ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತಿನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಪರೇಡ್ 2022 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 31 OCT 2022 12:19PM by PIB Bengaluru

ಕೆವಾಡಿಯಾದ ಏಕತಾ ನಗರದಲ್ಲಿ ಏಕತಾ ಓಟದಲ್ಲಿ ಭಾಗವಹಿಸಿರುವ ಪೊಲೀಸ್ ಇಲಾಖೆಯ ನನ್ನ ಸಹೋದ್ಯೋಗಿಗಳೆ, ಎನ್‌ಸಿಸಿ ಕೆಡೆಟ್‌ಗಳು, ಕಲಾವಿದರು, ಶಾಲಾ ವಿದ್ಯಾರ್ಥಿಗಳು, ದೇಶಾದ್ಯಂತ ಇರುವ ನನ್ನ ಸಹೋದರ, ಸಹೋದರಿಯರೆ ಮತ್ತು ಇಲ್ಲಿ ನೆರೆದಿರುವ ಇತರೆ ಗಣ್ಯರು ಮತ್ತು ದೇಶವಾಸಿಗಳೆ!

ನಾನು ಏಕ್ತಾ ನಗರದಲ್ಲಿದ್ದೇನೆ, ಆದರೆ ನನ್ನ ಮನಸ್ಸು ಮೋರ್ಬಿ ಸಂತ್ರಸ್ತರ ಜೊತೆಗಿದೆ. ನನ್ನ ಜೀವನದಲ್ಲಿ ನಾನು ಅಂತಹ ನೋವನ್ನು ಅಪರೂಪವಾಗಿ ಅನುಭವಿಸಿದ್ದೇನೆ. ಒಂದು ಕಡೆ ನೋವಿನಿಂದ ತುಂಬಿದ ಹೃದಯ, ಮತ್ತೊಂದು ಕಡೆ ಕರ್ಮ ಮತ್ತು ಕರ್ತವ್ಯದ ಹಾದಿ. ಕರ್ತವ್ಯದ ಹಾದಿಯಲ್ಲಿ ನನ್ನ ಜವಾಬ್ದಾರಿಗಳ ಭಾಗವಾಗಿ ನಾನು ನಿಮ್ಮ ನಡುವೆ ಇದ್ದೇನೆ. ಆದರೆ ನನ್ನ ಮನಸ್ಸು ನಿಜವಾಗಿಯೂ ಆ ನೊಂದ ಕುಟುಂಬಗಳ ಜೊತೆಗಿದೆ.

ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಅತೀವ ಸಂತಾಪ ಸೂಚಿಸುತ್ತೇನೆ. ದುಃಖದ ಈ ಘಳಿಗೆಯಲ್ಲಿ ಸರಕಾರ ಎಲ್ಲ ರೀತಿಯಲ್ಲೂ ಸಂತ್ರಸ್ತ ಕುಟುಂಬಗಳ ಜತೆಗಿದೆ. ಗುಜರಾತ್ ಸರ್ಕಾರ ನಿನ್ನೆ ಸಂಜೆಯಿಂದ ಸಂಪೂರ್ಣ ಶಕ್ತಿ, ಸಾಮರ್ಥ್ಯದೊದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಕೇಂದ್ರ ಸರ್ಕಾರವೂ ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ಅಗತ್ಯ ನೆರವು ನೀಡುತ್ತಿದೆ. ರಕ್ಷಣಾ ಕಾರ್ಯದಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಭೂಸೇನೆ ಮತ್ತು ವಾಯುಪಡೆಯ ಸಿಬ್ಬಂದಿ ಕೂಡ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲೂ ನಿಗಾ ಇಡಲಾಗಿದೆ. ಜನರ ಸಮಸ್ಯೆಗಳನ್ನು ಕಡಿಮೆ ಮಾಡಲು ಆದ್ಯತೆ ನೀಡಲಾಗುತ್ತಿದೆ. ಗುಜರಾತಿನ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಅವರು ದುರ್ಘಟನೆಯ ಸುದ್ದಿ ತಿಳಿದ ನಂತರವೇ ನಿನ್ನೆ ರಾತ್ರಿ ಮೊರ್ಬಿ ತಲುಪಿದರು. ನಿನ್ನೆಯಿಂದ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಸಮಿತಿಯನ್ನೂ ರಚಿಸಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ಲೋಪವಾಗುವುದಿಲ್ಲ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ. ಇಂದಿನ ‘ರಾಷ್ಟ್ರೀಯ ಏಕತಾ ದಿವಸ್’ (ರಾಷ್ಟ್ರೀಯ ಏಕತಾ ದಿನ) ಕೂಡ ಈ ಕಷ್ಟದ ಸಮಯವನ್ನು ಒಗ್ಗಟ್ಟಿನಿಂದ ಎದುರಿಸಲು ಮತ್ತು ಕರ್ತವ್ಯದ ಹಾದಿಯಲ್ಲಿ ಉಳಿಯಲು ನಮಗೆ ಸ್ಫೂರ್ತಿ ನೀಡುತ್ತಿದೆ. ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಸರ್ದಾರ್ ಪಟೇಲ್ ಅವರ ತಾಳ್ಮೆ ಮತ್ತು ಪ್ರಾಮಾಣಿಕತೆಯ ಪಾಠಗಳನ್ನು ಸ್ವೀಕರಿಸಿ, ನಾವು ಕೆಲಸ ಮಾಡುವುದನ್ನು ಮುಂದುವರೆಸಿದ್ದೇವೆ, ಭವಿಷ್ಯದಲ್ಲಿಯೂ ಇದನ್ನು ಮುಂದುವರಿಸುತ್ತೇವೆ.

