ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಗೌರವಾನ್ವಿತ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವರು ಶ್ರೀನಗರದ `ದೂರದರ್ಶನ ಕಾಶ್ಮೀರʼ ಕೇಂದ್ರಕ್ಕೆ ಭೇಟಿ ನೀಡಿ, ʻಸ್ವಚ್ಛತೆಗಾಗಿ ವಿಶೇಷ ಅಭಿಯಾನ 2.0ʼ ಅಡಿಯಲ್ಲಿ ಕೈಗೊಂಡ ಕೆಲಸಗಳ ಪ್ರಗತಿ ಸೇರಿದಂತೆ ಮಾಧ್ಯಮ ಘಟಕಗಳ ಕಾರ್ಯಕಲಾಪಗಳನ್ನು ಪರಿಶೀಲಿಸಿದರು

Posted On: 03 NOV 2022 3:45PM by PIB Bengaluru

 ಗೌರವಾನ್ವಿತ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ.ಎಲ್.ಮುರುಗನ್ ಅವರು 2022ರ ಅಕ್ಟೋಬರ್ 28 ರಂದು ಶ್ರೀನಗರದ ʻದೂರದರ್ಶನ ಕಾಶ್ಮೀರʼ(ಡಿಡಿಕೆ) ಕೇಂದ್ರಕ್ಕೆ ಭೇಟಿ ನೀಡಿದರು  ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿನ ಮಾಧ್ಯಮ ಘಟಕಗಳಾದ ʻಆಲ್ ಇಂಡಿಯಾ ರೇಡಿಯೋʼ, ʻದೂರದರ್ಶನʼ, ʻಪ್ರೆಸ್ ಇನ್‌ಫರ್ಮೇಶನ್‌ ಬ್ಯೂರೋʼ ಮತ್ತು ʻಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್‌ʼನ ಕಾರ್ಯಕಲಾಪಗಳನ್ನು ಪರಿಶೀಲಿಸಿದರು.

ʻದೂರದರ್ಶನʼದ ಉಪ ಮಹಾನಿರ್ದೇಶಕ (ಡಿಡಿಜಿ) ಶ್ರೀ ಎಸ್ ಸಂಜೀವ್, ʻಆಲ್‌ ಇಂಡಿಯಾ ರೇಡಿಯೋʼ ಉಪ ಮಹಾ ನಿರ್ದೇಶಕ ಶ್ರೀ ಅಜಯ್ ಕೆ ದೊಹಾರೆ, ʻಪಿಐಬಿʼ/ʻಸಿಬಿಸಿʼ ಹೆಚ್ಚುವರಿ ಮಹಾನಿರ್ದೇಶಕ (ಪ್ರದೇಶಿಕ)  ಶ್ರೀ ರಾಜಿಂದರ್ ಚೌಧರಿ ಹಾಗೂ ಮಾಧ್ಯಮ ಘಟಕಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮಾಧ್ಯಮ ಘಟಕಗಳ ಸೇವೆಗಳನ್ನು ಮತ್ತಷ್ಟು ಸುಧಾರಿಸುವಲ್ಲಿ ಎದುರಿಸಿದ ಅಡೆತಡೆಗಳು ಮತ್ತು ಸಾಧನೆಗಳ ಬಗ್ಗೆ ಪ್ರಸ್ತುತಿಗಳನ್ನು ಮಾಡಲಾಯಿತು.
ಗೌರವಾನ್ವಿತ ಸಚಿವರು ಕಾರ್ಯಕಲಾಪಗಳನ್ನು ಪರಾಮರ್ಶಿಸುವಾಗ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಸರಕಾರಿ ಕಾರ್ಯಕ್ರಮಗಳ ಮಾಹಿತಿ ಪ್ರಸರಣದ ವ್ಯಾಪ್ತಿಯನ್ನು ಸುಧಾರಿಸಲು ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

ಗೌರವಾನ್ವಿತ ಸಚಿವರ ಸಲಹೆ- ಸೂಚನೆಗಳಲ್ಲಿನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
 
1.    ಮಾಧ್ಯಮ ಘಟಕಗಳು ಭಾರತ ಸರಕಾರ ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯ ಪ್ರಾರಂಭಿಸಿದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಮತ್ತು ಈ ಅಭಿವೃದ್ಧಿ ಯೋಜನೆಗಳ ಫಲಾನುಭವಿಗಳಿಂದ ಪ್ರತಿಕ್ರಿಯೆಗಳೂ ಸೇರಿದಂತೆ ಒಟ್ಟಾರೆ ವರದಿಗಾರಿಕೆ ವ್ಯಾಪ್ತಿಯನ್ನು ಹೆಚ್ಚಿಸಬೇಕಿದೆ. 

