ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಶ್ರೀ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಫಿನ್ ಲ್ಯಾಂಡ್ ಸಹವರ್ತಿ ಹೆಚ್.ಇ. ಶ್ರೀ ಪೆಟ್ರಿ ಹೊಂಕೊನೆನ್ ಅವರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸಿದರು.


ಅವರೊಂದಿಗೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಗಡಿನಾಡು ಸಂಶೋಧನೆಯ ಎಲ್ಲ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು  ಚರ್ಚೆ ನಡೆಸಿದರು.

Posted On: 15 NOV 2022 5:56PM by PIB Bengaluru

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಫಿನ್ನಿಶ್ ಶಿಕ್ಷಣ, ವಿಜ್ಞಾನ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಪೆಟ್ರಿ ಹೊಂಕೊನೆನ್ ಅವರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸಿ,ಕೋವಿಡ್ ನಂತರದ ಸವಾಲಿನ ಸಮಯದಲ್ಲಿ ಉಂಟಾದ ಶಿಕ್ಷಣದ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿದರು.ಅತ್ಯಂತ ದುರ್ಬಲ ಮಕ್ಕಳ ಕಲಿಕೆಯ ಅಂತರವನ್ನು ಕಡಿಮೆ ಮಾಡಲು ದೃಢವಾದ ವಿಧಾನದ ಅಗತ್ಯವಿದೆ ಎಂಬ ಬಗ್ಗೆ ಉಭಯನಾಯಕರು ಒಮ್ಮತದ ತೀರ್ಮಾನಕ್ಕೆ ಬಂದರು.  ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಶೈಕ್ಷಣಿಕ ಸುಧಾರಣೆಗಳ ಹಾದಿಯನ್ನು ವಿಸ್ತರಿಸಿ  ಜ್ಞಾನವನ್ನು ದ್ವಿಪಕ್ಷೀಯ ಸಹಕಾರದ ಆದ್ಯತೆಯ ಆಧಾರ ಸ್ತಂಭವನ್ನಾಗಿ ಮಾಡುವ ಕುರಿತ ಈ ಇಬ್ಬರ ಚರ್ಚೆ ಫಲಪ್ರದವಾಯಿತು. ಅಲ್ಲದೇ  ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಗಡಿನಾಡು ಸಂಶೋಧನೆಯ ಎಲ್ಲ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ಸಮ್ಮತಿಸೂಚಿಸಲಾಯಿತು .

2022-11-15 17:49:39.750000

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಧಾನ್, ಫಿನ್‌ಲ್ಯಾಂಡ್ ಜ್ಞಾನದ ವಿಷಯದಲ್ಲಿ ಭಾರತದೊಂದಿಗೆ ಸಹಕರಿಸಲು ಆಸಕ್ತಿಯನ್ನು ತೋರಿಸಿದೆ. ವಿಶೇಷವಾಗಿ ಎನ್‌ಈಪಿ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧ್ಯತೆಗಳಿಂದಾಗಿ ಭಾರತ ಮತ್ತು ಫಿನ್‌ಲ್ಯಾಂಡ್ ಎರಡೂ ದೇಶಗಳು ECCE, ಶಿಕ್ಷಕರ ತರಬೇತಿ, ಡಿಜಿಟಲ್ ಶಿಕ್ಷಣದಲ್ಲಿ ಪರಸ್ಪರ ಉತ್ತಮ ಅಭ್ಯಾಸಗಳಿಂದ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದರು. 
 ಫಿನ್ನಿಷ್ ವಿಶ್ವವಿದ್ಯಾನಿಲಯಗಳು ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಯೋಗ ಹೊಂದುವುದು ಸ್ವಾಗತಾರ್ಹ ಎಂದು ಶ್ರೀ ಪ್ರಧಾನ್ ಹೇಳಿದರು.  

ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಶೀಘ್ರದಲ್ಲೇ ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಅವಕಾಶ ನೀಡುವ ನೀತಿಯನ್ನು ಸರ್ಕಾರವು ಅನುಷ್ಠಾನಗೊಳಿಸುವುದಾಗಿ  ಶ್ರೀ ಪ್ರಧಾನ್  ಮಾಹಿತಿ ನೀಡಿದರು.