ಸ್ನೇಹಿತರೆ,

2022ರ 'ರಾಷ್ಟ್ರೀಯ ಏಕತಾ ದಿವಸ್' ಬಹಳ ವಿಶೇಷವಾದ ಸಂದರ್ಭವಾಗಿದೆ. ನಮ್ಮ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ವರ್ಷವಿದು. ನಾವು ಹೊಸ ನಿರ್ಣಯಗಳೊಂದಿಗೆ ಮುಂದುವರಿಯುತ್ತಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ನಡೆದುಕೊಂಡು ಮುಂದೆ ಸಾಗಿದಾಗ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದೆಂಬುದನ್ನು ಇಂದು ಏಕತಾನಗರದ ಓಟವೂ(ಮೆರವಣಿಗೆ) ಮನದಟ್ಟು ಮಾಡುತ್ತಿದೆ. ಇಂದು ನಾಡಿನ ಕೆಲವು ಶ್ರೇಷ್ಠ ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಅವರು ಭಾರತದ ಅಪರೂಪದ ನೃತ್ಯಗಳನ್ನು ಪ್ರದರ್ಶಿಸಬೇಕಿತ್ತು. ಆದರೆ ನಿನ್ನೆ ನಡೆದ ಘಟನೆ ಎಷ್ಟು ದುರಂತ ಎಂದರೆ ಇಂದಿನ ಕಾರ್ಯಕ್ರಮದಲ್ಲಿ ಅದನ್ನು ಕೈಬಿಡಲಾಯಿತು. ಕಷ್ಟಪಟ್ಟು ಇಲ್ಲಿಗೆ ಬಂದ ಎಲ್ಲ ಕಲಾವಿದರ ನೋವು ನನಗೆ ಅರ್ಥವಾಗುತ್ತದೆ. ಆದರೆ ಅವರಿಗೆ ಪ್ರದರ್ಶನ ನೀಡಲು ಅವಕಾಶ ಸಿಗಲಿಲ್ಲ, ಆದರೆ ವಾಸ್ತವ ಪರಿಸ್ಥಿತಿ ದುಃಖದಾಯಕವಾಗಿದೆ.

