ಪರಿಸರ ಮತ್ತು ಅರಣ್ಯ ಸಚಿವಾಲಯ

ಜಾಗತಿಕ ಪ್ರೇಕ್ಷಕರಿಗೆ ಲೈಫ್ ಅಭಿಯಾನ ತಲುಪಿಸಿದ ಇಂಡಿಯಾ ಪೆವಿಲಿಯನ್ 

Posted On: 19 NOV 2022 10:05AM by PIB Bengaluru

ಮುಖ್ಯಾಂಶಗಳು:

•    ಹವಾಮಾನ ಬದಲಾವಣೆಯಲ್ಲಿ ಭಾರತದ ಸಾಧನೆಗಳನ್ನು ಪ್ರದರ್ಶಿಸಿದ ಪೆವಿಲಿಯನ್.
•    ಎಲ್.ಟಿ-ಎಲ್.ಡಿ.ಎಸ್., ಲೈಫ್ (ಎಲ್.ಐ.ಎಫ್.ಇ),  ಪ್ರಯತ್ನದಿಂದ ಪ್ರಭಾವದವರೆಗೆ ಮೊದಲಾದ ಪ್ರಮುಖ ದಸ್ತಾವೇಜು ಬಿಡುಗಡೆ.
•    25000 ಕಾಪ್ ಸ್ಪರ್ಧಿಗಳ ಭೇಟಿಗೆ ಸಾಕ್ಷಿಯಾದ ಪೆವಿಲಿಯನ್.

 
2022ರ ನವೆಂಬರ್ 6 ರಿಂದ 17 ರವರೆಗೆ ಶರ್ಮ್ ಎಲ್ ಶೇಖ್ ನಲ್ಲಿ ನಡೆದ ಕಾಪ್ 27 ರಲ್ಲಿ ಭಾರತ ಲೈಫ್- ಪರಿಸರಕ್ಕಾಗಿ ಜೀವನ ಶೈಲಿ ಎಂಬ ವಿಷಯದೊಂದಿಗೆ ಪೆವಿಲಿಯನ್ ಅನ್ನು ಪ್ರಸ್ತುತಪಡಿಸಿತ್ತು. ವಿವಿಧ ದೃಕ್ ಶ್ರವ್ಯಗಳು, ಲಾಂಛನ, 3ಡಿ ಮಾದರಿಗಳು, ಸ್ಥಾಪನೆಗಳು, ಅಲಂಕಾರ ಮತ್ತು ಪೂರಕ ಕಾರ್ಯಕ್ರಮಗಳ (ಸೈಡ್ ಇವೆಂಟ್) ಮೂಲಕ ಲೈಫ್ ಸಂದೇಶವನ್ನು ರವಾನಿಸಲು ಪೆವಿಲಿಯನ್ ಅನ್ನು ವಿನ್ಯಾಸಗೊಳಿಸಲಾಗಿತ್ತು. 

ಪೆವಿಲಿಯನ್ ನಲ್ಲಿ ಕಾಪ್ 27ರ ಸಂಪೂರ್ಣ ಅವಧಿಯಲ್ಲಿ ವಿವಿಧ   ಸ್ಪರ್ಧೆಗಳು ನಡೆದವು. ಕೇಂದ್ರ ಸರ್ಕಾರದ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಸ್ವಾಯತ್ತ ಸಂಸ್ಥೆಗಳು / ಅಧೀನ ಸಂಸ್ಥೆಗಳು, ಚಿಂತಕರ ಚಾವಡಿಗಳು ಮತ್ತು ವಿಶ್ವಸಂಸ್ಥೆಯ ಸಂಸ್ಥೆಗಳು ಪೂರಕ ಕಾರ್ಯಕ್ರಮಗಳ ಆಯೋಜನೆ ಮಾಡುವವರಲ್ಲಿ ಸೇರಿವೆ.    ಮಂಟಪದಲ್ಲಿ 49 ಪೂರಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅವುಗಳಲ್ಲಿ 16 ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರವು ಆಯೋಜಿಸಿತ್ತು ಮತ್ತು 10 ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರಗಳು ಆಯೋಜಿಸಿದ್ದವು. ಪೆವಿಲಿಯನ್ 23 ಖಾಸಗಿ ವಲಯದ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು.

