ಜವಳಿ ಸಚಿವಾಲಯ

ರಾಷ್ಟ್ರೀಯ ಸಾಂಪ್ರದಾಯಿಕವಲ್ಲದ ಜವಳಿ ಅಭಿಯಾನದ ಅಡಿಯಲ್ಲಿ ಸಾಂಪ್ರದಾಯಿಕವಲ್ಲದ ಜವಳಿಗಳ ರಾಷ್ಟ್ರೀಯ ಸಮಾವೇಶ "ಪ್ರೊಟೆಕ್"


ಜಾಗತಿಕ ಅವಕಾಶಗಳನ್ನು ಅನ್ವೇಷಿಸಲು ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ಸಾಂಪ್ರದಾಯಿಕವಲ್ಲದ ಜವಳಿಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಬದ್ಧ

ಪ್ರೊಟೆಕ್ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಮತ್ತು ಬಳಕೆಯಲ್ಲಿನ ಉತ್ತೇಜನವನ್ನು ಗಮನದಲ್ಲಿಟ್ಟುಕೊಂಡು, ತಂತ್ರಜ್ಞಾನದ ಸ್ವದೇಶಿಕರಣ ಮತ್ತು ಪ್ರಮುಖ ಪ್ರೊಟೆಕ್ ವಸ್ತುಗಳಲ್ಲಿ ಗುಣಮಟ್ಟದ ಮಾನದಂಡಗಳ ಅನುಷ್ಠಾನದ ಬಗ್ಗೆ ಗಮನ ಹರಿಸಬೇಕು :  ಜವಳಿ ಕಾರ್ಯದರ್ಶಿ 

Posted On: 16 NOV 2022 5:57PM by PIB Bengaluru

ಉತ್ತರ ಭಾರತ ಜವಳಿ ಸಂಶೋಧನಾ ಸಂಘ (ಎನ್ಐಟಿಆರ್ ಎ) ಮತ್ತು ಭಾರತೀಯ ಸಾಂಪ್ರದಾಯಿಕವಲ್ಲದ ಜವಳಿ ಸಂಘ (ಐಟಿಟಿಎ) ಸಹಭಾಗಿತ್ವದಲ್ಲಿ ಜವಳಿ ಸಚಿವಾಲಯವು ಇಂದು ದೆಹಲಿಯಲ್ಲಿ "ತಾಂತ್ರಿಕ ಜವಳಿ ಕುರಿತ ರಾಷ್ಟ್ರೀಯ ಸಮಾವೇಶ - ಪ್ರೊಟೆಕ್" ಎಂಬ ದಿನವಿಡೀ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮುಖ್ಯ ಅತಿಥಿಯಾಗಿದ್ದ, ಭಾರತ ಸರ್ಕಾರದ ಜವಳಿ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ರಚನಾ ಷಾ ಸಮಾವೇಶ ಉದ್ಘಾಟಿಸಿದರು.

ಜವಳಿ ಸಚಿವಾಲಯದ ಕಾರ್ಯದರ್ಶಿ, ವಿಸ್ತೃತ ಶ್ರೇಣಿಯ ರಕ್ಷಣಾತ್ಮಕ ಜವಳಿ ಉತ್ಪನ್ನಗಳನ್ನು ಒಳಗೊಂಡ ಕಂಪನಿಗಳ ಪ್ರದರ್ಶನವನ್ನು ಉದ್ಘಾಟಿಸಿದರು.