ಸ್ನೇಹಿತರೆ,

ಕುಟುಂಬ, ಸಮಾಜ, ಗ್ರಾಮ, ರಾಜ್ಯ ಮತ್ತು ದೇಶದ ಪ್ರತಿಯೊಂದು ಹಂತದಲ್ಲೂ ಈ ಒಗ್ಗಟ್ಟು ಮತ್ತು ಶಿಸ್ತು ಅವಶ್ಯಕ. ಇಂದು ನಾವು ಇದನ್ನು ದೇಶದ ಮೂಲೆ ಮೂಲೆಯಲ್ಲಿ ನೋಡಬಹುದು. ಇಂದು ದೇಶಾದ್ಯಂತ ಏಕತೆಗಾಗಿ 75,000 ಓಟಗಳನ್ನು ಆಯೋಜಿಸಲಾಗಿದ್ದು, ಲಕ್ಷಗಟ್ಟಲೆ ಜನರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸಂಕಲ್ಪದಿಂದ ದೇಶದ ಜನತೆ ಸ್ಫೂರ್ತಿ ಪಡೆಯುತ್ತಿದ್ದಾರೆ. ಇಂದು ದೇಶದ ಜನರು 'ಅಮೃತ ಕಾಲ'ದ 'ಪಂಚ ಪ್ರಾಣ'(ಐದು ಸಂಕಲ್ಪಗಳು)ಗಳನ್ನು ಜಾಗೃತಗೊಳಿಸುವ ಸಲುವಾಗಿ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಪ್ರತಿಜ್ಞೆ(ಸಂಕಲ್ಪ)ಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಸ್ನೇಹಿತರೆ,
ಕೆವಾಡಿಯಾದ ಏಕತಾ ನಗರದ ಈ ಭೂಮಿಯಿಂದ ‘ರಾಷ್ಟ್ರೀಯ ಏಕತಾ ದಿವಸ್’ ಸಂದರ್ಭ ಮತ್ತು ಏಕತೆಯ ಪ್ರತಿಮೆಯು ಸ್ವಾತಂತ್ರ್ಯದ ಸಮಯದಲ್ಲಿ ಭಾರತಕ್ಕೆ ಸರ್ದಾರ್ ಪಟೇಲ್ ಅವರಂತಹ ನಾಯಕತ್ವವಿಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು ನಮಗೆ ನಿರಂತರವಾಗಿ ನೆನಪಿಸುತ್ತದೆ. 550ಕ್ಕೂ ಹೆಚ್ಚು ರಾಜಪ್ರಭುತ್ವವಿದ್ದ ರಾಜ್ಯಗಳು ಒಂದಾಗದಿದ್ದರೆ ಏನಾಗುತ್ತಿತ್ತು? ನಮ್ಮ ಹೆಚ್ಚಿನ ರಾಜರ ಸಂಸ್ಥಾನಗಳು ತ್ಯಾಗದ ಪರಾಕಾಷ್ಠೆಯನ್ನು ಪ್ರದರ್ಶಿಸದಿದ್ದರೆ ಮತ್ತು ಭಾರತ ಮಾತೆಯಲ್ಲಿ ನಂಬಿಕೆ ವ್ಯಕ್ತಪಡಿಸದಿದ್ದರೆ ಏನಾಗುತ್ತಿತ್ತು? ಇಂದು ನಾವು ನೋಡುತ್ತಿರುವ ಭಾರತವನ್ನು ನಾವು ಊಹಿಸಲೂ ಸಾಧ್ಯವಿರ

ಲಿಲ್ಲ. ಈ ಕಷ್ಟಕರವಾದ ಮತ್ತು ಅಸಾಧ್ಯವಾದ ಕೆಲಸವನ್ನು ಸರ್ದಾರ್ ಪಟೇಲ್ ಮಾತ್ರ ಸಾಧಿಸಿದರು.