ಸಭೆಯಲ್ಲಿ, ಸಚಿವ ಹೊಂಕೊನೆನ್ ಅವರು ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ಫಿನ್ನಿಷ್ ಶಿಕ್ಷಣ ಚಿಂತನೆಯಂತೆಯೇ ಅನೇಕ ಅಂಶಗಳಿವೆ ಎಂಬುದನ್ನೂ ಗಮನಸೆಳೆದರು.ವಿದ್ಯಾರ್ಥಿ-ಆಧಾರಿತ ಶಿಕ್ಷಣ ವಿಧಾನ ಮತ್ತು ಚಟುವಟಿಕೆ ಆಧಾರಿತ ಶಿಕ್ಷಣಶಾಸ್ತ್ರವು ಫಿನ್ನಿಷ್ ಶಿಕ್ಷಣ ವ್ಯವಸ್ಥೆಯ ಪ್ರಮುಖ ಅಂಶಗಳಾಗಿವೆ.  ಇದು ನಮ್ಮ ದೇಶಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಹಕರಿಸಲು ಹಿಂದೆಂದಿಗಿಂತಲೂ ಸುಲಭವಾಗಿದೆ.ಈ ವಿಧಾನವನ್ನು ಉತ್ತೇಜಿಸಲು, ಫಿನ್‌ಲ್ಯಾಂಡ್‌ನ ಶಿಕ್ಷಣ ಮತ್ತು ಸಂಸ್ಕೃತಿ ಸಚಿವಾಲಯವು ಫಿನ್ನಿಷ್ ವಿಶ್ವವಿದ್ಯಾಲಯಗಳ ಸಮೂಹಕ್ಕೆ ವರ್ಷಕ್ಕೆ ಒಂದು ಮಿಲಿಯನ್ ಯುರೋಗಳಷ್ಟು ನಿರ್ದಿಷ್ಟ ನಿಧಿಯನ್ನು ಶಿಕ್ಷಣವಲಯದಲ್ಲಿ  ಭಾರತದೊಂದಿಗೆ ತಮ್ಮ ಸಹಯೋಗವನ್ನು ಸಕ್ರಿಯಗೊಳಿಸಲು ಪ್ರಮುಖ ನಿಧಿಯಾಗಿ ನಿಗದಿಪಡಿಸಿದೆ.  ಗ್ಲೋಬಲ್ ಇನ್ನೋವೇಶನ್ ನೆಟ್‌ವರ್ಕ್ ಆಫ್ ಟೀಚಿಂಗ್ ಅಂಡ್ ಲರ್ನಿಂಗ್-GINTL, (ಜಿಐಎನ್‌ಟಿಎಲ್‌)ಕಲಿಕೆಯ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಫಿನ್ನಿಶ್ ಮತ್ತು ಭಾರತೀಯ ಶಿಕ್ಷಣ ಸಂಸ್ಥೆಗಳ ನಡುವೆ ಜಂಟಿ ಚಟುವಟಿಕೆಗಳನ್ನು ಸಹ-ರಚಿಸಲು 2021 ರಲ್ಲಿ  ಕೋವಿಡ್ -19 ಸಾಂಕ್ರಾಮಿಕದ ನಡುವೆಯೂ  ತನ್ನ ಕಾರ್ಯವನ್ನು ಪ್ರಾರಂಭಿಸಿತು.  Finnish National Agency of Education (EDUFI) (ಡಿಯುಎಫ್‌ಐ) ಶಾಲಾ ಶಿಕ್ಷಣದ ವಿವಿಧ ಕ್ಷೇತ್ರಗಳಲ್ಲಿ ಮಾಹಿತಿ ಮತ್ತು ವಿಷಯವನ್ನು ಹಂಚಿಕೊಳ್ಳುವ ಮೂಲಕ ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸಲು NCERT ಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.  ಇವುಗಳಲ್ಲಿ ಬಾಲ್ಯದ ಆರೈಕೆ ಮತ್ತು ಶಿಕ್ಷಣ, ವೃತ್ತಿಪರ ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ತರಬೇತಿ, ಶಾಲಾ ನಾಯಕತ್ವ ಮತ್ತು ನಿರ್ವಹಣೆ, ಶಿಕ್ಷಣದಲ್ಲಿ ICT ಯ ಅಳವಡಿಕೆ, ಪಠ್ಯಕ್ರಮ ಸಂಶೋಧನೆ ವಿನ್ಯಾಸ ಮತ್ತು ಅಭಿವೃದ್ಧಿ ಇತ್ಯಾದಿ.  ಈ ಕ್ಷೇತ್ರಗಳಲ್ಲಿ EDUFI (ಇಡಿಯುಎಫ್‌ಐ)ಮತ್ತು GINTL(ಜಿಐಎನ್‌ಟಿಎಲ್‌) ನ ಅನುಭವವನ್ನು ಬಳಸಿಕೊಳ್ಳಲು MoU ಕಲ್ಪಿಸುತ್ತದೆ.

