ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಕಲ್ಲಿದ್ದಲು ಗಣಿ ಮುಚ್ಚುವಿಕೆ  - ಎಲ್ಲರಿಗಾಗಿ ಹಸಿರು ಪರಿವರ್ತನೆ ಸಾಧಿಸುವುದು ಸೇರಿ, ಹೊರಹೊಮ್ಮುವ ಸಮಸ್ಯೆಗಳ ಕುರಿತು ಚರ್ಚಿಸಿದ ಕಲ್ಲಿದ್ದಲು ಸಚಿವಾಲಯದ ಸಂಸದೀಯ ಸಲಹಾ ಸಮಿತಿ

ಪ್ರಕಟಣಾ ದಿನಾಂಕ: 09 NOV 2022 4:09PM by PIB Bengaluru

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ಕಲ್ಲಿದ್ದಲು ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ, ಕಲ್ಲಿದ್ದಲು ಗಣಿ ಮುಚ್ಚುವಿಕೆ - ಎಲ್ಲರಿಗಾಗಿ ಹಸಿರು ಪರಿವರ್ತನೆ ಸಾಧಿಸುವುದು ಎಂಬ ವಿಷಯದ ಕುರಿತು ಕಲ್ಲಿದ್ದಲು ವಲಯಕ್ಕೆ ಸಂಬಂಧಿಸಿದಂತೆ ಹೊರಹೊಮ್ಮುತ್ತಿರುವ ಸಮಸ್ಯೆಗಳ ಕುರಿತಂತೆ ಚರ್ಚಿಸಿದರು.

ಸಂಸದೀಯ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಚುನ್ನಿ ಲಾಲ್ ಸಾಹು, ಶ್ರೀ ಜುವಲ್ ಓರಂ, ಶ್ರೀ ಕೃಪಾಲ್ ತುಮಾನೆ, ಶ್ರೀ ಸಂತೋಷ್ ಕುಮಾರ್, ಶ್ರೀ ಸುರೇಶ್ ಪೂಜಾರಿ, ಶ್ರೀ ಅಜಯ್ ಪ್ರತಾಪ್ ಸಿಂಗ್ ಬಘೇಲ್, ಶ್ರೀ ಖೈರು ಮಹತೋ ಮತ್ತು ಶ್ರೀ ಪ್ರಶಾಂತ ನಂದಾ ಅವರು ಸಭೆಯಲ್ಲಿ ಪಾಲ್ಗೊಂಡು ಕಲ್ಲಿದ್ದಲು ಗಣಿ ಮುಚ್ಚುವಿಕೆಯ ಪರಿವರ್ತನೆಯ ಅಂಶದ ಬಗ್ಗೆ ತಮ್ಮ ಅಮೂಲ್ಯ ಸಲಹೆಗಳು ಮತ್ತು ಮಾಹಿತಿಗಳನ್ನು ನೀಡಿದರು. ಸಿಐಎಲ್ ನ ಸಿಎಂಡಿ, ಎನ್.ಎಲ್.ಸಿ.ಐ.ಎಲ್. ಸಿಎಂಡಿ ಮತ್ತು ಸಿಐಎಲ್ ಅಂಗಸಂಸ್ಥೆಗಳ ಸಿಎಂಡಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಚಿವ ಶ್ರೀ ಪ್ರಲ್ಹಾದ್ ಜೋಶಿಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಕಲ್ಲಿದ್ದಲಿನಿಂದ ದೂರವಿರುವ ಇಂಧನ ಪರಿವರ್ತನೆಗೆ ಜಾಗತಿಕವಾಗಿ ಒತ್ತು ನೀಡಲಾಗಿದೆ ಎಂದು ಸಮಿತಿಯ ಸದಸ್ಯರಿಗೆ ತಿಳಿಸಿದರು. ಆದಾಗ್ಯೂ, ಭಾರತಕ್ಕೆ, ಕಲ್ಲಿದ್ದಲು ಅಗ್ಗದ ಇಂಧನದ ಮೂಲವಾಗಿದ್ದು, ಹೆಚ್ಚುತ್ತಿರುವ ಆರ್ಥಿಕತೆಯಿಂದ ಉತ್ತೇಜನ ಪಡೆಯುತ್ತಿರುವ ತನ್ನ ಇಂಧನ ಅಗತ್ಯಗಳನ್ನು ಪೂರೈಸಿಕೊಳ್ಳಲು ಪ್ರಮುಖ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ದೇಶದ ಪ್ರಾಥಮಿಕ ಇಂಧನ ಅಗತ್ಯದ ಶೇ.51ಕ್ಕಿಂತ ಹೆಚ್ಚು ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಸುಮಾರು ಶೇ.73ರಷ್ಟು ಕಲ್ಲಿದ್ದಲ ಪ್ರಮಾಣವಿದೆ. ಅಲ್ಲದೆ,ಉಕ್ಕು, ಸ್ಪಾಂಜ್ ಕಬ್ಬಿಣ, ಅಲ್ಯೂಮಿನಿಯಂ, ಸಿಮೆಂಟ್, ಕಾಗದ, ಇಟ್ಟಿಗೆಗಳು ಇತ್ಯಾದಿಗಳ ಉತ್ಪಾದನೆಯಲ್ಲಿ ಕಲ್ಲಿದ್ದಲು ಪ್ರಮುಖ ಘಟಕಾಂಶಗಳಲ್ಲಿ ಒಂದಾಗಿದೆ. ದೇಶದಲ್ಲಿ ಕಲ್ಲಿದ್ದಲು ಬೇಡಿಕೆ ಇನ್ನೂ ಉತ್ತುಂಗಕ್ಕೇರಬೇಕಿದ್ದು, 2040 ರವರೆಗೆ ಮತ್ತು ಅದರಾಚೆಗಿನ ಇಂಧನ ಮಿಶ್ರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುತ್ತದೆ. ಹೀಗಾಗಿ, ಕಲ್ಲಿದ್ದಲಿನಿಂದ ದೂರವಾದ ಯಾವುದೇ ಪರಿವರ್ತನೆಯು ಭಾರತದಲ್ಲಿ ಭವಿಷ್ಯದಲ್ಲಿ ಸಂಭವಿಸುವುದಿಲ್ಲ  ಎಂದರು.