ಸ್ನೇಹಿತರೆ,

ಸರ್ದಾರ್ ಸಾಹೇಬರ ಜನ್ಮ ದಿನಾಚರಣೆ ಮತ್ತು ‘ರಾಷ್ಟ್ರೀಯ ಏಕತಾ ದಿವಸ್’ ನಮಗೆ ಕೇವಲ ಒಂದು ಸಂದರ್ಭವಲ್ಲ. ಇದು ಭಾರತದ ಸಾಂಸ್ಕೃತಿಕ ಸಾಮರ್ಥ್ಯದ ಒಂದು ದೊಡ್ಡ ಹಬ್ಬವಾಗಿದೆ. ಏಕತೆ ಎಂಬುದು ಭಾರತಕ್ಕೆ ಯಾವತ್ತೂ ಕಡ್ಡಾಯವಾಗಿರಲಿಲ್ಲ. ಏಕತೆ ಯಾವಾಗಲೂ ಭಾರತದ ವಿಶೇಷತೆಯಾಗಿದೆ. ಏಕತೆಯ ಭಾವವು ಭಾರತದ ಮನಸ್ಸಿನಲ್ಲಿ, ನಮ್ಮ ಆಂತರಿಕ ಆತ್ಮದಲ್ಲಿ ಎಷ್ಟು ಆಳವಾಗಿ ಹುದುಗಿದೆ ಎಂದರೆ, ನಾವು ಈ ಗುಣವನ್ನು ಹೆಚ್ಚಾಗಿ ಅರಿತುಕೊಳ್ಳುವುದಿಲ್ಲ, ಕೆಲವೊಮ್ಮೆ ಅದು ಕಳೆದುಹೋಗುತ್ತದೆ. ಆದರೆ ನೀವೇ ನೋಡಿ, ದೇಶಕ್ಕೆ ಯಾವುದೇ ಪ್ರಕೃತಿ ವಿಕೋಪ ಸಂಭವಿಸಿದಾಗ, ಇಡೀ ದೇಶವು ಒಟ್ಟಿಗೆ ನಿಲ್ಲುತ್ತದೆ. ವಿಪತ್ತು ಉತ್ತರದಲ್ಲಾಗಲಿ ಅಥವಾ ದಕ್ಷಿಣದಲ್ಲಾಗಲಿ, ಪೂರ್ವದಲ್ಲಾಗಲಿ ಅಥವಾ ಪಶ್ಚಿಮದಲ್ಲಾಗಲಿ ಎಲ್ಲೇ ಸಂಭವಿಸಿದರೂ ಪರವಾಗಿಲ್ಲ. ಇಡೀ ಭಾರತವು ಸೇವೆ, ಸಹಕಾರ ಮತ್ತು ಸಹಾನುಭೂತಿಯೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ನಿನ್ನೆ ಏನಾಯಿತು ನೋಡಿ. ಮೊರ್ಬಿಯಲ್ಲಿ ಈ ದುರ್ಘಟನೆ ಸಂಭವಿಸಿತು. ಆದರೆ ಪ್ರತಿ ದೇಶವಾಸಿಗಳು ಸಂತ್ರಸ್ತರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಅಥವಾ ಅಪಘಾತದ ಸ್ಥಳದಲ್ಲಿ ಸ್ಥಳೀಯ ಜನರು ಸಾಧ್ಯವಿರುವ ಎಲ್ಲ ಸಹಾಯಕ್ಕಾಗಿ ಮುಂದೆ ಬಂದರು. ಅದು ಏಕತೆಯ ನಿಜವಾದ ಶಕ್ತಿಯಾಗಿದೆ. ನಮ್ಮ ಮುಂದೆ ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ದೊಡ್ಡ ಉದಾಹರಣೆಯೇ ಇದೆ. ಚಪ್ಪಾಳೆ ತಟ್ಟುವ ಭಾವನಾತ್ಮಕ ಒಗ್ಗಟ್ಟಿನಿಂದ ಪಡಿತರ, ಔಷಧಿ ಮತ್ತು ಲಸಿಕೆಗಳ ಬೆಂಬಲದವರೆಗೆ, ಇಡೀ ದೇಶವೇ ಒಂದು ಕುಟುಂಬದಂತೆ ಹೊರಹೊಮ್ಮಿತು. ಭಾರತದ ಸೇನೆಯು ಗಡಿಯಲ್ಲಿ ಅಥವಾ ಗಡಿಯುದ್ದಕ್ಕೂ ಶೌರ್ಯ ಪ್ರದರ್ಶಿಸಿದಾಗ, ಇಡೀ ದೇಶವು ಒಂದೇ ರೀತಿಯ ಭಾವನೆ ಮತ್ತು ಉತ್ಸಾಹವನ್ನು ಹೊಂದಿರುತ್ತದೆ. ಭಾರತದ ಯುವಕರು ಒಲಿಂಪಿಕ್ಸ್‌ನಲ್ಲಿ ತ್ರಿವರ್ಣ ಧ್ವಜದ ವೈಭವ ಹೆಚ್ಚಿಸಿದಾಗ, ಇಡೀ ದೇಶವೇ ಅದೇ ರೀತಿ ಸಂಭ್ರಮಿಸುತ್ತದೆ. ದೇಶ ಕ್ರಿಕೆಟ್ ಪಂದ್ಯ ಗೆದ್ದರೆ ದೇಶಾದ್ಯಂತ ಅದೇ ಉತ್ಸಾಹ. ನಾವು ಆಚರಣೆಯ ವಿಭಿನ್ನ ಸಾಂಸ್ಕೃತಿಕ ವಿಧಾನಗಳನ್ನು ಹೊಂದಿದ್ದೇವೆ, ಆದರೆ ಆತ್ಮವು ಒಂದೇ ಆಗಿರುತ್ತದೆ. ಈ ಏಕತೆ, ಒಗ್ಗಟ್ಟು ಮತ್ತು ಪರಸ್ಪರ ಬಾಂಧವ್ಯವು ಒಂದು ರಾಷ್ಟ್ರವಾಗಿ ಭಾರತದ ಬೇರುಗಳು ಎಷ್ಟು ಆಳವಾಗಿವೆ ಎಂಬುದನ್ನು ತೋರಿಸುತ್ತಿದೆ.

