ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸೌರಾ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನ
ತಮಗೆ ಗೌರವ ನೀಡಿದ್ದಕ್ಕಾಗಿ ಉತ್ಸವದ ಸಂಘಟಕರಿಗೆ ಭಾರಿ ಕೃತಜ್ಞತೆ ಮತ್ತು ಪ್ರೀತಿ ತೋರಿದ ಕಾರ್ಲೋಸ್ ಸೌರಾ
#ಐಎಫ್ ಎಫ್ ಐವುಡ್, 20 ನವೆಂಬರ್ 2022
2022ರ ನವೆಂಬರ್ 20 ದಿನವಾದ ಇಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ ಎಫ್ ಐ) 53ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಸ್ಪ್ಯಾನಿಷ್ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸೌರಾ ಅವರಿಗೆ ಪ್ರತಿಷ್ಠಿತ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ಪ್ಯಾನಿಷ್ ನಿರ್ದೇಶಕರು ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಅರ್ಹ ಪುರಸ್ಕಾರವಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಐಎಫ್ ಎಫ್ ಐ 53 ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕರ ಪರವಾಗಿ ಅವರ ಮಗಳು ಅನ್ನಾ ಸೌರಾ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ತಮ್ಮ ಕೃತಜ್ಞತೆ ಸಲ್ಲಿಸಿದ ಕಾರ್ಲೋಸ್ ಸೌರಾ, ವೀಡಿಯೊ ಸಂದೇಶದ ಮೂಲಕ, ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪುರೆಯ ಉರಿಯೂತ)ನಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಖುದ್ದಾಗಿ ಸಮಾರಂಭಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಜನಪ್ರಿಯ ಚಲನಚಿತ್ರ ನಿರ್ದೇಶಕರು ತಮಗೆ ಗೌರವವನ್ನು ನೀಡಿದ್ದಕ್ಕಾಗಿ ಉತ್ಸವದ ಆಯೋಜಕರಿಗೆ ತಮ್ಮ ಕೃತಜ್ಞತೆ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು.
ಪ್ರಶಸ್ತಿ ತನ್ನದಾಗಿಸಿಕೊಂಡ ಖ್ಯಾತ ಚಲನಚಿತ್ರ ನಿರ್ದೇಶಕರನ್ನು ಅಭಿನಂದಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ಶ್ರೀ ಸೌರಾ ಅವರು ಚಲನಚಿತ್ರ ನಿರ್ಮಾಣದ ಕಲೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮತ್ತು ಚಲನಚಿತ್ರ ನಿರ್ಮಾಣ ಮತ್ತು ಛಾಯಾಗ್ರಹಣ ಕ್ಷೇತ್ರದಲ್ಲಿ ತಮ್ಮನ್ನು ತಾವು ಶ್ರೇಷ್ಠರೆಂದು ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಶ್ರೀ ಸೌರಾ ಅವರ ಸಿನಿಮಾ ಮತ್ತು ಸಿನಿಮಾ ಶ್ರೇಷ್ಠತೆಗೆ ಅವರು ಜೀವನ ಸಮರ್ಪಸಿಕೊಂಡಿದ್ದಾರೆಂದು ಹೊಗಳಿಕೆಯ ಸುರಿಮಳೆಗೈದ ಶ್ರೀ ಅನುರಾಗ್ ಠಾಕೂರ್, ಶ್ರೀ ಸೌರಾ ಅವರು ಹಲವು ದಶಕಗಳಿಂದ ಚಲನಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ ಮತ್ತು ಇದೀಗ 93ನೇ ವಯಸ್ಸಿನಲ್ಲೂ ಕ್ಯಾಮರಾ ಹಿಂದೆ ಕ್ರಿಯಾಶೀಲರಾಗಿದ್ದಾರೆ ಎಂದು ಹೇಳಿದರು. "ಅವರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳನ್ನು ಗೆದ್ದಿದ್ದಾರೆ ಮತ್ತು 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರ ಪುತ್ರಿ ಅನ್ನಾ ಸೌರಾ ಅವರು ಖ್ಯಾತ ಚಲನಚಿತ್ರ ನಿರ್ಮಾಪಕರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿರುವುದು ತಮಗೆ ಸಂತೋಷ ತಂದಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಐಎಫ್ ಎಫ್ ಐ 53 ರಲ್ಲಿ, ಕಾರ್ಲೋಸ್ ಸೌರಾ ಅವರ ಪರಂಪರೆಯ ಸಿಂಹಾವಲೋಕನವನ್ನು ಅವರ ಕೆಲವು ಪ್ರಸಿದ್ಧ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಮಾಡಲಾಗುತ್ತಿದೆ.
ಕಾರ್ಲೋಸ್ ಸೌರಾ, ಸ್ಪೇನ್‌ನ ಅತ್ಯಂತ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಲ್ಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಅರ್ಧ ಶತಮಾನಕ್ಕೂ ಅಧಿಕ ಕಾಲ ಸುದೀರ್ಘ ಮತ್ತು ಸಮೃದ್ಧ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಡೆಪ್ರಿಸಾ ಡೆಪ್ರಿಸಾಗಾಗಿ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕರಿಗಾಗಿ ನೀಡುವ ಗೋಲ್ಡನ್ ಬೇರ್ ಅನ್ನು ಪಡೆದರು, ಜೊತೆಗೆ ಲಾ ಕಾಜಾ ಮತ್ತು ಪೆಪ್ಪರ್‌ಮಿಂಟ್ ಫ್ರಾಪ್ಪೆಗಾಗಿ ಎರಡು ಸಿಲ್ವರ್ ಬೇರ್‌ಗಳು, ಕಾರ್ಮೆನ್‌ಗಾಗಿ ಬಿಎಎಫ್ ಟಿಎ ಮತ್ತು ಕ್ಯಾನ್ಸ್ ನಲ್ಲಿ ಮೂರು ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪಡೆದಿದ್ದಾರೆ.
ಅರ್ಧ ಶತಮಾನದ ಸುದೀರ್ಘ ಮತ್ತು ಸಮೃದ್ಧ ವೃತ್ತಿಜೀವನದೊಂದಿಗೆ, ಸೌರಾ ಅವರ ಚಲನಚಿತ್ರಗಳು ಸಮಯ ಮತ್ತು ಸ್ಥಳದ ಅತ್ಯಾಧುನಿಕ ಅಭಿವ್ಯಕ್ತಿಗಳು ವಾಸ್ತವವನ್ನು ಕಲ್ಪನಾ ಲೋಕದಲ್ಲಿ, ವರ್ತಮಾನದೊಂದಿಗೆ ಭೂತಕಾಲ ಮತ್ತು ಭ್ರಮೆಯೊಂದಿಗೆ ಸ್ಮರಣೆಯನ್ನು ಬೆಸೆಯುತ್ತವೆ. ಕಸಿನ್ ಏಂಜೆಲಿಕಾ, ಮಾಮಾ ಕಂಪ್ಲ್ 100 ಅನೋಸ್, ಫ್ಲೆಮೆಂಕೊ ಟ್ರೈಲಾಜಿ ಬ್ಲಡ್ ವೆಡ್ಡಿಂಗ್, ಕಾರ್ಮೆನ್ ಮತ್ತು ಲವ್ ದಿ ಮ್ಯಾಜಿಶಿಯನ್ ಸೇರಿದಂತೆ ಹಲವು ಪ್ರಸಿದ್ಧ ಚಲನಚಿತ್ರಗಳಿವೆ.
* * *
(Release ID: 1877598)
Visitor Counter : 201