ಪರಿಸರ ಮತ್ತು ಅರಣ್ಯ ಸಚಿವಾಲಯ
ಜಿ.ಆರ್.ಎ.ಪಿ. ಕುರಿತಂತೆ ಪರಿಶೀಲನಾ ಸಭೆ ನಡೆಸಿದ ಸಿ.ಎ.ಕ್ಯು.ಎಂ.
ತಕ್ಷಣದಿಂದಲೇ ಜಾರಿಗೆ ಬರುವಂತೆ ಇಡೀ ಎನ್.ಸಿ.ಆರ್.ನಲ್ಲಿ ಜಿ.ಆರ್.ಎ.ಪಿ IVನೇ ಹಂತ ತೆರವು
ಜಿ.ಆರ್.ಎ.ಪಿ.ಯ1 ಮತ್ತು ಹಂತ 2 ರ ಜೊತೆಗೆ ಮೂರನೇ ಹಂತದ ಮುಂದುವರಿಕೆ
ಮುಂಬರುವ ದಿನಗಳಲ್ಲಿ ದೆಹಲಿಯ ಒಟ್ಟಾರೆ ಗಾಳಿಯ ಗುಣಮಟ್ಟ ಸುಧಾರಿಸುವ ಸಾಧ್ಯತೆ
Posted On:
06 NOV 2022 7:34PM by PIB Bengaluru
ಶ್ರೇಣೀಕೃತ ಸ್ಪಂದನೆಯ ಕ್ರಿಯಾ ಯೋಜನೆ - ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ (ಜಿಆರ್.ಎ.ಪಿ)ಯ ನಾಲ್ಕನೇ ಹಂತವನ್ನು ಅಳವಡಿಸಿದ ನಂತರ ಕಳೆದ ಕೆಲವು ದಿನಗಳಲ್ಲಿ ದೆಹಲಿ-ಎನ್.ಸಿ.ಆರ್.ನಲ್ಲಿ ಒಟ್ಟಾರೆ ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ, ಎನ್.ಸಿ.ಆರ್ ಮತ್ತು ಅಕ್ಕಪಕ್ಕದ ಪ್ರದೇಶಗಳ ವಾಯು ಗುಣಮಟ್ಟ ನಿರ್ವಹಣಾ ಆಯೋಗದ (ಸಿಎಕ್ಯೂಎಂ) ಜಿಆರ್.ಎ.ಪಿ ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವ ಉಪ ಸಮಿತಿಯು ಇಂದು 03.11.2022 ರಂದು ಇಡೀ ರಾಷ್ಟ್ರೀಯ ರಾಜಧಾನಿ ಪ್ರದೇಶ ಜಿ.ಆರ್.ಎ.ಪಿ.ಯಲ್ಲಿ ಜಾರಿಗೆ ತಂದ ಜಿ.ಆರ್.ಎ.ಪಿ. ನಾಲ್ಕನೇ ಹಂತದ ಅಡಿಯ ಕಠಿಣ ಕ್ರಮಗಳ ಬಳಿಕ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಭೆ ನಡೆಸಿತು.
ದೆಹಲಿ-ಎನ್.ಸಿ.ಆರ್.ನ ಒಟ್ಟಾರೆ ವಾಯು ಗುಣಮಟ್ಟ ನಿಯತಾಂಕಗಳನ್ನು ಸಮಗ್ರವಾಗಿ ಪರಿಶೀಲಿಸುವಾಗ, ಮುಂಬರುವ ದಿನಗಳಲ್ಲಿ ದೆಹಲಿ-ಎನ್.ಸಿ.ಆರ್. ಒಟ್ಟಾರೆ ಗಾಳಿಯ ಗುಣಮಟ್ಟದಲ್ಲಿ ಯಾವುದೇ ತೀವ್ರ ಕುಸಿತವನ್ನು ಐಎಂಡಿ / ಐಐಟಿಎಂ ಸೂಚಿಸದ ಕಾರಣ, ನಿರ್ಬಂಧಗಳನ್ನು ಸಡಿಲಿಸುವುದು ಮತ್ತು ಇಡೀ ಎನ್.ಸಿ.ಆರ್.ನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಜಿ.ಆರ್.ಎ.ಪಿ.ಯ ನಾಲ್ಕನೇ ಹಂತವನ್ನು ಹಿಂಪಡೆಯುವುದು ಒಳ್ಳೆಯದು ಎಂದು ಆಯೋಗವು ಅಭಿಪ್ರಾಯಪಟ್ಟಿತು. 03.11.2022 ರಂದು ನಡೆದ ಜಿ.ಆರ್.ಎ.ಪಿ..ಉಪ-ಸಮಿತಿಯು ತನ್ನ ಕೊನೆಯ ಸಭೆಯಲ್ಲಿ ಇಡೀ ಎನ್.ಸಿ.ಆರ್.ನಲ್ಲಿ ಜಿ.ಆರ್.ಎ.ಪಿ.ಯ ನಾಲ್ಕನೇ ಹಂತವನ್ನು ಅಳವಡಿಸಿತ್ತು ಮತ್ತು 06.11.2022 ರಂದು ಅದರ ಪರಿಣಾಮವನ್ನು ಪರಿಶೀಲಿಸಲು ನಿರ್ಧರಿಸಿತ್ತು.