ಸ್ನೇಹಿತರೆ,

ಭಾರತದ ಈ ಏಕತೆಯು ನಮ್ಮ ಶತ್ರುಗಳನ್ನು ಕೆಣಕುತ್ತದೆ. ಇಂದಿನಿಂದಲ್ಲ, ನೂರಾರು ವರ್ಷಗಳ ಹಿಂದೆ ಗುಲಾಮಗಿರಿಯ ಸುದೀರ್ಘ ಅವಧಿಯಲ್ಲೂ ಭಾರತದ ಏಕತೆ ನಮ್ಮ ಶತ್ರುಗಳನ್ನು ವಿಚಲಿತಗೊಳಿಸಿದೆ. ಆದ್ದರಿಂದ, ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ನಮ್ಮ ದೇಶಕ್ಕೆ ಬಂದ ಎಲ್ಲಾ ವಿದೇಶಿ ಆಕ್ರಮಣಕಾರರು ಭಾರತದಲ್ಲಿ ವಿಭಜನೆಯನ್ನು ಸೃಷ್ಟಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿದರು. ಅವರು ಭಾರತವನ್ನು ವಿಭಜಿಸಲು ಮತ್ತು ಒಡೆಯಲು ಸಾಧ್ಯವಾದ ಎಲ್ಲವನ್ನೂ ಮಾಡಿದರು. ಆದರೂ ನಾವು ಅವರನ್ನು ಎದುರಿಸಬಲ್ಲೆವು, ಏಕೆಂದರೆ ಏಕತೆಯ ಅಮೃತವು ನಮ್ಮೊಳಗೆ ಜೀವಂತವಾಗಿತ್ತು, ಅದು ಹೊಳೆಯಂತೆ ಹರಿಯುತ್ತಿತ್ತು. ಆದರೆ ಆ ಅವಧಿ ದೀರ್ಘವಾಗಿತ್ತು. ಆ ವಿಷಪೂರಿತ ಯುಗದಿಂದ ದೇಶ ಇನ್ನೂ ನರಳುತ್ತಿದೆ. ನಾವು ವಿಭಜನೆಯನ್ನು ನೋಡಿದ್ದೇವೆ ಮತ್ತು ಭಾರತದ ಶತ್ರುಗಳು ಅದರ ಲಾಭ ಪಡೆಯುವುದನ್ನು ಸಹ ನೋಡಿದ್ದೇವೆ. ಅದಕ್ಕೇ ಇವತ್ತು ನಾವೂ ತುಂಬಾ ಜಾಗರೂಕರಾಗಿರಬೇಕು! ಹಿಂದಿನಂತೆ, ಭಾರತದ ಉದಯಕ್ಕೆ ಅಸಮಾಧಾನಗೊಂಡ ಶಕ್ತಿಗಳು ಇಂದಿಗೂ ಅಸ್ತಿತ್ವದಲ್ಲಿವೆ. ಅಂತಹ ಶಕ್ತಿಗಳು ಇಂದಿಗೂ ನಮ್ಮನ್ನು ಒಡೆಯಲು ಮತ್ತು ವಿಭಜಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತವೆ. ಜಾತಿಗಳ ಹೆಸರಿನಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಲು ವಿವಿಧ ಕಥನಗಳು ಸೃಷ್ಟಿಯಾಗುತ್ತವೆ. ಪ್ರಾಂತ್ಯಗಳ ಹೆಸರಿನಲ್ಲಿ ನಮ್ಮನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲವೊಮ್ಮೆ ಒಂದು ಭಾರತೀಯ ಭಾಷೆಯನ್ನು ಇನ್ನೊಂದು ಭಾರತೀಯ ಭಾಷೆಯ ಶತ್ರುವನ್ನಾಗಿ ಮಾಡಲು ಅಭಿಯಾನಗಳು ನಡೆಯುತ್ತವೆ. ದೇಶದ ಜನರು ಒಗ್ಗಟ್ಟಾಗಿ ಉಳಿಯದೆ ಪರಸ್ಪರ ಅಂತರ ಕಾಯ್ದುಕೊಳ್ಳುವ ರೀತಿಯಲ್ಲಿ ಇತಿಹಾಸವನ್ನು ತಿರುಚಲಾಗಿದೆ.