ಕಲ್ಲಿದ್ದಲು ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ ಅವರು, 2015ರಲ್ಲಿ ಪ್ಯಾರಿಸ್ ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ (ಕಾಪ್ 21) ಮಾಡಿದ ಹವಾಮಾನ ಘೋಷಣೆಗಳಲ್ಲಿ ಹಸಿರು ಪರಿವರ್ತನೆ (ಜಸ್ಟ್ ಟ್ರಾನ್ಸಿಷನ್) ಎಂಬ  ನುಡಿಗಟ್ಟನ್ನು ಸೇರಿಸಿದ ನಂತರ ಪ್ರಾಮುಖ್ಯತೆ ಪಡೆದಿದೆ  ಎಂದು ವಿವರಿಸಿದರು. ಒಂದು ಇಂಗಾಲದ ತೀವ್ರ ಶಕ್ತಿಯ ಮೂಲದಿಂದ ಕಡಿಮೆ ಇಂಗಾಲದ ಶಕ್ತಿಯ ಮೂಲಕ್ಕೆ ಪರಿವರ್ತನೆಯು ಆ ಮೂಲದ ಮೇಲೆ ಅವಲಂಬಿತವಾಗಿರುವ ಜನರ ಮೇಲೆ ಕಠಿಣವಾಗಬಾರದು ಎಂದು ಒತ್ತಿ ಹೇಳಿದರು. ಅಂತಹ ಜನರಿಗೆ ಸ್ಥಿತ್ಯಂತರದ ಪರಿಣಾಮಕ್ಕೆ ಪರಿಹಾರ ನೀಡಬೇಕು ಮತ್ತು /ಅಥವಾ ಇತರ ಕೆಲವು ಕಡಿಮೆ ಇಂಗಾಲದ ಆರ್ಥಿಕ ಚಟುವಟಿಕೆಗಳಲ್ಲಿ ಮರು-ತರಬೇತಿ ಮತ್ತು ಮರು-ಉದ್ಯೋಗ ನೀಡಬೇಕು ಎಂದು ನಿರೀಕ್ಷಿಸಲಾಗಿದೆ ಎಂದರು.

