ಇಂಧನ ಸಚಿವಾಲಯ

ಎಲೆಕ್ಟ್ರಿಕ್ ವಾಹನಗಳ (ಇವಿ) ಚಾರ್ಜಿಂಗ್ ಮೂಲಸೌಕರ್ಯಕ್ಕೆ (ಇವಿ) ತಿದ್ದುಪಡಿಯನ್ನು - ಪರಿಷ್ಕೃತ ಏಕೀಕೃತ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಪ್ರಕಟಿಸಿದ ವಿದ್ಯುತ್ ಸಚಿವಾಲಯ 


ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ದಿನದ ಸಮಯ ಮತ್ತು ಸೌರ ಗಂಟೆಗಳಿಗೆ ರಿಯಾಯಿತಿಯೊಂದಿಗೆ ಸೇವಾ ಶುಲ್ಕಗಳ ಪೂರ್ವ ಪಾವತಿ ಸಂಗ್ರಹದ ವೈಶಿಷ್ಟ್ಯವನ್ನು ಹೊಂದಿರುತ್ತವೆ.

ವಿಧಿಸಬೇಕಾದ ಸೇವಾ ಶುಲ್ಕಗಳ ಗರಿಷ್ಠ ಮಿತಿಯ ಬಗ್ಗೆ ರಾಜ್ಯ ಸರ್ಕಾರಗಳಿಗೆ ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರದ (ಸಿಇಎ) ಅಡಿಯಲ್ಲಿನ ಒಂದು ಸಮಿತಿಯು ಶಿಫಾರಸು ಮಾಡಲಿದೆ.

ಈ ಸಮಿತಿಯು ಸೇವಾ ಶುಲ್ಕಕ್ಕಾಗಿ "ದಿನದ ಸಮಯದ ದರ" ಮತ್ತು ಸೌರ ಸಮಯದಲ್ಲಿ ಚಾರ್ಜ್ ಮಾಡಲು ನೀಡಬೇಕಾದ ರಿಯಾಯಿತಿಯ ಬಗ್ಗೆ ಸಹ ಶಿಫಾರಸು ಮಾಡಲಿದೆ

Posted On: 07 NOV 2022 6:12PM by PIB Bengaluru

ವಿದ್ಯುತ್ ಸಚಿವಾಲಯವು 14.01.2022 ರಂದು ಎಲೆಕ್ಟ್ರಿಕ್ ವಾಹನಗಳಿಗೆ ಮೂಲಸೌಕರ್ಯವನ್ನು ಒದಗಿಸುವುದಕ್ಕಾಗಿ ಸಚಿವಾಲಯವು ಹೊರಡಿಸಿದ ಪರಿಷ್ಕೃತ ಏಕೀಕೃತ ಮಾರ್ಗಸೂಚಿಗಳು ಮತ್ತು ಮಾನದಂಡಗಳಿಗೆ ತಿದ್ದುಪಡಿಗಳನ್ನು ಪ್ರಕಟಿಸಿದೆ.

ಈ ಮಾರ್ಗಸೂಚಿಗಳಲ್ಲಿ ಈ ಕೆಳಗಿನ ಸೇರ್ಪಡೆಗಳನ್ನು ಮಾಡಲು ನಿರ್ಧರಿಸಲಾಗಿದೆ:

(ಎ) 3ನೇ ಶೀರ್ಷಿಕೆಯ ಅಡಿಯಲ್ಲಿ ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯ (ಪಿಸಿಐ) ಅವಶ್ಯಕತೆಗಳು", ಪರಿಚ್ಛೇದ 3.1 (xi) ಅನ್ನು ಈ ಕೆಳಗಿನಂತೆ ಸೇರಿಸಲಾಗಿದೆ:

xi. ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ದಿನದ ಸಮಯದ ದರ ಮತ್ತು ಸೌರ ಗಂಟೆಗಳಿಗೆ ರಿಯಾಯಿತಿಯೊಂದಿಗೆ ಸೇವಾ ಶುಲ್ಕಗಳ ಪೂರ್ವಪಾವತಿ ಸಂಗ್ರಹದ ವೈಶಿಷ್ಟ್ಯವನ್ನು ಹೊಂದಿರುತ್ತವೆ.

(ಬಿ) "8" ನೇ ಶೀರ್ಷಿಕೆಯಡಿಯಲ್ಲಿ ಪಿಸಿಎಸ್ ನಲ್ಲಿ ಸೇವಾ ಶುಲ್ಕಗಳು", ಪರಿಚ್ಛೇದ 8.3 ಅನ್ನು ಈ ಕೆಳಗಿನಂತೆ ಸೇರಿಸಲಾಗಿದೆ:

8.3 ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರದ (ಸಿಇಎ) ಅಡಿಯಲ್ಲಿನ ಸಮಿತಿಯು ಈ ಮೇಲಿನ ಪರಿಚ್ಛೇದ 8.2 ರ ಅಡಿಯಲ್ಲಿ ವಿಧಿಸಬೇಕಾದ ಸೇವಾ ಶುಲ್ಕಗಳ ಗರಿಷ್ಠ ಮಿತಿಯನ್ನು ರಾಜ್ಯ ಸರ್ಕಾರಕ್ಕೆ ನಿಯಮಿತವಾಗಿ ಶಿಫಾರಸು ಮಾಡುತ್ತದೆ. ಈ ಸಮಿತಿಯು ಸೇವಾ ಶುಲ್ಕಕ್ಕಾಗಿ "ದಿನದ ಸಮಯ ದರ"ವನ್ನು ಮತ್ತು ಸೌರ ಗಂಟೆಗಳಲ್ಲಿ ವಿಧಿಸಲು ನೀಡಬೇಕಾದ ರಿಯಾಯಿತಿಯನ್ನು ಸಹ ಶಿಫಾರಸು ಮಾಡುತ್ತದೆ.

*****(Release ID: 1874386) Visitor Counter : 174