ಸಹೋದರ ಸಹೋದರಿಯರೇ,

ನಾವು ಇನ್ನೂ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ದೇಶವನ್ನು ದುರ್ಬಲಗೊಳಿಸುವ ಶಕ್ತಿಗಳು ಯಾವಾಗಲೂ ನಮ್ಮ ನೇರ ಶತ್ರುಗಳು ಎಂದು ತೋರಿಸಿಕೊಳ್ಳುವುದು ಅನಿವಾರ್ಯವಲ್ಲ. ಅನೇಕ ಬಾರಿ, ಈ ಶಕ್ತಿಯು ಗುಲಾಮಗಿರಿ ಮನಸ್ಥಿತಿಯ ರೂಪದಲ್ಲಿ ನಮ್ಮೊಳಗೆ ನೆಲೆಸುತ್ತದೆ. ಕೆಲವೊಮ್ಮೆ ಈ ಶಕ್ತಿಯು ನಮ್ಮ ವೈಯಕ್ತಿಕ ಹಿತಾಸಕ್ತಿಗಳ ಅನಗತ್ಯ ಲಾಭ ಪಡೆಯುತ್ತವೆ. ಕೆಲವೊಮ್ಮೆ ದೇಶ ವಿಭಜಿಸಲು ಮತ್ತು ದುರ್ಬಲಗೊಳಿಸಲು ತುಷ್ಟೀಕರಣ, ವಂಶ ಪಾರಂಪರ್ಯ, ದುರಾಸೆ ಮತ್ತು ಭ್ರಷ್ಟಾಚಾರವನ್ನು ಆಶ್ರಯಿಸುತ್ತದೆ. ಆದರೆ ನಾವು ಅವರಿಗೆ ಉತ್ತರಿಸಬೇಕಾಗಿದೆ. ಭಾರತ ಮಾತೆಯ ಮಗುವಾಗಿ ನಾವು ಅವರಿಗೆ ಉತ್ತರಿಸಬೇಕಾಗಿದೆ. ಭಾರತೀಯರಾಗಿ ನಾವು ಅವರಿಗೆ ಉತ್ತರಿಸಬೇಕಾಗಿದೆ. ನಾವು ಒಟ್ಟಿಗೆ ಮತ್ತು ಒಗ್ಗಟ್ಟಿನಿಂದ ಇರಬೇಕು. ತಾರತಮ್ಯದ ವಿಷಕ್ಕೆ ಈ ಏಕತೆಯ ಅಮೃತದಿಂದಲೇ ಉತ್ತರ ಕೊಡಬೇಕು. ಇದು ನವ ಭಾರತದ ನಿಜವಾದ ಶಕ್ತಿಯಾಗಿದೆ.

ಸ್ನೇಹಿತರೆ,

ಇಂದು ನಾನು 'ರಾಷ್ಟ್ರೀಯ ಏಕತಾ ದಿವಸ್' ಆಚರಿಸುತ್ತಿರುವ ಸಂದರ್ಭದಲ್ಲಿ ಸರ್ದಾರ್ ಸಾಹೇಬರು ನಮಗೆ ವಹಿಸಿದ ಜವಾಬ್ದಾರಿಯನ್ನು ಪುನರುಚ್ಚರಿಸಲು ಬಯಸುತ್ತೇನೆ. ದೇಶದ ಏಕತೆಯನ್ನು ಬಲಪಡಿಸುವ ಮತ್ತು ದೇಶವನ್ನು ಸಮಗ್ರ ರಾಷ್ಟ್ರವಾಗಿ ಬಲಪಡಿಸುವ ಜವಾಬ್ದಾರಿಯನ್ನೂ ಅವರು ನಮಗೆ ನೀಡಿದ್ದಾರೆ. ಪ್ರತಿಯೊಬ್ಬ ನಾಗರಿಕನು ಈ ಜವಾಬ್ದಾರಿಯನ್ನು ಸಮಾನ ಕರ್ತವ್ಯ ಪ್ರಜ್ಞೆಯಿಂದ ನಿರ್ವಹಿಸಿದಾಗ ಈ ಒಗ್ಗಟ್ಟು ಬಲಗೊಳ್ಳುತ್ತದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ ಎಂಬ ಮಂತ್ರವನ್ನು ಪಾಲಿಸುವ ಮೂಲಕ ಇಂದು ದೇಶವು ಅದೇ ಕರ್ತವ್ಯ ಪ್ರಜ್ಞೆಯೊಂದಿಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಇಂದು ದೇಶದಲ್ಲಿ ಯಾವುದೇ ತಾರತಮ್ಯವಿಲ್ಲದೆ ಏಕರೂಪದ ನೀತಿಗಳು ಪ್ರತಿಯೊಂದು ಮೂಲೆಯಲ್ಲಿ, ಪ್ರತಿ ಹಳ್ಳಿಯಲ್ಲಿ, ಪ್ರತಿಯೊಂದು ವರ್ಗಕ್ಕೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ಲಭ್ಯವಿದೆ. ಇಂದು ಗುಜರಾತಿನ ಸೂರತ್‌ನಲ್ಲಿ ಜನಸಾಮಾನ್ಯರು ಉಚಿತ ಲಸಿಕೆಗಳನ್ನು ಪಡೆಯುತ್ತಿದ್ದರೆ, ಅರುಣಾಚಲದ ಸಿಯಾಂಗ್‌ನಲ್ಲಿ ಉಚಿತ ಲಸಿಕೆಗಳು ಸಮಾನವಾಗಿ ಲಭ್ಯವಿದೆ. ಇಂದು ಏಮ್ಸ್(AIIMS) ಗೋರಖ್‌ಪುರದಲ್ಲಿದ್ದರೆ, ಅದು ಬಿಲಾಸ್‌ಪುರ, ದರ್ಬಂಗಾ, ಗುವಾಹಟಿ, ರಾಜ್‌ಕೋಟ್ ಮತ್ತು ದೇಶದ ಇತರ ನಗರಗಳಲ್ಲಿಯೂ ಇದೆ. ಇಂದು ಒಂದೆಡೆ ತಮಿಳುನಾಡಿನಲ್ಲಿ ಡಿಫೆನ್ಸ್ ಕಾರಿಡಾರ್ ನಿರ್ಮಾಣವಾಗುತ್ತಿದ್ದರೆ, ಉತ್ತರ ಪ್ರದೇಶದಲ್ಲೂ ರಕ್ಷಣಾ ಕಾರಿಡಾರ್ ವೇಗವಾಗಿ ಸಾಗುತ್ತಿದೆ. ಇಂದು ಈಶಾನ್ಯದಲ್ಲಿ ಅಡುಗೆ ಮನೆಯಲ್ಲಿ ಅಥವಾ ತಮಿಳುನಾಡಿನ ಯಾವುದೇ “ಸಮಯಲ್-ಅರೈ”ಯಲ್ಲಿ ಅಡುಗೆ ಮಾಡುತ್ತಿದ್ದರೆ, ಭಾಷೆ ಬೇರೆಯಾಗಿರಬಹುದು, ಆಹಾರವು ವಿಭಿನ್ನವಾಗಿರಬಹುದು, ಆದರೆ ತಾಯಿ ಮತ್ತು ಸಹೋದರಿಯರನ್ನು ಹೊಗೆಯಿಂದ ಮುಕ್ತಗೊಳಿಸುವ ಉಜ್ವಲ ಸಿಲಿಂಡರ್ ಎಲ್ಲೆಡೆ ಲಭ್ಯವಾಗುತ್ತಿದೆ. ನಮ್ಮ ಎಲ್ಲಾ ನೀತಿಗಳ ಉದ್ದೇಶ ಒಂದೇ ಆಗಿದೆ. ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದು, ಅವನನ್ನು ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವುದೇ ಆಗಿದೆ.