ಜಿ.ಆರ್.ಎ.ಪಿ. ಉಪ ಸಮಿತಿಯು ತನ್ನ ಹಿಂದಿನ ಸಭೆಗಳಲ್ಲಿ ಅನುಕ್ರಮವಾಗಿ 05.10.2022, 19.10.2022, 29.10.2022 ಮತ್ತು 03.11.2022 ರಂದು ಜಿ.ಆರ್.ಎ.ಪಿ.ನ ಹಂತ 1, ಹಂತ 2, ಹಂತ 3 ಮತ್ತು ಹಂತ 4 ರ ಅಡಿಯಲ್ಲಿ ಕ್ರಮಗಳನ್ನು ಕೈಗೊಂಡಿತ್ತು. ಇಂದಿನ ಸಭೆಯಲ್ಲಿ ಉಪಸಮಿತಿಯು ಈ ಪ್ರದೇಶದಲ್ಲಿನ ವಾಯು ಗುಣಮಟ್ಟ ಸನ್ನಿವೇಶ ಮತ್ತು ದೆಹಲಿಯ ಹವಾಮಾನ ಪರಿಸ್ಥಿತಿಗಳು ಮತ್ತು ವಾಯು ಗುಣಮಟ್ಟ ಸೂಚ್ಯಂಕಕ್ಕಾಗಿ ಐಎಂಡಿ / ಐಐಟಿಎಂ ಮುನ್ಸೂಚನೆಗಳನ್ನು ಪರಿಶೀಲಿಸಿತು ಮತ್ತು ಈ ಕೆಳಗಿನಂತೆ ಗಮನಿಸಿತು:
i. ಎನ್.ಸಿ.ಆರ್.ನಲ್ಲಿ ಪ್ರತಿಕೂಲ ವಾಯು ಗುಣಮಟ್ಟ ಸನ್ನಿವೇಶದ ಮತ್ತಷ್ಟು ಹದಗೆಡದಂತೆ ತಡೆಯುವ ಉದ್ದೇಶದಿಂದ ಜಾರಿಗೆ ತರಲಾದ ತುರ್ತು ಸ್ಪಂದನೆ ಕ್ರಿಯಾ ಯೋಜನೆಯೇ ಜಿ.ಆರ್.ಎ.ಪಿ.
ii. ದೆಹಲಿ ಎಕ್ಯೂಐ 'ತೀವ್ರ +' ವರ್ಗ (ಎಕ್ಯೂಐ >450) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಎಕ್ಯೂಐ ಮುನ್ಸೂಚನೆಗಳ ಆಧಾರದ ಮೇಲೆ 03.11.2022 ರಂದು ಜಿ.ಆರ್.ಎ.ಪಿ ಹಂತ -4 ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. 2022 ರ ನವೆಂಬರ್ 5 ರಿಂದ 6 ರ ಸುಮಾರಿಗೆ ಈ ಮುನ್ಸೂಚನೆಗಳು ಗಮನಾರ್ಹ ಸುಧಾರಣೆಯನ್ನು ಕಂಡವು, ಆದ್ದರಿಂದ, ಉಪಸಮಿತಿಯು ಜಿ.ಆರ್.ಎ.ಪಿ.ಯ ನಾಲ್ಕನೇ ಹಂತವನ್ನು ಅನ್ವಯಿಸುವಾಗ, 2022ರ ನವೆಂಬರ್ 6 ರಂದು ಪರಿಸ್ಥಿತಿಯ ಪರಾಮರ್ಶಿಸಲು ನಿರ್ಧರಿಸಿತ್ತು.
iii. 2022 ರ ನವೆಂಬರ್ 6ರಂದು ದೆಹಲಿಯ ಸರಾಸರಿ ಎಕ್ಯೂಐ ಅನ್ನು 339 ('ಅತ್ಯಂತ ಕಳಪೆ' ವರ್ಗ) ಎಂದು ದಾಖಲಿಸಲಾಗಿದೆ, ಇದನ್ನು ಐಎಂಡಿ / ಐಐಟಿಎಂ ಸುಧಾರಣೆಯ ಮುನ್ಸೂಚನೆಯೊಂದಿಗೆ ಪುಷ್ಟೀಕರಿಸಲಾಗುತ್ತದೆ.
