ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಭತ್ತದ ಖರೀದಿಯು 231 ಲಕ್ಷ ಮೆಟ್ರಿಕ್ ಟನ್ ಗಡಿ ದಾಟಿದೆ, ಸುಮಾರು 47644 ಕೋಟಿ ರೂ.ಗಳಷ್ಟು ಎಂಎಸ್ಪಿ ಮೌಲ್ಯದ ಖರೀದಿಯಿಂದ 13.50 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಿದೆ
Posted On:
11 NOV 2022 6:34PM by PIB Bengaluru
2022-23 ನೇ ಸಾಲಿನ (ಮುಂಗಾರು ಬೆಳೆ) ಭತ್ತದ ಖರೀದಿಯು 13 ಖರೀದಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರಾಗವಾಗಿ ಪ್ರಗತಿಯಲ್ಲಿದೆ. ಪಂಜಾಬ್, ಚಂಡೀಗಢ, ಛತ್ತೀಸ್ಗಢ, ಉತ್ತರಾಖಂಡ, ಹಿಮಾಚಲ ಪ್ರದೇಶ, ಬಿಹಾರ, ಉತ್ತರ ಪ್ರದೇಶ, ಗುಜರಾತ್, ಜಮ್ಮು & ಕಾಶ್ಮೀರ, ಕೇರಳ, ತೆಲಂಗಾಣ, ಹರಿಯಾಣ ಮತ್ತು ತಮಿಳುನಾಡುಗಳಲ್ಲಿ ಈ ಖರೀದಿ ನಡೆದಿದೆ. 10.11.2022 ರವರೆಗೆ 231 ಲಕ್ಷ ಮೆಟ್ರಿಕ್ ಟನ್ ಗಿಂತ ಹೆಚ್ಚಿನ ಭತ್ತವನ್ನು ಖರೀದಿಸಲಾಗಿದೆ. ಹಿಂದಿನ ವರ್ಷ ಸುಮಾರು 228 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಲಾಗಿತ್ತು. 47644 ಕೋಟಿ ರೂ.ಗಳ ಎಂಎಸ್ಪಿ ಮೌಲ್ಯದೊಂದಿಗೆ ನಡೆಯುತ್ತಿರುವ ಮುಂಗಾರು ಹಂಗಾಮು ಖರೀದಿ ಪ್ರಕ್ರಿಯೆಯ ಮೂಲಕ 13.50 ಲಕ್ಷಕ್ಕೂ ಹೆಚ್ಚು ರೈತರು ಈಗಾಗಲೇ ಪ್ರಯೋಜನ ಪಡೆದಿದ್ದಾರೆ.
ಈ ವರ್ಷ ದೇಶದಲ್ಲಿ ಉತ್ತಮ ಮಳೆಯಾಗಿದ್ದು, ಭತ್ತದ ಉತ್ಪಾದನೆಯು ಸಾಮಾನ್ಯ ಸ್ಥಿತಿಯಲ್ಲಿ ಇರುವ ನಿರೀಕ್ಷೆಯಿದೆ. ಪ್ರಸ್ತುತ 2022-23 ರ ಮುಂಗಾರು ಬೆಳೆಗೆ, 771 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು (ಅಕ್ಕಿ 518 ಲಕ್ಷ ಮೆಟ್ರಿಕ್ ಟನ್) ಖರೀದಿಯನ್ನು ಅಂದಾಜಿಸಲಾಗಿದೆ. ಕಳೆದ 2021-22ರಲ್ಲಿ 759 ಲಕ್ಷ ಮೆಟ್ರಿಕ್ ಟನ್ ಭತ್ತ (ಅಕ್ಕಿ 510 ಲಕ್ಷ ಮೆಟ್ರಿಕ್ ಟನ್) ಖರೀದಿಸಲಾಗಿತ್ತು. ಹಿಂಗಾರು ಬೆಳೆಯ ಭತ್ತ ಸೇರಿ 2022-23 ರ ಸಂಪೂರ್ಣ ಅವಧಿಗೆ ಸುಮಾರು 900 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಎನ್ ಎಫ್ ಎಸ್ ಎ/ ಪಿ ಎಂ ಜಿ ಕೆ ಎ ವೈ/ಒಡಬ್ಲ್ಯುಎಸ್ ಅಗತ್ಯತೆಗಳನ್ನು ಪೂರೈಸಲು ಕೇಂದ್ರೀಯ ಸರಬರಾಜು ಅಡಿಯಲ್ಲಿ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಲಭ್ಯವಿದೆ.
ಇತರ ರಾಜ್ಯಗಳಲ್ಲಿಯೂ ಸಹ ಶೀಘ್ರದಲ್ಲಿಯೇ ಖರೀದಿ ಆರಂಭವಾಗಲಿದೆ ಮತ್ತು ಅಡೆತಡೆಯಿಲ್ಲದ ಖರೀದಿ ಕಾರ್ಯಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
******
(Release ID: 1875403)
Visitor Counter : 148