ಸಭೆಯಲ್ಲಿ, ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿಯವರು ಒಂದು ಪ್ರಾತ್ಯಕ್ಷಿಕೆ ನೀಡಿದರು, ಅದರಲ್ಲಿ ಕಲ್ಲಿದ್ದಲು ಹಂತವನ್ನು ಕಡಿಮೆ ಮಾಡುವ ತಕ್ಷಣದ ಸವಾಲುಗಳು ಇಲ್ಲದಿದ್ದರೂ, ಕಲ್ಲಿದ್ದಲು ಕಂಪನಿಗಳು ಈಗಾಗಲೇ ಕೈಬಿಟ್ಟ ಗಣಿಗಳು ಮತ್ತು ಕಲ್ಲಿದ್ದಲು ಗಣಿಗಳನ್ನು ಮುಚ್ಚುವುದನ್ನು ನಿರ್ವಹಿಸಬೇಕಾಗುತ್ತದೆ, ಭವಿಷ್ಯದಲ್ಲಿ ಸಾಮಾನ್ಯವಾಗಿ ಅದನ್ನು ಹಸಿರು ಪರಿವರ್ತನೆಯ ನಿಟ್ಟಿನಲ್ಲಿ ಅದನ್ನು - ಭೂಮಿ ಮತ್ತು ಮೂಲಸೌಕರ್ಯ ಸ್ವತ್ತುಗಳ ಮರುನಿರ್ಮಾಣವನ್ನು ಖಚಿತಪಡಿಸಿಕೊಳ್ಳಲು ಹಸಿರು ಪರಿವರ್ತನೆ (ಜಸ್ಟ್ ಟ್ರಾನ್ಸಿಷನ್) ತತ್ವಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ, ಕಾರ್ಮಿಕರು ಮತ್ತು ಅನೌಪಚಾರಿಕವಾಗಿ ಉದ್ಯೋಗದಲ್ಲಿರುವ ಜನರ ಜೀವನೋಪಾಯ ಮತ್ತು ಶಾಲೆಗಳು, ಆಸ್ಪತ್ರೆಗಳು, ಸಮುದಾಯ ಕಟ್ಟಡಗಳು ಇತ್ಯಾದಿಗಳಂತಹ ಸಾಮಾಜಿಕ ಮೂಲಸೌಕರ್ಯಗಳಿಗೆ ಬೆಂಬಲವನ್ನು ಮುಂದುವರಿಸಿಕೊಂಡು ಮುಚ್ಚಲಾಗುತ್ತದೆ ಎಂದು ವಿವರಿಸಿದರು.

ಅಸ್ತಿತ್ವದಲ್ಲಿರುವ ಗಣಿ ಮುಚ್ಚುವ ಮಾರ್ಗಸೂಚಿಗಳು ಇನ್ನೂ ಈಗ ಹೊರಹೊಮ್ಮುತ್ತಿವೆ. ಈ ಮಾರ್ಗಸೂಚಿಗಳು ಪ್ರಾಥಮಿಕವಾಗಿ ಗಣಿ ಮುಚ್ಚುವಿಕೆಯ ಭೌತಿಕ ಮತ್ತು ಪರಿಸರ ಅಂಶಗಳ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ಗಣಿ ಮುಚ್ಚುವಿಕೆ ಮತ್ತು ಭೂಮಿ ಮತ್ತು ಮೂಲಸೌಕರ್ಯ ಆಸ್ತಿಗಳ ಮರುಬಳಕೆಯ ಸರಿಯಾದ ಸಾಮಾಜಿಕ ಅಂಶಗಳನ್ನು ಪರಿಹರಿಸುವುದಿಲ್ಲ. ಆದ್ದರಿಂದ, ಹಸಿರು ಪರಿವರ್ತನೆ ತತ್ವಗಳ ಮೇಲೆ ಏಕರೂಪದ ಸಮಗ್ರ ಸುಸ್ಥಿರ ಗಣಿ ಮುಚ್ಚುವಿಕೆ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ, ಜೊತೆಗೆ ಗಣಿ ಮುಚ್ಚುವಿಕೆಯ ಪ್ರತಿಯೊಂದು ಅಂಶವನ್ನು ಒಳಗೊಂಡ ಸೂಕ್ತ ಸಾಂಸ್ಥಿಕ ವ್ಯವಸ್ಥೆ ಮತ್ತು ಧನಸಹಾಯದ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಅಗತ್ಯವೂ ಇದೆ.