ಸ್ನೇಹಿತರೆ,

ನಮ್ಮ ದೇಶದ ಲಕ್ಷಾಂತರ ಜನರು ತಮ್ಮ ಮೂಲಭೂತ ಅಗತ್ಯಗಳಿಗಾಗಿ ದೀರ್ಘಕಾಲ ಕಾಯುತ್ತಿದ್ದರು. ಮೂಲಸೌಕರ್ಯಗಳ ಕೊರತೆಯ ಅಂತರ ಕಡಿಮೆಯಾದಷ್ಟೂ ಏಕತೆ ಬಲವಾಗುತ್ತದೆ. ಆದ್ದರಿಂದ, ದೇಶವು ಶುದ್ಧತ್ವ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಯೋಜನೆಯ ಲಾಭ ಪ್ರತಿಯೊಬ್ಬ ಫಲಾನುಭವಿಗೂ ತಲುಪಬೇಕು ಎಂಬುದು ಸರ್ಕಾರದ ಗುರಿಯಾಗಿದೆ. ಆದ್ದರಿಂದ, ಇಂದು ಎಲ್ಲರಿಗೂ ವಸತಿ, ಎಲ್ಲರಿಗೂ ಡಿಜಿಟಲ್ ಸಂಪರ್ಕ, ಎಲ್ಲರಿಗೂ ಶುದ್ಧ ಅಡುಗೆ, ಎಲ್ಲರಿಗೂ ವಿದ್ಯುತ್ ಮುಂತಾದ ಅನೇಕ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಇಂದು 100% ನಾಗರಿಕರನ್ನು ತಲುಪುವ ಈ ಧ್ಯೇಯವು ಕೇವಲ ಸಮಾನ ಸೌಲಭ್ಯಗಳನ್ನು ಖಾತ್ರಿಪಡಿಸುವ ಉದ್ದೇಶವಲ್ಲ. ಈ ಧ್ಯೇಯವು ಏಕೀಕೃತ ಗುರಿ, ಏಕ ಅಭಿವೃದ್ಧಿ ಮತ್ತು ಏಕ ಪ್ರಯತ್ನದ ಧ್ಯೇಯವಾಗಿದೆ. ಇಂದು ಶೇ.100ರಷ್ಟು  ಜೀವನಾವಶ್ಯಕತೆಗಳ ವ್ಯಾಪ್ತಿಯು ದೇಶದ ಸಾಮಾನ್ಯರಿಗೆ ಮತ್ತು ಸಂವಿಧಾನದ ಮೇಲಿನ ನಂಬಿಕೆಗೆ ಮಾಧ್ಯಮವಾಗುತ್ತಿದೆ. ಜನಸಾಮಾನ್ಯರ ಆತ್ಮಸ್ಥೈರ್ಯ ತುಂಬುವ ಮಾಧ್ಯಮವಾಗುತ್ತಿದೆ. ಇದು ಸರ್ದಾರ್ ಪಟೇಲ್ ಅವರ ಭಾರತದ ದೃಷ್ಟಿಕೋನವಾಗಿದ್ದು, ಪ್ರತಿಯೊಬ್ಬ ಭಾರತೀಯನಿಗೆ ಸಮಾನ ಅವಕಾಶಗಳು ಮತ್ತು ಸಮಾನತೆಯ ಭಾವನೆ ಇರುತ್ತದೆ. ಇಂದು ದೇಶ ಆ ದೃಷ್ಟಿಯನ್ನು ಸಾಕಾರಗೊಳಿಸುತ್ತಿದೆ.