ಭಾರತದಲ್ಲಿ ರಕ್ಷಣಾತ್ಮಕ ಜವಳಿ ಉತ್ಪನ್ನಗಳ ಸ್ವದೇಶಿಕರಣದ ನಿರೀಕ್ಷೆ, ಭಾರತೀಯ ರಕ್ಷಣಾತ್ಮಕ ಜವಳಿಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಗ್ರಾಹಕರ ಅನುಭವ ಮತ್ತು ನಿರೀಕ್ಷೆಗಳು ಮತ್ತು ಜಾಗತಿಕ ಉತ್ತಮ ರೂಢಿಗಳ ಜೊತೆಗೆ ಭಾರತದಲ್ಲಿ ರಕ್ಷಣಾತ್ಮಕ ಜವಳಿಗಳ ಮಾರುಕಟ್ಟೆ ಉತ್ತೇಜನ ಮತ್ತು ರಫ್ತು ಅವಕಾಶಗಳನ್ನು ಒಳಗೊಂಡ ಮೂರು ಗುಂಪು ಚರ್ಚೆಗಳು ಸಮಾವೇಶದಲ್ಲಿ ನಡೆದವು. ಕೇಂದ್ರ ಸರ್ಕಾರ, ಭಾರತೀಯ ಪಡೆಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳು, ಸಂಶೋಧಕರು, ಉದ್ಯಮಿಗಳು ಮತ್ತು ತಾಂತ್ರಿಕ ಜವಳಿಗಳಿಗೆ ಸಂಬಂಧಿಸಿದ ವೃತ್ತಿಪರರು, ವಿಶೇಷವಾಗಿ ಪ್ರೊಟೆಕ್ ಸೇರಿದಂತೆ ಸುಮಾರು 450 ಸ್ಪರ್ಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಸರ್ಕಾರದ ಜವಳಿ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ರಚನಾ ಷಾ, ಭಾರತದ ಜವಳಿ ಉದ್ಯಮವು ಭಾರತದ ಆರ್ಥಿಕತೆ ಮತ್ತು ಭಾರತದ ರಫ್ತಿಗೆ ಪ್ರಮುಖ ಕೊಡುಗೆ ನೀಡಿದೆ ಎಂದು ಒತ್ತಿ ಹೇಳಿದರು. ಸಾಂಪ್ರದಾಯಿಕವಲ್ಲದ ಜವಳಿ ಒಂದು ಉದಯೋನ್ಮುಖ ಉದ್ಯಮವಾಗಿದ್ದು, ವಾರ್ಷಿಕವಾಗಿ ಶೇ.10ರಷ್ಟು ದೃಢವಾದ ಬೆಳವಣಿಗೆಯ ದರವನ್ನು ಹೊಂದಿದೆ. ಆದಾಗ್ಯೂ, ಈ ವಲಯವು ಗಾತ್ರದಲ್ಲಿ ಇನ್ನೂ ಚಿಕ್ಕದಾಗಿದೆ ಮತ್ತು ಜಾಗತಿಕ ರಂಗದಲ್ಲಿ ಭಾರತವು ಪ್ರಮುಖ ಪಾತ್ರವಹಿಸಲು ಸಾಕಷ್ಟು ಅವಕಾಶಗಳಿವೆ.

ಸಾಂಪ್ರದಾಯಿಕವಲ್ಲದ ಜವಳಿ(ಥರ್ಮಲ್ ಉಡುಪು ಇತ್ಯಾದಿ) ಕ್ಷೇತ್ರದಲ್ಲಿನ ಚೈತನ್ಯ ಮತ್ತು ಶಕ್ತಿಯ ಬಗ್ಗೆ ಮಾತನಾಡಿದ ಅವರು, ಉತ್ಪಾದನೆ ಮತ್ತು ರಫ್ತಿಗೆ ಭಾರತವು ಪ್ರಬಲ ತಾಣವಾಗಿ ಹೊರಹೊಮ್ಮಲು ಸಜ್ಜಾಗಿದೆ ಎಂದು ಹೇಳಿದರು. ಆದಾಗ್ಯೂ, ಉತ್ಪನ್ನ ವೈವಿಧ್ಯೀಕರಣ, ವಿನ್ಯಾಸ, ಸೌಂದರ್ಯಶಾಸ್ತ್ರ ಮತ್ತು ಅಂತರ್ಗತ ಮಾನವಶಕ್ತಿಗೆ ತರಬೇತಿಯ ಅಗತ್ಯದ ಬಗ್ಗೆ ಗಮನ ಹರಿಸುವುದು ಇಂದಿನ ತುರ್ತು.
ಸಾಂಪ್ರದಾಯಿಕವಲ್ಲದ ಜವಳಿ ವಸ್ತುಗಳು ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಸರಿಸಮನಾದ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಮತ್ತು ಅದರ ಮಾರಾಟಕ್ಕೆ ಎನ್ ಟಿ ಟಿ ಎಂ ಅಡಿಯಲ್ಲಿನ ಜವಳಿ ಸಚಿವಾಲಯದ ಸಂಘಟಿತ ಪ್ರಯತ್ನವನ್ನು ಅವರು ಎತ್ತಿ ತೋರಿಸಿದರು.