ಚರ್ಚೆಯ ಸಮಯದಲ್ಲಿ, ಸಮಿತಿಯ ಸದಸ್ಯರು ಕಲ್ಲಿದ್ದಲು ಗಣಿ ಮುಚ್ಚುವಿಕೆಗೆ ಸಚಿವಾಲಯ ಮತ್ತು ಕಲ್ಲಿದ್ದಲು / ಲಿಗ್ನೈಟ್ ಪಿಎಸ್.ಯು.ಗಳು ಕೈಗೊಂಡಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಕಲ್ಲಿದ್ದಲು ಗಣಿ ಮುಚ್ಚುವ ಚೌಕಟ್ಟನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕಲ್ಲಿದ್ದಲು ವಲಯವು ಕೈಗೊಂಡಿರುವ ಉಪಕ್ರಮಗಳನ್ನು ಸದಸ್ಯರು ಒಪ್ಪಿಕೊಂಡರು ಮತ್ತು ಉತ್ತಮ ಜಾಗತಿಕ ರೂಢಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಗಣಿಗಳನ್ನು ಮುಚ್ಚಲು ಹಸಿರು ಪರಿವರ್ತನೆಯ ತತ್ವದ ಅನ್ವಯವು ಸಾಮಾಜಿಕ ಸಮಾನತೆ ಮತ್ತು ನ್ಯಾಯಕ್ಕಾಗಿ ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ಚೌಕಟ್ಟು ಭಾರತದ ಇಂಧನ ಮಿಶ್ರಣದಲ್ಲಿನ ಬದಲಾವಣೆಯಿಂದಾಗಿ ದೀರ್ಘಾವಧಿಯಲ್ಲಿ ಸಂಭವಿಸಬಹುದಾದ ಕಲ್ಲಿದ್ದಲು ಗಣಿ ಮುಚ್ಚುವಿಕೆಗಳನ್ನು ನಿರ್ವಹಿಸಲು ಸಾಮರ್ಥ್ಯ ವರ್ಧನೆಗೆ ಅನುವು ಮಾಡಿಕೊಡುತ್ತದೆ. ಪರಿಸರ ಸಂರಕ್ಷಣೆ, ಕಲ್ಲಿದ್ದಲು ಗಣಿ ಮುಚ್ಚುವಿಕೆ, ಸಾಮಾಜಿಕ ಕಲ್ಯಾಣ ಮತ್ತು ಉತ್ಪಾದಕತೆಯಂತಹ ವಿಷಯಗಳ ಬಗ್ಗೆ ಕಲ್ಲಿದ್ದಲು ಕಂಪನಿಗಳು ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಹೆಚ್ಚು ಆಗಾಗ್ಗೆ ಸಮಾಲೋಚಿಸಬೇಕು ಎಂದು ಸಮಿತಿಯ ಸದಸ್ಯರು ಸಲಹೆ ನೀಡಿದರು.

ಸಚಿವ ಶ್ರೀ ಪ್ರಲ್ಹಾದ್ ಜೋಶಿಯವರು ತಮ್ಮ ಸಮಾರೋಪ ಭಾಷಣದಲ್ಲಿ ಸಮಿತಿಯ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು ಮತ್ತು ಅವರ ಮೌಲ್ಯಯುತ ಸಲಹೆಗಳನ್ನು ಸಚಿವಾಲಯ ಮತ್ತು ಕಲ್ಲಿದ್ದಲು/ಲಿಗ್ನೈಟ್ ನ ಸಾರ್ವಜನಿಕ ಉದ್ದಿಮೆಗಳು ಅಳವಡಿಸಿಕೊಳ್ಳುತ್ತವೆ ಎಂದು ಭರವಸೆ ನೀಡಿದರು.

*****


(ಪ್ರಕಟಣೆ ಐ.ಡಿ.: 1874757) ವಿಸಿಟರ್ ಕೌಂಟರ್ : 192
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Telugu