ಈ ಪೆವಿಲಿಯನ್ ಅನ್ನು  ನವೆಂಬರ್ 6ರಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಉದ್ಘಾಟಿಸಿದರು. ಇದರ ನಂತರ ಯುಎನ್.ಡಿ.ಪಿ ಮತ್ತು ಯುನಿಸೆಫ್ ಕಾಪ್ 27 ಯುವ ವಿದ್ವಾಂಸರ ಪ್ರಶಸ್ತಿಯನ್ನು ವಿತರಿಸಲು ಆಯೋಜಿಸಿದ ಕಾರ್ಯಕ್ರಮ ನಡೆಯಿತು.  ಕಠಿಣ ಪ್ರಕ್ರಿಯೆಯ ನಂತರ ಆಯ್ಕೆಯಾದ ನಾಲ್ವರು ಯುವ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.  ನವೆಂಬರ್ 14 ರಂದು ಇಂಡಿಯಾ ಪೆವಿಲಿಯನ್ ನಲ್ಲಿ ಲೈಫ್ ಸಂಬಂಧಿತ ಕಾರ್ಯಕ್ರಮಗಳಿಗೆ ಸಮರ್ಪಿಸಲಾಯಿತು. ಪರಿಸರ ಸ್ನೇಹಿ ಮತ್ತು ಸುಸ್ಥಿರ ಜೀವನಶೈಲಿಯ ಪ್ರಚಾರದಲ್ಲಿ ಯುವಕರು ಮತ್ತು ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಪ್ರದರ್ಶಿಸಲು ಮತ್ತು ಉತ್ತೇಜಿಸಲು ಆ ದಿನ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ನವೆಂಬರ್ 14 ರಂದು ಪೆವಿಲಿಯನ್ ನಲ್ಲಿ ಭಾರತದ ದೀರ್ಘಕಾಲೀನ ಕಡಿಮೆ ಹೊರಸೂಸುವಿಕೆ ಅಭಿವೃದ್ಧಿ ಕಾರ್ಯತಂತ್ರವನ್ನು (ಎಲ್.ಟಿ.-ಎಲ್.ಇ.ಡಿ.ಎಸ್) ಬಿಡುಗಡೆ ಮಾಡಿದರು. ಇಂಡಿಯಾ ಪೆವಿಲಿಯನ್ ನಿಂದ ಲೀಡ್ ಐಟಿ ಶೃಂಗಸಭೆ ಹೇಳಿಕೆಯನ್ನು ಬಿಡುಗಡೆ ಮಾಡಿದ ಸಚಿವರು, "ಪ್ರಯತ್ನದಿಂದ ಪ್ರಭಾವದವರೆಗೆ" ಎಂಬ ಲೈಫ್ ಸಂಗ್ರಹವನ್ನೂ ಬಿಡುಗಡೆ ಮಾಡಿದರು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಲೀನಾ ನಂದನ್ ಅವರು ಇಂಡಿಯಾ ಪೆವಿಲಿಯನ್ ನಲ್ಲಿ ನಡೆದ ಪೂರಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು, ಇದರಲ್ಲಿ ತಂತ್ರಜ್ಞಾನದ ಅಗತ್ಯಗಳ ಮೌಲ್ಯಮಾಪನದ ಡಿ.ಎಸ್.ಟಿ. ಕಾರ್ಯಕ್ರಮ ಮತ್ತು ಟಿ.ಇ.ಆರ್.ಐ.ಯ ಅಳವಡಿಸಿಕೊಳ್ಳುವ ಮತ್ತು ಆಳವಡಿಕೆಯ ಸಿದ್ಧತೆ ಕುರಿತ ದೀರ್ಘ ಕಾಲೀನ ಕಾರ್ಯತಂತ್ರ ಸೇರಿದಂತೆ.  ಪೂರಕ  ಕಾರ್ಯಕ್ರಮಗಳಲ್ಲಿ 12 ದಿನಗಳ ಅವಧಿಯಲ್ಲಿ ಸುಮಾರು 2000 ಸ್ಪರ್ಧಿಗಳು ಭಾಗವಹಿಸಿದ್ದರು.

ಪೆವಿಲಿಯನ್ ನಲ್ಲಿ ಸುಮಾರು 25,000 ಕಾಪ್ ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತೀಯ ಸಂಸ್ಕೃತಿ, ಜವಳಿ ಮತ್ತು ಆಹಾರದ ಬಗ್ಗೆ ಪ್ರದರ್ಶನದೊಂದಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಹವಾಮಾನ ಬದಲಾವಣೆಯಲ್ಲಿ ಭಾರತದ ಸಾಧನೆಗಳನ್ನು ಪ್ರದರ್ಶಿಸುವ ಮೂಲಕ ಭಾರತ ಪೆವಿಲಿಯನ್ ಸಂದರ್ಶಕರನ್ನು ಹುರಿದುಂಬಿಸಿತು. ಪೆವಿಲಿಯನ್ ನಲ್ಲಿ ಯೋಜಿಸಲಾದ ಬ್ಲಾಕ್ ಪ್ರಿಂಟಿಂಗ್ ಚಟುವಟಿಕೆಯು ವಿಶೇಷವಾಗಿ ಕಾಪ್ ನಲ್ಲಿ ಯುವ ಸ್ಪರ್ಧಿಗಳಿಂದ ಭಾರಿ ಭಾಗವಹಿಸುವಿಕೆಯನ್ನು ಕಂಡಿತು. ಈ ಪೆವಿಲಿಯನ್ ಸಂದರ್ಶಕರಿಗೆ ಲೈಫ್ ಬ್ಯಾಡ್ಜ್ ಗಳ ವಿತರಣೆ ಮತ್ತು ಕಿರುಪುಸ್ತಕಗಳ ಪ್ರದರ್ಶನಗಳು, ಚಟುವಟಿಕೆಗಳ ಮೂಲಕ ಲೈಫ್ ಸಂದೇಶವನ್ನು ಪಸರಿಸಿತು..

*****



(Release ID: 1877349) Visitor Counter : 162