iv. ದೆಹಲಿಯ ಪ್ರಸ್ತುತ ಎಕ್ಯೂಐ ಮಟ್ಟವು ಸುಮಾರು 340 ರ ಆಸುಪಾಸಿನಲ್ಲಿರುವುದರಿಂದ ಇದು ಜಿ.ಆರ್.ಎ.ಪಿ. ಹಂತ -4 ಕ್ರಮಗಳನ್ನು (ದೆಹಲಿ ಎಕ್ಯೂಐ > 450) ಅನ್ವಯಿಸುವ ಮಿತಿಗಿಂತ ಸುಮಾರು 110 ಎಕ್ಯೂಐ ಪಾಯಿಂಟ್ ಗಳು ಮತ್ತು ಹಂತ -4 ರವರೆಗೆ ಎಲ್ಲಾ ಹಂತಗಳ ಅಡಿಯಲ್ಲಿ ತಡೆಗಟ್ಟುವ / ತಗ್ಗಿಸುವ / ನಿರ್ಬಂಧಿತ ಕ್ರಮಗಳು ನಡೆಯುತ್ತಿರುವುದರಿಂದ, ಎಕ್ಯೂಐನಲ್ಲಿ ಸುಧಾರಣೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಐಎಂಡಿ / ಐಐಟಿಎಂನ ಮುನ್ಸೂಚನೆಯು ಮತ್ತಷ್ಟು ತೀವ್ರ ಅವನತಿಯನ್ನು ಸೂಚಿಸುವುದಿಲ್ಲ.
v. ಜಿ.ಆರ್.ಎ.ಪಿ. ಹಂತ -4 ನಿರ್ಬಂಧಗಳ ವಿಚ್ಛಿದ್ರಕಾರಿ ಹಂತವಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಬಾಧ್ಯಸ್ಥರು ಮತ್ತು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ. ಜಿ.ಆರ್.ಎ.ಪಿ. ಹಂತ-4 ರಲ್ಲಿ ವಿಧಿಸಿರುವುದಕ್ಕಿಂತ ಹೆಚ್ಚಿನ ಕಠಿಣ ಕ್ರಮಗಳಿರುವುದಿಲ್ಲ, ಅದನ್ನು ವಾಯು ಗುಣಮಟ್ಟದ ಪರಿಸ್ಥಿತಿಯನ್ನು ಸುಧಾರಿಸಲು ತೆಗೆದುಕೊಳ್ಳಬೇಕಾಗುತ್ತದೆ.
ಮೇಲೆ ತಿಳಿಸಿದ ಅವಲೋಕನಗಳನ್ನು ಗಮನದಲ್ಲಿಟ್ಟುಕೊಂಡು, ಜಿ.ಆರ್.ಎ.ಪಿ. 4ನೇ ಹಂತದ ಅಡಿಯಲ್ಲಿನ ಕ್ರಮಗಳಿಗಾಗಿ ದಿನಾಂಕ 03.11.2022 ರಂದು ಹೊರಡಿಸಲಾದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ಜಿ.ಆರ್.ಎ.ಪಿ. ಉಪ-ಸಮಿತಿಯು ನಿರ್ಧರಿಸಿದೆ. ಇದಲ್ಲದೆ, ಎಕ್ಯೂಐ ಮಟ್ಟಗಳು 'ತೀವ್ರ' / 'ತೀವ್ರ +' ವರ್ಗಕ್ಕೆ ಮತ್ತಷ್ಟು ಜಾರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಜಿ.ಆರ್.ಎ.ಪಿ.ಯ ಹಂತ 1, ಹಂತ 2 ಮತ್ತು ಹಂತ 3 ರ ಅಡಿಯಲ್ಲಿ ಕ್ರಮಗಳನ್ನು ಅನ್ವಯಿಸಲಾಗುತ್ತದೆ ಮತ್ತು ಮೇಲ್ವಿಚಾರಣೆ ಮತ್ತು ಪರಿಶೀಲನೆಯನ್ನು ಇಡೀ ಎನ್.ಸಿ.ಆರ್.ನಲ್ಲಿ ಸಂಬಂಧಿಸಿದ ಎಲ್ಲಾ ಸಂಸ್ಥೆಗಳಿಂದ ಕಾರ್ಯಗತಗೊಳಿಸಲಾಗುತ್ತದೆ.