ಸ್ನೇಹಿತರೆ,

ದಶಕಗಳಿಂದ ನಿರ್ಲಕ್ಷಿಸಲ್ಪಟ್ಟ ಸಮಾಜದ ಪ್ರತಿಯೊಂದು ವರ್ಗಕ್ಕೂ ಕಳೆದ 8 ವರ್ಷಗಳಲ್ಲಿ ದೇಶವು ಆದ್ಯತೆ ನೀಡಿದೆ. ಆದ್ದರಿಂದ, ಬುಡಕಟ್ಟು ಸಮುದಾಯಗಳ ವೈಭವವನ್ನು ನೆನಪಿಟ್ಟುಕೊಳ್ಳಲು ದೇಶವು 'ಜನಜಾತೀಯ ಗೌರವ್ ದಿವಸ್' (ಬುಡಕಟ್ಟು ಸಮುದಾಯಗಳ ಹೆಮ್ಮೆಯ ದಿನ) ಆಚರಿಸುವ ಸಂಪ್ರದಾಯ ಪ್ರಾರಂಭಿಸಿತು. ಬುಡಕಟ್ಟು ಜನಾಂಗ ಸ್ವಾತಂತ್ರ್ಯ ಹೋರಾಟದಲ್ಲಿ ತೋರಿರುವ ಅತ್ಯಮೂಲ್ಯ ಪಾತ್ರಗಳನ್ನುದೇಶದ ಜನತೆಗೆ ತಿಳಿಸಲು ಮತ್ತು ಎತ್ತಿಹಿಡಿಯಲು ದೇಶದ ಹಲವು ರಾಜ್ಯಗಳಲ್ಲಿ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ. ನಾಳೆ ನಾನು ಮಾನ್ ಗಢ್ ಗೆ ಹೋಗುತ್ತೇನೆ ಮತ್ತು ನಂತರ ನಾನು ಜಂಬೂಘೋಡಕ್ಕೂ ಹೋಗುತ್ತೇನೆ. ಮಾನ್ ಗಢ್ ಧಾಮ್ ಮತ್ತು ಜಂಬೂಘೋಢಾದ ಇತಿಹಾಸವನ್ನು ಸಹ ತಿಳಿದುಕೊಳ್ಳಬೇಕೆಂದು ನಾನು ದೇಶವಾಸಿಗಳಿಗೆ ಮನವಿ ಮಾಡುತ್ತೇನೆ. ವಿದೇಶಿ ಆಕ್ರಮಣಕಾರರ ಹಲವಾರು ಹತ್ಯಾಕಾಂಡಗಳನ್ನು ಎದುರಿಸಿ ನಾವು ಸ್ವಾತಂತ್ರ್ಯವನ್ನು ಹೇಗೆ ಪಡೆದುಕೊಂಡಿದ್ದೇವೆ ಎಂಬುದು ಇಂದಿನ ಯುವ ಪೀಳಿಗೆಗೆ ಬಹಳ ಮುಖ್ಯವಾಗಿದೆ. ಆಗ ಮಾತ್ರ ನಾವು ಸ್ವಾತಂತ್ರ್ಯ ಮತ್ತು ಒಗ್ಗಟ್ಟಿನ ಮೌಲ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ನಮ್ಮ ದೇಶದಲ್ಲಿ ಒಂದು ಮಾತಿದೆ: ಐಕ್ಯಂ ಬಲಂ ಸಮಾಜಸ್ಯ ತದ್ಭಾವೇ ಸ ದುರ್ಬಲಃ । ತಸ್ಮಾತ್ ಆಕ್ಯಂ ಪ್ರಶಂಸಂತಿ ದೃಢಂ ರಾಷ್ಟ್ರ ಹಿತೈಷಿಣಃ॥

******


(Release ID: 1872846) Visitor Counter : 121