ಉಕ್ಕು ಸಚಿವಾಲಯ
azadi ka amrit mahotsav

ವಿಶೇಷ ಅಭಿಯಾನ 2.0 ಅದ್ಭುತ ಯಶಸ್ವಿಗೊಳಿಸಿದ ಉಕ್ಕಿನ ಸಚಿವಾಲಯವು


43841 ಭೌತಿಕ ಕಡತಗಳ ವಿಲೇವಾರಿ ಮತ್ತು 4947 ಎಲೆಕ್ಟ್ರಾನಿಕ್ ಕಡತಗಳ ಮುಕ್ತಾಯ

ಲೋಹ ಮತ್ತು ಲೋಹವಲ್ಲದ ರದ್ದಿ ವಿಲೇವಾರಿಯಿಂದ ಉಕ್ಕು ಸಚಿವಾಲಯಗಳ 37722 ಚದರ ಅಡಿ ಜಾಗ ತೆರವು

Posted On: 03 NOV 2022 1:43PM by PIB Bengaluru

ಉಕ್ಕಿನ ಸಚಿವಾಲಯ ಹಾಗೂ ಅದರಡಿ ಬರುವ  7 ಸಾರ್ವಜನಿಕ ವಲಯದ ಕಂಪನಿಗಳು ಅಂದರೆ ಎಸ್‌ಎಐಎಲ್ , ಆರ್ ಐಎನ್ ಎಲ್, ಎನ್ ಎಂಡಿಸಿ, ಎಂಒಐಎಲ್, ಎಂಇಸಿಒಎನ್, ಕೆಐಒಸಿಎಲ್ ಮತ್ತು ಎಂಎಸ್ ಟಿಸಿ ಗಳು 2022ರ ಅಕ್ಟೋಬರ್ 2 ರಿಂದ 2022ರ ಅಕ್ಟೋಬರ್ 31ರವರೆಗೆ ನಡೆದ "ಬಾಕಿ ಇರುವ  ವಿಷಯಗಳ ವಿಲೇವಾರಿಗಾಗಿ ಕೈಗೊಂಡ ವಿಶೇಷ ಅಭಿಯಾನ 2.0 "(ಎಸ್ ಸಿಡಿಪಿಎಂ 2.0)" ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು.  ಉದ್ಯೋಗಿಗಳ ನಡುವೆ ನಿಯಮಿತ ಚಟುವಟಿಕೆಗಳಾಗಿ ಸ್ವಚ್ಛತಾ ಮತ್ತು ದಾಖಲೆ ನಿರ್ವಹಣೆಯನ್ನು ಸಾಂಸ್ಥಿಕಗೊಳಿಸುವುದು ಮತ್ತು ಬಾಕಿಯನ್ನು ತಗ್ಗಿಸುವುದು, ಜೊತೆಗೆ ಸಚಿವಾಲಯಕ್ಕೆ ಸಂಬಂಧಿಸಿದ ಸರ್ಕಾರಿ ವ್ಯವಹಾರದ ಪ್ರಮುಖ ವಿಷಯಗಳನ್ನು ಸಕಾಲಿಕವಾಗಿ ವಿಲೇವಾರಿ ಮಾಡಲು ಆಂತರಿಕ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಬಲಪಡಿಸುವ ಉದ್ದೇಶವನ್ನು ಅಭಿಯಾನ ಹೊಂದಿತ್ತು.

2022ರ ಸೆಪ್ಟೆಂಬರ್ 14 ರಿಂದ 30ರವರೆಗೆ ಆರಂಭವಾದ ಅಭಿಯಾನದ ತಯಾರಿ ಹಂತದಲ್ಲಿ ಅಧಿಕಾರಿಗಳನ್ನು ಸಂವೇದನಾಶೀಲಗೊಳಿಸಲು, ತಳಮಟ್ಟದ ಕಾರ್ಯಕರ್ತರನ್ನು ಸಜ್ಜುಗೊಳಿಸಲು, ಪ್ರವೃತ್ತಿಗಳನ್ನು ಗುರುತಿಸಲು, ಅಭಿಯಾನದ ಸ್ಥಳಗಳನ್ನು ಅಂತಿಮಗೊಳಿಸಲು, ರದ್ದಿ ( ಸ್ಕ್ರ್ಯಾಪ್) ಇತ್ಯಾದಿ ಅನಗತ್ಯ ವಸ್ತುಗಳನ್ನು ಗುರುತಿಸಲು ಬಳಸಲಾಯಿತು.