ಉಪ-ಸಮಿತಿಯು ವಾಯು ಗುಣಮಟ್ಟದ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಕಾಲಕಾಲಕ್ಕೆ ದಾಖಲಾದಂತೆ ವಾಯು ಗುಣಮಟ್ಟವನ್ನು ಅವಲಂಬಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ಈ ನಿಟ್ಟಿನಲ್ಲಿ ಐಎಂಡಿ / ಐಐಟಿಎಂ ಮಾಡಿದ ಮುನ್ಸೂಚನೆಗಳನ್ನು ಆಧರಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಇದಲ್ಲದೆ, ಆಯೋಗವು ಮತ್ತೊಮ್ಮೆ ಎನ್.ಸಿ.ಆರ್. ನಾಗರಿಕರಿಗೆ ಜಿ.ಆರ್.ಎ.ಪಿ.ಯನ್ನು ಅನುಷ್ಠಾನಗೊಳಿಸಲು ಸಹಕರಿಸುವಂತೆ ಮತ್ತು ಜಿ.ಆರ್.ಎ.ಪಿ. ಅಡಿಯಲ್ಲಿ ನಾಗರಿಕ ಸನ್ನದುಗಳಲ್ಲಿ ಉಲ್ಲೇಖಿಸಲಾದ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದೆ. ನಾಗರಿಕರಿಗೆ ಈ ಕೆಳಗಿನ ಸಲಹೆ ನೀಡಲಾಗಿದೆ:
• ಸ್ವಚ್ಛವಾದ ಪ್ರಯಾಣವನ್ನು ಆರಿಸಿ – ಕೆಲಸಕ್ಕೆ ಹೋಗಲು ವಾಹನ ಹಂಚಿಕೊಳ್ಳಿ ಅಥವಾ ಸಾರ್ವಜನಿಕ ಸಾರಿಗೆ ಬಳಸಿ ಅಥವಾ ನಡಿಗೆ ಅಥವಾ ಸೈಕಲ್ ಬಳಸಿ.
• ಯಾರ ಹುದ್ದೆಗಳು ಮನೆಯಿಂದ ಕಾರ್ಯ ನಿರ್ವಹಿಸಲು ಅನುಮತಿಸುತ್ತವೆಯೋ, ಆ ಜನರು ಮನೆಯಿಂದಲೇ ಕೆಲಸ ಮಾಡಬಹುದು.
• ಬಿಸಿಮಾಡುವ ಉದ್ದೇಶಕ್ಕಾಗಿ ಕಲ್ಲಿದ್ದಲು ಮತ್ತು ಕಟ್ಟಿಗೆಯನ್ನು ಬಳಸಬೇಡಿ.
• ವೈಯಕ್ತಿಕ ಮನೆ ಮಾಲೀಕರು ಮುಕ್ತ ಸ್ಥಳದಲ್ಲಿ ಕಟ್ಟಿಗೆಗೆ ಬೆಂಕಿ ಹಚ್ಚಿ ಚಳಿ ಕಾಯಿಸುವುದನ್ನು ತಪ್ಪಿಸಲು ಕಾವಲು ಸಿಬ್ಬಂದಿಗೆ ವಿದ್ಯುತ್ ಹೀಟರ್ ಗಳನ್ನು ಒದಗಿಸಬಹುದು.
• ಒಂದೇ ಪ್ರಯಾಣದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಿ. ಎಲ್ಲೆಲ್ಲಿಗೆ ನಡೆದು ಹೋಗಲು ಸಾಧ್ಯವೋ ಅಲ್ಲೆಲ್ಲಾ ನಡೆಯಿರಿ.
ಎನ್.ಸಿ.ಆರ್ ಮತ್ತು ಡಿಪಿಸಿಸಿಯ ಜಿ.ಆರ್.ಎ.ಪಿ. ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳ (ಪಿಸಿಬಿಗಳು) ಅಡಿಯಲ್ಲಿ ಕ್ರಮಗಳನ್ನು ಅನುಷ್ಠಾನಗೊಳಿಸಲು ಜವಾಬ್ದಾರರಾಗಿರುವ ವಿವಿಧ ಸಂಸ್ಥೆಗಳಿಗೆ ಎನ್.ಸಿ.ಆರ್.ನಲ್ಲಿ ಜಿ.ಆರ್.ಎ.ಪಿ. ಅಡಿಯಲ್ಲಿ ಹಂತ 1, ಹಂತ 2 ಮತ್ತು ಹಂತ 3 ರ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಜಿ.ಆರ್.ಎ.ಪಿ.ಯ ಪರಿಷ್ಕೃತ ವೇಳಾಪಟ್ಟಿಯು ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿದ್ದು, http://caqm.nic.in ಮೂಲಕ ನೋಡಬಹುದು
*****
(Release ID: 1874164)
Visitor Counter : 129