ಸಾಂಪ್ರದಾಯಿಕವಲ್ಲದ ಜವಳಿಗಳ ಅತ್ಯಂತ ಪ್ರಮುಖ ಆನ್ವಯಿಕಗಳಲ್ಲಿ ಒಂದು ರಕ್ಷಣಾತ್ಮಕ ವಿಭಾಗದಲ್ಲಿದೆ ಎಂದು ಅವರು ಒತ್ತಿಹೇಳಿದರು, ಅವುಗಳನ್ನು ರಕ್ಷಣೆಯ ಕ್ಷೇತ್ರಗಳಲ್ಲಿ ಅದರ ಕ್ರಿಯಾತ್ಮಕ ಕಾರ್ಯನಿರ್ವಹಣೆಗಾಗಿ ಬಳಸಲಾಗುತ್ತದೆ. ಪ್ರೊಟೆಕ್ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಮತ್ತು ಬಳಕೆಯಲ್ಲಿನ ಉತ್ತೇಜನವನ್ನು ಗಮನದಲ್ಲಿಟ್ಟುಕೊಂಡು, ತಂತ್ರಜ್ಞಾನದ ಸ್ವದೇಶಿಕರಣ ಮತ್ತು ಪ್ರಮುಖ ಪ್ರೊಟೆಕ್ ವಸ್ತುಗಳಲ್ಲಿ ಗುಣಮಟ್ಟದ ಮಾನದಂಡಗಳ ಅನುಷ್ಠಾನದ ಬಗ್ಗೆ ಗಮನ ಹರಿಸಬೇಕು ಎಂದು ಅವರು ಹೇಳಿದರು.

ಭಾರತ ಸರ್ಕಾರದ ಜವಳಿ ಸಚಿವಾಲಯದ ಜವಳಿ ಆಯುಕ್ತರಾದ ಶ್ರೀಮತಿ ರೂಪ್ ರಾಶಿ ಅವರು ತಮ್ಮ ಭಾಷಣದಲ್ಲಿ, ಈ ವಲಯದಲ್ಲಿ ಫಲಿತಾಂಶ ಆಧಾರಿತ ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸುವ ಅಗತ್ಯವಿದೆ ಎಂದು ಉಲ್ಲೇಖಿಸಿದರು ಮತ್ತು ಎನ್ ಟಿ ಟಿ ಎಂನ ಪ್ರಮುಖ ಭಾಗವಾಗಿರುವ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಜವಳಿ ಸಚಿವಾಲಯವು ಗಮನ ಹರಿಸಿರುವುದರಿಂದ, ಮುಂಬರುವ ವರ್ಷಗಳಲ್ಲಿ ಅದ್ಭುತ ವೃದ್ಧಿ ನಿರೀಕ್ಷಿಸಲಾಗಿದೆ. ಸಾಲದ ಬೆಂಬಲ, ಸಬ್ಸಿಡಿ ಬೆಂಬಲ, ಹೂಡಿಕೆಯ ಹರಿವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ವಲಯದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಸರ್ಕಾರದ ಪ್ರಯತ್ನಗಳ ಬಗ್ಗೆ ಅವರು ವಿವರಿಸಿದರು. ಸಾಂಪ್ರದಾಯಿಕವಲ್ಲದ ಜವಳಿ ಉದ್ಯಮವು ಭಾರತದ ಉದ್ಯಮ 4.0 ದೃಷ್ಟಿಕೋನವನ್ನು ಈಡೇರಿಸಲು ವೇಗವರ್ಧಕವಾಗಲಿದೆ ಎಂದು ಅವರು ಉಲ್ಲೇಖಿಸಿದರು.

ಭಾರತ ಸರ್ಕಾರದ ಜವಳಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ರಾಜೀವ್ ಸಕ್ಸೇನಾ ಅವರು ಸಮಾವೇಶವನ್ನುದ್ದೇಶಿಸಿ ಭಾರತೀಯ ಸಾಂಪ್ರದಾಯಿಕವಲ್ಲದ ಜವಳಿ ಮಾರುಕಟ್ಟೆಯ, ವಿಶೇಷವಾಗಿ ಪ್ರೊಟೆಕ್ ನ  ಬಗ್ಗೆ ಪ್ರಸ್ತುತಪಡಿಸಿದರು. ರಾಷ್ಟ್ರೀಯ ಸಾಂಪ್ರದಾಯಿಕವಲ್ಲದ ಜವಳಿ ಅಭಿಯಾನ (ಎನ್ ಟಿಟಿಎಂ) ಮತ್ತು ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯ ಸೇರಿದಂತೆ ಅದರ ಘಟಕಗಳಾದ; ಕೌಶಲ್ಯ, ತರಬೇತಿ ಮತ್ತು ಶಿಕ್ಷಣ; ಉತ್ತೇಜನ ಮತ್ತು ಮಾರುಕಟ್ಟೆ ಅಭಿವೃದ್ಧಿ; ಮತ್ತು ರಫ್ತು ಉತ್ತೇಜನಕ್ಕೆ ಅವರು ಒತ್ತು ನೀಡಿದರು.