ಅಭಿಯಾನದ ಪ್ರಮುಖ ಕ್ಷೇತ್ರಗಳೆಂದರೆ: ರದ್ದಿ (ಸ್ಕ್ರ್ಯಾಪ್) , ಪೀಠೋಪಕರಣಗಳು, ಕಾಗದ ಪತ್ರಗಳು ಮತ್ತು ಇ-ತ್ಯಾಜ್ಯವನ್ನು ಮರುಬಳಕೆ ಮಾಡಲು ಮತ್ತು ಸ್ವಚ್ಛತೆಯ ಚಟುವಟಿಕೆಗಳನ್ನು ಕೈಗೊಳ್ಳಲು ಇ-ತ್ಯಾಜ್ಯವನ್ನು ಮಾರಾಟ ಮಾಡುವುದು, ದಾಖಲೆ ನಿರ್ವಹಣೆ ಅಭ್ಯಾಸಗಳು, ವಿಐಪಿ ಉಲ್ಲೇಖಗಳ ಬಾಕಿಯನ್ನು ಲಿಕ್ವಿಡೇಟ್  ಮಾಡುವುದು, ಐಎಂಸಿ ಉಲ್ಲೇಖಗಳು, ಪಿಎಂಒ/ರಾಜ್ಯ ಸರ್ಕಾರದ ಉಲ್ಲೇಖಗಳು, ಸಾರ್ವಜನಿಕ ಕುಂದುಕೊರತೆಗಳು, ಪಿಜಿ ಮನವಿಗಳು, ಇತ್ಯಾದಿ. ಉಕ್ಕು ಸಚಿವರು (ಎಚ್ ಎಸ್ ಎಂ), ಉಕ್ಕು ಖಾತೆ ರಾಜ್ಯ ಸಚಿವರು ಮತ್ತು ಉಕ್ಕಿನ ಕಾರ್ಯದರ್ಶಿಯವರ ಮಾರ್ಗದರ್ಶನದಲ್ಲಿ ಅಭಿಯಾನ ಮುನ್ನಡೆಸಲಾಯಿತು ಅಭಿಯಾನದ ಸಿದ್ಧತೆ ಮತ್ತು ಅನುಷ್ಠಾನವನ್ನು ಎಚ್ ಎಸ್ ಎಂ, ಎಂಒಎಸ್ (ಉಕ್ಕು), ಕಾರ್ಯದರ್ಶಿ (ಉಕ್ಕು) ಮತ್ತು ಇತರ ಹಿರಿಯ ಅಧಿಕಾರಿಗಳು ನಾನಾ ಮಹಡಿಗಳು ಮತ್ತು ವಿಭಾಗಗಳು/ಕೋಣೆಗಳ ದಿಢೀರ್ ತಪಾಸಣೆಗಳ ಮೂಲಕ ನಿಯಮಿತವಾಗಿ ಪರಿಶೀಲಿಸಿದರು. ಉಕ್ಕು ಸಚಿವರು ಮತ್ತು ಎಂಒಎಸ್ (ಉಕ್ಕು) ಅವರು ನವದೆಹಲಿಯ ಎಸ್‌ಎಐಎಲ್ ನ ಕೇಂದ್ರ ಕಚೇರಿ ಸೇರಿದಂತೆ ಉದ್ಯೋಗ ಭವನ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತಾ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಸಚಿವಾಲಯದ ಹಿರಿಯ ಅಧಿಕಾರಿಗಳು ದೆಹಲಿಯಲ್ಲಿರುವ ಸಿಪಿಎಸ್ ಇ  ಕಚೇರಿಗಳಿಗೆ ಭೇಟಿ ನೀಡಿದರು ಮತ್ತು ಅಭಿಯಾನದ ಮಾನದಂಡಗಳು, ಸಿದ್ಧತೆ ಮತ್ತು ಜಾರಿಯನ್ನು ಪರಿಶೀಲಿಸಿದರು.