ಭಾರತದಲ್ಲಿರುವ ಫಿನ್‌ಲ್ಯಾಂಡ್‌ನ ರಾಯಭಾರಿ ಶ್ರೀಮತಿ ರಿತ್ವ ಕೌಕ್ಕು-ರೋಂಡೆ ಅವರು ಮಾಹಿತಿ ನೀಡಿ, ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಾವಧಿಯ ಸಹಯೋಗದ ಗುರಿಯನ್ನು ಹೊಂದಿದ್ದೇವೆ, ಶಿಕ್ಷಣವೆಂದರೆ ಶಿಕ್ಷಕರ ವೃತ್ತಿಪರತೆ, ಶಾಲಾ ಸಂಸ್ಕೃತಿ ಮತ್ತು ಆಳವಾದ ಕಲಿಕೆಯು ಕ್ರಮೇಣ ವಿಕಸನಗೊಳ್ಳುವುದು ಎಲ್ಲವನ್ನೂ ಒಳಗೊಂಡಿದೆ.

ಮತ್ತೊಂದು ವಿಶ್ವವಿದ್ಯಾನಿಲಯ ನೆಟ್‌ವರ್ಕ್, ಫಿನ್ನಿಷ್ ಇಂಡಿಯನ್ ಕನ್ಸೋರ್ಟಿಯಾ ಫಾರ್ ರಿಸರ್ಚ್ ಅಂಡ್ ಎಜುಕೇಶನ್, FICORE (ಎಫ್‌ಐಸಿಓಆರ್‌ಇ) ಉನ್ನತ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಕೇಂದ್ರೀಕರಿಸುವ ಇಂಡೋ-ಫಿನ್ನಿಷ್ ಸಹಯೋಗಕ್ಕೆ ವರ್ಷಕ್ಕೆ ಮತ್ತೊಂದು ಮಿಲಿಯನ್ ಯೂರೋಗಳನ್ನು ಇರಿಸುತ್ತದೆ.  FICORE(ಎಫ್‌ಐಸಿಓಆರ್‌ಇ) ಫಿನ್‌ಲ್ಯಾಂಡ್‌ನಲ್ಲಿರುವ ಎಲ್ಲಾ ಶೈಕ್ಷಣಿಕ ವಿಶ್ವವಿದ್ಯಾಲಯಗಳನ್ನು ಮತ್ತು ಭಾರತದ ಎಲ್ಲ IIT(ಐಐಟಿ)ಗಳನ್ನು ಒಳಗೊಂಡಿದೆ.  ಈ ಯೋಜನೆಯು ಆಲ್ಟೊ ವಿಶ್ವವಿದ್ಯಾಲಯ ಮತ್ತು  ಐಐಟಿಬಿಯಿಂದ ಸಂಯೋಜಿಸಲಾಗಿದೆ ಎಂದು ತಿಳಿಸಿದರು.

*****


(Release ID: 1876354) Visitor Counter : 202