ಪ್ರಮುಖ ಮತ್ತು ವ್ಯೂಹಾತ್ಮಕ ಪ್ರೊಟೆಕ್ ಪ್ರದೇಶಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸುವುದು, 12 ಪ್ರೊಟೆಕ್ ವಸ್ತುಗಳ ಬಗ್ಗೆ ಕ್ಯೂಸಿಒಗಳು ಸೇರಿದಂತೆ ಅಭಿಯಾನದ ಅಡಿಯಲ್ಲಿ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆ ಅವರು ಬೆಳಕು ಚೆಲ್ಲಿದರು. ಭಾರತದಲ್ಲಿ ಸಾಂಪ್ರದಾಯಿಕವಲ್ಲದ ಜವಳಿಗಳ ಬೆಳವಣಿಗೆಯನ್ನು ಉತ್ತೇಜಿಸಲು ತಾಂತ್ರಿಕ ಜವಳಿ ಕ್ಷೇತ್ರದಲ್ಲಿ ಹೊಸ ಕೋರ್ಸ್ ಗಳು ಮತ್ತು ಪ್ರಯೋಗಾಲಯ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ ಸಾಂಪ್ರದಾಯಿಕವಲ್ಲದ ಜವಳಿ ಕ್ಷೇತ್ರದಲ್ಲಿ ಶಿಕ್ಷಣ ಪರಿಸರ ವ್ಯವಸ್ಥೆ ಮತ್ತು ನುರಿತ ಕಾರ್ಯಪಡೆಯನ್ನು ಸೃಷ್ಟಿಸಲು ಬೆಂಬಲಿಸಲು ಸರ್ಕಾರವು ಶೀಘ್ರದಲ್ಲೇ ಮಾರ್ಗದರ್ಶಿ ಸೂತ್ರಗಳೊಂದಿಗೆ ಬರಲಿದೆ ಎಂದು ಅವರು ಹೇಳಿದರು.

ಎನ್.ಐ.ಟಿ.ಆರ್.ಎ ಅಧ್ಯಕ್ಷರಾದ ಶ್ರೀ ರಾಜ್ ಕುಮಾರ್ ಜೈನ್, ರಕ್ಷಣಾತ್ಮಕ ಉಡುಗೆಗಳು, ಕೃಷಿ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಉತ್ಪನ್ನಗಳು ನಿರಂತರವಾಗಿ ಹೆಚ್ಚುತ್ತಿದ್ದು ಅಂತಿಮ ಬಳಕೆದಾರರು ಬಳಸುತ್ತಿರುವುದರಿಂದ ಸಾಂಪ್ರದಾಯಿಕವಲ್ಲದ ಜವಳಿ ಮಾರುಕಟ್ಟೆಯು ವಿಸ್ತರಿಸುತ್ತಿದೆ ಎಂದು ಹೇಳಿದರು. ಇದಲ್ಲದೆ, ತೆರಿಗೆ ಮತ್ತು ಸಾಮಾಜಿಕ ಭದ್ರತಾ ಶುಲ್ಕ ಕಡಿತದ ಬಳಿಕದ ಆದಾಯದಲ್ಲಿ ಹೆಚ್ಚಳದೊಂದಿಗೆ, ಸಾಂಪ್ರದಾಯಿಕವಲ್ಲದ ಜವಳಿಗಳ ಬಳಕೆಯು ಮುಂದಿನ ದಿನಗಳಲ್ಲಿ  ಕುಟುಂಬಗಳಲ್ಲಿಯೂ ಸಹ ಹೆಚ್ಚಾಗುವ ನಿರೀಕ್ಷೆಯಿದೆ. ಪಿಎಲ್ಐ ಯೋಜನೆ, ಪಿಎಂ ಮಿತ್ರಾ, ರಾಷ್ಟ್ರೀಯ ತಾಂತ್ರಿಕ ಜವಳಿ ಅಭಿಯಾನ ಮುಂತಾದ ಸಾಂಪ್ರದಾಯಿಕವಲ್ಲದ ಜವಳಿಗಳ ವೃದ್ಧಿ ಮತ್ತು ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದ್ದಕ್ಕಾಗಿ ಜವಳಿ ಸಚಿವಾಲಯವನ್ನು ಅವರು ಶ್ಲಾಘಿಸಿದರು. ಜಾಗತಿಕ ಅವಕಾಶಗಳನ್ನು ಅನ್ವೇಷಿಸಲು ಮತ್ತು ದೇಶೀಯ ಬೇಡಿಕೆಯನ್ನು ಪೂರೈಸಲು ಭಾರತ ಸರ್ಕಾರವು ತಾಂತ್ರಿಕ ಜವಳಿಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು

ಐಟಿಟಿಎ ಅಧ್ಯಕ್ಷ ಶ್ರೀ ಅಮಿತ್ ಅಗರ್ವಾಲ್, ರಕ್ಷಣಾತ್ಮಕ ಜವಳಿಗಳನ್ನು ಅಗ್ನಿ ಅವಗಢದ ಸನ್ನಿವೇಶಗಳಲ್ಲಿ ಮಾತ್ರ ಬಳಸುವುದಷ್ಟೇ ಆಗಿಲ್ಲ, ಜೊತೆಗೆ ಶಕ್ತಿ ಪ್ರಸರಣ, ವಿಕಿರಣಕ್ಕೆ ಸಂಬಂಧಿಸಿದ ಅನೇಕ ಅಪಾಯಕಾರಿ ಚಟುವಟಿಕೆಗಳಲ್ಲಿ ವ್ಯಾಪಕ ಬಳಕೆಯನ್ನು ಹೊಂದಿದೆ ಎಂದು ಒತ್ತಿ ಹೇಳಿದರು. ಅಸಂಘಟಿತ ವಲಯದಲ್ಲಿ ಸಂಘಟಿತ ಮತ್ತು ಬಹುತೇಕ ಸಮಾನ ಜನರಿರುವ ಅಪಾಯಗಳಿಗೆ ಒಡ್ಡಿಕೊಳ್ಳುವಿಕೆ ಮತ್ತು ಐದು ಕೋಟಿ ಜನರ ಉಪಸ್ಥಿತಿಯನ್ನು ಗಮನಿಸಿದರೆ ಭಾರತದಲ್ಲಿ ರಕ್ಷಣಾತ್ಮಕ ಜವಳಿಗಳಿಗೆ ಭಾರಿ ಸಾಮರ್ಥ್ಯವಿದೆ ಎಂದು ಅವರು ಹೇಳಿದರು. ಭಾರತವು ಸಾಂಪ್ರದಾಯಿಕವಲ್ಲದ ಜವಳಿ ವಸ್ತುಗಳ ಪ್ರಮಾಣೀಕರಣವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು. ಬಳಕೆದಾರ ಉದ್ಯಮವು ಸಾಂಪ್ರದಾಯಿಕವಲ್ಲದ ಜವಳಿಗಳ ಬಳಕೆ ಕಡ್ಡಾಯ ಭಾರತದಲ್ಲಿ ತಾಂತ್ರಿಕ ಜವಳಿಗಳ ಬೆಳವಣಿಗೆಗೆ ಗಮನಾರ್ಹವಾಗಿ ಚಾಲನೆ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಎನ್.ಐ.ಟಿ.ಆರ್.ಎ.ಯ ಮಹಾನಿರ್ದೇಶಕ ಡಾ. ಅರಿಂದಮ್ ಬಸು ಅವರು, ಉತ್ತರ ಭಾರತ ಜವಳಿ ಸಂಶೋಧನಾ ಸಂಘವು ಸಾಂಪ್ರದಾಯಿಕವಲ್ಲದ ಜವಳಿ ಕ್ಷೇತ್ರದಲ್ಲಿ, ವಿಶೇಷವಾಗಿ ರಕ್ಷಣಾತ್ಮಕ ಜವಳಿ ಕ್ಷೇತ್ರದಲ್ಲಿ ಕೈಗೊಂಡಿರುವ ಸಂಶೋಧನಾ ಸೌಲಭ್ಯಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

** **
 



(Release ID: 1876659) Visitor Counter : 153