ಅಭಿಯಾನದ ಸಮಯದಲ್ಲಿ, ಉಕ್ಕು ಸಿಪಿಎಸ್‌ಇ ಗಳು ಲೋಹ ಮತ್ತು ಲೋಹವಲ್ಲದ ರದ್ದು (ಸ್ಕ್ರ್ಯಾಪ್), ಕಾಗದ, ಇ-ತ್ಯಾಜ್ಯ ಇತ್ಯಾದಿಗಳ ವಿಲೇವಾರಿಯಿಂದ 37722 ಚದರ ಅಡಿ ಜಾಗವನ್ನು ಮುಕ್ತಗೊಳಿಸಿವೆ ಮತ್ತು ಅಂದಾಜು 394 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿವೆ. ಅಲ್ಲದೆ, ಸಚಿವಾಲಯದಲ್ಲಿ 568 ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿದ್ದು, 0.80 ಲಕ್ಷ ರೂ. ಆದಾಯಗಳಿಸಿದೆ. ಜೊತೆಗೆ, 55800 ಭೌತಿಕ ಕಡತಗಳು ಮತ್ತು 7980 ಇ-ಕಡತಗಳ ಆರಂಭಿಕ ಗುರಿಗೆ ಬದಲಾಗಿ, 58082 ಭೌತಿಕ ಕಡತಗಳು ಮತ್ತು 10258 ಇ-ಫೈಲ್‌ಗಳನ್ನು ಪರಿಶೀಲಿಸಲಾಗಿದೆ. ಕನಿಷ್ಠ 43841 ಭೌತಿಕ ಕಡತಗಳನ್ನು ತೆಗೆದುಹಾಕಲಾಗಿದೆ ಮತ್ತು 4947 ಎಲೆಕ್ಟ್ರಾನಿಕ್ ಕಡತ ಗಳನ್ನು ಮುಕ್ತಾಯಗೊಳಿಸಲಾಗಿದೆ. ಅಭಿಯಾನದ ಸಮಯದಲ್ಲಿ 237 ಸ್ವಚ್ಛತಾ ಅಭಿಯಾನಗಳ ಗುರಿ ಇತ್ತು, ಅದರ ಬದಲಿಗೆ 278 ಸ್ವಚ್ಛತಾ ಅಭಿಯಾನಗಳನ್ನು ಸಚಿವಾಲಯ ಮತ್ತು ಅದರ ಸಿಪಿಎಸ್ ಇ ಗಳು ನಡೆಸಿವೆ.  ಅಲ್ಲದೆ, ಹೆಚ್ಚುವರಿಯಾಗಿ 114 ಪಿಜಿ ಮೇಲ್ಮನವಿಗಳು ಅಥವಾ ಕುಂದುಕೊರತೆಗಳು, 12 ಎಂಪಿ ಉಲ್ಲೇಖಗಳು, 8 ಪಿಎಂಒ ಉಲ್ಲೇಖಗಳು ಮತ್ತು 2 ಐಎಂಸಿ ಉಲ್ಲೇಖಗಳನ್ನು ಇತ್ಯರ್ಥಪಡಿಸಲಾಗಿದೆ. ವಿಶೇಷ ಅಭಿಯಾನದ ಸಮಯದಲ್ಲಿ ಉಕ್ಕಿನ ಸಿಪಿಎಸ್ ಇ ಗಳಿಂದ ಏಳು ನಿಯಮಗಳು ಅಥವಾ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಲಾಗಿದೆ.

ವಿಶೇಷ ಅಭಿಯಾನ 2.0 ವ್ಯಾಪಕ ಮಾಧ್ಯಮ ಪ್ರಚಾರ ಪಡೆದುಕೊಂಡಿದೆ.

 

ಈ ಅಭಿಯಾನವು 25 ಕ್ಕೂ ಅಧಿಕ ಟ್ವೀಟ್‌ಗಳು ಮತ್ತು 250 ರಿಟ್ವೀಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ರೀತಿಯಲ್ಲಿ ಪ್ರಚಾರವನ್ನು ಪಡೆಯಿತು. ಉಕ್ಕು ಸಚಿವಾಲಯ ಮತ್ತು ಅದರ ಸಿಪಿಎಸ್‌ಇಗಳು ಸಾರ್ವಜನಿಕ ಜಾಗೃತಿ ಮೂಡಿಸಲು ಮತ್ತು "ಸ್ವಚ್ಛತೆ ದೇವರಿಗಿಂದ ಮಿಗಿಲಾದುದು" ಎಂಬ ಗಾಂಧೀಜಿಯವರ ದೂರದೃಷ್ಟಿಗೆ ಒತ್ತು ನೀಡಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವು.