2.    ಅಂತಹ ಅಭಿವೃದ್ಧಿ ಯೋಜನೆಗಳ ಫಲಿತಾಂಶಗಳಾಗಿರುವ ಕ್ಷೇತ್ರದ ಯಶೋಗಾಥೆಗಳನ್ನು ಎತ್ತಿ ತೋರಿಸಬೇಕಾಗಿದೆ

3.    ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಮತ್ತು ಅಂತಹ ಅಭಿವೃದ್ಧಿ ಚಟುವಟಿಕೆಗಳ ಫಲಿತಾಂಶದ ಪರಾಮರ್ಶೆಯ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದ ಕಾರ್ಯಕ್ರಮಗಳನ್ನು ರೂಪಿಸಬೇಕು.

4.    ಭಾರತ ಸರಕಾರವು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿವಿಧ ಇಲಾಖೆಗಳ ಸಚಿವರು ಸಕ್ರಿಯ ಅನುಸರಣೆಯ ಭಾಗವಾಗಿ ಮತ್ತು ಈ ಅಭಿವೃದ್ಧಿ ಚಟುವಟಿಕೆಗಳ ಪ್ರಗತಿ ಪರಿಶೀಲನೆಗಾಗಿ ಆಗಾಗ್ಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸರಕಾರದ ಉಪಕ್ರಮಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ಮಾಧ್ಯಮ ಘಟಕಗಳಿಗೆ ಸೂಚನೆ ನೀಡಲಾಯಿತು.

ಗೌರವಾನ್ವಿತ ಸಚಿವರು 2022ರ ಅಕ್ಟೋಬರ್ 2ರಿಂದ ಎಲ್ಲಾ ಮಾಧ್ಯಮ ಘಟಕಗಳು ಜಾರಿಗೆ ತಂದಿರುವ ʻಸ್ವಚ್ಛತೆಗಾಗಿ ವಿಶೇಷ ಅಭಿಯಾನ  2.0ʼ ರ ಅಡಿಯಲ್ಲಿ ಕೈಗೊಂಡ ಚಟುವಟಿಕೆಗಳ ಪ್ರಗತಿಯನ್ನು ಪ್ರಸ್ತುತಿಗಳ ಮೂಲಕ ಪರಿಶೀಲಿಸಿದರು. ನಂತರ ಅವರು ಕಚೇರಿ ಬ್ಲಾಕ್‌ಗಳು ಮತ್ತು ಆವರಣಗಳಿಗೆ ಭೇಟಿ ನೀಡುವ ಮೂಲಕ ದೂರದರ್ಶನ ಕೇಂದ್ರ ಶ್ರೀನಗರವನ್ನು ಪರಿಶೀಲಿಸಿದರು ಮತ್ತು ಸ್ವಚ್ಛತಾ ಚಟುವಟಿಕೆಗಳನ್ನು ಮತ್ತಷ್ಟು ಸುಧಾರಿಸಲು ಮತ್ತು ನಿರ್ವಹಿಸಲು ಸಲಹೆ-ಸೂಚನೆಗಳನ್ನು ನೀಡಿದರು.

https://static.pib.gov.in/WriteReadData/userfiles/image/image0016I86.jpg

https://static.pib.gov.in/WriteReadData/userfiles/image/image0026FU3.jpg

https://static.pib.gov.in/WriteReadData/userfiles/image/image003MQXE.jpg

https://static.pib.gov.in/WriteReadData/userfiles/image/image004XCW0.jpg

*****


(Release ID: 1873714)
Read this release in: English , Urdu , Hindi , Tamil , Telugu