ಅಭಿಯಾನದ ಚಿತ್ರಗಳು

ಸಚಿವಾಲಯ ಮತ್ತು ಸಿಪಿಎಸ್‌ಇ ಗಳಲ್ಲಿ ಸ್ವಚ್ಛತಾ ಅಭಿಯಾನದ ಮೊದಲು ಮತ್ತು ನಂತರದ ಚಿತ್ರಗಳು:

ಅಭಿಯಾನದ ಆರಂಭದಲ್ಲಿ ವಿವಿಧ ಮಾನದಂಡಗಳಿಗೆ ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು ಸಚಿವಾಲಯವು ಸಾಧ್ಯವಾಗಲಿಲ್ಲ ಆದರೆ ಗುರಿಗಳನ್ನು ಮೀರಿದೆ, ವಿಶೇಷವಾಗಿ ಸ್ವಚ್ಛತಾ ಅಭಿಯಾನಗಳ ಸಂಖ್ಯೆ ಮತ್ತು ಹಳೆಯ ಕಡತಗಳ ದಾಖಲು ಮತ್ತು ಅವುಗಳ ವಿಲೇವಾರಿ ಮಾಡಲಾಗಿದೆ. ಉಕ್ಕು ಸಚಿವರು, ರಾಜ್ಯ ಸಚಿವರು (ಉಕ್ಕು), ಸಚಿವಾಲಯದ ಹಿರಿಯ ಅಧಿಕಾರಿಗಳ ಸಮರ್ಥ ಮಾರ್ಗದರ್ಶನದಲ್ಲಿ ಮತ್ತು ಸಚಿವಾಲಯದ ಅಡಿಯಲ್ಲಿ ಸಿಪಿಎಸ್‌ಇ ಗಳು ಸೇರಿದಂತೆ ಅಧಿಕಾರಿಗಳು ಮತ್ತು ನೌಕರರ ಸಕ್ರಿಯ ಸಹಕಾರದ  ಅಭಿಯಾನದ ಉದ್ದೇಶಗಳು ಈಡೇರಿವೆ. ಸಚಿವಾಲಯದ ವಿಶೇಷ ಅಭಿಯಾನವು ದೇಶಾದ್ಯಂತ ಇರುವ ಸಿಪಿಎಸ್‌ಇಗಳ ಉಪಸ್ಥಿತಿಯಿಂದಾಗಿ ಅದರ ಕಚೇರಿಗಳು, ಘಟಕಗಳು, ಗಣಿಗಳು, ಟೌನ್‌ಶಿಪ್‌ಗಳು ಇತ್ಯಾದಿಗಳೊಂದಿಗೆ ದೇಶದ ಅತ್ಯಂತ ದೂರದ ಪ್ರದೇಶಗಳನ್ನು ತಲುಪಿದೆ. ಅಭಿಯಾನದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯ ಪರಿಣಾಮವಾಗಿ ಮತ್ತು ವಿವಿಧ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಕಚೇರಿ ಆವರಣದಲ್ಲಿ ಮತ್ತು ಸುತ್ತಮುತ್ತಲಿನ ಪರಿಸರ ಸ್ನೇಹಿ ವಾತಾವರಣದ ಸೃಷ್ಟಿ ಮತ್ತು ನಿರ್ವಹಣೆಗಾಗಿ ನಡೆಸಿದ ಚಟುವಟಿಕೆಗಳಿಂದಾಗಿ ಸಚಿವಾಲಯವು ವಿಶೇಷ ಅಭಿಯಾನ 2.0 ರ ಉದ್ದೇಶ ಸಾಧಿಸಲು ಯಶಸ್ವಿಯಾಗಿದೆ ಮತ್ತು ಸಚಿವಾಲಯ ಸ್ವಚ್ಛತಾ ಅಭಿಯಾನದ ಉದ್ದೇಶಗಳಿಗೆ ಅನುಗುಣವಾಗಿ ಕಚೇರಿಗಳು ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತದೆ.

*****


(Release ID: 1873580) Visitor Counter : 139


Read this release in: English , Urdu , Hindi , Telugu